Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 22.01.2023 (Kids Special)
Share:

By Village Missionary Movement

Sunday, 22-Jan-2023

ಧೈನಂದಿನ ಧ್ಯಾನ(Kannada) – 22.01.2023 (Kids Special)

 

ಬೆಳಕು ನೀಡಿರಿ

 

"...ಜನರು ನಿಮ್ಮ ಒಳ್ಳೇ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಮಹಿಮೆಪಡಿಸುವ ಹಾಗೆ ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ" - ಮತ್ತಾಯ 5:16

 

Hello, ಪುಟ್ಟ ತಮ್ಮ-ತಂಗಿ, ನೀವೆಲ್ಲಾ ಜಾಲಿಯಾಗಿ ಸಂತೋಷವಾಗಿದ್ದೀರಾ, ಪುಟಾಣಿಗಳೇ ನೀವು ಬೆಳಕಿರುವಾಗ ಭಯಪಡುತ್ತೀರಾ ಅಥವಾ ಕತ್ತಲೆಯಿರುವಾಗ ಭಯಪಡುತ್ತೀರಾ? Ok correct ಆಗಿ ಹೇಳುದ್ರಿ. ಕತ್ತಲೆ ನೋಡುದ್ರೇನೆ ಎಲ್ಲರಿಗೂ ಭಯ ಆಗೋದು. ಹೀಗೆ ಕತ್ತಲೆ ನೋಡಿ ಭಯಪಡುವ ನಮ್ಮನ್ನು ನೋಡಿಯೇ ಯೇಸಪ್ಪ ಹೇಳುತ್ತಿದ್ದಾರೆ, ನೀವು ಲೋಕಕ್ಕೆ ಬೆಳಕಾಗಿದ್ದೀರ ಎಂದು! ಅದು ಹೇಗೆ ಬೆಳಕಾಗಿ ಇರಲು ಸಾಧ್ಯ ಎಂದು ಯೋಚಿಸುತ್ತಿದ್ದೀರಾ, ಈ ಕಥೆಯನ್ನು ಕೇಳಿ ತಿಳಿದುಕೊಳ್ಳೋಣ ಬನ್ನಿ!

 

ಒಬ್ಬ ರಾಜನಿಗೆ ಮೂವರು ಗಂಡು ಮಕ್ಕಳಿದ್ದರು. ಅವರಿಗೆ ವಯಸ್ಸಾದದ್ದರಿಂದ ತನ್ನ ಪುತ್ರರಲ್ಲಿ ಒಬ್ಬನನ್ನು ರಾಜನನ್ನಾಗಿ ಮಾಡಲು ನಿರ್ಧರಿಸಿದರು ಆದರೆ ಆ ಮೂವರಲ್ಲಿ ಯಾರು ಜ್ಞಾನವಂತ? ಯಾರು ಬುದ್ಧಿಶಾಲಿಯಾಗಿದ್ದಾರೋ ಅವರಿಗೇ ಆ ಸ್ಥಾನವು ಎಂದು ಯೋಚಿಸಿ, ಆ ಮೂವರನ್ನು ಕರೆದು ಆ ಅರಮನೆಯಲ್ಲಿ ಅವರಿಗೆ ಪ್ರತ್ಯೇಕವಾಗಿ ದೊಡ್ಡ ಖಾಲಿ ಕೋಣೆಗಳನ್ನು, ಸ್ವಲ್ಪ ಹಣವನ್ನೂ ನೀಡಿ ಇದರಿಂದ ಏನು ಬೇಕಾದರೂ ತಂದು ಈ ಕೋಣೆಗಳನ್ನು ತುಂಬಿಸಿರಿ. ಒಂದು ವಾರ ಸಮಯ ತೆಗೆದುಕೊಳ್ಳಿ ಎಂದರು. ಒಂದು ವಾರ ಕಳೆಯಿತು.

 

ರಾಜನು ತನ್ನ ಮಕ್ಕಳ ಕೋಣೆಗಳನ್ನು ನೋಡಿ ಬರೋಣ ಎಂದು ಯೋಚಿಸಿ, ತನ್ನ ಪ್ರಧಾನರನ್ನು ಸಹ ಜೊತೆಗೆ ಕರೆದುಕೊಂಡು ತನ್ನ ಹಿರಿಯ ಮಗನ ಕೋಣೆಗೆ ಹೋಗಿ ಬಾಗಿಲು ತೆರೆದರು. ಅಲ್ಲಿ ಕತ್ತಲಾಗಿತ್ತು ಮತ್ತು ಒಳಗಿನಿಂದ ಇಲಿಗಳು ಅಲ್ಲಿ ಇಲ್ಲಿ ಓಡುತ್ತಿದ್ದವು. ಅವನು ಇಡೀ ಕೋಣೆಯನ್ನು ಒಣಹುಲ್ಲಿನಿಂದ ತುಂಬಿದ್ದನು. ಎರಡನೇ ಮಗನ ಕೋಣೆಗೆ ಹೋಗಿ ಬಾಗಿಲು ತೆರೆದರು. ಅಲ್ಲಿಯೂ ಕತ್ತಲೆಯೇ! ಅವನು ತನ್ನ ಕೋಣೆಯನ್ನು ಹತ್ತಿ ಉಂಡೆಗಳಿಂದ ತುಂಬಿದ್ದನು. ಹಿರಿಯ ಮಕ್ಕಳೇ ಹೀಗಿದ್ದಾರೆ, ರಾಜಾಶ್ರಯದಲ್ಲಿ ಏನು ಇಡಬೇಕು ಎಂಬುದು ಕೂಡ ತಿಳಿಯದವರಾಗಿದ್ದಾರೆ. ಇನ್ನು ಕೊನೆಯ ಮಗ ಏನನ್ನು ಹಾಕಿ ತುಂಬಿದ್ದಾನೋ ಎಂದು ಮನದಲ್ಲೇ ಯೋಚಿಸುತ್ತಾ ಕೋಣೆಯನ್ನು ತೆರೆದರು. ತೆರೆದವರಿಗೆ ಒಂದೇ ಆಶ್ಚರ್ಯ ಮತ್ತು ಸಂತೋಷ! ತೆರೆದ ತಕ್ಷಣ ಮುಖದ ಮೇಲೆ ಬೆಳಕು ಪ್ರಕಾಶಮಾನವಾಗಿ ಹೊಳೆಯಿತು. ಒಳಗೆ ನೋಡಿದರೆ ಇಡೀ ಕೋಣೆ ಬೆಳಕು. ಆ ಅಲ್ಪ ಹಣದಲ್ಲಿ ಒಳ್ಳೆಯ ದೀಪವನ್ನು ಖರೀದಿಸಿ ಅದನ್ನು ಬೆಳಗಿಸಿದ್ದನು ಮತ್ತು ಕೋಣೆಯನ್ನು ಬೆಳಕಿನಿಂದ ತುಂಬಿಸಿದ್ದನು. ರಾಜನಿಗೆ ಹೇಳಲಾಗದಷ್ಟು ಸಂತೋಷವಾಯಿತು. ಇವನಿಗೇ ರಾಜನಾಗುವ ಅರ್ಹತೆ ಇದೆ ಎಂದು ಹೇಳಿ ಕೊನೆಯ ಮಗನಿಗೆ ರಾಜಾಭಿಷೇಕ ಮಾಡಿದರು.

 

ತಮ್ಮ, ತಂಗಿ ನಾವು ಸಹ ಪಾಪದಲ್ಲೇ ಇದ್ದರೆ, ನಮ್ಮ ಹೃದಯವು ಇದೇ ರೀತಿಯಾಗಿ ಕತ್ತಲೆಯಾಗಿ ಕಾಣಲ್ಪಡುತ್ತದೆ. ನಾವು ಪಾಪದಿಂದ ಹೊರಬಂದಾಗ ಮಾತ್ರ ನಮ್ಮ ಹೃದಯವು ಬೆಳಕಾಗಿರುತ್ತದೆ. ಯೇಸಪ್ಪ ಕೂಡ ನಮ್ಮೊಳಗೆ ಬಂದು ಉಳಿಯಬಹುದು. ಅಷ್ಟೇ ಅಲ್ಲ, ಇತರರಿಗೆ ಒಳ್ಳೇದನ್ನು ಮಾಡಿ, ಕತ್ತಲೆಯಾಗಿರುವ ನಮ್ಮ ದೇಶಕ್ಕೆ ನಾವೇ ಬೆಳಕು ನೀಡಬೇಕು. ಆಗಲೇ ಯೇಸಪ್ಪ ಬಂದಾಗ ನಮಗೆ ಬಾಡಿಹೋಗದ ಕಿರೀಟವನ್ನು ಕೊಡುತ್ತಾರೆ.

- Mrs. ಸಾರಾ ಸುಭಾಷ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş meritking meritking giriş meritking güncel giriş betcio betcio giriş perabet perabet perabet giriş deneme bonusu deneme bonusu veren siteler bahissenin bahissenin güncel giriş bahissenin giriş superbetin giriş superbetin giriş süperbetin betsat betsat betsat giriş betsat güncel giriş alobet alobet giriş meritking güncel giriş Vdcasino vaycasino vaycasino giriş vaycasino güncel giriş matbet matbet giriş matbet güncel giriş yakabet yakabet giriş yakabet güncel giriş betsmove betsmove giriş betsmove güncel giriş betsat betsat giriş betsat güncel giriş safirbet safirbet giriş safirbet güncel giriş dumanbet giriş dumanbet dumanbet güncel giriş vaycasino vaycasino giriş vaycasino güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş kingroyal kingroyal giriş kingroyal güncel giriş