Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 23.02.2021
Share:

By Village Missionary Movement

Tuesday, 23-Feb-2021

ಧೈನಂದಿನ ಧ್ಯಾನ(Kannada) – 23.02.2021

ಬಚ್ಚಿಡಬೇಡ

"...ಹೊಲವನ್ನು ಮಾರಿದ್ದು ಇಷ್ಟೇ ಹಣಕ್ಕೋ? ನನಗೆ ಹೇಳು ಎಂದು ಕೇಳಲು ಆಕೆಯು - ಹೌದು, ಇಷ್ಟಕ್ಕೇ ಅಂದಳು." - ಅಪೊಸ್ತಲ. 5:9

ಅಪೊಸ್ತಲರು ದೇವರ ವಾಕ್ಯಗಳನ್ನು ಬೋಧಿಸಿದರು. ವಾಕ್ಯವನ್ನು ಅಂಗೀಕರಿಸಿ ವಿಶ್ವಾಸಿಗಳಾದವರು ಬಹಳ ಹೇರಳವಾದ ಗುಂಪಾಗಿದ್ದರು. ಹೊಲ  ಮನೆಗಳುಳ್ಳವರು ಅವುಗಳನ್ನು ಮಾರಿ ಅದರ ಹಣವನ್ನು ತೆಗೆದುಕೊಂಡು ಬಂದು ಅಪೊಸ್ತಲರ ಪಾದದಲ್ಲಿಟ್ಟರು. ಅವುಗಳು ಸಾಮಾನ್ಯವಾಗಿ ಇಡಲ್ಪಟ್ಟು, ಅವರವರ ಅವಶ್ಯಕತೆಗಳಿಗೆ ತಕ್ಕಂತೆ ವಿತರಿಸಲಾಯಿತು.

ಈ ಪರಿಸ್ಥಿತಿಯಲ್ಲಿ ವಿಶ್ವಾಸಿಗಳಾಗಿದ್ದ ಮತ್ತು ಗಂಡ ಹೆಂಡತಿಯಾದ ಅನನೀಯ ಸಫ್ಫೈರಳು ತಮ್ಮ ಹೊಲವನ್ನು ಮಾರಿ, ಅದರಲ್ಲಿ ಒಂದು ಭಾಗವನ್ನು ವಂಚಿಸಿದರು. ಮಿಕ್ಕಿದ್ದನ್ನು ಅಪೊಸ್ತಲರ ಪಾದದಲ್ಲಿ ಇಟ್ಟನು ಅನನೀಯ. ಪೇತ್ರನು ಅವನ ಬಳಿ, ಪರಿಶುದ್ಧಾತ್ಮನಿಗೆ ವಿರೋಧವಾಗಿ ಸುಳ್ಳು ಹೇಳುವಂತೆ ಸೈತಾನನು ನಿನ್ನ ಹೃದಯವನ್ನು ತುಂಬಿಸಿರುವುದೇನು?"  ಎಂದರು. ಆ ಸ್ಥಳದಲ್ಲಿಯೇ ಅನನೀಯ ಬಿದ್ದು ಪ್ರಾಣ ಬಿಟ್ಟನು. ಯೌವನಸ್ಥರು ಅವನನ್ನು ಸಮಾಧಿ ಮಾಡಲು ಎತ್ತಿಕೊಂಡು ಹೋದರು. ಇದನ್ನು ತಿಳಿಯದೆ ಒಳಗೆ ಬಂದ ಸಫ್ಫೈರಳು, ಗಂಡನ ಹಾಗೆಯೇ ಹಣದಾಸೆಯ ನಿಮಿತ್ತವಾಗಿ ಸುಳ್ಳು ಹೇಳಿ ಅದರ ಪರಿಣಾಮವಾಗಿ ತನ್ನ ಜೀವವನ್ನೇ ಕಳೆದುಕೊಂಡಳು. ಹೌದು, ಸುಳ್ಳು ಹೇಳುವುದಕ್ಕೆ ಇಬ್ಬರು ಐಕ್ಯವಾದದ್ದೇ ಎರಡು ಜೀವಗಳು ಹೋಗುವುದಕ್ಕೆ ಕಾರಣವಾಯಿತು. ಗಂಡನ ವಂಚನೆಯನ್ನು ತಿಳಿದಕೂಡಲೇ ಸಫ್ಫೈರಳಾದರೂ ಒಳ್ಳೆಯ ಆಲೋಚನೆಯನ್ನು ಹೇಳಿರಬೇಕಿತ್ತು. ಆದರೆ ಅವಳು ಆತನಿಗೆ ತಕ್ಕಂತೆ ನಡೆದುಕೊಂಡಳು. ಇವರಿಬ್ಬರಿಗೂ ಮತ್ತೆ  ಒಂದು ಅವಕಾಶ ಕೊಡಲ್ಪಟ್ಟಿತು.  "ಹೊಲವನ್ನು ಮಾರಿದ್ದು ಇಷ್ಟಕ್ಕೇನಾ"ಎಂದು ಪೇತ್ರನು ಸಫ್ಫೈರಳ ಬಳಿ ಕೇಳಿದಾಗಲಾದರೂ ಹಾಕಿ ಸುಧಾರಿಸಿಕೊಂಡು ನಿಜವನ್ನು ಹೇಳಿರಬಹುದಾಗಿತ್ತು... ಆದರೆ
ಅಂದು ಅಯ್ಯೋ ಪಾಪ!

"ಹಣದಾಸೆಯೇ ಎಲ್ಲಾ ಕೆಟ್ಟತನಕ್ಕೂ ಬೇರಾಗಿದೆ" ಎಂಬ ದೇವರ ವಾಕ್ಯವು ಈ ದಂಪತಿಗಳ ಜೀವನದಲ್ಲಿ ನಿಜವಾಯಿತು. ಇವರು ನಮಗೆ ಕಲಿಸಿ ಕೊಡುವ ಮುಖ್ಯ ಪಾಠ:-ತಪ್ಪಾದ ಕಾರ್ಯಕ್ಕೋ, ಸತ್ಯವೇದಕ್ಕೆ ಬಾಹ್ಯವಾದ ಕಾರ್ಯಕ್ಕೋ ಕುಟುಂಬ ವಾಗಿಯೋ ಗಂಡ-ಹೆಂಡತಿಯಾಗಿಯೋ, ಐಕ್ಯವಾಗಬಾರದು. ಯಾರಾದರೊಬ್ಬರು ನ್ಯಾಯವನ್ನು ಒತ್ತಿಹೇಳಬೇಕು. ಹಾಗಿಲ್ಲದ ಪಕ್ಷದಲ್ಲಿ ಸುಳ್ಳು, ತಪ್ಪುಗಳು ತಾನಾಗಿ ನುಗ್ಗಿಬಿಡುತ್ತದೆ.

ಪ್ರಿಯರೇ! ಅನನೀಯ-ಸಫ್ಫೈರಳ ಜೀವನ ನಮಗೊಂದು ಎಚ್ಚರಿಕೆಯಾಗಿರಲಿ. ಕರ್ತನ ಕಾರ್ಯಗಳಲ್ಲಿ ನಂಬಿಗಸ್ಥರಾಗಿರೋಣ. ಮತ್ತೊಬ್ಬರ ಜೀವನಕ್ಕೆ ಕೆಟ್ಟದಾಗಿ ಕೊನೆಗೊಳ್ಳುವ ಯಾವ ಕಾರ್ಯವನ್ನೂ ಮಾಡಲು ಐಕ್ಯವಾಗಬೇಡ. ಹಣದಿಂದ ಕುಟುಂಬಗಳಲ್ಲಿ ದೊಡ್ಡ ಸಮಸ್ಯೆಗಳನ್ನು ವ್ಯವಹರಿಸುವಾಗ ಬಹಳ ಜಾಗ್ರತೆಯಿಂದಿರೋಣ. ಪ್ರಾರ್ಥನೆಗೆ ಕೊಡುವ ಕಾರ್ಯದಲ್ಲಿ ನಂಬಿಗಸ್ಥರಾಗಿದ್ದು ಪರಿಪೂರ್ಣವಾದ ಆಶೀರ್ವಾದಗಳನ್ನು ಹೊಂದಿಕೊಳ್ಳೋಣ.
-    Mrs. ಭುವನ ಧನಪಾಲ್

ಪ್ರಾರ್ಥನಾ ಅಂಶ:-
ರಾಕ್ಲಾಂಡ್ ಸತ್ಯವೇದ ಶಾಲೆಯಲ್ಲಿ ಭಾರತದ ಹಲವು ಭಾಗಗಳಿಂದ ಅನೇಕರು ಬಂದು ಸೇರಲು ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Androidapp: https://play.google.com/store/apps/details?id=com.vmmorg.template.msmapp&showAllReviews=true
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş yakabet yakabet giriş yakabet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş