Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 07.01.2023
Share:

By Village Missionary Movement

Friday, 06-Jan-2023

ಧೈನಂದಿನ ಧ್ಯಾನ(Kannada) – 07.01.2023

 

ಟ್ಯೂಷನ್ ಸೇವೆ

 

“ಆತನನ್ನು ಸೇವಿಸುವವರ ಸಂತಾನದವರು ಯೆಹೋವನ ಸಂತಾನದವರೆಂದು ಎಣಿಸಲ್ಪಡುವರು" - ಕೀರ್ತನೆ 22:30

 

ಸಾರಾಳ್ ತಕ್ಕರ್ ಅವರು ತಮ್ಮ ಕಾಲುಗಳು ನಿಷ್ಕ್ರಿಯವಾಗಿದ್ದರೂ ಸಹ ತಮ್ಮ ಸಹೋದರ ಮತ್ತು ಸ್ನೇಹಿತರ ಸಹಾಯದಿಂದ ದಕ್ಷಿಣ ತಮಿಳುನಾಡಿನಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಕಾರಣರಾಗಿದ್ದರು. ಅಂಗವಿಕಲಳಾಗಿದ್ದರೂ ಮಹಿಳೆಯರು ಏಕೆ ಓದಬೇಕು ಎಂದು ಯೋಚಿಸಿದ ಸಹೋದರ ಬರೆದ ಪತ್ರದ ಮೂಲಕ ನಮ್ಮ ಸಮಾಜದ ಸ್ಥಿತಿಗತಿಯನ್ನು ಅರಿತ ಹದಿಹರೆಯದ ಯುವತಿ ಸಾರಾಳ್ ತಕ್ಕರ್ ತನ್ನ ಒಡವೆಗಳನ್ನು ನೀಡಿ ಸಹಾಯ ಕೋರಿದ ಲಕ್ಷಾಂತರ ಮಹಿಳೆಯರಿಗೆ ಶಿಕ್ಷಣ ಪಡೆಯಲು ಸಹಾಯ ಮಾಡಿದರು. ಭಾರತಕ್ಕೆ ಬಾರದೆಯೇ ಶಾಲಾ-ಕಾಲೇಜುಗಳ ಸ್ಥಾಪನೆಗೆ ಕಾರಣರಾಗಿದ್ದರು. ಅದರ ಹೊರತಾಗಿ, ಅವರು ಸಾಯುವವರೆಗೂ ನಮ್ಮ ದೇಶದ ಬಗ್ಗೆ ಕಾಳಜಿ ವಹಿಸಿದ್ದರು. ಅವರು ಸ್ಥಾಪಿಸಿದ ಶಿಕ್ಷಣ ಸಂಸ್ಥೆಗಳ ಮೂಲಕ ಲಕ್ಷಾಂತರ ವಿದ್ಯಾರ್ಥಿನಿಯರು ಅಕ್ಷರಸ್ಥರಾಗಿ ದೇವರನ್ನು ಅರಿತಿದ್ದಾರೆ. ಅವರಲ್ಲಿ ಅನೇಕರು ಸಮಾಜದಲ್ಲಿ ಉತ್ತಮರು ಮತ್ತು ನಾಯಕತ್ವದ ಸ್ಥಾನಗಳನ್ನು ಹೊಂದಿದ್ದಾರೆ ಎಂಬುದು ಅಲ್ಲಗಳೆಯಲಾಗದ ಸತ್ಯ. ಅಂಗವಿಕಲ ಮಹಿಳೆಯ ಆಶಯ ಸಮಾಜದಲ್ಲಿ ಎಷ್ಟು ಬದಲಾವಣೆ ತಂದಿದೆ ನೋಡುದ್ರಾ?

 

ಸಾರಾಳ್ ತಕ್ಕರ್ ಅವರಂತೆ, ದೇವರು ಅನೇಕ ಜನರನ್ನು ಸತ್ಯವೇದದಲ್ಲಿ ಆಯ್ಕೆ ಮಾಡಿದ್ದು ಅವರ ಅರ್ಹತೆಯ ಆಧಾರದ ಮೇಲೆ ಅಲ್ಲ. ಉದಾಹರಣೆಗೆ ಯೇಸು ಕ್ರಿಸ್ತನ 12 ಶಿಷ್ಯರನ್ನು ತೆಗೆದುಕೊಳ್ಳೋಣ. "ನನ್ನ ಹಿಂದೆ ಬನ್ನಿ, ನಾನು ನಿಮ್ಮನ್ನು ಮನುಷ್ಯರನ್ನು ಹಿಡಿಯುವವರನ್ನಾಗಿ ಮಾಡುತ್ತೇನೆ" ಎಂದಾಗ ಅವರು ಆತನ ಮಾತಿಗೆ ವಿಧೇಯರಾಗಿ ಆತನನ್ನು ಹಿಂಬಾಲಿಸಿದರು. ನಡೆದಿದ್ದೇನು ಗೊತ್ತಾ? ಪ್ರತಿಯೊಬ್ಬರೂ ಜಗತ್ತನ್ನು ಕದಡುವ ಸೇವಕರಾಗಿ ಮಾರ್ಪಟ್ಟರು. ಅನಕ್ಷರಸ್ಥ ಪೇತ್ರನು ಬೋಧಿಸಿದ ಮೊದಲ ಧರ್ಮೋಪದೇಶದಲ್ಲಿ, 3000 ಜನರು ಕರ್ತನಾದ ಯೇಸು ಕ್ರಿಸ್ತನನ್ನು ತಮ್ಮ ಸ್ವಂತ ರಕ್ಷಕನಾಗಿ ಸ್ವೀಕರಿಸಿದರು. ಯಾರು ತನ್ನನ್ನು ತಾನು ಅನರ್ಹರೆಂದು ಭಾವಿಸಿ ಯೇಸುವಿಗೆ ಒಪ್ಪಿಸಿಕೊಡುತ್ತಾರೋ ಅವರನ್ನು ಉನ್ನತೀಕರಿಸುವಲ್ಲಿ ಯೇಸು ಒಬ್ಬನೇ ಯೇಸುವಿಗೆ ಸಮಾನನಾಗಿದ್ದಾನೆ. ಆದ್ದರಿಂದ, ನಾವು ದೇವರಿಗೆ ನಮ್ಮನ್ನು ಒಪ್ಪಿಸಿ, ನಮ್ಮ ಅರ್ಹತೆಯನ್ನು ಲೆಕ್ಕಿಸದೆ ಕೆಲಸ ಮಾಡಿದರೆ, ನಾವು ಒಂದು ಗುಂಪನ್ನು ಮುನ್ನಡೆಸುವ ನಾಯಕನಾಗಿ ಮಾರ್ಪಡಬಹುದು. ನೀವು ಏನನ್ನುತ್ತೀರಾ? ತನ್ನ ಚಿಕ್ಕವಯಸ್ಸಿನಲ್ಲಿ ತೀಟೆ ಮಾಡುತ್ತಾ ಯಾವುದು ಸರಿ ಯಾವುದು ತಪ್ಪು ಎಂದು ಅರಿಯದೇ ಮನಬಂದಂತೆ ಜೀವಿಸುವ ಮಕ್ಕಳೇ ಹೆಚ್ಚಾಗಿ ಬಿಟ್ಟಿದ್ದಾರೆ. ಇವರನ್ನು ಒಗ್ಗೂಡಿಸಿ ದೇವರ ಪ್ರೀತಿಯನ್ನು, ಇವರಿಗೆ ಸಣ್ಣ ಸಣ್ಣ ಸಹಾಯದ ಮೂಲಕ ತಿಳಿಸುವುದೇ ಈ ಟ್ಯೂಷನ್ ಸೆಂಟರ್.

 

ನಿಮ್ಮ ಹಳ್ಳಿಯಲ್ಲಿ ಇದನ್ನು ನೀವು ಮಾಡಬಹುದು. ಇಂದಿನ ಮಕ್ಕಳೇ ನಾಳಿನ ನಾಯಕರು. ನಮ್ಮಲ್ಲಿ ಪ್ರತಿಯೊಬ್ಬರೂ ನಾಯಕರನ್ನು ರಚಿಸುವಲ್ಲಿ ತೊಡಗಿಸಿಕೊಳ್ಳಬಹುದು ಎಂಬುದನ್ನು ಮರೆಯಬೇಡಿ. ಶಿಕ್ಷಣವು ವ್ಯಕ್ತಿಯ ಜೀವನ ಮಟ್ಟವನ್ನು ನಿರ್ಧರಿಸುತ್ತದೆ. ನಾವು ಅದನ್ನು ದೇವರ ಪ್ರೀತಿಯಿಂದ ಕಲಿಸಿದರೆ, ಅವರು ಖಂಡಿತವಾಗಿಯೂ ದೇವರ ಸಂತತಿಯಾಗಿ ಮತ್ತು ಶಿಷ್ಯರಾಗಿ ಬೆಳೆಯುತ್ತಾರೆ. ನಮ್ಮ ಸೇವೆಯಲ್ಲಿ, ನಾವು ಪ್ರತಿ ಕಾರ್ಯ ಕ್ಷೇತ್ರದಲ್ಲಿ 12 ಮಕ್ಕಳೊಂದಿಗೆ ಟ್ಯೂಷನ್ ಕೇಂದ್ರವನ್ನು ನಡೆಸುತ್ತಿದ್ದೇವೆ. ಇದರಲ್ಲಿ ಬರುವ ಮಕ್ಕಳಿಗಾಗಿ ಪ್ರಾರ್ಥಿಸಿರಿ. ನಿಮ್ಮ ಪ್ರಾಂತ್ಯದಲ್ಲಿ ಟ್ಯೂಷನ್ ತೆಗೆದುಕೊಳ್ಳಲು ನೀವು ಸಹ ಮುಂದೆ ಬರಬಹುದು.

 

ನೆನಪಿಡಿ: ನಿಮ್ಮ ಟ್ಯೂಷನ್ ಕೇಂದ್ರದಲ್ಲಿ 12 ವಿದ್ಯಾರ್ಥಿಗಳು ಓದುತ್ತಿದ್ದರೆ, ನೀವು 12 ನಾಯಕರನ್ನು ರಚಿಸುತ್ತಿದ್ದೀರಿ ಎಂಬುದನ್ನು ಜ್ಞಾಪಕದಲ್ಲಿಟ್ಟುಕೊಳ್ಳಿ.

- Mrs. ಮಂಜುಳಾ

 

ಪ್ರಾರ್ಥನಾ ಅಂಶ:

ನಮ್ಮ ಕ್ಯಾಂಪಸ್ ನಲ್ಲಿ ಇರುವ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ ಪ್ರತಿಯೊಬ್ಬರೂ ಯೇಸುವನ್ನು ತಮ್ಮ ಸ್ವಂತ ರಕ್ಷಕನನ್ನಾಗಿ ಸ್ವೀಕರಿಸಬೇಕೆಂದು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş