By Village Missionary Movement
Monday, 23-Jan-2023ಧೈನಂದಿನ ಧ್ಯಾನ(Kannada) – 24.01.2023
ಸುವಾರ್ತೆ ಸಾರೋಣ
"ದೇವರ ವಾಕ್ಯವನ್ನು ಸಾರು, ಅನುಕೂಲವಾದ ಕಾಲದಲ್ಲಿಯೂ ಅನುಕೂಲವಿಲ್ಲದ ಕಾಲದಲ್ಲಿಯೂ ಅದರಲ್ಲಿ ಆಸಕ್ತನಾಗಿರು" - 2 ತಿಮೊಥೆ 4:2
ಪ್ರತಿದಿನ ಯಾರಿಗಾದರೊಬ್ಬರಿಗೆ ಹೇಗಾದರೂ ಸುವಾರ್ತೆ ಸಾರಿಬಿಡಬೇಕು ಎಂದು ಬಯಸುತ್ತಿದ್ದ ತಾಯಿಯೊಬ್ಬರಿದ್ದರು. ಒಮ್ಮೆ ಅವರು ತಮ್ಮ ಮಗಳನ್ನು ಭೇಟಿ ಮಾಡಲು ಮಲೇಷ್ಯಾ ಗೆ ಹೋಗುತ್ತಿದ್ದರು. ಎಲ್ಲರೂ ವಿಮಾನದಲ್ಲಿ ತಮ್ಮ ಆಸನಗಳಲ್ಲಿ ಕುಳಿತಿದ್ದರು. ಯಾರೊಂದಿಗೂ ಮಾತನಾಡಲು ಅವಕಾಶವಿಲ್ಲ. ಆಗ ವಿಮಾನದಲ್ಲಿ ಕೆಲಸಮಾಡುವ ಹುಡುಗಿ ತಂಪು ಪಾನೀಯ ತಂದಳು. ಅವಳ ಬಳಿ, “ನಿಮಗೆ ಯೇಸು ಗೊತ್ತಾ?” ಎಂದು ಕೇಳಿದರು. ಆ ಕೆಲಸದ ಹುಡುಗಿ ಆತುರದಿಂದ ಹೊರಟು ಹೋದಳು. ವಿಮಾನದಲ್ಲಿದ್ದ ಪ್ರಯಾಣಿಕರ ಪಟ್ಟಿಯನ್ನೆಲ್ಲಾ ಕೂಲಂಕಷವಾಗಿ ಅವಲೋಕಿಸಿದ ನಂತರ ಆ ತಾಯಿಯ ಬಳಿಗೆ ಬಂದು, "ಅಮ್ಮಾ, ಯೇಸುವಿನ ಹೆಸರಿನಲ್ಲಿ, ಇಂದು ಈ ವಿಮಾನದಲ್ಲಿ ಯಾರೂ ಪ್ರಯಾಣಿಸುತ್ತಿಲ್ಲ" ಎಂದು ಆತಂಕದಿಂದ ಹೇಳಿದಳು. ಅವರು ಒಂದೆಡೆ ನಕ್ಕರೂ, ಮತ್ತೊಂದೆಡೆ ತುಂಬಾ ವೇದನೆ ಪಟ್ಟರು. ನಂತರ ಆ ಕೆಲಸದ ಹುಡುಗಿಗೆ ಯೇಸುಕ್ರಿಸ್ತನ ಬಗ್ಗೆ ಹೇಳಿ ಒಂದು ಸುವಾರ್ತಾ ಹಸ್ತ ಪ್ರತಿಯನ್ನು ನೀಡಿದರು.
ನಮ್ಮ ಸುತ್ತಮುತ್ತಲಿನ ಜನರಿಗೆ ಯೇಸುಕ್ರಿಸ್ತನ ಬಗ್ಗೆ ಗೊತ್ತು ಎಂದು ನಾವು ಭಾವಿಸುತ್ತೇವೆ. ಆದರೆ ಸತ್ಯ ಅದಲ್ಲ. ಕೆಲವು ಚಲನಚಿತ್ರಗಳಲ್ಲಿ ಕಂಡುಬರುವಂತೆ ಯೇಸುಕ್ರಿಸ್ತನ ಫೋಟೋ ಮುಂದೆ ಮೇಣದಬತ್ತಿಗಳನ್ನು ಹಚ್ಚಿಡುವುದು, ಪಾದ್ರಿಗಳ ಬಳಿ ಪಾಪಕ್ಷಮಾಪಣೆ ಕೇಳುವುದು ಇದೇ ಕ್ರೈಸ್ತ ಧರ್ಮ ಎಂದು ಭಾವಿಸಿದ್ದಾರೆ. ಒಮ್ಮೆ ನಾನು ವಿರುದುನಗರ್ ಜಿಲ್ಲೆಯ ಹಳ್ಳಿಯೊಂದಕ್ಕೆ ಹೋಗಿದ್ದಾಗ ಒಂದು ಅಜ್ಜಿಯ ಬಳಿ ಯೇಸು ಕ್ರಿಸ್ತನು ತುಂಬಾ ಒಳ್ಳೆಯವರು ನಿಮಗೆ ಒಳ್ಳೇದು ಮಾಡುತ್ತಾರೆ ಎಂದು ಹೇಳಿದಾಗ, "ಅವರಿಗೆ ಓಟು ಹಾಕಿ ಅಂತ ಹೇಳ್ತಿದೀರ" ಎಂದು ಕೇಳಿದರು. ಇದನ್ನು ಕೇಳಿ ಹಾಗೆ ಬೆಚ್ಚಿ ಬಿದ್ದೆವು.
ಹೌದು, ರೋಮಾ 10:14 ಹೇಳುವ ಪ್ರಕಾರ, ಯೇಸು ಕ್ರಿಸ್ತನ ಬಗ್ಗೆ ಕೇಳದಿರುವಲ್ಲಿ ಆತನನ್ನು ನಂಬುವದು ಹೇಗೆ? ಸಾರಿ ಹೇಳುವವನಿಲ್ಲದೆ ಕೇಳುವದು ಹೇಗೆ? ದೇವರು ನಮ್ಮ ಸೇವೆಗೆ ನೀಡಿದ "ಫಿಲಿಪ್ಪನ ಸುವಾರ್ತಾ ಗುಂಪು ಸೇವೆ" ಎಂಬ ಯೋಜನೆಯ ಪ್ರಕಾರ, ಕಾರ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಬಯಸುವವರೊಂದಿಗೆ ಪ್ರತಿ ಶನಿವಾರದಂದು
ನಾವು ಹಳ್ಳಿಗಳಿಗೆ ಹೋಗುತ್ತಿದ್ದೇವೆ. ಪ್ರತಿ ಹಳ್ಳಿಯಲ್ಲಿ ಕರಪತ್ರ ವಿತರಣೆ, ಬೀದಿ ಪ್ರಚಾರ, ಮಕ್ಕಳ ಸೇವೆ ಹೀಗೆ ಪ್ರತಿಯೊಂದು ಹಳ್ಳಿಗಳಲ್ಲೂ ಮಾಡುತ್ತಿದ್ದೇವೆ. ನೀವು ಕೂಡ ಇರುವ ಸ್ಥಳದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಸೇರಿ ಸುವಾರ್ತೆ ಸಾರಲ್ಪಡದ ಜನರನ್ನು ಹುಡುಕಿಕೊಂಡು ಹೋಗಿರಿ. ಅವರು ಒಮ್ಮೆಯಾದರೂ ಸುವಾರ್ತೆಯನ್ನು ಕೇಳಿಬಿಡಲಿ. ಕರ್ತನ ಬರೋಣ ತುಂಬಾ ಸಮೀಪವಿದೆಯಲ್ಲವೇ? ಆದ್ದರಿಂದ ಕಾರ್ಯನಿರ್ವಹಿಸೋಣ.
- Mrs. ಜಯಕುಮಾರಿ
ಪ್ರಾರ್ಥನಾ ಅಂಶ:
ನಾವು ಹೊರಬಿಡುತ್ತಿರುವ ಮೋಕ್ಷ ಪ್ರಯಾಣ, ಕತ್ತೆಗಳ ಕೈಪಿಡಿ, ಯೆಹೋಶುವನೇ ಎದ್ದೇಳು, ಪ್ರಾರ್ಥನಾ ಗುಂಪಿನ ನಾಯಕರ ಕೈಪಿಡಿ ಎಂಬ ಐದು ಪತ್ರಿಕೆಗಳಿಗಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482