Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 24.02.2021
Share:

By Village Missionary Movement

Wednesday, 24-Feb-2021

ಧೈನಂದಿನ ಧ್ಯಾನ(Kannada) – 24.02.2021

ಹೂವಿನೊಂದಿಗೆ ಸೇರಿದ ನಾರು

"...ಅವನ ಮಾತುಗಳನ್ನು ಪ್ರಿಸ್ಕಿಲ್ಲಳೂ ಅಕ್ವಿಲನೂ ಕೇಳಿ ಅವನನ್ನು ತಮ್ಮಲ್ಲಿಗೆ ಕರೆದುಕೊಂಡು ಹೋಗಿ ದೇವರ ಮಾರ್ಗವನ್ನು ಅವನಿಗೆ ಇನ್ನೂ ಪೂರ್ಣವಾಗಿ ವಿವರಿಸಿದರು." - ಅಪೊಸ್ತಲ 18:26

ನಾನು ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮೊದಲನೇ ವರ್ಷ ಓದುತ್ತಿದ್ದೆ, ಆಗಲೇ ಭೌತಶಾಸ್ತ್ರದ ಟೀಚರನ್ನು ಕಂಡು ಆಶ್ಚರ್ಯಪಟ್ಟೆ. ಕಾರಣ ಅವರು ಸಮಯವನ್ನು ಪಾಲಿಸುವುದು, ಕಟ್ಟುನಿಟ್ಟಾದ ಪ್ರೀತಿಯೊಂದಿಗೆ ಅಭ್ಯಾಸ ಮಾಡುವುದು, ಸ್ಪಷ್ಟವಾಗಿ ಪಾಠ ಮಾಡುವುದು, ಅವರ  ಧೈರ್ಯವಾದ ಮಾತುಗಳು ವಿದ್ಯಾರ್ಥಿಗಳಾದ ನಮ್ಮನ್ನೆಲ್ಲ ಕೆದಕಿತು ಎಂದೇ ಹೇಳಬೇಕು. ಅದರಲ್ಲೂ ಬೆಳಗಿನ ಅಸೆಂಬ್ಲಿ ಸಮಯದಲ್ಲಿ ಅವರ ಮಾತು ಬರುವ ದಿನವನ್ನು, ನಾವು ಎದುರು ನೋಡುತ್ತಿರುತ್ತೇವೆ. ಅವರು ತಮ್ಮ ಗಂಭೀರವಾದ ಸ್ವರದಿಂದ ಪರಿಶುದ್ಧ ಗ್ರಂಥದಲ್ಲಿ ಜ್ಞಾನೋಕ್ತಿಗಳು ಪುಸ್ತಕದಿಂದ ಆಲೋಚನೆಗಳನ್ನು ಹೇಳುತ್ತಾರೆ. ಅದು ನನ್ನನ್ನು ಮಾತ್ರವಲ್ಲ, ಅನೇಕ ವಿದ್ಯಾರ್ಥಿಗಳನ್ನು ಮುಟ್ಟಿತು. ಅವರ ತರಗತಿ ಎಂದರೇನೆ ಒಂದು ರೀತಿಯ ಸಂತೋಷ ಬಂದುಬಿಡುತ್ತದೆ. ಅವರೊಂದಿಗೆ ಪ್ರಯಾಣ ಮಾಡಿದ ಆ ಒಂದು ವರ್ಷದಲ್ಲಿ ನಾನು, ಸಹ ವಿದ್ಯಾರ್ಥಿಗಳು ಬಹಳ ಶಿಸ್ತನ್ನು ಕಲಿತುಕೊಂಡೆವು. ಆಗ ಅತ್ಯುತ್ತಮವಾದ ಜೀವನವನ್ನು ಜೀವಿಸಬೇಕು ಎಂದು ತೀರ್ಮಾನಿಸಿದವರು ಅನೇಕರು!

ಪರಿಶುದ್ಧ ಗ್ರಂಥದಲ್ಲಿ ಅಪೊಸ್ತಲ.18 ನೇ ಅಧ್ಯಾಯದಲ್ಲಿ ದೇವರ ಸೇವಕನಾದ ಪೌಲನು ಕೊರಿಂಥಿ ಪಟ್ಟಣಕ್ಕೆ ಬರುತ್ತಾರೆ. ಅಲ್ಲಿ ಇಟಲಿಯಿಂದ ಹೊಸದಾಗಿ ಬಂದಿದ್ದ ಅಕ್ವಿಲನೂ ಅವನ ಹೆಂಡತಿಯಾದ ಪ್ರಿಸ್ಕಿಲ್ಲಳೂ ನೋಡುತ್ತಾರೆ. ಪೌಲನು ಅವರ ಬಳಿಯಲ್ಲೇ ವಾಸವಾಗಿದ್ದು ಕೆಲಸ ಮಾಡಿಕೊಳ್ಳುತ್ತಾ ಇದ್ದರು. ಇವರು ಸಾಧಾರಣವಾದ ಗುಡಾರಗಳನ್ನು ಮಾಡುವ ಕೆಲಸಗಾರರು ಮಾತ್ರವೇ. ಆದರೆ ನೋಡಿರಿ ಪೌಲನು ಅವರೊಂದಿಗೆ ವಾಸವಾಗಿದ್ದ ದಿನಗಳು ಅವರಿಗೆ ಪ್ರಯೋಜನಕರವಾಗಿತ್ತು. ಪೌಲನ ವೈರಾಗ್ಯ, ಯೆಹೂದ್ಯರೊಂದಿಗೆ ಮಾಡಿದ ಸಂಭಾಷಣೆ, ಪೌಲನ ದರ್ಶನ, ದೇವರಿಗಾಗಿ ಅಲೆದಾಡಿದ ಕಾರ್ಯಗಳು ಇವೆಲ್ಲವೂ ಅಕ್ವಿಲನನ್ನೂ,ಪ್ರಿಸ್ಕಿಲ್ಲಳನ್ನು ಬಹಳವಾಗಿ ಮುಟ್ಟಿತು. ಪೌಲನು ಅವರೊಂದಿಗಿದ್ದ ದಿನಗಳು ಅವರನ್ನು ಉಲ್ಲಾಸಗೊಳ್ಳುವಂತೆ ಮಾಡಿತು! ಅದುವರೆಗೂ ಸಾಧಾರಣವಾಗಿದ್ದ ಈ ದಂಪತಿಗಳು ನಂತರ, ಅಪೊಲ್ಲೋ ಎಂಬ ಶಾಸ್ತ್ರಗಳಲ್ಲಿ ಪ್ರವೀಣನಾಗಿದ್ದವನಿಗೆ ದೇವರ ಮಾರ್ಗವನ್ನು ಬಹಳ ಸ್ಪಷ್ಟವಾಗಿ ವಿವರಿಸಿ ತೋರಿಸುವಂತಹ ಅರ್ಹತೆಯುಳ್ಳವರಾದರು. ಪೌಲನಿಂದ ಈ ದಂಪತಿಗಳು ರೂಪಿಸಲ್ಪಟ್ಟರು.

ಇದನ್ನು ಓದುತ್ತಿರುವ ಸ್ನೇಹಿತರೇ! ನಾವು ಓದುತ್ತಿರುವ, ಕೆಲಸ ಮಾಡುವ, ಸೇವೆ ಮಾಡುವ ಸ್ಥಳಗಳಲ್ಲಿ ಪೌಲನ ಹಾಗೆ ಅನೇಕರನ್ನು ರೂಪಿಸಿದ್ದೇವಾ? ನಮ್ಮ ಜೀವನ ಅವರಿಗೆ ಒಂದು ಮಾದರಿಯಾಗಿ ಇದೆಯಾ? ನಮ್ಮೊಂದಿಗೆ ಐಕ್ಯವಾಗುವ ವ್ಯಕ್ತಿಯ ಭಕ್ತಿಯು  ಅಭಿವೃದ್ಧಿಯಾಗಿದೆಯಾ? ಅವರನ್ನು ಯೇಸುವಿನ ಶಿಷ್ಯರಾಗಿ ಮಾಡಿದ್ದೇವಾ? ಹೂವೊಂದಿಗೆ ಸೇರಿ ನಾರು ಕೂಡ ವಾಸನೆ ಬರುತ್ತದೆ ಎಂದು ಹೇಳುತ್ತಾರೆ, ನಮ್ಮೊಂದಿಗೆ ಇರುವವರು ಇಂತಹ ಅನುಭವವನ್ನು ಹೊಂದಿದ್ದಾರಾ?
-    T. ಶಂಕರ್ ರಾಜನ್

ಪ್ರಾರ್ಥನಾ ಅಂಶ:-
Media ಸೇವೆಯಲ್ಲಿ Audio recording Mic ತುರ್ತಾಗಿ ಬೇಕಾಗಿದೆ ಈ ಅವಶ್ಯಕತೆಯು ಸಂಧಿಸಲ್ಪಡುವಂತೆ ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Androidapp: https://play.google.com/store/apps/details?id=com.vmmorg.template.msmapp&showAllReviews=true
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al