By Village Missionary Movement
Monday, 23-Jan-2023ಧೈನಂದಿನ ಧ್ಯಾನ(Kannada) – 23.01.2023
ನಿಮ್ಮ ಕೈಲಾದಷ್ಟು ಮಾಡಿ
“ನಿನ್ನ ಕೈಗೆ ಸಿಕ್ಕಿದ ಕೆಲಸವನ್ನೆಲ್ಲಾ ನಿನ್ನ ಪೂರ್ಣ ಶಕ್ತಿಯಿಂದ ಮಾಡು; ನೀನು ಸೇರಬೇಕಾದ ಪಾತಾಳದಲ್ಲಿ ಯಾವ ಕೆಲಸವೂ ಯುಕ್ತಿಯೂ ತಿಳುವಳಿಕೆಯೂ ಜ್ಞಾನವೂ ಇರುವದಿಲ್ಲ" - ಪ್ರಸಂಗಿ 9:10
ಅಟ್ಲಾಂಟಿಕ್ ಮಹಾಸಾಗರದಲ್ಲಿ ಹಡಗಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ಒಳಗಾದರು, ಒಂದು ರಾತ್ರಿ ಅವರು ಮಲಗಿರುವಾಗ, ಯಾರೋ ಒಬ್ಬ ವ್ಯಕ್ತಿ ಇದ್ದಕ್ಕಿದ್ದಂತೆ ಸಮುದ್ರದೊಳಗೆ ಬಿದ್ದುಹೋದ ಎಂದು ಕಿರುಚುವ ಶಬ್ದ ಅವರ ಕಿವಿಗೆ ಕೇಳಿಸಿತು. ಮೊದಲಿಗೆ ಅವರು ಏನು ಮಾಡೋಣ ಎಂದು ಯೋಚಿಸಿದರು. ಆಮೇಲೆ ಮರು ಕ್ಷಣವೇ ದೀಪ ಹಚ್ಚಿ ಕೋಣೆಯ ಕಿಟಕಿಯಲ್ಲಿ ನೇತು ಹಾಕಲು ಯೋಚಿಸಿ ಹಾಗೆ ಮಾಡಿದರು. ಸಮುದ್ರದಲ್ಲಿ ತೇಲಾಡುತ್ತಿದ್ದವನ ತಲೆಯ ಮೇಲೆ ಬೆಳಕು ಬಿದ್ದಿತು. ಆ ಕ್ಷಣವೇ ದೋಣಿಯಲ್ಲಿ ಆತನನ್ನು ಹುಡುಕುತ್ತಿದ್ದ ರಕ್ಷಣಾ ಸಿಬ್ಬಂದಿಗಳು ಅವನನ್ನು ಕಂಡು ಆತನ ತಲೆಗೂದಲು ಹಿಡಿದು ಎಳೆದುಕೊಂಡು ಬಂದು ರಕ್ಷಿಸಿದರು.
ಈ ಮನುಷ್ಯನು ಮಾಡಿದಂತಹ ಒಂದು ಸಣ್ಣ ಕೆಲಸವನ್ನು ನಾವು ಸಹ ದೇವರಿಗಾಗಿ ನಮ್ಮಿಂದ ಸಾಧ್ಯವಾದದ್ದನ್ನು ಮಾಡುವಾಗ, ಶಾಶ್ವತ ಮರಣದ ಕಡೆಗೆ ಹೋಗುತ್ತಿರುವ ಆತ್ಮವನ್ನು ರಕ್ಷಿಸಲು ಸಾಧ್ಯವಾಗುತ್ತದೆ. ಒಂದು ದಿನ ನಾವು ಶಾಶ್ವತ ನಿವಾಸಕ್ಕೆ ಹೋದಾಗ, ಕರ್ತನು ನಮ್ಮನ್ನು ನೋಡಿ, ಭಲಾ, ನಂಬಿಗಸ್ತನಾದ ಒಳ್ಳೇ ಆಳು ನೀನು; ಸ್ವಲ್ಪ ಕೆಲಸದಲ್ಲಿ ನಂಬಿಗಸ್ತನಾಗಿದ್ದಿ, ದೊಡ್ಡ ಕೆಲಸದಲ್ಲಿ ನಿನ್ನನ್ನು ಇಡುತ್ತೇನೆ; ನಿನ್ನ ಧಣಿಯ ಸೌಭಾಗ್ಯದಲ್ಲಿ ಸೇರು ಎಂದು ಹೇಳುತ್ತಾರೆ.
ನಾಮಾನನ ಮನೆಯಲ್ಲಿ ದಾಸಿಯಾಗಿದ್ದ, ಹೆಸರು ಹೇಳಲ್ಪಡದ ಒಂದು ಪುಟ್ಟ ಹುಡುಗಿ ತನ್ನ ಕೈಲಾದಷ್ಟು ಮಾಡಿದಳು. ತನಗೆ ತಿಳಿದಿರುವುದನ್ನು ನಂಬಿಕೆಯಿಂದ ಹೇಳಿದಳು. ಪರಿಣಾಮವಾಗಿ, ಸಿರಿಯಾ ದೇಶಕ್ಕೆ ರಕ್ಷಣೆ! ಹೌದು, ನಮ್ಮ ಪ್ರಯತ್ನಗಳು ಅತ್ಯಲ್ಪವಾಗಿರಬಹುದು. ಆದರೆ ದೇವರು ಅವುಗಳನ್ನು ತನ್ನ ನಾಮದ ಮಹಿಮೆಗಾಗಿ ಉಪಯೋಗಿಸಲು ಶಕ್ತರಾಗಿದ್ದಾರೆ. ದೊಡ್ಡ ದೊಡ್ಡ ಕೆಲಸಗಳನ್ನು ಮಾಡಲು ಕಾದಿರಬೇಡಿರಿ. ನಮ್ಮ ಬೆಳಕು ತುಂಬಾ ದೂರ ಹೋಗಬೇಕೆಂದು ನಿರೀಕ್ಷಿಸುತ್ತಾ ಇರಬೇಡಿರಿ. ನಮ್ಮ ಸುತ್ತಮುತ್ತಲಿನವರಿಗೆ ನಮ್ಮಿಂದ ಸಾಧ್ಯವಾಗುವುದನ್ನು ನಂಬಿಕೆಯಿಂದ ಮಾಡೋಣ. ಆಗ ನಾವು ವಾಸಿಸುವ ಮೂಲೆ ಮೂಲೆಗಳೂ ಬೆಳಗುತ್ತವೆ.
ಹೌದು, ನಮ್ಮ ಜೀವನವು ದೇವರ ಕೊಡುಗೆಯಾಗಿದೆ. ಈ ಬದುಕಿನೊಂದಿಗೆ ಆತನ ನಾಮದ ಮಹಿಮೆಗಾಗಿ ನಾವು ಮಾಡುವ ಸಣ್ಣಪುಟ್ಟ ಒಳ್ಳೆಯ ಕಾರ್ಯಗಳು ಆತನಿಗೆ ನಾವು ಸಲ್ಲಿಸುವ ಕೃತಜ್ಞತೆಯಾಗಿದೆ.
- Mrs. ಗೀತಾ ರಿಚರ್ಡ್
ಪ್ರಾರ್ಥನಾ ಅಂಶ:
ಹೊಸ ಕಾರ್ಯಸ್ಥಳಗಳಲ್ಲಿ ಕೆಲಸ ಮಾಡುತ್ತಿರುವ ಸೇವಕರಿಗೆ ತಕ್ಷಣವೇ ಐದು ದ್ವಿಚಕ್ರ ವಾಹನಗಳ ಅಗತ್ಯವಿದೆ ಇದಕ್ಕಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482