Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 08.01.2023 (Kids Special)
Share:

By Village Missionary Movement

Sunday, 08-Jan-2023

ಧೈನಂದಿನ ಧ್ಯಾನ(Kannada) – 08.01.2023 (Kids Special)

 

ದುರಾಸೆ ಬೇಡ

 

"...ಹಣದಾಸೆಯು ಸಕಲವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ” - 1 ತಿಮೊಥೆ. 6:10

 

Hello ಪುಟಾಣಿಗಳೇ, ಹೇಗಿದ್ದೀರ, ಎಲ್ಲರಿಗೂ Happy New Year. ನೀವೆಲ್ಲರೂ Christmas & New Year-ಅನ್ನು Jolly-ಆಗಿ Celebrate ಮಾಡುದ್ರಾ, ok ಪುಟಾಣಿಗಳೇ ಕಥೆಯೊಳಗೆ ಹೋಗೋಣ್ವಾ.

 

ರಾಬರ್ಟ್ ಅಂಕಲ್ ಮನೆಯಲ್ಲಿ ತುಂಬಾ ಹಸುಗಳಿದ್ದವು. ಆ ಹಸುಗಳು ಕೊಡುವ ಹಾಲನ್ನು ಪ್ರತಿದಿನ ಮನೆ ಮನೆಗೆ ಹೋಗಿ ಮಾರಿ ಸಂಸಾರ ನಡೆಸುತ್ತಿದ್ದರು. ಈ ಹಸುವಿನ ಹಾಲಿನಿಂದ ಹಣ ಹೆಚ್ಚಾಗಿ ಬರಲಾರಂಭಿಸುತ್ತಿದ್ದಂತೆ ರಾಬರ್ಟ್ ಅಂಕಲ್ ದುರಾಸೆಯಿಂದ ಹಾಲಿಗೆ ಹೆಚ್ಚು ನೀರು ಬೆರೆಸಿ ಮಾರತೊಡಗಿದರು. ದಿನವೂ ಇವರಿಂದ ಹಾಲು ಕೊಳ್ಳುವ ಗ್ರಾಹಕರು ಹಾಲು ಏಕೆ ನೀರು ಎಂದು ಕೇಳಿದರು, ದನಗಳಿಗೆ ಹಸಿರು ಹುಲ್ಲು ಇಲ್ಲದಿರುವುದರಿಂದ ನೀರು ಎಂದು ಜಾಣತನದಿಂದ ಉತ್ತರಿಸಿ ಹೊರಟು ಹೋಗುತ್ತಿದ್ದರು. ಇನ್ನಷ್ಟು ಹಸುಗಳನ್ನು ಖರೀದಿಸಿ ಡೈರಿ ಫಾರಂ ನಡೆಸಬಹುದು ಎಂದುಕೊಂಡು ಅವರು, ತಾವು ಸೇರಿಸಿಟ್ಟಿದ್ದ ಹಣವನ್ನು ತೆಗೆದುಕೊಂಡು ಮಾರ್ಕೆಟ್‌ಗೆ ಹೊರಟರು. ದಾರಿಯಲ್ಲಿ ಹಸಿವಾದದ್ದರಿಂದ ಒಂದು ಮರದ ಕೆಳಗೆ ಕುಳಿತು ಊಟದ ಪೊಟ್ಟಣವನ್ನು ತೆರೆದು ತಿಂದು ಬಿಟ್ಟು ಹಾಗೆಯೇ ಮಲಗಿದರು. ಇದನ್ನೆಲ್ಲ ಗಮನಿಸುತ್ತಿದ್ದ ಮಂಗವೊಂದು ಮರದಿಂದ ಕೆಳಗಿಳಿದು ಆಹಾರವಾಗಿ ಹಿಡಿದಿದ್ದ ಇನ್ನೊಂದು ಪೊಟ್ಟಣವನ್ನು ತೆಗೆದುಕೊಂಡು ಬೇಗನೆ ಮರವನ್ನು ಹತ್ತಿ ಸೀಳಿತು. ಅದು ಹಣದ ಚೀಲ. ಮಂಗನಿಗೆ ದೊಡ್ಡ ನಿರಾಸೆ!. ಅಷ್ಟರಲ್ಲಿ ಎಚ್ಚರಗೊಂಡ ರಾಬರ್ಟ್ ಅಂಕಲ್ ಅವರ ಕೈಯಲ್ಲಿದ್ದ ಹಣದ ಚೀಲವನ್ನು ಹುಡುಕಿದರು. ಕೋಪಗೊಂಡ ಕೋತಿ ಮೇಲಿನಿಂದ ಒಂದು ನಾಣ್ಯವನ್ನು ತೆಗೆದುಕೊಂಡು ತನ್ನ ತಲೆಯ ಮೇಲೆ ಹಾಕಿತು. ಅವರು ಎದ್ದು ನೆಟ್ಟಗೆ ನೋಡಿದಾಗ, ಕೋತಿಯ ಕೈಯಲ್ಲಿ ಹಣದ ಚೀಲವಿತ್ತು. ರಾಬರ್ಟ್ ನಾಣ್ಯವನ್ನು ಬಿಡುವಂತೆ ಕೋತಿಯನ್ನು ಬೇಡಿಕೊಂಡರು. ಆದರೆ ಆ ಕೋತಿ ಅರ್ಧ ನಾಣ್ಯವನ್ನು ಮರದ ಪಕ್ಕದ ಕೊಳದಲ್ಲಿ ಮತ್ತು ಅರ್ಧ ಹಣವನ್ನು ಇವರ ಬಳಿ ಹಾಕಿತು. ರಾಬರ್ಟ್‌ಗೆ ಜ್ಞಾನೋದಯವಾಯಿತು. ನೀರಿಗೆ ಸುರಿದ ಹಣ ನೀರು ಪಾಲಾಯಿತು. ಹಾಲಿಗೆ ಬರಬೇಕಾದ ಹಣ ನನಗೆ ಬಂತು ಎಂದು. ಇನ್ನು ಮುಂದೆ ಇಂತಹ ತಪ್ಪು ಮಾಡಬಾರದು ಎಂದುಕೊಂಡು ಮನೆಗೆ ಬಂದು ಆ ದಿನದಿಂದ ಕಲಬೆರಕೆ ಇಲ್ಲದ ಹಾಲು ಕೊಡಲು ಆರಂಭಿಸಿದರು.

 

ಪುಟ್ಟ ತಮ್ಮ-ತಂಗಿ, ನೋಡುದ್ರಾ, ಅವರು ಅಕ್ರಮವಾಗಿ ಸಂಪಾದಿಸಿದ ಹಣ ಅವರಿಗೆ ಸಿಗದೇನೆ ಹೋಯಿತು. ಹೀಗೆ ಸುಳ್ಳು ಹೇಳಿ ಕದ್ದು, ತಂದೆ-ತಾಯಿಗಳನ್ನು ವಂಚಿಸಿ ತೆಗೆದುಕೊಳ್ಳುವ ಹಣವೆಲ್ಲಾ ನಮಗೆ ನಿರಾಶೆಯನ್ನು ತರುತ್ತದೆ. ಯೇಸಪ್ಪಾಗೆ ಇದು ಇಷ್ಟವಿಲ್ಲ. ಆದ್ದರಿಂದ ಈ ಹೊಸ ವರ್ಷದಲ್ಲಿ ನಿಮ್ಮ ಹಳೆಯ ಪಾಪ ಸ್ವಭಾವವನ್ನು ಬಿಟ್ಟು ಹೊಸ ತೀರ್ಮಾನಗಳನ್ನು ತೆಗೆದುಕೊಳ್ಳಿರಿ. Ok.

- Mrs. ಸಾರಾಳ್ ಸುಭಾಷ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş jojobet giriş holiganbet güncel giriş holiganbet giriş sahabet onwin casibom giriş casibom casibom giriş casibom matbet matbet giriş casibom casibom giriş amgbahis amgbahis giriş casibom casibom giriş jojobet jojobet giriş perabet perabet giriş holiganbet holiganbet giriş matbet matbet giriş superbetin superbetin giriş supertotobet supertotobet giriş superbetin superbetin giriş supertotobet supertotobet giriş imajbet imajbet giriş perabet perabet giriş coinbar coinbar giriş klasbahis klasbahis giriş ngsbahis ngsbahis giriş matbet matbet giriş mavibet mavibet giriş nakitbahis nakitbahis giriş marsbahis marsbahis giriş interbahis interbahis giriş mariobet mariobet giriş betpas betpas giriş artemisbet artemisbet giriş betsmove betsmove giriş restbet restbet giriş egebet egebet giriş https://yourfilterconnection.com/ grandpashabet