Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 11.01.2023
Share:

By Village Missionary Movement

Tuesday, 10-Jan-2023

ಧೈನಂದಿನ ಧ್ಯಾನ(Kannada) – 11.01.2023

 

ಕಾಲೇಜು, ಹಾಸ್ಟೆಲ್ ಸೇವೆ

 

"ಅದರಂತೆ ದೇವರ ಕಡೆಗೆ ತಿರುಗಿಕೊಳ್ಳುವದಕ್ಕೆ ಅವಶ್ಯವಿಲ್ಲದ ತೊಂಭತ್ತೊಂಭತ್ತು ಮಂದಿ ನೀತಿವಂತರಿಗಿಂತ ದೇವರ ಕಡೆಗೆ ತಿರುಗಿಕೊಳ್ಳುವ ಒಬ್ಬ ಪಾಪಿಯ ವಿಷಯವಾಗಿ ಪರಲೋಕದಲ್ಲಿ ಸಂತೋಷವುಂಟಾಗುವದೆಂದು ನಿಮಗೆ ಹೇಳುತ್ತೇನೆ" - ಲೂಕ 15:7

 

ನಾನು ವೈದ್ಯಕೀಯ ಕಾಲೇಜಿನಲ್ಲಿ ಮೊದಲ ವರ್ಷ ಓದುತ್ತಿದ್ದೆ. ಯೇಸುಕ್ರಿಸ್ತನನ್ನು ಅರಿಯದ ಕುಟುಂಬದಿಂದ ಬಂದ ನಾನು, ನಾವು ಆರಾಧಿಸುವ ದೇವರುಗಳಂತೆ "ಯೇಸು ಕೂಡ ಒಂದು ದೇವರು" ಅಂದುಕೊಂಡಿದ್ದೆ. ಆದರೆ ಅದೇ ಕಾಲೇಜಿನಲ್ಲಿ 3 ನೇ ವರ್ಷದಲ್ಲಿ ಓದುತ್ತಿರುವ ಇಬ್ಬರು ಸಹೋದರಿಯರು "ಯೇಸು ಒಬ್ಬನೇ ದೇವರು" ಎಂದು ನಾನು ತಿಳಿದುಕೊಳ್ಳುವಂತೆ ನನಗಾಗಿ ತುಂಬಾ ಪ್ರಯತ್ನಿಸಿದರು. ನಮ್ಮ ಕಾಲೇಜಿನ ಹಾಸ್ಟೆಲ್‌ನಲ್ಲಿ ಸಾಮಾನ್ಯವಾಗಿ ಸಂಜೆ 6-7 ಗಂಟೆಗೆ ಆ ಇಬ್ಬರು ಸಹೋದರಿಯರು ಮತ್ತು ಇನ್ನೂ ಕೆಲವರು ಒಟ್ಟಿಗೆ ಪ್ರಾರ್ಥನೆ ಮಾಡುತ್ತಿದ್ದರು. ಒಮ್ಮೆ ನಾನು ತುಂಬಾ ಮಾನಸಿಕ ಒತ್ತಡದಿಂದಾಗಿ, ನಿದ್ದೆಯಿಲ್ಲದೆ, ನನಗೆ ಇನ್ನು ಮುಂದೆ ಭವಿಷ್ಯವಿದೆಯೇ ಎಂದು ನನ್ನ ಕಣ್ಣೀರಿನಿಂದ ತಲೆದಿಂಬನ್ನು ಒದ್ದೆ ಮಾಡುತ್ತಿದ್ದಾಗ, ಅವರ ಉತ್ಸಾಹವಾದ ಹಾಡು, ಆರಾಧನೆ ಮತ್ತು ಪ್ರಾರ್ಥನೆ ನನ್ನನ್ನು ಅವರ ಕಡೆಗೆ ಸೆಳೆಯಿತು. ನಾನು ಯೇಸು ಕ್ರಿಸ್ತನನ್ನು ನನ್ನ ಸ್ವಂತ ರಕ್ಷಕನಾಗಿ ಸ್ವೀಕರಿಸಿದ ಕೆಲವೇ ತಿಂಗಳುಗಳಲ್ಲಿ ನಿಯಮಿತವಾಗಿ ಚರ್ಚ್‌ಗೆ ಹೋಗಲು ಪ್ರಾರಂಭಿಸಿದೆ. ಈ 8 ವರ್ಷಗಳಲ್ಲಿ ದೇವರು ನನ್ನನ್ನು ಅನೇಕ ಇಕ್ಕಟ್ಟು ಗಳು ಹೋರಾಟಗಳಿಂದ ಬಿಡಿಸಿ ಮುನ್ನಡೆಸಿ ಹೆಚ್ಚಿಸುತ್ತಿರುವುದನ್ನು ನನ್ನ ಸ್ವಂತ ಕಣ್ಣುಗಳಿಂದ ನೋಡುತ್ತಿದ್ದೇನೆ. ಇದಕ್ಕೆ ಕಾರಣ, ಆ ಇಬ್ಬರುಸಹೋದರಿಯರು ಬಲೆ ಹಾಕಿ ಮೀನು ಹಿಡಿಯುವ ಹಾಗೆ ನನ್ನ ಬಳಿ ಬಂದು ಪ್ರಾರ್ಥಿಸಿದ್ದು ಮತ್ತು ನನಗೆ ಸಲಹೆಗಳನ್ನು ನೀಡಿ ಕರ್ತನಲ್ಲಿ ಮುನ್ನಡೆಸಿದ್ದೇ.

 

ಯೇಸುಕ್ರಿಸ್ತನು ಕೂಡ ಅತ್ಯಂತ ನುರಿತ ಮೀನುಗಾರನಾಗಿದ್ದ ಪೇತ್ರನನ್ನು ಕರೆದು ಬಲೆ ಹಾಕಿ ಮೀನು ಹಿಡಿಯಲು ಹೇಳಿದರು. ಕೇವಲ ಒಂದು ಮೀನು ಹಿಡಿಯಲು ಪೇತ್ರನು ಎಷ್ಟು ಗಂಟೆಗಳು ಕಾದಿದ್ದರು ಅಂಥಾ ಗೊತ್ತಿಲ್ಲ. ಆದರೆ, ಆ ಒಂದು ಮೀನಿನ ಬಾಯಲ್ಲೇ ಬೆಳ್ಳಿ ನಾಣ್ಯವಿದೆ ಎಂಬುದಾಗಿಯೂ, ಆ ಹಣವನ್ನು ನನಗಾಗಿ ಮತ್ತು ನಿನಗಾಗಿ ಕೊಡು ಎನ್ನುತ್ತಾರೆ.

 

ನನ್ನ ಪ್ರಿಯರೇ! ಒಂದು ಮೀನು ತಾನೇ ಅಂತಾ ಬಲೆ ಹಾಕದೇ ಸುಮ್ಮನಿದ್ದುಬಿಡಬೇಡಿರಿ. ಆ ಒಂದು ಮೀನು ದೇವರಿಗೆ ಅಗತ್ಯ. ನನ್ನನ್ನು ಮುನ್ನಡೆಸಿದ ಆ ಸಹೋದರಿಯರು ನನ್ನ ಬಗ್ಗೆ ಕಾಳಜಿ ತೋರದೇ ಇದ್ದಿದ್ದರೆ, ನಾನು ಇಂದು ಒಂದು ಡಾಕ್ಟರ್ ಆಗಿಯೂ ಮತ್ತು ದೇವರ ಸೇವಕಿಯಾಗಿಯೂ ಇರುತ್ತಿರಲಿಲ್ಲ. ಅವರು ಬಲೆ ಹಾಕಿ ಕಾಯುತ್ತಿದ್ದರು, ದೇವರು ಮೀನು ಸಿಗುವಂತೆ ಮಾಡಿದರು. ಇದನ್ನು ಓದುತ್ತಿರುವ ನೀವು ಅನೇಕ ಆತ್ಮಗಳನ್ನು ಹುಡುಕುತ್ತಾ ಅಲ್ಲ, ನಶಿಸಿ ಹೋಗುತ್ತಿರುವ, ನಿಮ್ಮ ಹತ್ತಿರವಿರುವ ಒಂದು ಆತ್ಮದ ಮೇಲೆ ಕಾಳಜಿಯುಳ್ಳವರಾಗಿ ಅವರನ್ನು ನೋಡುತ್ತಾ ಬಲೆ ಹಾಕಲು ಕಲಿತುಕೊಳ್ಳಿರಿ. ಆ ಒಂದು ಆತ್ಮದ ಮೂಲಕ (ಮೀನಿನ) ಇಡೀ ಪರಲೋಕರಾಜ್ಯವು ಸಂತೋಷಪಡುತ್ತದೆ.

ನೆನಪಿಡಿ: ಅನೇಕ ಆತ್ಮಗಳನ್ನು ಸಂಪಾದಿಸಿದ ನೀವು, ಅವರು ಸತತವಾಗಿ ದೇವರ ರಾಜ್ಯವನ್ನು ಕಟ್ಟಲು ಕೆಲಸ ಮಾಡುತ್ತಿದ್ದಾರ ಎಂದು ಗಮನಹರಿಸುವುದು ನಿಮ್ಮ ಜವಾಬ್ದಾರಿ ಎಂಬುದನ್ನು ನೆನಪಿಟ್ಟುಕೊಳ್ಳಿ. 

- Sis. ನೌಸ್ಮಿ

 

ಪ್ರಾರ್ಥನಾ ಅಂಶ:

ನಮ್ಮ ಕ್ಯಾಂಪಸ್‌ನಲ್ಲಿ ಟ್ಯೂಷನ್ ಗೆ ಓದಲು ಬರುವ ವಿದ್ಯಾರ್ಥಿಗಳು ಯೇಸುವಿನ ಪ್ರೀತಿಯನ್ನು ಸವಿಯಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş holiganbet padişahbet bets10 extrabet royalbet süperbetin padişahbet betcio romabet giriş romabet queenbet bahiscasino betcio bahiscasino atlasbet matbet matbet giriş bahiscasino celtabet queenbet casibom jojobet