Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 28.12.2022 (Christmas Special)
Share:

By Village Missionary Movement

Wednesday, 28-Dec-2022

ಧೈನಂದಿನ ಧ್ಯಾನ(Kannada) – 28.12.2022 (Christmas Special)

 

ಯಾವುದನ್ನು ಆರಿಸಿಕೊಳ್ಳೋಣ?

 

“...ನಾಳಿನ ವಿಷಯವಾಗಿ ಚಿಂತೆಮಾಡಬೇಡಿರಿ; ನಾಳಿನ ದಿನವು ತನ್ನದನ್ನು ತಾನೇ ಚಿಂತಿಸಿಕೊಳ್ಳುವದು. ಆ ಹೊತ್ತಿನ ಕಾಟ ಆ ಹೊತ್ತಿಗೆ ಸಾಕು" - ಮತ್ತಾಯ 6:34

 

ಒಬ್ಬ ರಾಜ ತನ್ನ ಮರಣದ ನಂತರ ತನ್ನನ್ನು ಸಮಾಧಿ ಮಾಡುವ ಸ್ಥಳ ಭವ್ಯವಾಗಿರಬೇಕೆಂದು ಬಯಸಿದನು. ಅದಕ್ಕಾಗಿ ಅವನು ಅತ್ಯುತ್ತಮ ವಾಸ್ತುಶಿಲ್ಪಿಗಳಿಂದ ಶಿಲ್ಪಗಳನ್ನು ಹೊಂದಿರುವ ಅತ್ಯಂತ ಸುಂದರವಾದ ಸಮಾಧಿಯನ್ನು ನಿರ್ಮಿಸಿದನು. ಅದರ ಸೌಂದರ್ಯ ಮತ್ತು ಭವ್ಯತೆಯಿಂದ ಅವನು ಮುಳುಗಿದನು. ಒಂದೆರಡು ವಾರಗಳು ಉರುಳಿದವು. ಅದನ್ನು ನೋಡಿದಾಗಲೆಲ್ಲ ಒಂದು ದಿನ ನಾನು ಸತ್ತು ಈ ಜಾಗದಲ್ಲಿ ಸಮಾಧಿಯಾಗುತ್ತೇನೆ ಎಂದುಕೊಂಡು ಸಾವಿನ ಬಗ್ಗೆ ಯೋಚಿಸುತ್ತಲೇ ನಿದ್ದೆಯನ್ನೇ ಕಳೆದುಕೊಂಡರು. ಇದನ್ನು ಕಂಡ ಮಂತ್ರಿಗಳು, ‘‘ಅರಸನೇ ನಾಳೆ ಏನಾಗುತ್ತದೆ? ಎಂದು ಯೋಚಿಸುತ್ತಾ ಚಿಂತಿಸುವುದಕ್ಕಿಂತ ಇಂದು ನಾವು ಬದುಕುತ್ತಿರುವ ಜೀವನವನ್ನು ಸಂತೋಷವಾಗಿ ಕಳೆಯುವುದೇ ಬುದ್ಧಿವಂತಿಕೆಯಾಗಿದೆ. ಯಾವತ್ತೋ ಒಂದು ದಿನ ಸಮಾಧಿ ಮಾಡುವುದನ್ನು ನೆನೆಸಿಕೊಳ್ಳುತ್ತಾ ಇಂದು ಅನುಭವಿಸಬೇಕಾದ ಸಂತೋಷವನ್ನೆಲ್ಲಾ ಸಮಾಧಿ ಮಾಡಿದ್ದೀರಲ್ಲಾ" ಎಂದನು

 

ನಮ್ಮಲ್ಲಿ ಹಲವರು ನಾಳೆಯ ಬಗ್ಗೆ ಚಿಂತಿಸುತ್ತಾರೆ ಮತ್ತು ಇಂದು ಸಂತೋಷವಾಗಿರುವುದನ್ನು ಮರೆತುಬಿಡುತ್ತಾರೆ. ಮಾನವರಾದ ನಾವ ಈ ಸ್ವಭಾವದೊಂದಿಗೆ ಜೀವಿಸುತ್ತಿದ್ದೇವೆ ಎಂದು ತಿಳಿದುಕೊಂಡು, ನಮ್ಮ ಕರ್ತನಾದ ಯೇಸು ಕ್ರಿಸ್ತನು ತನ್ನ ಪರ್ವತ ಪ್ರಸಂಗದಲ್ಲಿ 10 ವಚನಗಳ ಮೂಲಕ ಹೇಳಿದ್ದಾರೆ (ಮತ್ತಾಯ 6:25-34) ನಾವು ಇದನ್ನು ಹಲವಾರು ಬಾರಿ ಓದಿದ್ದೇವೆ. ಚಿಕ್ಕ ಮಗುವಿನಂತೆ ಬಾಯಿಪಾಠ ಮಾಡಿ ಕೂಡ ಹೇಳಿಬಿಡುತ್ತೇವೆ. ಆದರೆ ನಾವು ಯಾವುದೋ ಒಂದು ಕಾರ್ಯವನ್ನು ಹುಡುಕಿಕೊಂಡು ಅದರ ಬಗ್ಗೆಯೇ ಚಿಂತಿಸುತ್ತಿರುತ್ತೇವೆ. ಚಿಂತಿಸುವುದು ನಮ್ಮ ಸ್ವಭಾವ ಇದು ಸ್ವಾಭಾವಿಕವಾಗಿ ಮಾರ್ಪಟ್ಟಿದೆ.

 

ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವಾಗ "ಇನ್ನೂ ನಾನು ಸ್ವಂತ ಮನೆ ಕಟ್ಟಿಕೊಂಡಿಲ್ಲವಲ್ಲಾ" ಎಂದು ಚಿಂತಿಸುತ್ತಾ ಬಾಡಿಗೆ ಮನೆಯಲ್ಲಿ ಇರುವಾಗ ದಿನನಿತ್ಯ ನಡೆಯುವ ಸಣ್ಣ ಪುಟ್ಟ ಸಂತೋಷದ ಘಟನೆಗಳನ್ನು ಅನುಭವಿಸದೇ ಖುಷಿಯ ಕ್ಷಣಗಳನ್ನು ಕಳೆದುಕೊಳ್ಳುತ್ತಿದ್ದೇವೆ. "ಇನ್ನು ಮೂರು ವರ್ಷದಲ್ಲಿ ನನ್ನ ಮಗಳಿಗೆ ಮದುವೆ ಮಾಡಬೇಕು" ಎಂಬ ಚಿಂತೆಯಲ್ಲಿ, ಮಗಳು ತಮ್ಮೊಂದಿಗೆ ಇರುವ ದಿನಗಳಲ್ಲಿ ಅವಳೊಂದಿಗೆ ಸಮಯ ಕಳೆಯುವುದಿಲ್ಲ, ಐಕ್ಯವಾಗಿದ್ದು ಸ್ನೇಹಿತರಂತಿರಬೇಕಾದ ಸಂತೋಷವನ್ನು ಸಹ ಕಳೆದುಕೊಳ್ಳುತ್ತೇವೆ. ಚಿಂತೆ ಮಾಡುವುದರಿಂದ ಒಂದು ಮೊಳ ಹೆಚ್ಚಿಸಲು ಅಥವಾ ಕಡಿಮೆ ಮಾಡಲು ಯಾರಿಗೂ ಸಾಧ್ಯವಿಲ್ಲ ಎಂಬುದನ್ನು ಚೆನ್ನಾಗಿ ತಿಳಿದಿದ್ದೇವೆ. ಹಾಗಾದರೆ ಇನ್ನೇಕೆ ವ್ಯರ್ಥವಾದ ಚಿಂತೆ?

 

ಪ್ರಿಯರೇ! ಕಾಗೆ ಮತ್ತು ಗುಬ್ಬಚ್ಚಿಗಳಿಗೂ ಸಹ ಹೊತ್ತೊತ್ತಿಗೂ ಆಹಾರ ಕೊಟ್ಟು ಪೋಷಿಸುವ ದೇವರು ತನ್ನ ದೃಷ್ಟಿಯಲ್ಲಿ ಅಮೂಲ್ಯವಾದ ನಿನ್ನನ್ನು ನಿರ್ಲಕ್ಷಿಸುವನೇ? ಇಲ್ಲವೇ ಇಲ್ಲ. ಆದ್ದರಿಂದ ನಾವು ಮುಂಬರುವ ವರ್ಷದ ವಿಷಯಗಳನ್ನು ಮತ್ತು ಹೊರೆಗಳನ್ನು ಕರ್ತನಿಗೆ ಬಿಟ್ಟುಬಿಡೋಣ ಮತ್ತು ಇಂದು ಆನಂದಿಸಲು ದೇವರು ನಮಗೆ ಕೊಟ್ಟಿರುವವುಗಳಲ್ಲಿ ಸಂತೋಷಪಡೋಣ.

- Mrs. ಗ್ರೇಸ್ ಜೀವಮಣಿ

 

ಪ್ರಾರ್ಥನಾ ಅಂಶ:

ನಮ್ಮ ಕ್ಯಾಂಪಸ್‌ನಲ್ಲಿ ಉಳಿದುಕೊಂಡು ಸೇವೆಯ ತರಬೇತಿಯನ್ನು ಪಡೆಯುತ್ತಿರುವ ಉತ್ತರ ರಾಜ್ಯದ ತರಬೇತಿ ಸೇವಕರುಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al