By Village Missionary Movement
Monday, 02-Jan-2023ಧೈನಂದಿನ ಧ್ಯಾನ(Kannada) – 02.01.2023
ನಮ್ಮ ಕೈಲಾದಷ್ಟು ಮಾಡೋಣ
“ಈಕೆಯು ತನ್ನ ಕೈಲಾಗುವಷ್ಟು ಮಾಡಿದ್ದಾಳೆ; ಈಕೆಯು ಮುಂದಾಗಿ ನನ್ನ ಉತ್ತರಕ್ರಿಯೆಗೋಸ್ಕರ ನನ್ನ ದೇಹಕ್ಕೆ ಈ ತೈಲವನ್ನು ಹಚ್ಚಿದ್ದಾಳೆ" - ಮಾರ್ಕ 14:8
ನಮ್ಮ ಮನೆಯ ಹತ್ತಿರ ಸುಮಾರು 80 ವರ್ಷ ವಯಸ್ಸಿನ ಒಬ್ಬ ವಯಸ್ಸಾದ ತಾಯಿ ಇದ್ದರು. ಅವರ ಕೈಯಲ್ಲಿ ಎರಡು ಬೆರಳುಗಳು ಮಾತ್ರ ಚೆನ್ನಾಗಿ ಕೆಲಸ ಮಾಡುತ್ತಿದ್ದವು. ಆದರೆ ಅವರು ಆ ಕೈಗಳಿಂದ ಸುಂದರವಾಗಿ ಬರೆಯುತ್ತಿದ್ದರು. ಅವರು ಅಗತ್ಯವಿರುವವರ ವಿಳಾಸಗಳನ್ನು ತಿಳಿದುಕೊಂಡು ಸುವಾರ್ತಾ ಪುಸ್ತಕವಾದ ಯೋಹಾನನ ಪತ್ರಿಕೆಯನ್ನು ಕಳುಹಿಸುತ್ತಿದ್ದರು. ಇದು ಬಹಳ ಹಿಂದಿನಿಂದಲೂ ಅವರ ಅಭ್ಯಾಸವಾಗಿತ್ತು. ವೃದ್ಧಾಪ್ಯದಲ್ಲಿಯೂ, ಅವರು ಯೇಸುವಿನ ಬಗ್ಗೆ ಪ್ರಕಟಿಸಲು ತಮ್ಮ ಕೈಲಾದಷ್ಟು ಮಾಡಿ ಅವರು ತಮ್ಮ ಓಟವನ್ನು ವಿಜಯಶಾಲಿಯಾಗಿ ಓಡಿ ಮುಗಿಸಿದರು.
ಸತ್ಯವೇದದಲ್ಲಿ, ಯೇಸುವಿನ ಪಾದಗಳ ಮೇಲೆ ಬೆಲೆಬಾಳುವ ತೈಲವನ್ನು ಸುರಿದ ಸ್ತ್ರೀಯನ್ನು ನೋಡಿ ಯೇಸು "ಈಕೆಯು ತನ್ನ ಕೈಲಾಗುವಷ್ಟು ಮಾಡಿದ್ದಾಳೆ ಎಂದು ಹೇಳಿದರು. ಅವಳು ತನ್ನಲ್ಲಿದ್ದನ್ನು ಯೇಸುವಿಗೆ ಕೊಟ್ಟಳು. ಯೇಸು ನನ್ನ ಮೇಲೆ ತೋರಿದ ಪ್ರೀತಿಗೆ ಬದಲಾಗಿ ನಾನು ಏನನ್ನೂ ಕೊಡಲಾರೆ. ಆದರೂ ನಾನು ದೇವರ ಮೇಲಿಟ್ಟಿರುವ ಪ್ರೀತಿಯನ್ನು ತೋರಿಸಲು ನಾನು ಈ ಕಾರ್ಯವನ್ನು ಮಾಡುತ್ತಿದ್ದೇನೆ ಎಂದು ಅವಳು ಮಾಡಿರಬಹುದು. ಅವಳು ಅಡೆತಡೆಗಳನ್ನು ಮೀರಿ ಕೆಲಸ ಮಾಡಿದಳು. ಅವಳ ಸುತ್ತಲಿನ ಜನರು ಅವಳು ಇದನ್ನು ಮಾಡುವುದನ್ನು ಮೆಚ್ಚಲಿಲ್ಲ ಬದಲಾಗಿ ಗುಣುಗುಟ್ಟಿದರು. ತಮ್ಮ ಆಲೋಚನೆಗಳನ್ನು ವ್ಯಕ್ತಪಡಿಸಿದರು. ಆದರೆ ಅವಳು ಅದ್ಯಾವುದನ್ನೂ ದೊಡ್ಡದಾಗಿ ತೆಗೆದುಕೊಳ್ಳದೆ ವರ್ತಿಸಿದ್ದನ್ನು ನಾವು ನೋಡುತ್ತೇವೆ. ಅವಳು ಕ್ಷಣವನ್ನು ಉಪಯೋಗಿಸಿಕೊಂಡಳು. ಇವಳು ನನಗೆ ತೈಲ ಹಚ್ಚಲು ಮುಂದಾಗಿದ್ದಾಳೆ ಎಂದು ಯೇಸು ಹೊಗಳುತ್ತಿದ್ದಾರೆ. ಯೇಸುವನ್ನು ಭೇಟಿಯಾಗಲು ನನಗೆ ಮತ್ತೊಂದು ಅವಕಾಶ ದೊರೆಯುತ್ತದೆ ಎಂದು ಯೋಚಿಸಿ ಅವಳು ಮುಂದೂಡಲಿಲ್ಲ, ಅವರು ನನ್ನನ್ನು ಮತ್ತು ನಾನು ಮಾಡುತ್ತಿರುವ ಈ ಕಾರ್ಯವನ್ನು ಸ್ವೀಕರಿಸುತ್ತಾರೆ ಎಂದೆಲ್ಲಾ ಯೋಚಿಸಲಿಲ್ಲ. ಅವಳಿಗೆ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡಳು ಮತ್ತು ಆಕೆ ತನ್ನ ಕೈಲಾದಷ್ಟು ಮಾಡಿದಳು ಎಂಬ ಅತ್ಯುತ್ತಮ ಪ್ರಶಂಸೆಯನ್ನೂ ಪಡೆದಳು. ಇವಳು ಮಾಡಿದ್ದನ್ನು ಪ್ರಪಂಚದಾದ್ಯಂತ ಹೇಳಲಾಗುವುದು ಎಂದು ಯೇಸು ಹೇಳಿದರು.
ಇದನ್ನು ಓದುತ್ತಿರುವ ಪ್ರಿಯ ಓದುಗರೇ, ನೀವು ಈ ಹೊಸ ವರ್ಷವನ್ನು ಪ್ರವೇಶಿಸಿದ್ದೀರ ಎಂದರೆ ದೇವರು ನಿಮ್ಮ ಮೇಲೆ ಇಟ್ಟಿರುವ ಕೃಪೆ ಮಾತ್ರವೇ. ನೀವೂ ಕೂಡ ನಿಮ್ಮ ಕೈಲಾದಷ್ಟು ಮಾಡುತ್ತೀರಿ ಎಂಬ ಆಶಯದೊಂದಿಗೆ ಈ ಹೊಸ ವರ್ಷವನ್ನು ಆಶೀರ್ವದಿಸಿ ನಿಮಗೆ ಕೊಟ್ಟಿದ್ದಾರೆ. ನಿಮ್ಮಿಂದ ಏನು ಸಾಧ್ಯವೋ ಅದನ್ನು ಯೇಸುವಿಗಾಗಿ ಮಾಡಲು ಮುಂದಾಗಿ. ದೇವರು ಇನ್ನೂ ತನ್ನನ್ನು ತಿಳಿಯದ ಲಕ್ಷಾಂತರ ಜನರಿಗಾಗಿ ಅಳುತ್ತಿದ್ದಾರೆ. ನೀವು ಅವರ ಕಣ್ಣೀರನ್ನು ಒರೆಸಲು ನಿಮ್ಮ ಕೈಲಾದಷ್ಟು ಪ್ರಯತ್ನಿಸಿದಾಗ ಜನರು ಯೇಸುವನ್ನು ಕಂಡುಕೊಳ್ಳುತ್ತಾರೆ.
- Mrs. ಜೆಬಾ ಡೇವಿಡ್ ಗಣೇಶನ್
ಪ್ರಾರ್ಥನಾ ಅಂಶ:
ಈ ಹೊಸ ವರ್ಷದಲ್ಲಿ ಸೇವೆಯ ಪ್ರತಿಯೊಂದು ಭಾಗದಲ್ಲೂ ದೇವರ ಹಸ್ತವು ಜೊತೆಯಿದ್ದು ನಡೆಸುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482