Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 17.01.2023
Share:

By Village Missionary Movement

Monday, 16-Jan-2023

ಧೈನಂದಿನ ಧ್ಯಾನ(Kannada) – 17.01.2023

 

ಆಸ್ಪತ್ರೆ ಸೇವೆ

 

“...ಲಾಜರನೆಂಬ ಒಬ್ಬ ಭಿಕ್ಷುಕನು ಬಿದ್ದುಕೊಂಡಿದ್ದನು; ಅವನು ಮೈ ತುಂಬಾ ಹುಣ್ಣೆದ್ದವನು" - ಲೂಕ 16:20

 

ಯೇಸುವಿನ ಪರಿಚಯವೇ ಇಲ್ಲದ ಶೇಖರ್ ಎಂಬ ಯುವಕ ಕ್ಯಾನ್ಸರ್ ನಿಂದ ಬಳಲುತ್ತಿದ್ದು ಮನೆಯವರಿಂದ ಕೈಬಿಡಲ್ಪಟ್ಟು ಆಸ್ಪತ್ರೆ ಸೇರಿದ್ದನು. ಸಾವಿನ ದಿನಾಂಕವನ್ನೂ ವೈದ್ಯರು ಮೊದಲೇ ಗುರುತಿಸಿದ್ದರು. ಅವನು ತುಂಬಾ ಮನನೊಂದ ಸ್ಥಿತಿಯಲ್ಲಿ ಕಾಣಲ್ಪಟ್ಟನು. ಈ ವೇಳೆ ಆಸ್ಪತ್ರೆ ಸೇವೆಗೆ ತೆರಳಿದ ಕೆಲವರು ಶೇಖರ್ ಬಳಿ ಯೇಸು ನಿನಗೆ ಸ್ವಸ್ಥತೆಯನ್ನು ಅನುಗ್ರಹಿಸುತ್ತಾರೆ ಚಿಂತಿಸಬೇಡ ಎಂದು ಹೇಳಿ ನಂಬಿಕೆಯಿಂದ ಪ್ರಾರ್ಥಿಸಿ ಹೊರಟು ಹೋದರು. ಶೇಕರ್ ಕೂಡ ಕಣ್ಣೀರಿಟ್ಟು ತನ್ನನ್ನು ದೇವರಿಗೆ ಒಪ್ಪಿಸಿಕೊಟ್ಟನು. ಅಂದಿನಿಂದ ಅವನಲ್ಲಿ ಬದಲಾವಣೆ ಬರಲಾರಂಭಿಸಿತು ಮತ್ತು ಕೆಲವೇ ದಿನಗಳಲ್ಲಿ ಅವನು ಸಂಪೂರ್ಣವಾಗಿ ಗುಣಮುಖನಾದನು. ವೈದ್ಯರು ಮತ್ತು ಅವನ ಹಾಸಿಗೆಯ ಪಕ್ಕದಲ್ಲಿದ್ದ ಎಲ್ಲರೂ ಇದನ್ನು ನೋಡಿ ಆಶ್ಚರ್ಯಚಕಿತರಾದರು. ಅವನು ಈಗ ಮದುವೆಯಾಗಿ ತನ್ನ ಹಳ್ಳಿಯಲ್ಲಿ ಸಾಕ್ಷಿಯಾಗಿ ವಾಸಿಸುತ್ತಿದ್ದಾನೆ, ಪೂರ್ಣ ಸಮಯ ಯೇಸುವಿಗಾಗಿ ಸೇವೆ ಮಾಡುತ್ತಿದ್ದಾರೆ.

 

ಪ್ರೀತಿಯ ಕ್ರೈಸ್ತ ಸ್ನೇಹಿತರೇ, ಇವರಂತೆಯೇ ಇಂದು ಅನೇಕ ಜನರು ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಮತ್ತು ನನ್ನನ್ನು ವಿಚಾರಿಸಲು, ಗಮನಿಸಲು ಯಾರೂ ಇಲ್ಲ, ಯಾಕೆ ನನಗೆ ಇಂಥಾ ಘೋರವಾದ ವ್ಯಾಧಿ, ನನಗೆ ಇದರಿಂದ ಮುಕ್ತಿ ಇಲ್ಲವೇ? ನಾನು ಈ ಕಾಯಿಲೆಯಿಂದಲೇ ಸತ್ತುಹೋಗುತ್ತೇನೋ ಏನೋ ಎಂದು ಮರಣ ಭಯದಲ್ಲಿ ಬದುಕುತ್ತಿದ್ದಾರೆ. ಅವರಿಗೆ ಯೇಸುವಿನ ಪ್ರೀತಿಯನ್ನು ಯಾರು ಪ್ರಕಟಿಸುತ್ತಾರೆ? ನೀವು ನೆನೆಸಬಹುದು ಇಂತಹ ಸೇವೆಯನ್ನು ಸೇವಕರೇ ಮಾಡಲು ಸಾಧ್ಯ ಎಂದು! ಅವರು ಪ್ರಾರ್ಥಿಸಿದರೆ ಮಾತ್ರವೇ ಅದ್ಬುತ ನಡೆಯುತ್ತದೆ ಅಂದುಕೊಂಡಿದ್ದೀರ. ಆದರೆ ಸತ್ಯವೇದವು ನಮಗೆ ಸ್ಪಷ್ಟವಾಗಿ ಹೇಳುತ್ತಿದೆ ಮಾರ್ಕನು 16: 17,18 ರಲ್ಲಿ ನಂಬುವವರಿಂದ ಈ ಸೂಚಕಕಾರ್ಯಗಳು ಉಂಟಾಗುವವು, ಎಂದು ಬರೆಯಲ್ಪಟ್ಟಿದೆ ಹೊರತು ಸೇವಕರಿಂದಲೇ ಅದ್ಭುತಗಳು ನಡೆಯುತ್ತದೆ ಎಂದು ಹೇಳಿಲ್ಲ. ಆದ್ದರಿಂದಲೇ ರಕ್ಷಣೆ ಹೊಂದಿ ಯೇಸುವನ್ನು ನಂಬುವ ನಿಮ್ಮ ಮೂಲಕವೇ ಯೇಸು ಇಂತಹ ಅದ್ಭುತಗಳನ್ನು ಮಾಡುತ್ತಾರೆ.

 

ಪ್ರಿಯರೇ! ಯೇಸು ಕ್ರಿಸ್ತನು ಒಂದು ದಿನ ನಮ್ಮನ್ನು ನೋಡಿ ಕೇಳುತ್ತಾರೆ. ನಾನು ಅನಾರೋಗ್ಯದಿಂದ ಬಳಲುತ್ತಿದ್ದೆ ನನ್ನನ್ನು ಯಾರೂ ವಿಚಾರಿಸಲಿಲ್ಲ ಎಂದು! ಆಗ ನೀವು ಅವರಿಗೆ ಏನು ಉತ್ತರ ಹೇಳುತ್ತೀರ? ಇಂದೇ ನಿಮ್ಮ ಊರಿಗೆ ಹತ್ತಿರವಿರುವ ಆಸ್ಪತ್ರೆಗೆ ತೆರಳಿ ಅವರ ಕೆಲಸವನ್ನು ಮಾಡಲು ಪ್ರಾರಂಭಿಸುತ್ತೀರಾ? ನೀವು ನಂಬಿಕೆಯೊಂದಿಗೆ ಮಾಡುವ ಪ್ರಾರ್ಥನೆಯು ಖಂಡಿತವಾಗಿಯೂ ಅದ್ಭುತಗಳನ್ನು ಹೊತ್ತು ತರುತ್ತದೆ. ಶೇಖರ್ ನಂತಹ ಅನೇಕರು ನಿಮ್ಮ ಮೂಲಕ ಹೊಸ ಜೀವನವನ್ನು ಪಡೆಯಬಹುದು. ಕಾರ್ಯಮಾಡಿರಿ, ತಡ ಮಾಡಬೇಡಿರಿ, ಅನೇಕರು ನಿಮ್ಮ ಮೂಲಕ ಸ್ವಸ್ಥತೆ ಹೊಂದಿ ಮನೆಗೆ ಹಿಂದಿರುಗಲಿ.

 

ನೆನಪಿಡಿ: ಯೇಸುವಿನ ಗಾಯಗಳಿಂದ ನೀವು ಗುಣಹೊಂದಿದಿರಿ, ಆದ್ದರಿಂದ ಅನಾರೋಗ್ಯದಿಂದ ಬಳಲುತ್ತಿರುವ ಜನರಿಗಾಗಿ ಪ್ರಾರ್ಥಿಸಲು ನೆನಪಿಟ್ಟುಕೊಳ್ಳಿ.

- Mrs. ಸಾರಾ ಸುಭಾಷ್

 

ಪ್ರಾರ್ಥನಾ ಅಂಶ:

ನಮ್ಮ ಕ್ಯಾಂಪಸ್‌ನಲ್ಲಿ ಪ್ರತಿನಿತ್ಯವೂ ನಡೆಯುತ್ತಿರುವ healing service ನಲ್ಲಿ ಪ್ರತ್ಯಕ್ಷವಾದ ಅದ್ಬುತ ಅತಿಶಯಗಳು ನಡೆಯುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş yakabet yakabet giriş yakabet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş