Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 30.12.2022 (Christmas Special)
Share:

By Village Missionary Movement

Friday, 30-Dec-2022

ಧೈನಂದಿನ ಧ್ಯಾನ(Kannada) – 30.12.2022 (Christmas Special)

 

ಧನ್ಯವಾದಗಳೊಂದಿಗೆ...

 

“ನನ್ನ ಮನವೇ, ಯೆಹೋವನನ್ನು ಕೊಂಡಾಡು; ನನ್ನ ಸರ್ವೇಂದ್ರಿಯಗಳೇ, ಆತನ ಪವಿತ್ರನಾಮವನ್ನು ಕೀರ್ತಿಸಿರಿ" - ಕೀರ್ತನೆ 103:1

 

ಯೋನಾತಾನ್ ಯುನೈಟೆಡ್ ಸ್ಟೇಟ್ಸ್‌ನ ಜನಪ್ರಿಯ ನಿಯತಕಾಲಿಕೆಯಲ್ಲಿ ಸಮೃದ್ಧ ಬರಹಗಾರರಾಗಿದ್ದರು. ಅವರು ಒಮ್ಮೆ ತಮ್ಮ ಓದುಗರಿಗಾಗಿ "ಸಂತೋಷದಲ್ಲಿ ಹೂಡಿಕೆ ಮಾಡಲು ಒಂಬತ್ತು ಸಲಹೆಗಳು" ಎಂಬ ಲೇಖನವನ್ನು ಬರೆದರು. ಅದರಲ್ಲಿ ಒಂದು ಉಲ್ಲೇಖವೆಂದರೆ "ಪಡೆದುಕೊಂಡ ಪ್ರಯೋಜನಗಳನ್ನು ನೆನೆಸಿ ನೋಡು" ಎಂಬುದಾಗಿದೆ. ಇದು ಜಾನ್ಸನ್ ಒಟ್ಮನ್ ಅವರು ಬರೆದಿರುವ "ಎಣಿಸಿ ನೋಡು ನಿನ್ನ ಆಶೀರ್ವಾದಗಳನ್ನು" ಎಂಬ ಕ್ರೈಸ್ತ ಹಾಡಿನ ಸಾರಾಂಶವನ್ನು ಆಧರಿಸಿದೆ. ಹೊಸ ವರ್ಷದ ಶುಭಾಶಯಗಳನ್ನು ಎದುರು ನೋಡುತ್ತಿರುವ ನಮಗೂ ಈ ಸಲಹೆ ತುಂಬಾ ಅಗತ್ಯ. ಹೌದು, ನಮ್ಮಲ್ಲಿ ಕೃತಜ್ಞತೆಯ ಹೃದಯವಿದ್ದರೆ ನಾವು ಸಂತೋಷದಿಂದ ಬದುಕಬಹುದು. ನಾವು ದೇವರಿಂದ ಪಡೆದ ಪ್ರಯೋಜನಗಳನ್ನು ಎಣಿಸಿದಾಗ, ಅದು ನಮ್ಮನ್ನು ಬೆರಗುಗೊಳಿಸುತ್ತದೆ ಮತ್ತು ನಮ್ಮ ದಣಿವನ್ನು ತೆಗೆದುಹಾಕುತ್ತದಲ್ಲವೇ? ಆದ್ದರಿಂದ ದೇವರಿಗೆ ಕೃತಜ್ಞತೆ ಸಲ್ಲಿಸಲು ವರ್ಷದ ಈ ಕೊನೆಯ ದಿನಗಳನ್ನು ಬದಿಗಿಡೋಣ. ನಮ್ಮ ಹೃದಯಗಳು ಕೃತಜ್ಞತೆಯಿಂದ ತುಂಬಿರಲಿ.

 

ದೇವರು ಸರಳ ಕುರುಬನಾಗಿದ್ದ ದಾವೀದನನ್ನು ಆರಿಸಿದನು ಮತ್ತು ಅವನನ್ನು ಎಲ್ಲಾ ಇಸ್ರಾಯೇಲ್ಯರ ಮೇಲೆ ರಾಜನಾಗಿ ಉನ್ನತೀಕರಿಸಿದನು. ಈ ದಾವೀದನ ಹೃದಯವು ಯಾವಾಗಲೂ ದೇವರ ಮುಂದೆ ಕೃತಜ್ಞತೆಯಿಂದ ಕೂಡಿತ್ತು. ಇದನ್ನು ಕುರಿತು ಅರಸನಾದ ದಾವೀದನು, “ಕರ್ತನಾದ ಯೆಹೋವನೇ, ದೇವರೇ, ನನ್ನನ್ನು ಇಷ್ಟು ದೂರ ಕರೆತಂದಿದ್ದಕ್ಕೆ ನಾನೆಷ್ಟರವನು? ನನ್ನ ಮನೆಯೂ ಎಷ್ಟರದು?” ಎಂದು ಸ್ತುತಿಯಿಂದ ತುಂಬಿದ ಹೃದಯದಿಂದ ದೇವರಿಗೆ ಕೃತಜ್ಞತೆ ಸಲ್ಲಿಸುತ್ತಾರೆ. ಮತ್ತು ಅವರ ಕೀರ್ತನೆಗಳಲ್ಲಿ, ಅವರು ತನ್ನ ಸಮಸ್ಯೆಗಳನ್ನು ಅನೇಕ ರೀತಿಯಲ್ಲಿ ಪ್ರಲಾಪಿಸಿದರೂ, ಆ ಕೀರ್ತನೆಯನ್ನು ಮುಗಿಸುವಾಗ ದೇವರನ್ನು ಸ್ತುತಿಸಿ ಮುಗಿಸುವುದನ್ನು ಕಾಣಬಹುದು. ನಾವೂ ಕೂಡ ಈ ವರ್ಷದಲ್ಲಿ ಅನೇಕ ಸಮಸ್ಯೆಗಳು ಮತ್ತು ಸಂಕಟಗಳನ್ನು ಅನುಭವಿಸಿರಬಹುದು. ಆದರೆ ಅದರ ಮಧ್ಯೆ ದೇವರು ನಮಗೆ ನೀಡಿದ ಸಮಾಧಾನ ಮತ್ತು ಸಂತೋಷವನ್ನು ನೆನೆಸಿ ಹೃದಯಪೂರ್ವಕವಾದ ಕೃತಜ್ಞತೆಗಳೊಂದಿಗೆ ಈ ವರ್ಷವನ್ನು ಮುಗಿಸೋಣ.

 

ಕ್ರಿಸ್ತನಲ್ಲಿ ಪ್ರಿಯರೇ! ನಮ್ಮ ದೇವರಿಗೆ ಕೃತಜ್ಞತೆ ಸಲ್ಲಿಸಲು ನಮಗೆ ಅನೇಕ ವಿಷಯಗಳಿವೆ ಅಲ್ವಾ? ಪಾಪದ ಗುಲಾಮಗಿರಿಯಿಂದ ನಮ್ಮನ್ನು ಬಿಡುಗಡೆ ಮಾಡಿದ್ದಕ್ಕಾಗಿ, ನಮ್ಮ ಕಣ್ಣುಗಳನ್ನು ಕಣ್ಣೀರಿನಿಂದ, ನಮ್ಮ ಪಾದಗಳನ್ನು ಎಡವಿನಿಂದ ಮತ್ತು ನಮ್ಮ ಆತ್ಮಗಳನ್ನು ಮರಣದಿಂದ, ಅನೇಕ ಅಪಘಾತಗಳಿಂದ ರಕ್ಷಿಸಿದ್ದಕ್ಕಾಗಿ! ಅವುಗಳನ್ನೆಲ್ಲಾ ಒಂದೊಂದಾಗಿ ಯೋಚಿಸಿ ಧನ್ಯವಾದ ಹೇಳೋಣ. ಮತ್ತು ಈ ವರ್ಷದಲ್ಲಿ ಅನೇಕ ಕೆಟ್ಟ ವಿಷಯಗಳಿದ್ದರೂ ಸಹ, ನಮಗೆ ಶಾಶ್ವತವಾದ ಬೆಳಕನ್ನು ಮತ್ತು ಶಾಂತಿಯಿಂದ ಬದುಕುವ ಹೃದಯವನ್ನು ನೀಡಿದರಲ್ಲಾ ಅದಕ್ಕಾಗಿ ಆತನನ್ನು ಸ್ತುತಿಸೋಣ. ಇಂತಹ ಇನ್ನೂ ಎಷ್ಟೋ ಪ್ರಯೋಜನಗಳು! ಹೌದು, "ದೇವರು ಕೊಟ್ಟ ಲೆಕ್ಕಿಸಲಾಗದ ಆಶೀರ್ವಾದಗಳಿಗಾಗಿ ಅವರಿಗೆ ಸ್ತೋತ್ರ" ಆಮೆನ್.

- P.ಜೇಕಬ್ ಶಂಕರ್

 

ಪ್ರಾರ್ಥನಾ ಅಂಶ:

ಈ ವರ್ಷದುದ್ದಕ್ಕೂ ನಮಗೆ ಮಾರ್ಗದರ್ಶನ ನೀಡಿದ ದೇವರನ್ನು ಮನಃಪೂರ್ವಕವಾಗಿ ಸ್ತುತಿಸೋಣ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin