Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 13.01.2023
Share:

By Village Missionary Movement

Friday, 13-Jan-2023

ಧೈನಂದಿನ ಧ್ಯಾನ(Kannada) – 13.01.2023

 

ಸತ್ಯವೇದದ ಅಗತ್ಯವಿದೆ

 

"ಯೆಹೋವನ ಧರ್ಮಶಾಸ್ತ್ರವು ಲೋಪವಿಲ್ಲದ್ದು; ಅದು ಪ್ರಾಣವನ್ನು ಉಜ್ಜೀವಿಸಮಾಡುವಂಥದ್ದು..." - ಕೀರ್ತನೆ 19: 7

 

ಮೇರಿ ಜೋನ್ಸ್ ಡಿಸೆಂಬರ್ 1784 ರಲ್ಲಿ ವೇಲ್ಸ್‌ನಲ್ಲಿ ಜನಿಸಿದರು. ಮೇರಿಯ ಕುಟುಂಬವು ತನ್ನ 4 ನೇ ವಯಸ್ಸಿನಲ್ಲಿ ತನ್ನ ತಂದೆಯನ್ನು ಕಳೆದುಕೊಂಡಿದ್ದರಿಂದ ಮತ್ತು ಆ ಸಮಯದಲ್ಲಿ ವೇಲ್ಸ್‌ನಲ್ಲಿನ ಆರ್ಥಿಕ ಬಿಕ್ಕಟ್ಟಿನಿಂದ ಬಹಳ ಕಷ್ಟಪಟ್ಟಿತು. ಅಮ್ಮನ ಜೊತೆ ನಿತ್ಯವೂ ಆಲಯಕ್ಕೆ ಹೋಗುವ ಅಭ್ಯಾಸವಿದ್ದದರಿಂದ ಎಂಟನೆಯ ವಯಸ್ಸಿನಲ್ಲಿಯೇ ದೇವರ ಪ್ರೀತಿಯಿಂದ ತುಂಬಿಸಲ್ಪಟ್ಟಳು. ಆ ಸಭೆಯು ಕೂಡ ಅವರನ್ನು ಸದಸ್ಯರನ್ನಾಗಿ ಸ್ವೀಕರಿಸಿತು. ಆ ದಿನಗಳಲ್ಲಿ ಸ್ವಂತ ಬೈಬಲ್ ಪ್ರತಿ ಮನೆಯಲ್ಲೂ ಇರಲಿಲ್ಲ. ಆಲಯದಲ್ಲಿ ಒಂದು ಬೈಬಲ್ ಮತ್ತು ಪಟ್ಟಣದಿಂದ ಎರಡು ಮೈಲಿ ದೂರದ ಮನೆಯಲ್ಲಿ ಒಂದು ಬೈಬಲ್ ಇತ್ತು. ಮೇರಿ ವಾರಕ್ಕೊಮ್ಮೆ ಆ ಮನೆಗೆ 3 ಕಿಲೋಮೀಟರ್ ನಡೆದುಕೊಂಡು ಹೋಗಿ ಸತ್ಯವೇದವನ್ನು ಉತ್ಸಾಹದಿಂದ ಓದುತ್ತಿದ್ದಳು. ನನಗೂ ಒಂದು ಬೈಬಲ್ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದುಕೊಂಡಳು. ಆಗ ನಾನು ಪ್ರತಿದಿನ ಬೈಬಲ್ ಓದಬಹುದಲ್ಲಾ ಎಂದು ಬಯಸಿದಳು. 10 ರಿಂದ 16 ವರ್ಷ ವಯಸ್ಸಿನವರೆಗೆ, 6 ವರ್ಷಗಳ ಕಾಲ ಸ್ವಲ್ಪ ಸ್ವಲ್ಪ ಹಣವನ್ನು ಸೇರಿಸಿಟ್ಟಿದ್ದಳು. ಬೈಬಲ್ ಖರೀದಿಸಲು ಸಾಕಷ್ಟು ಹಣ ಸಿಕ್ಕಾಗ ಅವಳು ಸಂತೋಷದಿಂದ ಕುಣಿದಾಡಿದಳು. ಆದರೆ ಬೈಬಲ್ ಪಡೆಯುವುದು ಇನ್ನೂ ಕಷ್ಟಕರವಾಗಿತ್ತು. ಬೈಬಲ್ ಸಿಗಲಿಲ್ಲ,

 

 42 ಕಿಲೋಮೀಟರ್ ದೂರದ ವಾಲಾ ಎಂಬ ಸ್ಥಳದಲ್ಲಿರುವ ಥಾಮಸ್ ಚಾರ್ಲ್ಸ್ ರವರ ಬಳಿ ಸತ್ಯವೇದವಿದೆ ಎಂದು ತಿಳಿದ ಅವಳು ಬರಿಗಾಲಿನಲ್ಲಿ 42 ಕಿಲೋಮೀಟರ್ ನಡೆದು ಥಾಮಸ್ ಚಾರ್ಲ್ಸ್ನ ಸ್ಥಳವನ್ನು ತಲುಪಿದಳು. ತನಗೆ ಬೈಬಲ್ ಬೇಕೆಂದು ಕೇಳಿದಳು. ತನ್ನ ಬಳಿಯಿದ್ದ ಎಲ್ಲಾ ಸತ್ಯವೇದಗಳೂ ಮಾರಾಟವಾಗಿವೆ ಎಂದು ಹೇಳಿದಾಗ ಆಕೆ ಬಿಕ್ಕಿ ಬಿಕ್ಕಿಅಳಲು ಪ್ರಾರಂಭಿಸಿದಳು. ಮೇರಿಗೆ ಸತ್ಯವೇದದ ಮೇಲಿರುವ ಪ್ರೀತಿಯನ್ನು ನೋಡಿದ ಥಾಮಸ್ ನನ್ನ ಬಳಿ ಬೇರೊಬ್ಬರು ಮೊದಲೇ ಹಣ ಕೊಟ್ಟು ತೆಗೆದುಕೊಂಡಿರುವ ಒಂದು ಸತ್ಯವೇದ ಇದೆ. ಅದನ್ನು ನೀನು ಇಟ್ಟುಕೋ ಎಂದು ಹೇಳಿದ ಕೂಡಲೇ ಮೇರಿಯ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ಈಗ ನನಗೆ ಸ್ವಂತವಾಗಿ ಬೈಬಲ್ ಸಿಕ್ಕಿಬಿಟ್ಟಿತು. ಇನ್ನು ಮುಂದೆ ನನ್ನ ಜನರಿಗೆಲ್ಲಾ ಸತ್ಯವೇದವನ್ನು ಕಲಿಸುತ್ತೇನೆ ಎಂದು ಖುಷಿಯಿಂದ ಹೋದಳು. ಈ ಘಟನೆಯು ಥಾಮಸ್ ಚಾರ್ಲ್ಸ್‌ನಲ್ಲಿ ಬೈಬಲ್ ಎಲ್ಲರಿಗೂ ತಲುಪಬೇಕು ಎಂಬ ದಾಹವನ್ನು ಮೂಡಿಸಿತು. ಇದರ ಮುಖಾಂತರವಾಗಿ ಹುಟ್ಟಿಕೊಂಡಿದ್ದೇ ಬೈಬಲ್ ಸೊಸೈಟಿ. 1907 ರ ಹೊತ್ತಿಗೆ, 20.4 ಮಿಲಿಯನ್ ಬೈಬಲ್‌ಗಳು ಮತ್ತು ಹೊಸ ಒಡಂಬಡಿಕೆಗಳು ಪ್ರಪಂಚದ ಅನೇಕ ಭಾಗಗಳಲ್ಲಿ ವಿತರಿಸಲ್ಪಟ್ಟವು.

 

ಪ್ರಿಯರೇ, ಇಂದು ನಮ್ಮ ಕೈಯಲ್ಲಿರುವ ಸತ್ಯವೇದವು ಎಷ್ಟು ಅದ್ಭುತವಾಗಿದೆ. ಆದರೆ ನಮ್ಮಲ್ಲಿ ಅನೇಕರು ಪ್ರತಿದಿನ ಸತ್ಯವೇದವನ್ನು ಓದುವುದೇ ಇಲ್ಲ. ದೇವರು ನಮಗೆ ನೀಡಿದ ಸತ್ಯವೇದವನ್ನು ಪ್ರೀತಿಸೋಣ, ಧ್ಯಾನಿಸೋಣ ಮತ್ತು ಅದರಂತೆ ನಡೆದುಕೊಳ್ಳೋಣ. ನಾವು ಮುನ್ನಡೆಸುವ ಜನರಿಗೆ ಮೊದಲು ಒಂದು ಹೊಸ ಒಡಂಬಡಿಕೆಯನ್ನು ಕೊಟ್ಟು ನಂತರ ಸಂಪೂರ್ಣ ಬೈಬಲ್ ಅನ್ನು ಕೊಟ್ಟು ಓದಲು ಪ್ರೋತ್ಸಾಹಿಸುತ್ತಿದ್ದೇವೆ. "ಬೈಬಲ್‌ಗಳು ಅಗತ್ಯವಿದೆ" ಎಂದು ನಮ್ಮ ಪತ್ರಿಕೆಯಲ್ಲಿ ನೋಡುವ ಅನೇಕ ದೇವರ ಮಕ್ಕಳು ತೆಗೆದುಕೊಡುವ ಸತ್ಯವೇದಗಳನ್ನು ಪ್ರತಿದಿನ ನಮ್ಮ ಕಾರ್ಯಕ್ಷೇತ್ರದಲ್ಲಿ ಒದಗಿಸುತ್ತಿದ್ದೇವೆ, ಸತ್ಯವೇದವನ್ನು ತೆಗೆದುಕೊಳ್ಳುತ್ತಿರುವವರ ಜೀವನವು ಕ್ರಿಸ್ತನಲ್ಲಿ ಕಟ್ಟಲ್ಪಡುವಂತೆ ಪ್ರಾರ್ಥಿಸಿರಿ.

- ಆಲ್ವಿನ್ ಜೇಕಬ್

 

ಪ್ರಾರ್ಥನಾ ಅಂಶ:

ಸತತವಾಗಿ ನಡೆಯುತ್ತಿರುವ 24 ಗಂಟೆಗಳ ಸರಪಳಿ ಪ್ರಾರ್ಥನೆಯ ಮೂಲಕ ಸೇವೆಯಲ್ಲಿ ಮತ್ತು ದೇಶದಲ್ಲಿ ಉಜ್ಜೀವನ ಉಂಟಾಗುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al