By Village Missionary Movement
Friday, 20-Jan-2023ಧೈನಂದಿನ ಧ್ಯಾನ(Kannada) – 21.01.2023
ಮಗುವಿನ ಪರವಾಗಿ ಮಕ್ಕಳನ್ನು ಬೆಂಬಲಿಸುವುದು
"ನಿಮ್ಮಲ್ಲಿ ಪ್ರತಿಯೊಬ್ಬನು ಸ್ವಹಿತವನ್ನು ಮಾತ್ರ ನೋಡದೆ ಪರಹಿತವನ್ನು ಸಹ ನೋಡಲಿ" - ಫಿಲಿಪ್ಪಿ 2:4
ಒಂಟಿಯಾಗಿದ್ದು ತನ್ನ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸುತ್ತಿದ್ದ ಮೇರಿ ಎಂಬ ತಾಯಿಯನ್ನು ನೋಡಿ ಆ ಶಾಲೆಯ ಶಿಕ್ಷಕಿ, "ಕಡಿಮೆ ಸಂಬಳಕ್ಕೆ ಸಣ್ಣ ಕಂಪನಿಯಲ್ಲಿ ದುಡಿಯುತ್ತಾ ಇಬ್ಬರು ಮಕ್ಕಳನ್ನು ಇಷ್ಟು ಒಳ್ಳೆಯ ಶಾಲೆಗೆ ಕಳುಹಿಸುತ್ತಿದ್ದೀರಲ್ಲಾ ಇದು ಹೇಗೆ? ಎಂದು ಕೇಳಿದರು. ಅದಕ್ಕೆ ಆ ಮೇರಿಯಮ್ಮ “ನನ್ನ ಪತಿ ಸೇವಕರನ್ನು ಮತ್ತು ಸೇವಕರ ಮಕ್ಕಳನ್ನು ಬೆಂಬಲಿಸುವಲ್ಲಿ ತುಂಬಾ ಆಸಕ್ತಿಯುಳ್ಳವರಾಗಿದ್ದರು. ನಾನು ಸಹ ಕೇಳುತ್ತಿದ್ದೆ, ನೀವು ಏಕೆ ಈ ರೀತಿ ಹಣವನ್ನು ವ್ಯರ್ಥ ಮಾಡುತ್ತಿದ್ದೀರ ಎಂದು! ಆದರೆ ಅವರು ನಾನು ಖರ್ಚು ಮಾಡುವ ಎಲ್ಲಾ ಹಣವನ್ನು ಪರಲೋಕದಲ್ಲಿ ನಿಧಿಯಾಗಿ ಸಂಗ್ರಹಿಸಿಡಲಾಗಿದೆ" ಎಂದು ಹೇಳುತ್ತಿದ್ದರು. ಈ ವಿಷಯವನ್ನು ನಾನು ಅವರ ಮರಣದ ನಂತರವೇ ಅರಿತುಕೊಂಡೆ. ನನ್ನ ಆದಾಯದಿಂದ ನಾನು ನನ್ನ ಕುಟುಂಬವನ್ನು ಮಾತ್ರ ಪೋಷಿಸಬಹುದು. ನನ್ನ ಮಕ್ಕಳ ವಿದ್ಯಾಭ್ಯಾಸ ವೆಚ್ಚ ಭರಿಸುವಷ್ಟು ಸಂಬಳ ನನಗಿಲ್ಲ. ಆದರೆ ದೇವರು ಶಿಕ್ಷಕರ ಕಣ್ಣುಗಳಲ್ಲಿ ದಯೆ ದೊರೆಯುವಂತೆ ಮಾಡಿದರು. ಒಬ್ಬ ಶಿಕ್ಷಕರು ಮಗುವಿನ ಶಿಕ್ಷಣದ ವೆಚ್ಚವನ್ನು ಭರಿಸುತ್ತಿದ್ದಾರೆ. ಇನ್ನೊಂದು ಮಗುವಿನ ಶಿಕ್ಷಣದ ಜವಾಬ್ದಾರಿಯನ್ನು ಅವರ ಶಾಲೆ ವಹಿಸಿಕೊಂಡಿದೆ. ಹೀಗೆ ಒಂದು ಕೊರತೆಯೂ ಇಲ್ಲದಂತೆ ನನ್ನ ದೇವರು ಮುನ್ನಡೆಸುತ್ತಿದ್ದಾರೆ" ಎಂದು ಹೇಳಿದರು.
ಇಂದು ನಾವು ತೆಗೆದುಕೊಳ್ಳುತ್ತಿರುವ ಸಂಬಳಕ್ಕಿಂತ ಸ್ವಲ್ಪ ಹೆಚ್ಚಿಗೆ ಸಿಕ್ಕರೆ ಸಂಸಾರಕ್ಕೆ ಒಳಿತಾಗುತ್ತದೆ ಎಂದು ನೆನೆಸಬಹುದು. ಆದರೆ ಅದರಲ್ಲೂ ನಮಗೆ ತೃಪ್ತಿಯಿಲ್ಲ ಎಂಬುದೇ ನಿಜ! ನಾವು ಎಂದಾದರೂ ಹೀಗೆ ಪ್ರಾರ್ಥಿಸಿದ್ದೇವಾ? ನನ್ನ ಆದಾಯದಿಂದ ಯಾವುದಾದರೂ ಒಂದು ಮಗುವನ್ನು ದತ್ತು ತೆಗೆದುಕೊಂಡು ಆ ಮಗುವಿನ ಶಿಕ್ಷಣದ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ ಎಂದು! ಪರಹಿತವನ್ನು ಸಹ ನೋಡಿರಿ ಎಂದು ಸತ್ಯವೇದವು ಹೇಳುತ್ತಿದೆ. ಅದರ ಬಗ್ಗೆ ನಮ್ಮ ಆಲೋಚನೆ ಏನು? ಇತರರನ್ನು ಬೆಂಬಲಿಸುವಲ್ಲಿ ನಿಮ್ಮ ಕೊಡುಗೆ ಏನು?
ಪ್ರಿಯರೇ! ನಾವು ಬಡವರಿಗೆ ಸಹಾಯ ಮಾಡಿದರೆ ಅದು ದೇವರಿಗೆ ಮಾಡಿದಂತೆ ಎಂದು ಸತ್ಯವೇದವು ಹೇಳುತ್ತಿದೆ. ನೀವು ಹಿಂದುಳಿದ ಒಂದು ಬಡ ಮಗುವನ್ನು ದತ್ತು ತೆಗೆದುಕೊಂಡು ಆ ಮಗುವಿಗೆ ಶಿಕ್ಷಣ ನೀಡಿದರೆ, ಅದನ್ನು ನೋಡುವ ನಿಮ್ಮ ಮಕ್ಕಳೂ ಕೂಡ ಅದನ್ನೇ ಕಲಿಯುತ್ತಾರೆ. ಈ ಪುಣ್ಯ ಕ್ರಿಯೆಯು ತಲತಲಾಂತರವಾಗಿ ಮುಂದುವರಿಯುವುದರಲ್ಲಿ ಸಂದೇಹವೇ ಇಲ್ಲ. ಹೀಗಾಗಿ ನಾವು ಹಳ್ಳಿಯ ಮಿಷನರಿ ಚಳವಳಿಯ ಕುಟುಂಬವಾಗಿ ತಮ್ಮ ಮಕ್ಕಳ ಪರವಾಗಿ ಮತ್ತೊಂದು ಮಗುವನ್ನು ಬೆಂಬಲಿಸುವವರನ್ನು ಪ್ರೋತ್ಸಾಹಿಸುತ್ತಿದ್ದೇವೆ. ಇದರ ಮುಖಾಂತರವಾಗಿ ಅನೇಕ ಮಕ್ಕಳು ಆಶೀರ್ವದಿಸಲ್ಪಡುತ್ತಿದ್ದಾರೆ. ಇದರಲ್ಲಿ ನಿರ್ದಿಷ್ಟವಾಗಿ ಅನೇಕ ಆದಿವಾಸಿ ಮಕ್ಕಳು ಸೇರಿದ್ದಾರೆ. ಇವರಿಗಾಗಿ ಪ್ರಾರ್ಥಿಸಿರಿ.
ನೆನಪಿರಲಿ: ನಮಗಾಗಿ ನಾವು ಕೂಡಿಟ್ಟ ಸಂಪತ್ತು ಮುಂದೊಂದು ದಿನ ನಾಶವಾಗುತ್ತದೆ, ಇತರರಿಗೆ ಸಹಾಯ ಮಾಡುವುದರಿಂದ ಸಿಗುವ ಆನಂದವೆಂಬ ಸಂಪತ್ತು ಎಂದಿಗೂ ನಾಶವಾಗವುದಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿ.
- Mrs. ಅನ್ಬು ಜ್ಯೋತಿ ಸ್ಟಾಲಿನ್
ಪ್ರಾರ್ಥನಾ ಅಂಶ:
"ಯೆಹೋಶುವನೇ ಎದ್ದೇಳು" ಶಿಬಿರದಲ್ಲಿ ಭಾಗವಹಿಸಿದ ಮಕ್ಕಳು ಅಂತ್ಯಕಾಲದ ಆಯುಧಗಳಾಗಿ ಎದ್ದೇಳುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482