By Village Missionary Movement
Tuesday, 24-Jan-2023ಧೈನಂದಿನ ಧ್ಯಾನ(Kannada) – 25.01.2023
ಸೇವಕರ ತರಬೇತಿ
"...ಅವರು ತನ್ನ ಸಂಗಡ ಇರಬೇಕೆಂತಲೂ...ದೆವ್ವಗಳನ್ನು ಬಿಡಿಸುವ ಅಧಿಕಾರವುಳ್ಳವರಾಗಿ ಸುವಾರ್ತೆಯನ್ನು ಸಾರುವದಕ್ಕೆ ತಾನು ಅವರನ್ನು...ಆರಿಸಿ ನೇವಿುಸಿದನು" - ಮಾರ್ಕ 3:14,15
ಯೇಸುವಿನ ರಕ್ತದಲ್ಲಿ ತೊಳೆದ ಪ್ರತಿಯೊಬ್ಬರೂ ಸುವಾರ್ತೆಯನ್ನು ಸಾರುವ ಸುವಾರ್ತಾಬೋಧಕರಾಗಿದ್ದಾರೆ. ಹೌದು, ಸುವಾರ್ತಾಬೋಧನೆಯು ನಮ್ಮಲ್ಲಿ ಪ್ರತಿಯೊಬ್ಬರ ಮೇಲೆ ಬಿದ್ದಿರುವ ಕರ್ತವ್ಯವಾಗಿದೆ. ನಾವು ಪಡೆದುಕೊಂಡ ರಕ್ಷಣೆಯ ಅನುಭವವನ್ನು ಮತ್ತು ಉಪಕಾರಗಳನ್ನು ಇತರರಿಗೆ ಹೇಳಲು ನಾವು ಏಕೆ ಹಿಂಜರಿಯುತ್ತಿದ್ದೇವೆ? ಜ್ಞಾನಿಯು ಆತ್ಮಗಳನ್ನು ಆಕರ್ಷಿಸುವನು (ಜ್ಞಾನೋಕ್ತಿ 11:30) ಜ್ಞಾನವನ್ನು ಹೊಂದಿರುವವರು ಆತ್ಮಗಳನ್ನು ಸಂಪಾದಿಸುವವರಾಗಿದ್ದಾರೆ ಎಂದು ಸತ್ಯವೇದವು ಹೇಳುತ್ತಿದೆ. ನಮಗೆ ಜ್ಞಾನವು ಬೇಕಾದರೆ, ಅದು ಕರ್ತನ ವಾಕ್ಯಕ್ಕೆ ವಿಧೇಯರಾಗುವುದೆ ಆಗಿದೆ. ಅವರು ನಮ್ಮಿಂದ ಯಾವ ರೀತಿಯ ವಿಧೇಯತೆಯನ್ನು ಬಯಸುತ್ತಿದ್ದಾರೆ ಎಂದು ನೀವು ಯೋಚಿಸಿ ನೋಡಿದರೆ, ಮತ್ತಾಯ 28: 19, 20 ರಲ್ಲಿ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ ಎಂದು, ನಾನು ಯುಗದ ಸಮಾಪ್ತಿಯವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ ಎಂದು ಹೇಳಿದರು.
ಸುವಾರ್ತೆ ಸಾರಲು ಉತ್ಸುಕರಾಗಿರುವವರಿಗೆ ಮತ್ತು ಸುವಾರ್ತೆ ಸಾರಲು ಹಿಂಜರಿಯುವವರಿಗೆ ನಾವು ಪ್ರತಿತಿಂಗಳು ತರಬೇತಿ ನೀಡುತ್ತಿದ್ದೇವೆ. ಯೇಸುಕ್ರಿಸ್ತನು ಸಹ ಈ ಲೋಕದಲ್ಲಿ ಜೀವಿಸುತ್ತಿದ್ದ ದಿನಗಳಲ್ಲಿ 12 ಜನರನ್ನು ಆರಿಸಿಕೊಂಡು ಅವರನ್ನು ಶಿಷ್ಯರನ್ನಾಗಿ ಮಾಡಿ ಅವರು ತಮ್ಮೊಂದಿಗೆ ಇರಲು, ಬೋಧಿಸಲು, ರೋಗಗಳನ್ನು ಗುಣಪಡಿಸಲು ಮತ್ತು ದೆವ್ವಗಳನ್ನು ಓಡಿಸಲು ಅವರಿಗೆ ಅಧಿಕಾರ ನೀಡಿದರು. ಅವರನ್ನು ತನ್ನ ಬಳಿಯೇ ಇಟ್ಟುಕೊಂಡು ಮೂರೂವರೆ ವರ್ಷಗಳ ಕಾಲ ತರಬೇತಿ ನೀಡಿದರು. ಅಪೊಸ್ತಲ. 4:13 ರಲ್ಲಿ ಪೇತ್ರ ಯೋಹಾನರು ಧೈರ್ಯದಿಂದ ಮಾತಾಡುವದನ್ನು ಆ ಸಭಿಕರು ನೋಡಿ ಅವರು ಶಾಸ್ತ್ರಾಭ್ಯಾಸ ಮಾಡದ ಸಾಧಾರಣರೆಂದು ತಿಳಿದು ಆಶ್ಚರ್ಯಪಟ್ಟರು ಮತ್ತು ಇವರು ಯೇಸುವಿನ ಸಂಗಡ ಇದ್ದವರೆಂದು ಗುರುತು ಹಿಡಿದರು. ಯೇಸುವಿನ ಬಗ್ಗೆ ಪ್ರಕಟಿಸಿದರೆ ಜ್ಞಾನ ಮತ್ತು ಧೈರ್ಯವು ತುಂಬಿ ತುಳುಕುತ್ತದೆ ಎಂಬುದಕ್ಕೆ ಇವರೇ ಸಾಕ್ಷಿಗಳು.
ಕೇವಲ ಮೂರೂವರೆ ವರ್ಷಗಳಲ್ಲಿ, ಯೇಸು 12 ಮಂದಿ ಶಿಷ್ಯರನ್ನು ಮಾಡಿದರು, ನನ್ನಲ್ಲಿ ನಂಬಿಕೆಯಿಡುವವನು ನನಗಿಂತ ದೊಡ್ಡದನ್ನು ಮಾಡುವನು ಎಂದು ಯೇಸುವೇ ಹೇಳಿದ್ದಾರೆ. ಹಾಗಾಗಿ ಮೂರೂವರೆ ವರ್ಷ ಸೇವೆ ಸಲ್ಲಿಸಿದ ಅವರಿಗಿಂತ ಹೆಚ್ಚಿನದನ್ನು ನಾವು ಮಾಡಬಹುದು ಎನ್ನುತ್ತಾರೆ. ಅವರ ಮಾತಿನಲ್ಲಿ ನಂಬಿಕೆಯಿಟ್ಟರೆ ಸಾಧಿಸಬಹುದು ಎಂಬುದರಲ್ಲಿ ಎರಡು ಮಾತಿಲ್ಲ. ಪ್ರಾರ್ಥನಾ ಕೂಟಗಳನ್ನು ನಡೆಸುವುದಾಗಲಿ, ಟ್ಯೂಷನ್ ಸೆಂಟರ್ ನಡೆಸುವುದಾಗಲಿ ಅಥವಾ ನಾವು ವಾಸಿಸುವ ಮಕ್ಕಳ ನಡುವೆ ಸೇವೆ ಮಾಡುವುದಾಗಲಿ ನಮ್ಮ ಕೈಲಾದದ್ದನ್ನು ಮಾಡೋಣ. ನಾವು ಹಳ್ಳಿಯ ಮಿಷನರಿ ಸೇವಕರಾಗಿ ನಮ್ಮ ಕೆಲಸದ ಸ್ಥಳಗಳಲ್ಲಿ ಇವುಗಳನ್ನು ಮಾಡುತ್ತಿದ್ದೇವೆ. ನಮ್ಮೊಂದಿಗೆ ಕೈಜೋಡಿಸಿ. ಒಟ್ಟಾಗಿ ಸೇರಿ ದೇಶವನ್ನು ಸ್ವಂತಂತ್ರಿಸಿಕೊಳ್ಳೋಣ. ಹಲ್ಲೇಲೂಯಾ!
- A. ಬ್ಯೂಲ
ಪ್ರಾರ್ಥನಾ ಅಂಶ:
ಮಾಧ್ಯಮ ಸೇವೆಯಲ್ಲಿ ತೊಡಗಿರುವವರನ್ನು ದೇವರು ತನ್ನ ಜ್ಞಾನದಿಂದ ತುಂಬಿಸುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482