Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 15.01.2023 (Kids Special)
Share:

By Village Missionary Movement

Sunday, 15-Jan-2023

ಧೈನಂದಿನ ಧ್ಯಾನ(Kannada) – 15.01.2023 (Kids Special)

 

ಸಂಡೇ ಸ್ಕೂಲ್ ಸೇವೆ

 

“ನಿನ್ನ ಆಹಾರವನ್ನು ನೀರಿನ ಮೇಲೆ ಚೆಲ್ಲು, ಬಹು ದಿನದ ಮೇಲೆ ಅದು ನಿನಗೆ ಸಿಕ್ಕುವದು." - ಪ್ರಸಂಗಿ 11:1

 

ಪುಟ್ಟ ಮಕ್ಕಳೇ, ಇಂದು ನಾನು ನಿಮಗೆ ಒಂದು ನೈಜ ಕಥೆಯನ್ನು ಹೇಳುತ್ತೇನೆ. ಆಲಿಸಿ... ಹಸಿರು ಹುಲ್ಲುಗಾವಲುಗಳು, ಸುಂದರವಾದ ಪರ್ವತ. ಬೆಟ್ಟದ ಮೇಲಿರುವ ಆ ಪುಟ್ಟ ಹಳ್ಳಿ...! ಅಲ್ಲಿ ಶಾಲೆ ಅಥವಾ ಆಸ್ಪತ್ರೆ ಇಲ್ಲ. ಬಸ್ ಸೌಕರ್ಯವಿಲ್ಲ. ಯಾವುದೇ ಕೆಲಸವಿರಲಿ 10 ಕಿ.ಮೀ ಬೆಟ್ಟದಿಂದ ಕೆಳಗಿಳಿದು ಬರಲೇಬೇಕು. ಎಷ್ಟು ಕಷ್ಟ! ಏನು ಪುಟಾಣಿಗಳೇ, ಯೇಸಪ್ಪ ನಮ್ಮನ್ನು ಎಷ್ಟು ಆಶೀರ್ವಾದವಾಗಿ ಇಟ್ಟಿದ್ದಾರಲ್ವಾ. ಈ ಊರಿನಲ್ಲಿ ಸೋಮು ಎಂಬ ಒಬ್ಬ ಅಣ್ಣನಿದ್ದ. ಅಪ್ಪ ಸೌದೆ ಕಡಿಯಲು ಹೋದಾಗಲೆಲ್ಲಾ ಸೋಮು ಕೂಡ ಹೋಗಿ ಅಪ್ಪನಿಗೆ ಕಟ್ಟಿಗೆ ಜೋಡಿಸಲು ಸಹಾಯ ಮಾಡುತ್ತಿದ್ದನು. ಸಾಯಂಕಾಲ ಮನೆಗೆ ಬಂದಾಗ ಅಮ್ಮ ಕಾಯಿಸಿಟ್ಟಿರುವ ಸಾರಾಯಿ ಕುಡಿಯುತ್ತಿದ್ದರು. ಶೀತ ಕಾಲ ಬಂದಾಗ, ಬೀಡಿ ಸೇದುತ್ತಿದ್ದರು. ಆ ಹಳ್ಳಿಯಲ್ಲಿ ಎಲ್ಲರು ಹಾಗೆಯೇ ಇದ್ದರು. ತಪ್ಪು ಎಂದು ತಿಳಿಯದೆ ಹೀಗೆ ಮಾಡುತ್ತಾ ಇದ್ದರು.

 

ಡೇವಿಡ್ ಎಂಬ ಅಣ್ಣನು ಆ ಹಳ್ಳಿಯಲ್ಲಿ ಸುವಾರ್ತೆಯನ್ನು ಸಾರಲು ಬಂದರು. ಅಲ್ಲಿನ ಪರಿಸ್ಥಿತಿಯಿಂದ ಅವರಿಗೆ ತುಂಬಾ ದುಃಖವಾಯಿತು. ಚಿಕ್ಕ ಮಕ್ಕಳೂ ಕೂಡ ಮದ್ಯಪಾನ, ಧೂಮಪಾನ, ಕೆಟ್ಟ ಮಾತುಗಳನ್ನಾಡುವುದು, ಸ್ವಚ್ಛತೆ ಇಲ್ಲದಿರುವುದನ್ನು ಕಂಡು ಡೇವಿಡ್ ಅಣ್ಣ ಅಲ್ಲೇ ಸಂಡೇ ಸ್ಕೂಲ್ ನಡೆಸಲು ಪ್ರಾರಂಭಿಸಿದರು. ಸೋಮು ಆ ಊರಿನ ಪುಟ್ಟ ಮಕ್ಕಳನ್ನೂ ಕರೆದುಕೊಂಡು ಬಂದ. ಕೆಲವೇ ತಿಂಗಳುಗಳಲ್ಲಿ ದೊಡ್ಡ ಬದಲಾವಣೆಯಾಯಿತು. ಕುಡಿತ ದೇಹಕ್ಕೆ ಕೆಟ್ಟದ್ದು ಎಂದು ಮಕ್ಕಳು ಪೋಷಕರಿಗೆ ಹೇಳತೊಡಗಿದರು. ಈ ಬದಲಾವಣೆಗೆ ಯಾರು ಕಾರಣ ಎಂದು ಗ್ರಾಮದ ಮುಖಂಡ ಕೇಳಿದಾಗ, ಎಲ್ಲರೂ ಡೇವಿಡ್ ಅಣ್ಣನನ್ನು ಹೊಡೆಯಲು ಬಂದರು. ಆ ಸಮಯದಲ್ಲಿ ಸೋಮು ತಂದೆಗೆ ಹಾವು ಕಚ್ಚಿ ಮನೆಗೆ ಕರೆತಂದಿದ್ದರು. ಡೇವಿಡ್ ಅಣ್ಣನನ್ನು ಹೊಡೆಯಲು ಬಂದ ಜನಸಮೂಹ ಹಾಗೆ ಸೋಮು ಮನೆಗೆ ಮರಳಿತು. 10 ಕಿ.ಮೀ ದೂರದಲ್ಲಿರುವ ಆಸ್ಪತ್ರೆ ತಲುಪುವಷ್ಟರಲ್ಲಿ ಸಾಯುತ್ತಾನೆ ಎಂದು ಎಲ್ಲರೂ ಹೇಳಿದರು. ಸೋಮು ಮಂಡಿಯೂರಿ ಪ್ರಾರ್ಥಿಸಿದ. ಸ್ವಲ್ಪ ಹೊತ್ತಿನ ನಂತರ ಅಪ್ಪ ಎದ್ದು ಕುಳಿತರು. ಅವನು ಸಾಯುತ್ತಾನೆ ಎಂದು ಭಾವಿಸಿದ ಗ್ರಾಮಸ್ಥರು ಆಶ್ಚರ್ಯಚಕಿತರಾದರು ಮತ್ತು ಸೋಮುವಿನ ಪ್ರಾರ್ಥನೆಯು ಸೃಷ್ಟಿಗೂ ಮೀರಿದ ಸ್ವಸ್ಥತೆಯನ್ನು ನೀಡಿತು ಎಂದು ಹಳ್ಳಿಯ ಜನರೆಲ್ಲಾ ನಂಬಿದರು. ಡೇವಿಡ್ ಅಣ್ಣ ಸಂಡೇ ಸ್ಕೂಲ್ ನಲ್ಲಿ ಯೇಸಪ್ಪನ ಬಳಿ ನಂಬಿಕೆಯಿಂದ ಏನು ಕೇಳಿದರೂ ಕೊಡುತ್ತಾರೆ ಎಂದು ಹೇಳಿದ ಮಾತು ಮಕ್ಕಳ ಹೃದಯದಲ್ಲಿ ಕ್ರಿಯೆ ಮಾಡಿದ್ದನ್ನು ನೆನೆಸಿ ತುಂಬಾ ಸಂತೋಷಪಟ್ಟರು. ಪೋಷಕರು ಕೂಡ ತಮ್ಮ ಮಕ್ಕಳನ್ನು ತಪ್ಪದೇ ಸಂಡೇ ಸ್ಕೂಲ್ ಗೆ ಕಳುಹಿಸುತ್ತಿದ್ದರು.

 

ಏನು ಪುಟಾಣಿಗಳೇ, ನೀವು ಕೂಡ ಸಂಡೇ ಸ್ಕೂಲ್ ಗೆ ಹೋಗುತ್ತೀರಾ? ನಿಮ್ಮ ಸ್ನೇಹಿತರನ್ನೂ ಕೂಡ ಕರೆದುಕೊಂಡು ಹೋಗಿ. ಅಲ್ಲಿ ಒಳ್ಳೆಯ ವಿಷಯಗಳನ್ನು ಕಲಿಸಿಕೊಡುತ್ತಾರೆ. Jesus ನಿಮ್ಮ ಜೀವನಕ್ಕೆ ಮಾರ್ಗದರ್ಶಕನಾಗಿರುತ್ತಾರೆ. Ok Bye... 

- Mrs. ಅನ್ಬು ಜ್ಯೋತಿ ಸ್ಟಾಲಿನ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş holiganbet padişahbet bets10 extrabet royalbet süperbetin padişahbet betcio romabet giriş romabet queenbet bahiscasino betcio bahiscasino atlasbet matbet matbet giriş bahiscasino celtabet queenbet casibom jojobet