Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 20.01.2023
Share:

By Village Missionary Movement

Friday, 20-Jan-2023

ಧೈನಂದಿನ ಧ್ಯಾನ(Kannada) – 20.01.2023

 

ಉಜ್ಜೀವನ ಬಯಸುವವರ ಶಿಬಿರ

 

“ಕಡೇ ದಿವಸಗಳಲ್ಲಿ ನಾನು ಎಲ್ಲಾ ಮನುಷ್ಯರ ಮೇಲೆ ನನ್ನ ಆತ್ಮವನ್ನು ಸುರಿಸುವೆನು... ನಿಮ್ಮ ಯೌವನಸ್ಥರಿಗೆ ದಿವ್ಯದರ್ಶನಗಳಾಗುವವು; ನಿಮ್ಮ ಹಿರಿಯರಿಗೆ ಕನಸುಗಳು ಬೀಳುವವು" - ಅಪೊಸ್ತಲ 2:17

 

ನೀವು ದೇಶದ ಉಜ್ಜೀವನವನ್ನು ಬಯಸುವವರಾ? ಹಾಗಿದ್ದರೆ ಈ ಸಂದೇಶವು ನಿಮಗಾಗಿಯೇ. ನಾನು ಉಜ್ಜೀವನವನ್ನು ಬಯಸಿದರೆ ಅದು ಮೊದಲು ನನ್ನಿಂದಲೇ ಪ್ರಾರಂಭವಾಗಬೇಕು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ. ಹಾಗೆಯೇ ರೇಂಡಿ ರೆಕಾಪ್ಸ್ಟ್ ಎಂಬ ಸೇವಕರು ಸಹ ಪ್ರಾರ್ಥಿಸಿದರು. ಅವರೊಳಗಿದ್ದ ಉಜ್ಜೀವನದ ಬೆಂಕಿ ಅವರ ಹೆಂಡತಿಯಲ್ಲೂ ಹೊತ್ತಿ ಉರಿಯಿತು. ನಂತರ ಅವರ ಪತ್ನಿ ಮತ್ತು ಅವರು ಒಟ್ಟಾಗಿ ಸೇರಿ 12 ವಾರಗಳ ಉಪವಾಸ ಪ್ರಾರ್ಥನೆಯನ್ನು ಪ್ರಕಟಿಸಿ ಸಭೆಯಾಗಿ ತಮ್ಮ ದೇಶದ ಉಜ್ಜೀವನಕ್ಕಾಗಿ ಪ್ರಾರ್ಥಿಸುತ್ತಿದ್ದರು. ಇದರಲ್ಲಿ ಸಿ.ಟಿ.ಟೌನ್ಸ್ಟನ್ ಎಂಬ ಸುವಾರ್ತಾಬೋಧಕರನ್ನು ಕುಟುಂಬವಾಗಿ ಆಹ್ವಾನಿಸಿದ್ದರು. ಲೇಕ್ ವುಡ್‌ನಲ್ಲಿ ಅವರು ನಾಲ್ಕು ಪಥದ ರಸ್ತೆಯಲ್ಲಿ ದೊಡ್ಡ ಟೆಂಟ್ ಹಾಕಿ ಪ್ರಾರ್ಥಿಸುತ್ತಿದ್ದರು. ಈ ಪ್ರಾರ್ಥನಾ ಗುಡಾರದಲ್ಲಿ ರಾತ್ರಿ ಪ್ರಾರ್ಥನೆಯಲ್ಲಿ ಮಾತ್ರ 5000 ಯುವಕರು ಸೇರಿ ಉಜ್ಜೀವನವನ್ನು ಬಯಸಿ ಪ್ರಾರ್ಥಿಸುತ್ತಿದ್ದಾರೆ.

 

ಸತ್ಯವೇದದಲ್ಲಿಯೂ ಸಹ, ಅಪೊ. 2 ನೇ ಅಧ್ಯಾಯದಲ್ಲಿ, "ಪಂಚಾಶತ್ತಮ ದಿನದ ಹಬ್ಬವು ಬಂದಿರಲಾಗಿ ಅವರೆಲ್ಲರು ಏಕಮನಸ್ಸಿನಿಂದ ಒಂದೇ ಸ್ಥಳದಲ್ಲಿ ಕೂಡಿದ್ದರು ಎಂದು ನಾವು ಓದುತ್ತೇವೆ." ಅಂತೆಯೇ, ಅಪೊ. 4 ನೇ ಅಧ್ಯಾಯದಲ್ಲಿ, ಬಹುಸಂಖ್ಯೆಯ ವಿಶ್ವಾಸಿಗಳು ಒಂದೇ ಹೃದಯ ಮತ್ತು ಒಂದೇ ಮನಸ್ಸಿನವರಾಗಿದ್ದರು, ಮತ್ತು ಅವರು ಪ್ರಾರ್ಥಿಸಿದಾಗ, ಅವರು ಒಟ್ಟುಗೂಡಿದ ಸ್ಥಳವು ಅಲುಗಾಡಿತು. ಅವರೆಲ್ಲರೂ ಪವಿತ್ರಾತ್ಮದಿಂದ ತುಂಬಿದ್ದರು ಮತ್ತು ದೇವರ ವಾಕ್ಯವನ್ನು ಧೈರ್ಯದಿಂದ ಹೇಳಿದರು ಎಂದು ನಾವು ಓದುತ್ತೇವೆ. ನಾವು ಚಿಕ್ಕ ಚಿಕ್ಕ ಗುಂಪಾಗಿ ಕೂಡಿ ಒಮ್ಮನಸ್ಸಿನಿಂದ ಮತ್ತು ಒಂದೇ ಹೃದಯದಿಂದ ಪ್ರಾರ್ಥಿಸಿದಾಗ, ನಮ್ಮನ್ನು ನೋಡುವವರಲ್ಲಿಯೂ ಸಹ ಉಜ್ಜೀವನದ ಬೆಂಕಿ ಹೊತ್ತಿ ಉರಿಯುವುದು ಬಹು ಖಚಿತ.

 

ದೇವರ ದಯೆಯಿಂದ, ಕಳೆದ ನವೆಂಬರ್‌ನಲ್ಲಿ ತಮಿಳುನಾಡಿನ 27 ಸ್ಥಳಗಳಲ್ಲಿ ಉಜ್ಜೀವನವನ್ನು ಬಯಸುವವರ ಶಿಬಿರಗಳನ್ನು ನಡೆಸಲು ದೇವರು ನಮಗೆ ಸಹಾಯ ಮಾಡಿದರು. ಅದರ ಮೂಲಕ ನಾವು ಸಾವಿರಾರು ಜನರನ್ನು ಭೇಟಿ ಮಾಡಿ ಪ್ರಾರ್ಥನಾ ಗುಂಪುಗಳ ಮಹತ್ವವನ್ನು ಘೋಷಿಸಿದ್ದೇವೆ. ನೀವೂ ಸಹ ನಮ್ಮೊಂದಿಗೆ ಸೇರಿ ಪ್ರಾರ್ಥಿಸಲು, ದೇಶದಲ್ಲಿ ಉಜ್ಜೀವನವನ್ನು ನೋಡಲು ನಿಮ್ಮ ಭುಜಗಳನ್ನು ಚಾಚುತ್ತೀರಾ? ಹತ್ತು ಜನರಿರುವ ಪ್ರಾರ್ಥನಾ ಗುಂಪು ಇನ್ನೂ ಹತ್ತು ಜನರಾಗಿಯೇ ಇದ್ದರೆ ಪರಲೋಕಕ್ಕೆ ಏನು ಪ್ರಯೋಜನ ಎಂದು ಯೋಚಿಸಿ ನೋಡಿ. 10 ಜನರ ಪ್ರಾರ್ಥನಾ ಗುಂಪು 10 ಪ್ರಾರ್ಥನಾ ಗುಂಪುಗಳಾಗಿ ವಿಭಜಿಸಿ 100 ಜನರಿರುವ ಪ್ರಾರ್ಥನಾ ಗುಂಪಾಗಬೇಕು. ಅದು ಉಜ್ಜೀವನಕ್ಕೆ ಗುರುತಾಗಿದೆ. ಅದನ್ನೇ ಗುರಿಯಾಗಿಟ್ಟುಕೊಂಡು ಇಂದಿನಿಂದಲೇ ಕೆಲಸ ಮಾಡೋಣ.

 

ನೆನಪಿಡಿ: ದೇಶದ ಉಜ್ಜೀವನ ಬೇರೆ ಎಲ್ಲಿಂದಲೂ ಅಲ್ಲ, ಅದು ನಮ್ಮಿಂದಲೇ ಎಂಬುದನ್ನು ಚೆನ್ನಾಗಿ ನೆನಪಿಟ್ಟುಕೊಳ್ಳಿ.

- Mrs. ಶಕ್ತಿ ಶಂಕರರಾಜ್

 

ಪ್ರಾರ್ಥನಾ ಅಂಶ:

ಮೇ 1 ರಂದು ತಿರುಚ್ಚಿಯಲ್ಲಿ ನಡೆಯಲಿರುವ ಒಂದು ಲಕ್ಷ ಜನರು ಭಾಗವಹಿಸುವ ಯುವ ಶಿಬಿರಕ್ಕಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş holiganbet padişahbet giriş bets10 extrabet royalbet süperbetin jojobet padişahbet holiganbet galabet matbet matbet giriş hilbet bahiscasino celtabet antikbet betoffice