Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 05.01.2023
Share:

By Village Missionary Movement

Wednesday, 04-Jan-2023

ಧೈನಂದಿನ ಧ್ಯಾನ(Kannada) – 05.01.2023

 

ನನ್ನ ಕೈಲಾದಷ್ಟು ಮಾತ್ರ ಕೊಟ್ಟಿದ್ದೇನೆ

 

"ನಾನು ನನ್ನಿಂದಾಗುವಷ್ಟು ಪ್ರಯಾಸಪಟ್ಟು... ನನ್ನ ದೇವರ ಮಂದಿರಕ್ಕೋಸ್ಕರ ರಾಶಿರಾಶಿಯಾಗಿ ಸಂಗ್ರಹಿಸಿದ್ದೇನೆ" - 1 ಪೂರ್ವಕಾಲ 29:2

 

ಇತ್ತೀಚೆಗೆ ನಾವು ತಂಡವಾಗಿ ಸೇವೆಗೆ ಹತ್ತಿರದ ಜಿಲ್ಲೆಗೆ ಹೋಗಿದ್ದೆವು. ಅದೊಂದು ಬೆಟ್ಟ! ಕೆಲವು ಮಹಿಳೆಯರು ಪ್ರಾರ್ಥನೆಗಾಗಿ ಅಲ್ಲಿ ಸೇರಿದ್ದರು. ಹಾಡುಗಳನ್ನು ಹಾಡಿ, ಸತ್ಯವೇದ ವಾಕ್ಯಗಳನ್ನು ಧ್ಯಾನಿಸಿ ಅವರೊಂದಿಗೆ ಬೆರೆತು ಮಾತಾಡಿ ಪ್ರಾರ್ಥನೆಯನ್ನು ಪೂರ್ಣಗೊಳಿಸಿದೆವು. ನಾನು ಆ ಹಳ್ಳಿಯಿಂದ ಹೊರಡುವಾಗ ಅಲ್ಲಿಗೆ ಬಂದ ಮಹಿಳೆಯೊಬ್ಬರು ನನ್ನ ಬಳಿಗೆ ಬಂದು, ಸರ್, ನನ್ನ ಕುಟುಂಬದಿಂದ ಬಡತನವು ನೀಗುವಂತೆ ಪ್ರಾರ್ಥಿಸಿ ಎಂದರು. ನಾನು ಪ್ರಾರ್ಥಿಸಿ ಮುಗಿಸಿದ ತಕ್ಷಣವೇ, ಬೇಡವೆಂದರೂ ಅವರು 100ರೂ ಕಾಣಿಕೆಯನ್ನು ಬಲವಂತವಾಗಿ ನನ್ನ ಕೈಯಲ್ಲಿಟ್ಟು ಹೋದರು. ಇದರಲ್ಲಿ ಇನ್ನೊಂದು ಸಂಗತಿ ಏನೆಂದರೆ, ಕಾಣಿಕೆ ಕೊಡುವುದಕ್ಕಾಗಿ ಬೇರೆಯವರ ಬಳಿ ಸಾಲ ಮಾಡಿಕೊಟ್ಟರು. ಇದೇ ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವಾಗಿದೆ.

 

ಇಂದಿನ ಸತ್ಯವೇದ ಭಾಗದಲ್ಲಿ ಮಕೆದೋನ್ಯದ ಸಭೆಯವರು ತಮ್ಮ ಉಪದ್ರವದಲ್ಲೂ, ಕಠಿಣವಾದ ಬಡತನದಲ್ಲೂ ಶೋಧಿಸಲ್ಪಟ್ಟಾಗಲೂ ಸೇವಕರಿಗೆ ಉತ್ಸಾಹದಿಂದ ನೀಡುವುದನ್ನು ಓದುತ್ತೇವೆ. ನೀವು ಎಷ್ಟು ಕೊಡಬೇಕು ಎಂಬುದು ಮುಖ್ಯವಲ್ಲ, ಆದರೆ ನಮ್ಮ ಹೃದಯದಲ್ಲಿ "ನಾನು ಮಾಡಬಹುದು" ಎಂದು ಹೇಳುವ ಬಯಕೆ ಇದ್ದರೆ ನಾವು ಏನು ಬೇಕಾದರೂ ಮಾಡಬಹುದು. ಸಕಲವಿಧವಾದ ಕೃಪೆಗಳನ್ನು ಹೆಚ್ಚಿಸುವ ದೇವರು ಮಕೆದೋನ್ಯದ ಸಭೆಗಳಿಗೆ ನೀಡಿದ ಕೃಪೆಯನ್ನೇ ನಮಗೂ ದಯಪಾಲಿಸಲಿ.

 

ಕ್ರಿಸ್ತನಲ್ಲಿ ಪ್ರಿಯರೇ, ಇಂದಿನ ಧ್ಯಾನ ಸಂದೇಶದಲ್ಲಿ ಪ್ರಮುಖವಾದ ಒಂದು ವಿಷಯದ ಕುರಿತು ದೇವರು ನಿಮ್ಮೊಂದಿಗೆ ಮಾತನಾಡಲು ಬಯಸುತ್ತಿದ್ದಾರೆ. ದೇವರ ಕೆಲಸಕ್ಕೆ ಸಹಾಯ ಮಾಡುವಲ್ಲಿ ನಮಗೆ ಪ್ರಶ್ನೆಗಳು ಮತ್ತು ವಿರೋಧಾಭಾಸಗಳಿದ್ದರೆ, ದೇವರ ಕೆಲಸಕ್ಕೆ ಯಾರು ಸಹಾಯ ಮಾಡಲು ಸಾಧ್ಯ? ಸೇವೆಗೆ ನೀಡುವ ವಿಷಯದಲ್ಲಿ ನಮ್ಮ ಹೃದಯ ಮತ್ತು ಕೈಗಳು ಉದಾರವಾಗಿ ನೀಡಲು ಮುಂದೆ ಬರಬೇಕು. ನಾವು ಉತ್ಸಾಹದಿಂದ ಮತ್ತು ಆತನಿಂದ ಪಡೆದದ್ದನ್ನು ಅವರಿಗೆ ನೀಡಲು ಸಿದ್ಧರಾಗಿರಬೇಕು, ಬೇಸರ ಮತ್ತು ಬಲವಂತವಾಗಿ ಅಲ್ಲ. ಕೊರಿಂಥದ ಜನರ ಬಳಿ ಹಣವಿದ್ದರೂ ಕೊಡಲು ಇಷ್ಟವಿರಲಿಲ್ಲ. ಆದರೆ ಮಕೆದೋನ್ಯದ ಸಭೆಯವರು ಕೊಡಲು ಏನೂ ಇಲ್ಲದಿದ್ದರೂ, ಸಹಾಯ ಮಾಡಲು ತಮ್ಮ ಕೈಲಾದಷ್ಟು ಮಾತ್ರ ಮಾಡಿದರು. ಆದುದರಿಂದ ಈ ಕಡೇ ದಿವಸಗಳಲ್ಲಿ ನಾವು ಸೇವೆಗೆ ಹೋಗದಿದ್ದರೂ ನಮ್ಮ ಕೈಲಾದಷ್ಟು ಸೇವೆಯನ್ನು ಬೆಂಬಲಿಸುವುದು ಉತ್ತಮ. ನಿನಗೆ ಪರಲೋಕದಲ್ಲಿ ನಿಧಿ ಇರುತ್ತದೆ. ದೇವರು ನಿಮಗೆ ಮಾರ್ಗದರ್ಶನ ನೀಡಲಿ!

- P. ಜೇಕಬ್ ಶಂಕರ್

 

ಪ್ರಾರ್ಥನಾ ಅಂಶ:

ಒಂದು ಸಾವಿರ ನಿರ್ಗತಿಕ ಹಳ್ಳಿಗಳಲ್ಲಿ ಚರ್ಚುಗಳನ್ನು ನಿರ್ಮಿಸಬೇಕೆಂಬ ನಮ್ಮ ದರ್ಶನದಲ್ಲಿ ಅನೇಕರು ನಮ್ಮೊಂದಿಗೆ ಸೇರಬೇಕೆಂದು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al