Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 18.01.2023
Share:

By Village Missionary Movement

Tuesday, 17-Jan-2023

ಧೈನಂದಿನ ಧ್ಯಾನ(Kannada) – 18.01.2023

 

ಕಾರ್ಯಮಾಡೋಣ

 

"ದಿಕ್ಕಿಲ್ಲದವನ ಪ್ರಾರ್ಥನೆಗೆ ಕಿವಿಗೊಡುತ್ತಾನೆ; ಅವರ ಪ್ರಾರ್ಥನೆಯನ್ನು ತಿರಸ್ಕರಿ ಸುವದಿಲ್ಲ" - ಕೀರ್ತನೆ 102:17

 

ಹೃದಯ ಸಂಬಂಧಿತವಾದ ವ್ಯಾಧಿಯ ನಿಮಿತ್ತವಾಗಿ ಕೆಲವೇ ತಿಂಗಳುಗಳಲ್ಲಿ ಸಾಯುವ ಸ್ಥಿತಿಯಲ್ಲಿದ್ದ ನನ್ನನ್ನು ಯೇಸು ಗುಣಪಡಿಸಿದರು. ನನ್ನನ್ನು ಗುಣಪಡಿಸಿದವರು ಯೇಸುವೇನಾ ಎಂದು ನಾನು ಅನುಮಾನಿಸಿದಾಗ, ಯೇಸು ಕ್ರಿಸ್ತನು ಪ್ರಪಂಚದ ಜನರಿಗಾಗಿ ಅಳುತ್ತಾ ಪ್ರಲಾಪಿಸುವವರಾಗಿ ತನ್ನನ್ನು ನನಗೆ ಬಹಿರಂಗಪಡಿಸಿದರು. ಜನರಿಗಾಗಿ ಕಣ್ಣೀರು ಸುರಿಸುತ್ತಿರುವ ಯೇಸುವಿನ ಕಣ್ಣೀರನ್ನು ಒರೆಸಲು ನಾನು ಬಯಸಿದೆ. ಜನರು ಯೇಸುವನ್ನು ನಂಬಿದರೆ, ಅವರ ಕಣ್ಣೀರು ನಿಂತುಹೋಗುತ್ತದೆ ಎಂದು ಭಾವಿಸಿ ಮುಂದಿನ ವಾರವೇ ನಾನು ಹತ್ತಿರದ ಹಳ್ಳಿಗಳಲ್ಲಿ ಯೇಸುವಿನ ಬಗ್ಗೆ ಹೇಳಲು ಸೈಕಲ್ ತೆಗೆದುಕೊಂಡು ಹೋದೆ.

 

ನಾನು ಮೊದಲು ಸೇವೆಗೆ ಹೋದಾಗ ನನ್ನ ಬಳಿ ಬೈಬಲ್, ಹೊಸ ಒಡಂಬಡಿಕೆ ಅಥವಾ ಹಸ್ತಪ್ರತಿ ಇರಲಿಲ್ಲ. ಜನರಿಗೆ ಏನು ಹೇಳಬೇಕೆಂದು ಸಹ ಗೊತ್ತಿಲ್ಲ. ಒಂದು ಹಳ್ಳಿಗೆ ಹೋಗಿ ಪ್ರತೀ ಮನೆಯಲ್ಲಿರುವ ಜನರನ್ನು ಹೊರಗೆ ಕರೆದು, “ಅಯ್ಯಾ, ಅಮ್ಮಾ, ಯೇಸು ನಿಮಗಾಗಿ ಅಳುತ್ತಿದ್ದಾರೆ, ನಿಮಗಾಗಿ ನೀವು ಚಿಂತಿಸುವುದಕ್ಕಿಂತ ಹೆಚ್ಚಾಗಿ ಯೇಸು ನಿಮಗಾಗಿ ಚಿಂತಿಸುತ್ತಿದ್ದಾರೆ. ಅವರನ್ನು ನಂಬಿರಿ" ಎಂದು ಸಾರಿ ಹೇಳುತ್ತಾ ಬಂದೆನು.

 

ತುಂಬಾ ಜನ ಸೇರಿದ್ದ ಒಂದು ಮನೆಯ ಬಳಿಗೆ ಬಂದಾಗ ಅವರು ನನ್ನನ್ನು ಕರೆದು ಸಾವಿನ ಅಂಚಿನಲ್ಲಿದ್ದ ಮುದುಕಿಯೊಬ್ಬಳ ಬಳಿಗೆ ಕರೆದೊಯ್ದು, “ತಮ್ಮಾ, ನೀನು ಯೇಸುವಿನವನಲ್ಲವೇ! ಈ ಅಜ್ಜಿಗೆ ಪ್ರಾರ್ಥನೆ ಮಾಡು'' ಎಂದರು. ನಾನು ಅವರಿಗೆ "ಅಯ್ಯಾ, ನನಗೆ ಪ್ರಾರ್ಥನೆ ಮಾಡಲು ಗೊತ್ತಿಲ್ಲ" ಎಂದು ಹೇಳಿ ಜಾರಿಕೊಳ್ಳಲು ಪ್ರಯತ್ನಿಸಿದೆ. ಆದರೆ ಅಕ್ಕಪಕ್ಕದಲ್ಲಿದ್ದವರೆಲ್ಲರೂ ಗುಂಪುಗುಂಪಾಗಿ ಬಂದು, “ಯೇಸು ಒಳ್ಳೇದು ಮಾಡುತ್ತಾರೆ ಎಂದು ಹೇಳಿದೆ ಅಲ್ವಾ, ಈ ಅಜ್ಜಿಗೆ ಪ್ರಾರ್ಥನೆ ಮಾಡು. "ನೀನು ಪ್ರಾರ್ಥಿಸದೇ ಈ ಸ್ಥಳವನ್ನು ಬಿಟ್ಟು ಹೋಗಬಾರದು" ಎಂದು ಬೆದರಿಸಿದರು. ನಾನು ಬೇರೆ ದಾರಿಯಿಲ್ಲದೇ ಕಣ್ಣು ತೆರೆದುಕೊಂಡೇ, "ಯೇಸುವೇ, ಇವರಿಗೆ ಏನೋ ಸಮಸ್ಯೆ ಇದೆ, ದಯವಿಟ್ಟು ನೀವು ಏನಾದರೂ ಮಾಡಿ" ಎಂದು ಹೇಳಿದೆ. ದೆವ್ವಗಳು ಅವರ ಶರೀರದಿಂದ ಕಿರುಚುತ್ತಾ ಹೊರಹೋದವು. ನಾನು ಅವರು ಸಾಯಲಿದ್ದಾರೆ ಎಂದುಕೊಂಡು ಓಡಿಹೋಗಲು ದಾರಿಹುಡುಕುತ್ತಿದ್ದೆ. ಇದ್ದಕ್ಕಿದ್ದಂತೆ ಅವರು ಎದ್ದು ಕುಳಿತು ಮಾತನಾಡಲು ಪ್ರಾರಂಭಿಸಿದರು ಮತ್ತು ಸಂಪೂರ್ಣವಾಗಿ ಚೇತರಿಸಿಕೊಂಡರು.

 

ಇದನ್ನು ಓದುತ್ತಿರುವ ನೀವು ಕೂಡ ಯೇಸುಕ್ರಿಸ್ತನ ಕಣ್ಣೀರನ್ನು ಒರೆಸಲು ನಿಮ್ಮ ಕೈಲಾದಷ್ಟು ಸೇವೆ ಮಾಡಿರಿ. ನಾನು ನನ್ನ ಕೈಲಾದಷ್ಟು ಸೇವೆ ಮಾಡಲು ಪ್ರಾರಂಭಿಸಿದೆ. ದೇವರು ಈ ಸೇವೆಯನ್ನು ವಿಸ್ತರಿಸಿ ಅನೇಕರಿಗೆ ಆಶೀರ್ವಾದವಾಗಿ ನಡೆಸುತ್ತಿದ್ದಾರೆ. ನೀವು ಅವರಿಗಾಗಿ ನಿಮ್ಮ ಕೈಲಾದಷ್ಟು ಸೇವೆಯನ್ನು ಮಾಡುವಾಗ, ಅವರು ನಿಮಗಾಗಿ ಕಾರ್ಯ ಮಾಡುತ್ತಾರೆ. ಖಂಡಿತವಾಗಿಯೂ ಅದ್ಭುತ ನಡೆಯುತ್ತದೆ!

- K. ಡೇವಿಡ್ ಗಣೇಶನ್

 

ಪ್ರಾರ್ಥನಾ ಅಂಶ:

ಪ್ರಾರ್ಥನಾ ಗುಂಪುಗಳನ್ನು ಒಟ್ಟುಗೂಡಿಸಿ ನಡೆಸುವಂತಹ ದೆಬೋರಾಗಳು ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş holiganbet giriş matbet holiganbet sahabet onwin casibom giriş casibom casibom giriş casibom matbet matbet giriş jojobet superbetin superbetin giriş betsmove betsmove giriş marsbahis casibom casibom giriş holiganbet holiganbet giriş jojobet jojobet giriş casibom çarkbet vizebet alobet alobet giriş amgbahis amgbahis giriş sweet bonanza grandpashabet jojobet holiganbet wbahis casibom casibom giriş jojobet jojobet giriş perabet perabet giriş holiganbet holiganbet giriş casibom casibom giriş casibom güncel giriş matbet matbet giriş superbetin superbetin giriş carkbet carkbet giris supertotobet supertotobet giriş superbetin superbetin superbetin giriş marsbahis marsbahis giriş