Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 03.01.2023
Share:

By Village Missionary Movement

Monday, 02-Jan-2023

ಧೈನಂದಿನ ಧ್ಯಾನ(Kannada) – 03.01.2023

 

ಇನ್ನೂ 12 ತಿಂಗಳುಗಳು

 

"ಸುಳ್ಳಾದ ವ್ಯರ್ಥತ್ವಗಳನ್ನು ಅನುಸರಿಸುವವರು ತಮ್ಮ ಸ್ವಂತ ಕರುಣೆಯನ್ನು ಮರೆತು ಬಿಡುತ್ತಾರೆ" – ಯೋನ 2:8

 

ಕ್ರಿಸ್ತನಲ್ಲಿ ಪ್ರಿಯರೇ! ಈ ಹೊಸ ವರ್ಷಕ್ಕೆ ಕಾಲಿಟ್ಟಿರುವ ನಾವು ಈ ವರ್ಷದ 12 ತಿಂಗಳುಗಳನ್ನು ದೇವರ ಕೃಪೆಯಿಂದ ಸ್ವೀಕರಿಸಿದ್ದೇವೆ ಎಂದು ನೆನೆಸಿ ಅವರಿಗೆ ಕೃತಜ್ಞತೆ ಸಲ್ಲಿಸೋಣ. ಆದಾಗ್ಯೂ, ನಾಳೆ ಎಂದು ಕೊಚ್ಚಿಕೊಳ್ಳಬೇಡಿರಿ ಒಂದು ದಿನದೊಳಗೆ ಏನಾಗುವುದೋ ನಿಮಗೆ ತಿಳಿಯದು ಎಂದು ಸತ್ಯವೇದವು ಹೇಳುತ್ತಿದೆ. ಆದ್ದರಿಂದ ಪ್ರತಿ ದಿನವನ್ನು ದೇವರ ಸನ್ನಿಧಾನದಲ್ಲಿ ಸಮರ್ಪಿಸುವ ಮೂಲಕ ನಮ್ಮನ್ನು ನಾವು ರಕ್ಷಿಸಿಕೊಳ್ಳೋಣ.

 

ದಾನಿಯೇಲನ ದಿನಗಳಲ್ಲಿ, ಅರಸನಾದ ನೆಬೂಕದ್ನೆಚ್ಚರನು ಭೂಮಿಯಲ್ಲೆಲ್ಲಾ ಆಳುತ್ತಿರುವಾಗ ಒಂದು ಕನಸಿನಲ್ಲಿ ಭಯಭೀತನಾದನು. ಆ ಸಮಯದಲ್ಲಿ ಕರ್ತನು ದಾನಿಯೇಲನ ಮೂಲಕ ಕನಸಿನ ಅರ್ಥವನ್ನು ವಿವರಿಸಿದರು. ವಿವರಣೆಯ ಕೊನೆಯಲ್ಲಿ ತನಗೆ ಬರಲಿರುವ ವಿನಾಶದಿಂದ ಪಾರಾಗಲು ದಾನಿಯೇಲನಿಂದ ಒಂದು ಸಲಹೆ ನೀಡಲಾಗುತ್ತದೆ. ಅದೇನೆಂದರೆ ನಿನ್ನ ಪಾಪಗಳನ್ನು ನಾಶಗೊಳಿಸು, ಬಡವರಿಗೆ ಕರುಣೆಯನ್ನು ತೋರಿಸಿ ನಿನ್ನ ಅಪರಾಧಗಳನ್ನು ಧ್ವಂಸಮಾಡು. ಒಂದು ವೇಳೆ ಇದರಿಂದ ನಿನ್ನ ನೆಮ್ಮದಿಯ ಕಾಲವು ಹೆಚ್ಚಾಗಬಹುದು ಎಂಬುದೇ ಆ ಸಲಹೆ. ಆದರೂ ಆ ಸಲಹೆ ನೀಡಿ "ಹನ್ನೆರಡು ತಿಂಗಳುಗಳು" ಕಳೆದು ಹೋದರೂ ಅವರು ಕೃಪೆಯ ದಿನಗಳನ್ನು ಅರ್ಥಹೀನವಾಗಿ ವ್ಯರ್ಥ ಮಾಡಿದರು. ಪರಿಣಾಮವಾಗಿ, "ನಾನು ನನ್ನ ಪರಾಕ್ರಮದ ಬಲದಿಂದ ನನ್ನ ಮಹಿ ಮೆಯ ಕೀರ್ತಿಗಾಗಿ ಕಟ್ಟಿಸಿದ ಮಹಾಬಾಬೆಲು ಇದ ಲ್ಲವೇ" ಎಂದು ಹೆಮ್ಮೆಯ ಮಾತುಗಳನ್ನಾಡುತ್ತಾ ಕೊಚ್ಚಿಕೊಂಡು ದೇವರಿಗೆ ವಿರುದ್ಧವಾಗಿ ಮಾತಾಡಿ, ಮನುಷ್ಯರಿಂದ ತಳ್ಳಲ್ಪಟ್ಟರು. ರಾಜ್ಯಭಾರವು ಅವನಿಂದ ನೀಗಿ ಹೋಯಿತು.

 

ಇದನ್ನು ಓದುತ್ತಿರುವ ದೇವರ ಪ್ರೀತಿಯ ಮಕ್ಕಳೇ! ನಿಮ್ಮಲ್ಲಿರುವ ಸಣ್ಣ ಸಣ್ಣ ಕೊರತೆಗಳನ್ನು ನೀಗಿಸಿ, ನಿಮ್ಮಲ್ಲಿ ತನ್ನ ಉದ್ದೇಶವನ್ನು ಪೂರೈಸಿ ನಿಮ್ಮ ಜೀವನವನ್ನು ಸಮೃದ್ಧಿಗೊಳಿಸುವ ಮತ್ತು ಎಚ್ಚರಿಕೆಗಳೊಂದಿಗೆ ಕೂಡಿದ ವಾಗ್ದಾನಗಳನ್ನು ಸ್ವತಂತ್ರಿಸಿಕೊಳ್ಳಲು ಇನ್ನೂ 12 ತಿಂಗಳುಗಳನ್ನು ನೀಡಿದ್ದಾರೆ.

 

ದೇವರು ನಿಮಗೆ ನೀಡಿದ ಈ ಅವಕಾಶವನ್ನು ನೀವು ದೇವರಿಗೆ ಮಹಿಮೆಯ ಕೆಲಸಗಳನ್ನು ಮಾಡಿ ಸಮೃದ್ಧಿಯಾದ ಜೀವನವನ್ನು ಸ್ವತಂತ್ರಿಸಿಕೊಳ್ಳುತ್ತೀರಾ? ಅಥವಾ ನೀವು ನೆಬೂಕದ್ನೆಚ್ಚರನಂತೆ ಕೃಪೆಯ ದಿನಗಳನ್ನು ಹಾಳುಮಾಡಲಿದ್ದೀರಾ?

- K. ಬೆಂಜಮಿನ್

 

ಪ್ರಾರ್ಥನಾ ಅಂಶ:

ಯೌವನಸ್ಥರ ಉಜ್ಜೀವನ ಸಂಜೆ ಎಂಬ ಕೂಟಗಳ ಮೂಲಕ ಭೇಟಿಯಾದ ಯುವಕರು ದೇವರಿಗಾಗಿ ಉತ್ಸಾಹವಾಗಿ ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş