Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 29.12.2022 (Christmas Special)
Share:

By Village Missionary Movement

Thursday, 29-Dec-2022

ಧೈನಂದಿನ ಧ್ಯಾನ(Kannada) – 29.12.2022 (Christmas Special)

 

ಪ್ರೋತ್ಸಾಹಿಸೋಣ

 

"ಅದಕ್ಕಾತನು--ಬಾ ಅಂದನು. ಆಗ ಪೇತ್ರನು ದೋಣಿಯಿಂದ ಇಳಿದು ಯೇಸುವಿನ ಬಳಿಗೆ ಹೋಗು ವದಕ್ಕಾಗಿ ನೀರಿನ ಮೇಲೆ ನಡೆದನು” - ಮತ್ತಾಯ 14:29

 

3ನೇ ವರ್ಷದ ಬಿ.ಎಸ್ಸಿ. ಓದುತ್ತಿರುವ ಕುಮಾರ್ ಉತ್ತಮ ಫುಟ್ಬಾಲ್ ಆಟಗಾರ. ಶಾಲೆಯಲ್ಲಿ ಓದುತ್ತಲೇ ಜಿಲ್ಲಾ ಮಟ್ಟದಲ್ಲಿ ಹಲವು ಬಾರಿ ಚಾಂಪಿಯನ್ ಶಿಪ್ ಪ್ರಶಸ್ತಿ ಗೆದ್ದಿದ್ದಾನೆ. ಇದ್ದಕ್ಕಿದ್ದಂತೆ ಒಂದು ದಿನ ಕುಮಾರ್ ತುಂಬಾ ಬೇಸರವಾಗಿರುವುದನ್ನು ಕಂಡ ಅವನ ಸ್ನೇಹಿತ ರಾಜ ಅವನನ್ನು ವಿಚಾರಿಸಿದನು. ಆಗ ಅಳಲು ತೋಡಿಕೊಂಡ ಕುಮಾರ್, ತನಗೆ ಕ್ರೀಡೆಯ ಮೇಲಿನ ಒಲವಿಗೆ ಪೋಷಕರು ಒಪ್ಪದ ಕಾರಣ ಕಳೆದ 3 ವರ್ಷಗಳಿಂದ ಕಾಲೇಜಿನಲ್ಲಿ ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸಿರಲಿಲ್ಲ. ಶಾಲೆಯಲ್ಲಿ ಓದುತ್ತಿದ್ದಾಗ ಕ್ರೀಡೆಯಲ್ಲಿ ಮಾತ್ರವಲ್ಲದೆ ವ್ಯಾಸಂಗದಲ್ಲೂ ಉತ್ತಮ ಅಂಕಗಳನ್ನು ಪಡೆಯುತ್ತಿದ್ದನು. ಆದರೆ ಕಾಲೇಜಿನಲ್ಲಿ ತನ್ನ ಪ್ರತಿಭೆಯನ್ನು ಹೊರತರಲು ಸಾಧ್ಯವಾಗದೆ ವ್ಯಾಸಂಗದಲ್ಲಿ ಅನುತ್ತೀರ್ಣನಾಗಿ ಬೇಸರವಾಗಿ ಕಾಣುತ್ತಿದ್ದ. ಆಗ ರಾಜ, “ನಿನ್ನಲ್ಲಿ ಕ್ರೀಡೆಯೆಂಬ ಪ್ರತಿಭೆಯನ್ನು ಮೂಡಿಸಿದ ಯೇಸಪ್ಪನು ನಿನ್ನನ್ನು ವಿದ್ಯಾಭ್ಯಾಸದಲ್ಲಿಯೂ ಯಶಸ್ವಿಯಾಗುವಂತೆ ಮಾಡಬಲ್ಲನು. ಮತ್ತೊಬ್ಬರು ಮಾತನಾಡುವುದನ್ನು ಬಿಟ್ಟುಬಿಟ್ಟು, ಯೇಸಪ್ಪ ನಿನಗೆ ಸಹಾಯ ಮಾಡಲು ಸಾಧ್ಯ ಎಂದು ಮೊದಲು ನೀನು ನಂಬು. ನಿನ್ನ ಜೀವನದಲ್ಲಿ ಪ್ರತಿದಿನವೂ ಅವರಿಗಾಗಿ ಸಮಯವನ್ನು ಮೀಸಲಿಡು ಎಂದು ನಂಬಿಕೆಯ ಮಾತುಗಳನ್ನು ಹೇಳುವ ಮೂಲಕ ಅವನನ್ನು ಪ್ರೋತ್ಸಾಹಿಸಿದನು. ಆ ದಿನದಿಂದ ಕುಮಾರ್ ಯೇಸಪ್ಪನೊಂದಿಗೆ ಮಾತನಾಡಲು ಪ್ರಾರಂಭಿಸಿದನು, ಸತ್ಯವೇದವನ್ನು ಓದಲು ಮತ್ತು ಅವರೊಂದಿಗೆ ಸಮಯ ಕಳೆಯಲು ಪ್ರಾರಂಭಿಸಿದನು. ಅವನ ಶೈಕ್ಷಣಿಕ ಯಶಸ್ಸನ್ನು ಕಂಡ ಅವರ ಪೋಷಕರು ರಾಜ್ಯ ಮಟ್ಟದಲ್ಲಿ ಫುಟ್ಬಾಲ್ ಆಡಲು ಅವಕಾಶ ನೀಡಿದರು. ಆ ಸ್ಪರ್ಧೆಯಲ್ಲಿ ಗೆದ್ದ ನಂತರ ಕುಮಾರ್ ಸಾಧನೆಗಾರನಾಗಿ ಮಾರ್ಪಟ್ಟನು.

 

ಯೇಸು ಸಮುದ್ರದ ಮೇಲೆ ನಡೆಯುತ್ತಿದ್ದುದನ್ನು ಪೇತ್ರನು ನೋಡಿದಾಗ, “ನಾನೂ ಬರುತ್ತೇನೆ” ಎಂದು ಹೇಳಿದ ಕೂಡಲೇ “ಬಾ” ಎಂದು ಯೇಸು ಅವನನ್ನು ಪ್ರೋತ್ಸಾಹಿಸಿದರು. ಬಹುಶಃ ಯೇಸು ಕ್ರಿಸ್ತನು ಪೇತ್ರನನ್ನು ನೋಡಿ, "ನಿನಗೆ ಸಾಧ್ಯವಿಲ್ಲ" ಎಂದು ಹೇಳಿದ್ದರೆ, ಅವನು ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿರಲಿಲ್ಲ. ಬದಲಾಗಿ, ಯೇಸು ಕ್ರಿಸ್ತನ ನಂಬಿಕೆಯ ಮಾತುಗಳಿಂದಾಗಿ ಅವನು ಸಮುದ್ರದ ಮೇಲೆ ನಡೆಯಲು ಸಾಧ್ಯವಾಯಿತು.

 

ನಮ್ಮ ಸುತ್ತಮುತ್ತಲಿನ ಅನೇಕ ಜನರು ಕೆಲವು ಯಾವುದೋ ಒಂದು ಪರಿಸ್ಥಿತಿಯ ನಿಮಿತ್ತವಾಗಿ ಪ್ರತಿಭೆಗಳನ್ನು ಸಮಾಧಿ ಮಾಡಿದ್ದಾರೆ. ನಾವು ರಾಜನಂತೆ ನಂಬಿಕೆಯ ಮಾತುಗಳಿಂದ ಅವರನ್ನು ಪ್ರೋತ್ಸಾಹಿಸಿದರೆ ಮತ್ತು ಅವರನ್ನು ನಿರುತ್ಸಾಹಗೊಳಿಸದಿದ್ದರೆ, ಅನೇಕರು ಕುಮಾರ್ ನಂತೆ, ವರ್ತಿಸಲು ಪ್ರಾರಂಭಿಸುತ್ತಾರೆ. ಯೇಸು ಕ್ರಿಸ್ತನು, ನಮಗೆ ಮೊದಲ ಉದಾಹರಣೆಯಾಗಿ, ಶಿಷ್ಯರು ನಂಬಿಕೆಯಿಲ್ಲದವರಾಗಿದ್ದರೂ ಇವರು ನಂಬಿಕೆಯ ಮಾತುಗಳನ್ನು ಮಾತ್ರವೇ ಮಾತನಾಡಿದರು. ಆದ್ದರಿಂದಲೇ ದೇಶವನ್ನು ಕಲಕುವ ಶಿಷ್ಯರು ಎದ್ದರು. ನಾವು ಕೂಡ ನಮ್ಮೊಂದಿಗೆ ಇರುವವರನ್ನು ಪ್ರೋತ್ಸಾಹಿಸುತ್ತಾ ದೇಶವನ್ನು ಅಲುಗಾಡಿಸುವವರನ್ನಾಗಿ ರೂಪಿಸೋಣ.

- Dr. ವಿಶಾಲಿ

 

ಪ್ರಾರ್ಥನಾ ಅಂಶ:

ರಾಕ್‌ಲ್ಯಾಂಡ್ ಬೈಬಲ್ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş casibom casibom giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş holiganbet Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet jojobet jojobet jojobet jojobet holiganbet palacebet holiganbet romabet teosbet betgit cratosroyalbet cratosroyalbet gameofbet