Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 06.01.2023
Share:

By Village Missionary Movement

Thursday, 05-Jan-2023

ಧೈನಂದಿನ ಧ್ಯಾನ(Kannada) – 06.01.2023

 

ಎಲ್ಲವು ಹೊಸದಾಯಿತು

 

“ಹೀಗಿರಲಾಗಿ ಯಾವನಾದರೂ ಕ್ರಿಸ್ತನಲ್ಲಿದ್ದರೆ ಅವನು ನೂತನಸೃಷ್ಟಿಯಾದನು. ಇಗೋ, ಪೂರ್ವಸ್ಥಿತಿ ಹೋಗಿ ಎಲ್ಲಾ ನೂತನವಾಯಿತು" - 2 ಕೊರಿಂಥ.5:17

 

ಹೊಸ ವರ್ಷ ಬಂದಾಯ್ತು. ನಾವು ಹೊಸ ಹೊಸ ವಾಗ್ದಾನಗಳನ್ನು, ಹೊಸ ಹೊಸ ಆಶೀರ್ವಾದಗಳನ್ನು ಬಯಸುತ್ತಿದ್ದೇವೆ. ಕಳೆದ ವರ್ಷ ಕೊಟ್ಟ ವಾಗ್ದಾನ ನೆರವೇರಿದೆಯೇ? ಅದನ್ನು ಸ್ವೀಕರಿಸಲು ನಾವು ಆಜ್ಞೆಗಳನ್ನು ಪಾಲಿಸಿದ್ದೇವೆಯೇ ಎಂಬುದನ್ನೆಲ್ಲಾ ಕೆಲ ನಿಮಿಷಗಳಾದರೂ ಯೋಚಿಸಿದ ನಂತರವೇ ನಾವು ಹೊಸ ವರ್ಷದೊಳಗೆ ಪ್ರವೇಶಿಸೋಣ.

 

ನಾವು ಒಂದು ಹೊಸ ಮನೆಯನ್ನು ಕಟ್ಟಿಕೊಂಡು ಅದರೊಳಗೆ ಹೋಗುವಾಗ ಅನಗತ್ಯ ವಸ್ತುಗಳನ್ನು, ಬಳಸದ ವಸ್ತುಗಳನ್ನು, ಅನುಪಯುಕ್ತ ಬಟ್ಟೆಗಳನ್ನು ಖಂಡಿತ ತೆಗೆದುಕೊಂಡು ಹೋಗುವುದಿಲ್ಲ. ನಾವು ಹೊಸ ಸೋಫಾ, ಹೊಸ ಫ್ರಿಡ್ಜ್, ಹೊಸ ಟೇಬಲ್ ಈ ರೀತಿಯಾಗಿ ತೆಗೆದುಕೊಂಡು ಹೋಗುತ್ತೇವೆ. ಅದೇ ರೀತಿ, ಕ್ರಿಸ್ತನನ್ನು ತಿಳಿದುಕೊಳ್ಳುವ ಮೊದಲು, ನಮ್ಮ ಹೃದಯದಲ್ಲಿರುವ ಎಲ್ಲಾ ಅನಗತ್ಯ ಆಲೋಚನೆಗಳಾದ ಹೆಮ್ಮೆಯ ಆಲೋಚನೆಗಳು, ಅಸೂಯೆಗಳು, ಅಶುದ್ಧ ನೆನಪುಗಳು, ದ್ವೇಷಗಳು, ಕಹಿ ಅನುಭವಗಳು ಮತ್ತು ಕಸದಂತೆ ಸಂಗ್ರಹವಾಗಿರುವ ವ್ಯಸನಗಳನ್ನೆಲ್ಲಾ ಎತ್ತಿ ಬಿಸಾಡಿಬಿಟ್ಟು, ಕ್ರಿಸ್ತ ಯೇಸುವಿನಲ್ಲಿದ್ದ ಮನಸ್ಸೇ ನಿಮ್ಮಲ್ಲಿ ಇರಲಿ ಎಂದು ಸತ್ಯವೇದವು ಹೇಳುತ್ತಿದೆ. (ಫಿಲಿಪ್ಪಿ 2:5) ಒಬ್ಬನು ಕ್ರಿಸ್ತನಲ್ಲಿದ್ದರೇನೆ ನೂತನ ಸೃಷ್ಟಿಯಾಗುತ್ತಾನೆ.

 

ಇದಕ್ಕೆ ಉತ್ತಮ ಉದಾಹರಣೆ ಎಂದರೆ ಹದ್ದು. ಹದ್ದು ಬಹಳ ಬಲಿಷ್ಠ ಪಕ್ಷಿಯಾಗಿದ್ದರೂ, ವಯಸ್ಸಾದಾಗ ಅದು ತನ್ನ ರೆಕ್ಕೆಗಳನ್ನು ಉದುರಿಸಿಬಿಟ್ಟು ತನ್ನ ಸೌಂದರ್ಯವನ್ನು, ಕಾಲಿನ ಬೆರಳುಗಳನ್ನು ಬಂಡೆಗಳ ಮೇಲೆ ಒಡೆದು ಒಡೆದು ತನ್ನನ್ನು ತಾನೇ ಗಾಯಗೊಳಿಸುತ್ತದೆ. ಕೆಲವು ದಿನಗಳ ನಂತರ, ಹೊಸ ರೆಕ್ಕೆಗಳು ಮತ್ತು ಕಾಲ್ಬೆರಳ ಉಗುರುಗಳು ಕಾಣಿಸಿಕೊಳ್ಳುತ್ತವೆ ಮತ್ತು ಅದು ಹೊಸ ಹಕ್ಕಿಯಾಗಿ ರೂಪಾಂತರಗೊಳ್ಳುತ್ತದೆ. ಹೀಗೆ ಅದು ತನ್ನನ್ನು ತಾನು ನವೀಕರಿಸಿಕೊಳ್ಳುತ್ತದೆ.

 

ಪ್ರಿಯರೇ, ನಾವು ಹದ್ದಿನಂತೆ ನಮ್ಮ ಹಳೆಯ ಪಾಪದ ಆಲೋಚನೆಗಳನ್ನು ತ್ಯಜಿಸಿದರೆ, ಕ್ರಿಸ್ತನು ನಮ್ಮನ್ನು ನವೀಕರಿಸುತ್ತಾರೆ ಮತ್ತು ನಮ್ಮ ಜೀವನವನ್ನು ಹೆಚ್ಚಿಸುತ್ತಾರೆ. ಕ್ರಿಸ್ತನಲ್ಲಿ ನಿಜವಾದ ಪಶ್ಚಾತ್ತಾಪ ಮತ್ತು ಬದಲಾವಣೆಗಳು ಏರ್ಪಟ್ಟರೆ ಹೊಸ ಸೃಷ್ಟಿಯಾಗಿಬಿಡಬಹುದು. ನಾವು ನಮ್ಮ ತಪ್ಪುಗಳು ಮತ್ತು ಪಾಪಗಳ ಬಗ್ಗೆ ಪಶ್ಚಾತ್ತಾಪಪಟ್ಟು ದೇವರ ಬಳಿಗೆ ಬಂದರೆ, ಆತನು ತನ್ನ ರಕ್ತದಿಂದ ನಮ್ಮನ್ನು ತೊಳೆದು ನಮ್ಮನ್ನು ನವೀಕರಿಸುತ್ತಾರೆ. ಇದನ್ನು ಓದುತ್ತಿರುವ ನೀವು ಸಹ ನಿಮ್ಮನ್ನು ನವೀಕರಿಸಿಕೊಳ್ಳಿರಿ ಮತ್ತು ಹೊಸ ಸೃಷ್ಟಿಯಾಗಿ ಮಾರ್ಪಟ್ಟು ದೇವರ ಬಳಿ ಆಶೀರ್ವಾದವನ್ನು ಪಡೆದುಕೊಳ್ಳಿರಿ. ಮತ್ತೊಬ್ಬರಿಗೆ ಆಶೀರ್ವಾದವಾಗಿರಿ. ಆಮೆನ್!

- Mrs. ಭುವನಾ ಧನಪಾಲನ್

 

ಪ್ರಾರ್ಥನಾ ಅಂಶ:

ಹೊಸದಾಗಿ ಪ್ರಾರಂಭಿಸಲಾದ 24 ಗಂಟೆಗಳ ಚಾನೆಲ್ ಆಗಿರುವ "ಗ್ರಾಮೀಯ ಟಿವಿ" ಲಕ್ಷಾಂತರ ಜನರಿಗೆ ಆಶೀರ್ವಾದಕರವಾಗಿರುವಂತೆಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al