Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 31.12.2022 (Christmas Special)
Share:

By Village Missionary Movement

Saturday, 31-Dec-2022

ಧೈನಂದಿನ ಧ್ಯಾನ(Kannada) – 31.12.2022 (Christmas Special)

 

ಅಂತಿಮವಾಗಿ...

 

"ಕ್ರಿಸ್ತನಂಬಿಕೆಯಲ್ಲಿ ಇದ್ದೀರೋ ಇಲ್ಲವೋ ಎಂದು ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿರಿ, ನಿಮ್ಮನ್ನು ಪರಿಶೋಧಿಸಿಕೊಳ್ಳಿರಿ..." - 2 ಕೊರಿಂಥ.13.5

 

ವರ್ಷದ ಕೊನೆಯಲ್ಲಿ ಬಂದಿರುವ ನಾವು ನಮ್ಮ ಜೀವನವನ್ನು ಸ್ವಲ್ಪ ಹಿಂತಿರುಗಿ ನೋಡಿದರೆ, ನಾವು ಪ್ರತಿದಿನ ಇಷ್ಟಪಡುವ ಅನೇಕ ಕೆಲಸಗಳನ್ನು ಮಾಡುತ್ತಿದ್ದೆವು; ಆದರೆ ದೇವರು ಬಯಸಿದ್ದನ್ನು ನಾವು ಯಾವಾಗ ಮಾಡಿದ್ದೇವೆ ಎಂದು ಯೋಚಿಸಿದರೆ, ಅದು ಪ್ರಶ್ನಾರ್ಥಕ ಚಿಹ್ನೆಯಾಗಿ ಉಳಿಯುತ್ತದೆ. ನಾವು ನಮ್ಮನ್ನು ಕೇಳಿಕೊಳ್ಳಬೇಕಾದ ಪ್ರಶ್ನೆಗಳನ್ನು ಕೆಳಗೆ ನೀಡಲಾಗಿದೆ.

 

1. ನಾನು ಕೊನೆಯದಾಗಿ ಯಾರ ರಕ್ಷಣೆಗಾಗಿ ಅತ್ತೆನು?

 

2. ನಾನು ದೇವರನ್ನು ಕೊನೆಯ ಬಾರಿ ಸಂತೋಷಪಡಿಸಿದ್ದು ಯಾವಾಗ?

 

3. ಹಸಿದ ಬಡವನಿಗೆ ನಾನು ಕೊನೆಯ ಬಾರಿ ಯಾವಾಗ ಆಹಾರ ನೀಡಿದೆ?

 

4. ನಾನು ಸುವಾರ್ತೆ ಸಾರಿದ ಕೊನೆಯ ವ್ಯಕ್ತಿ ಯಾರು?

 

5. ನಾನು ದೇಶಕ್ಕಾಗಿ ಕೊನೆಯ ಬಾರಿ ಪ್ರಾರ್ಥಿಸಿದ್ದು ಯಾವಾಗ?

 

6. ನಾನು ಕೊನೆಯ ಬಾರಿ ರೋಗಿಯನ್ನು ಭೇಟಿ ಮಾಡಿ ಪ್ರಾರ್ಥಿಸಿದ್ದು ಯಾವಾಗ?

 

7. ನಾನು ಯಾವಾಗ ಕೊನೆಯ ಬಾರಿ ದೇವರ ಪ್ರಸನ್ನತೆಯನ್ನು ಅನುಭವಿಸಿದೆ?

 

8. ನಾನು ಕೊನೆಯ ಬಾರಿ ಬೇರೆಯವರಿಗೆ ಕೈ ಪ್ರತಿಯನ್ನು ನೀಡಿದ್ದು ಯಾವಾಗ?

 

9. ನನ್ನ ಸಭೆಗಾಗಿ ನಾನು ಕಣ್ಣೀರಿನಿಂದ ಕೊನೆಯ ಬಾರಿ ಪ್ರಾರ್ಥಿಸಿದ್ದು ಯಾವಾಗ?

 

10. ನಾನು ನನ್ನ ತಪ್ಪನ್ನು ಅರಿತು ಕೊನೆಯ ಬಾರಿ ನನ್ನ ನೆರೆಯವನ ಬಳಿ ಕ್ಷಮೆಯಾಚಿಸಿದ್ದು ಯಾವಾಗ?

 

11. ಕ್ರಿಸ್ತನ ನಿಮಿತ್ತ ನಾನು ಕೊನೆಯ ಬಾರಿ ಯಾವಾಗ ಅವಮಾನಪಟ್ಟೆ?

 

12. ನಾನು ದೇವರ ಚಿತ್ತವನ್ನು ಕೊನೆಯ ಬಾರಿ ಯಾವಾಗ ಮಾಡಿದೆ?

 

13. ನನ್ನನ್ನು ದ್ವೇಷಿಸುವವರಿಗಾಗಿ ನಾನು ಕೊನೆಯ ಬಾರಿ ಯಾವಾಗ ಪ್ರಾರ್ಥಿಸಿದೆ?

 

14. ನನ್ನ ಮರಣದ ನಂತರ ಹೇಳಲ್ಪಡುವ ಸಾಕ್ಷಿಯ ಬಗ್ಗೆ ನಾನು ಕೊನೆಯ ಬಾರಿ ಯೋಚಿಸಿದ್ದು ಯಾವಾಗ?

 

15. ಕೊನೆಯದಾಗಿ ನನ್ನ ಹರಕೆಯನ್ನು ನಾನು ಪೂರೈಸಿದ್ದೇನಾ?

 

ಮೇಲಿನ ಪ್ರಶ್ನೆಗಳನ್ನು ನಮ್ಮನ್ನು ನಾವೇ ಕೇಳಿಕೊಂಡರೆ ಮತ್ತು ನಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಸತ್ಯವಾಗಿ ಉತ್ತರಿಸಿದರೆ, ನಾವು ಅನೇಕ ಪ್ರಶ್ನೆಗಳಿಗೆ ಯೋಚಿಸಿ ಉತ್ತರಿಸಲು ಸಾಧ್ಯವೇ ಇಲ್ಲದ ಸ್ಥಿತಿಯಲ್ಲೇ ತಾನೇ ಇದ್ದೇವೆ. ಕಾರಣವೇನೆಂದರೆ, ಈ ಕೆಲಸಗಳನ್ನು ಮಾಡಿ ತಿಂಗಳುಗಳು ಅಥವಾ ವರ್ಷಗಳಾಗಿರಬಹುದು. ಕ್ರೈಸ್ತ ಜೀವನದ ಈ ಸಾಮಾನ್ಯ ವಿಷಯಗಳು ಸಹ ನಮ್ಮ ಜೀವನದಲ್ಲಿ ಕೊರತೆಯಿದೆ ಎಂದು ನಾವು ಭಾವಿಸಿದರೆ, ಇಂದೇ ಅವುಗಳನ್ನು ಮಾಡಲು ನಿರ್ಧರಿಸೋಣ. ದೇವರು ನಮಗೆ ಕೃಪೆ ತೋರಿಸಲಿ.

- K. ಡೇವಿಡ್ ಗಣೇಶನ್

 

ಪ್ರಾರ್ಥನಾ ಅಂಶ:

ಬರಲಿರುವ ಹೊಸ ವರ್ಷ ಆಶೀರ್ವಾದಕರವಾಗಿರುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al