Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 12.01.2023
Share:

By Village Missionary Movement

Wednesday, 11-Jan-2023

ಧೈನಂದಿನ ಧ್ಯಾನ(Kannada) – 12.01.2023

 

ಪ್ರಾರ್ಥನಾ ಕೂಟ

 

"ತರುವಾಯ ಅವನು ಯೋಚನೆಮಾಡಿಕೊಂಡು ಮಾರ್ಕನೆನಿಸಿಕೊಳ್ಳುವ ಯೋಹಾನನ ತಾಯಿಯಾದ ಮರಿಯಳ ಮನೆಗೆ ಬಂದನು. ಅಲ್ಲಿ ಅನೇಕರು ಕೂಡಿಬಂದು ಪ್ರಾರ್ಥನೆಮಾಡುತ್ತಿದ್ದರು" - ಅಪೊಸ್ತಲ. 12:12

 

ಒಬ್ಬ ದೇವರ ಸೇವಕರನ್ನು ದಕ್ಷಿಣ ಕೊರಿಯಾದ ದೊಡ್ಡ ಚರ್ಚ್ ನಲ್ಲಿ ಸಂದೇಶ ನೀಡಲು ಆಹ್ವಾನಿಸಲಾಗಿತ್ತು. ಅದು ತುಂಬಾ ತಂಪಾದ ಚಳಿಗಾಲವಾಗಿತ್ತು. 5 ಗಂಟೆಯ ಪ್ರಾರ್ಥನೆಗೆ ಕರೆದೊಯ್ಯಲು ವಾಹನ ಬಂತು. ಆ ಚಳಿಯಲ್ಲಿ ಬೆಟ್ಟದ ಮೇಲಿದ್ದ ಚರ್ಚ್ ಗೆ ಹೊರಟರು. ಈ ಚಳಿಯಲ್ಲಿ ಆರಾಧನೆಗೆ ಯಾರು ಬರುತ್ತಾರೆ ಎಂಬ ಪ್ರಶ್ನೆಯೊಂದಿಗೆ ಹೋದರು. ಆದರೆ ಅಲ್ಲಿ ಅವರು ಕಂಡದ್ದು 1000 ಕ್ಕೂ ಹೆಚ್ಚು ಜನರು ಒಟ್ಟುಗೂಡಿ ಪ್ರಾರ್ಥಿಸುತ್ತಿದ್ದರು. ಆಗ ಅಲ್ಲಿದ್ದ ಸೇವಕರನ್ನು ತುಂಬಾ ವಿಸ್ಮಯದಿಂದ ಕೇಳಿದಾಗ, ನಾವು ಪ್ರತಿದಿನ ಬೆಳಿಗ್ಗೆ 4-5 ಗಂಟೆಗೆ ದೇಶಕ್ಕಾಗಿ ಪ್ರಾರ್ಥಿಸುತ್ತೇವೆ ಮತ್ತು ಚರ್ಚ್‌ನಲ್ಲಿ 100 ಕ್ಕೂ ಹೆಚ್ಚು ಮನೆ ಪ್ರಾರ್ಥನಾ ಗುಂಪುಗಳಿವೆ ಎಂದು ಹೇಳಿದರು. ಹೌದು, ಈ ಪ್ರಾರ್ಥನಾ ಗುಂಪುಗಳೇ ದಕ್ಷಿಣ ಕೊರಿಯಾ ದೇಶದ ಮಹಾ ಉಜ್ಜೀವನಕ್ಕೆ ಕಾರಣವಾಗಿವೆ.

 

ಸತ್ಯವೇದದಲ್ಲಿಯೂ ಸಹ, ಪೇತ್ರನನ್ನು ಬಂಧಿಸಲಾಯಿತು ಮತ್ತು ಶಿರಚ್ಛೇದ ಮಾಡಲು ಆದೇಶಿಸಲಾಯಿತು. ಸಭೆಯವರು ಅವರಿಗಾಗಿ ದೇವರ ಬಳಿ ತುಂಬಾ ಆಸಕ್ತಿಯಿಂದ ಪ್ರಾರ್ಥಿಸಿದರು. ಪೇತ್ರನು ಅದ್ಭುತಕರವಾಗಿ ಬಿಡುಗಡೆಯಾಗಿ ಮನೆಗೆ ಬಂದಾಗ ಅಲ್ಲಿ ಅನೇಕ ಜನರು ಸೇರಿ ಪ್ರಾರ್ಥಿಸುತ್ತಿದ್ದರು ಎಂದು ನಾವು ಓದುತ್ತೇವೆ. ಹೌದು, ಪ್ರಾರ್ಥಿಸಿದರು ಅಲ್ಲ, ಪ್ರಾರ್ಥಿಸುತ್ತಿದ್ದರು. ಪರಿಶುದ್ದಾತ್ಮನು ಎಷ್ಟು ಸ್ಪಷ್ಟವಾಗಿ ಬರೆದಿದ್ದಾರೆ ಎಂಬುದನ್ನು ನೋಡಿ. ಅವರು ಪ್ರಾರ್ಥಿಸುತ್ತಲೇ ಇದ್ದುದರಿಂದ ಪೇತ್ರನನ್ನು ಬಿಡುಗಡೆ ಮಾಡಲಾಯಿತು.

 

ಇದನ್ನು ಓದುತ್ತಿರುವ ಪ್ರಿಯರೇ, ಇಂದಿಗೂ ಅನೇಕರು ಸೆಲ್ ಫೋನ್‌ಗಳು, ಮತ್ತುಪದಾರ್ಥಗಳು ಮತ್ತು ಕಾಮ ಇಂಥವುಗಳಿಂದ ಬಂಧಿತರಾಗಿದ್ದಾರೆ. ಈ ಜನರಿಗಾಗಿ ನಾವು ಮಾಡಬೇಕಾಗಿರುವುದು ಅವರನ್ನು ಕರೆದು ಸಲಹೆ ನೀಡುವುದು ಅಥವಾ ಖಂಡಿಸುವುದು ಅಲ್ಲ, ಅದಕ್ಕೆ ಬದಲಾಗಿ ಅವರಿಗಾಗಿ ಪ್ರಾರ್ಥಿಸುವುದೇ! 2000 ಜನರು 3000 ಜನರು ಸೇರಿ ಪ್ರಾರ್ಥಿಸಿದರೇನೆ ದೇವರು ಕೇಳುತ್ತಾರೆ ಅಂತಲ್ಲ, ಇಬ್ಬರು ಅಥವಾ ಮೂವರು ಒಟ್ಟುಗೂಡಿದರೆ (ಮತ್ತಾ.18:20), ದೇವರು ಅವರ ನಡುವೆ ಇರುತ್ತೇನೆ ಎಂದು ವಾಗ್ದಾನ ಮಾಡಿದ್ದಾರೆ. ನಾವು ಭೇಟಿಯಾಗುವ ಮನೆಗಳಲ್ಲಿ ಮನೆ ಪ್ರಾರ್ಥನಾ ಕೂಟಗಳನ್ನು ನಡೆಸುತ್ತಿದ್ದೇವೆ. ಪ್ರಾರ್ಥನಾ ಕೂಟಗಳು ನಡೆದ ಮನೆಗಳಲ್ಲಿರುವ ಮಕ್ಕಳಿಗಾಗಿ ಪ್ರಾರ್ಥಿಸಿದ ಸಮಯದಲ್ಲಿ, ಕೆಲವು ಅನಗತ್ಯ ವಿಷಯಗಳು ಮತ್ತು ನೋವಿನ ಸಂದರ್ಭಗಳಿಂದ ಮಕ್ಕಳು ಬಿಡಿಸಲ್ಪಟ್ಟರು. ದೇಶದಲ್ಲಿ ದೊಡ್ಡ ಉಜ್ಜೀವನ ಬರಬೇಕಾದರೆ, ಮೊದಲು ನಮ್ಮೊಳಗೆ ಉಜ್ಜೀವನ ಬರಬೇಕು, ನಂತರ ನಮ್ಮ ಕುಟುಂಬದಲ್ಲಿ ಮತ್ತು ನಮ್ಮ ಚರ್ಚ್ ನಲ್ಲಿ ಹೀಗೆ ಹೊತ್ತಿ ಉರಿಯುವ ಪ್ರಾರ್ಥನಾ ಬೆಂಕಿ ದೊಡ್ಡ ಉಜ್ಜೀವನವನ್ನು ತರುತ್ತದೆ. ದಯವಿಟ್ಟು ಮನೆಯ ಪ್ರಾರ್ಥನಾ ಕೂಟವನ್ನು ನಡೆಸಲು ಪ್ರಯತ್ನಿಸಿರಿ.

 

ನೆನಪಿಡಿ: ನೀವು ಮನೆ ಮನೆಯಲ್ಲೂ ಪ್ರಾರ್ಥನಾ ಕೂಟಗಳನ್ನು ನಡೆಸಿದರೆ, ದೇಶದ ಉಜ್ಜೀವನಕ್ಕಾಗಿ ಬೀಜಗಳನ್ನು ಬಿತ್ತಿದ್ದೀರಿ ಎಂಬುದನ್ನು ನೆನಪಿಟ್ಟುಕೊಳ್ಳಿ.

- Mrs. ತವಮಣಿ ವೈರವೇಲ್

 

ಪ್ರಾರ್ಥನಾ ಅಂಶ:

100,000 ಹಳ್ಳಿಗಳು ಮತ್ತು 7000 ಮಿಷನರಿಗಳು ಎಂಬ ಗುರಿಯನ್ನು ತಲುಪಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş jojobet giriş holiganbet güncel giriş holiganbet giriş sahabet onwin casibom giriş casibom casibom giriş casibom matbet matbet giriş casibom casibom giriş amgbahis amgbahis giriş casibom casibom giriş jojobet jojobet giriş perabet perabet giriş holiganbet holiganbet giriş matbet matbet giriş superbetin superbetin giriş supertotobet supertotobet giriş superbetin superbetin giriş supertotobet supertotobet giriş imajbet imajbet giriş perabet perabet giriş coinbar coinbar giriş klasbahis klasbahis giriş ngsbahis ngsbahis giriş matbet matbet giriş mavibet mavibet giriş nakitbahis nakitbahis giriş marsbahis marsbahis giriş interbahis interbahis giriş mariobet mariobet giriş betpas betpas giriş artemisbet artemisbet giriş betsmove betsmove giriş restbet restbet giriş egebet egebet giriş https://yourfilterconnection.com/ grandpashabet