By Village Missionary Movement
Tuesday, 10-Jan-2023ಧೈನಂದಿನ ಧ್ಯಾನ(Kannada) – 10.01.2023
ಕ್ರಿಸ್ತನ ಯುದ್ಧದ ಸೇವಕ
“ಇದಲ್ಲದೆ ನನ್ನ ದೇವರ ಕೃಪಾಹಸ್ತವು ನನ್ನನ್ನು ಪಾಲಿಸಿದ್ದನ್ನೂ ಅರಸನು ನನಗೆ ಹೇಳಿದ್ದನ್ನೂ ಅವರಿಗೆ ವಿವರಿಸಿದೆನು. ಆಗ ಅವರು - ಬನ್ನಿರಿ, ಕಟ್ಟೋಣ ಎಂದು ಹೇಳಿ ಆ ಒಳ್ಳೇ ಕೆಲಸಕ್ಕೆ ಕೈಹಾಕಲು ಧೈರ್ಯಗೊಂಡರು." - ನೆಹೆಮಿಯ 2:18
ನೀರೋ ಎಂಬ ರೋಮನ್ ಸಾಮ್ರಾಜ್ಯದ ನಿರಂಕುಶ ಆಳ್ವಿಕೆಯಲ್ಲಿ ಆದಿ ಸಭೆಯು ಇತ್ತು. ಸಾವಿರಾರು ಕ್ರೈಸ್ತರು ಕಿರುಕುಳಕ್ಕೊಳಗಾದರು. ಆದರೆ ಅವರು "ಹಲ್ಲೇಲೂಯ" ಎಂಬ ಕೋರಸ್ ನೊಂದಿಗೆ ಕರ್ತನನ್ನು ಆರಾಧಿಸಿದರು ಮತ್ತು ಅವರ ದೇಹಗಳನ್ನು ಹೊರತುಪಡಿಸಿ ಅವರ ಆತ್ಮಗಳಿಗೆ ಹಾನಿಯಾಗಲಿಲ್ಲ. ಮತ್ತು ಅವರ ಮುಖಗಳು ಬೆಳಗುತ್ತಿರುವುದನ್ನು ನೋಡಿದ ರಾಜನು ಭಯದಿಂದ, “ನಿಮ್ಮ ಸಂತೋಷದ ರಹಸ್ಯವೇನು?” ಎಂದು ಕೇಳಿದನು. ಆಗ ಅವರು ದೊಡ್ಡ ಧ್ವನಿಯಿಂದ "ಓ ರಾಜ, ನಾವು ರಾಜಾಧಿ ರಾಜ, ಕರ್ತಾಧಿ ಕರ್ತ, ನಮ್ಮ ಪ್ರಾಣ ಪ್ರಿಯನೂ ಆದ ಯೇಸು ಕ್ರಿಸ್ತನ ಸನ್ನಿಧಿಗೆ ಹೋಗುತ್ತಿದ್ದೇವೆ" ಎಂದರು.
ನಾವು ಪವಿತ್ರ ಗ್ರಂಥದಲ್ಲಿ ನೋಡುವುದಾದರೆ, ದಾನಿಯೇಲನು ಮತ್ತು ಅವನ ಸ್ನೇಹಿತರು ರಾಜನ ಆಹಾರದಿಂದ ತಮ್ಮನ್ನು ಅಪವಿತ್ರಗೊಳಿಸದಂತೆ ವೈರಾಗ್ಯದಿಂದಿದ್ದರು. ರಾಜನು ತಾನು ಸ್ಥಾಪಿಸಿದ ಚಿನ್ನದ ಪ್ರತಿಮೆಯನ್ನು ನಮಸ್ಕರಿಸಬೇಕೆಂದು ಆದೇಶಿಸಿದಾಗ ಅವರು ಅದಕ್ಕೆಲ್ಲಾ ಗಮನಕೊಡದೇ ದೇವರಿಗಾಗಿ ವೈರಾಗ್ಯವಾಗಿ ನಿಂತರು. ರಾಜನ ಆದೇಶವನ್ನು ಧಿಕ್ಕರಿಸಿ ಎಲ್ಲಾ ಬಾಗಿಲುಗಳು ತೆರೆದಿರುವಾಗ ದೇವರನ್ನು ನೋಡಿ ದಾನಿಯೇಲನು ದಿನಕ್ಕೆ ಮೂರು ಬಾರಿ ವೈರಾಗ್ಯದಿಂದ ಪ್ರಾರ್ಥಿಸಿದನು. ಪರಿಣಾಮವಾಗಿ, ದೇಶವು ದೇವರನ್ನು ಅರಿತುಕೊಂಡಿತು.
ಪ್ರಿಯರೇ! ಕಾಲಗಳು ಉರುಳುತ್ತಿವೆ. ದೇಶವು ಕತ್ತಲಲ್ಲಿ ಮುಳುಗಿದೆ. ನಾವು ಸ್ವಾರ್ಥಿಗಳಾಗಿದ್ದರೆ ನಮಗೆ ಅಯ್ಯೋ. "ನಾನು ಯಾರನ್ನು ಕಳುಹಿಸಲಿ ಮತ್ತು ನನ್ನ ನಿಮಿತ್ತವಾಗಿ ಯಾರು ಹೋಗುತ್ತಾರೆ " ಎಂದು ಕರೆಯುವ ಕರ್ತನ ಧ್ವನಿಗೆ ಕಿವಿಗೊಡೋಣ. ನೀವು ವಾಸಿಸುವ ಗ್ರಾಮೀಣ ಪ್ರದೇಶಗಳಿಗೆ ಹೋಗಿ ನಿಮ್ಮ ಸ್ನೇಹಿತರೊಂದಿಗೆ ಸೇರಿ ಸೇವೆ ಮಾಡಿರಿ. ದೇವರು ಅಗತ್ಯಗಳನ್ನು ಹೇಗೆ ಪೂರೈಸುತ್ತಾರೆಂಬ ಆಶ್ಚರ್ಯವನ್ನು ತಾಳ್ಮೆಯಿಂದಿದ್ದು ನೋಡಿರಿ. ಒಂದೆಡೆ ಸೇವೆ ಎಂದರೆ ಇಷ್ಟೇನಾ! ಮತ್ತೊಂದೆಡೆ, ಸೇವೆ ಎಂಬುದು ಇಷ್ಟು ಉನ್ನತವಾದದ್ದಾ! ಅನಿಸುತ್ತದೆ. ಪ್ರತಿ ವರ್ಷ, ನಮ್ಮ ಸೇವೆಯಲ್ಲಿ, ನಾವು ಯುವಕರನ್ನು ಒಟ್ಟುಗೂಡಿಸಿ ಕ್ರಿಸ್ತನ ಯುದ್ಧ ಸೇವಕರ ಶಿಬಿರವನ್ನು ನಡೆಸುತ್ತಿದ್ದೇವೆ. ನೀವೂ ಕ್ರಿಸ್ತನ ಸೈನಿಕರಾಗಿ ಎದ್ದರೆ, ನೀವು ಖಂಡಿತವಾಗಿಯೂ ದೇಶವನ್ನು ಸ್ವತಂತ್ರಿಸಿಕೊಳ್ಳಬಹುದು.
ನೆನಪಿಡಿ: ನಿರೀಕ್ಷೆಯೊಂದಿಗೆ ಯುದ್ಧ ರಂಗದಲ್ಲಿ ನಿಂತುಕೊಳ್ಳಿ ಮತ್ತು ಅನೇಕ ಯೋಧರನ್ನು ಹುಟ್ಟುಹಾಕಲು ಕರ್ತನು ನಿಮ್ಮನ್ನು ಸಾಧನವಾಗಿ ಬಳಸುತ್ತಾರೆ ಎಂದು ನೆನಪಿನಲ್ಲಿಟ್ಟುಕೊಳ್ಳಿ.
- Mrs. ಜೆಬಕಣಿ ಶೇಖರ್
ಪ್ರಾರ್ಥನಾ ಅಂಶ:
ಆಂಧ್ರ ಪ್ರದೇಶ, ಒಡಿಶಾ ಮತ್ತು ಛತ್ತೀಸ್‌ಗಢದಲ್ಲಿ ನಮ್ಮ ಕಾರ್ಯಕ್ಷೇತ್ರದ ಸೇವೆಗಳಿಗಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482