Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 27.12.2022 (Christmas Special)
Share:

By Village Missionary Movement

Tuesday, 27-Dec-2022

ಧೈನಂದಿನ ಧ್ಯಾನ(Kannada) – 27.12.2022 (Christmas Special)

 

ಅದ್ಭುತದಲ್ಲೂ ಅದ್ಭುತ

 

"ನೀನು ನನ್ನನ್ನು ಅದ್ಭುತವಾಗಿಯೂ ವಿಚಿತ್ರವಾಗಿಯೂ ರಚಿಸಿದ್ದರಿಂದ ನಿನ್ನನ್ನು ಕೊಂಡಾಡುತ್ತೇನೆ..." - ಕೀರ್ತನೆ 139:14

 

ದೇವರು ಮನುಷ್ಯನನ್ನು ತನ್ನ ಸ್ವಾರೂಪ್ಯದಲ್ಲಿ ತನ್ನ ಉಸಿರನ್ನು ಊದಿ ಅದ್ಭುತವಾಗಿ ಸೃಷ್ಟಿಸಿದರು. ನಮ್ಮ ಶರೀರದ ಸೃಷ್ಟಿಯಲ್ಲಿ ಆತನ ಜ್ಞಾನವನ್ನು ನೋಡಿದರೆ ಆಶ್ಚರ್ಯವಾಗುತ್ತಿದೆ. ನಮ್ಮ ದೇಹದಲ್ಲಿ 37.2 ಟ್ರಿಲಿಯನ್ ಸೆಲ್ ಗಳಿವೆ ಮತ್ತು ಅವುಗಳಲ್ಲಿ 200 ವಿವಿಧ ವಿಧಗಳಿವೆ. ನಮ್ಮ ಮೆದುಳು 100 ಮಿಲಿಯನ್ ನ್ಯೂರಾನ್‌ಗಳನ್ನು ಹೊಂದಿದೆ. ನಾವು ಪ್ರತಿದಿನ 50 ಸಾವಿರಕ್ಕೂ ಹೆಚ್ಚು ಆಲೋಚನೆಗಳನ್ನು ಮಾಡುತ್ತೇವೆ. ನಮ್ಮ ಮೆದುಳು 1 ಕ್ವಾಡ್ರಿಲಿಯನ್ ನಷ್ಟು ಮಾಹಿತಿಯನ್ನು ನಿಭಾಯಿಸಬಲ್ಲದು. ನಮ್ಮ ದೇಹವು 60 ಮಿಲಿಯನ್ ಸಂವೇದನಾ ಗ್ರಾಹಕಗಳನ್ನು ಹೊಂದಿದೆ. ನಮ್ಮ ಕಣ್ಣುಗಳು 10 ಮಿಲಿಯನ್ ವಿಭಿನ್ನ ಬಣ್ಣ ವ್ಯತ್ಯಾಸಗಳನ್ನು ನೋಡಬಹುದು. ನಾವು 50,000 ವಿವಿಧ ವಾಸನೆಗಳನ್ನು ಪ್ರತ್ಯೇಕಿಸಿ ಅದನ್ನು ಗ್ರಹಿಸಬಹುದು. ನಾವು ದಿನಕ್ಕೆ 23,040 ಬಾರಿ ಉಸಿರಾಡುತ್ತೇವೆ. ನಮ್ಮ ಹೃದಯವು 1,15,200 ಬಾರಿ ಬಡಿಯುತ್ತದೆ. ನಮ್ಮ ಹೃದಯವನ್ನು ದೇಹದಿಂದ ತೆಗೆದರೂ ಅದರಲ್ಲಿರುವ ವಿದ್ಯುತ್ ಪ್ರಚೋದನೆಯಿಂದಾಗಿ ಅದು ಸ್ವಲ್ಪ ಸಮಯದವರೆಗೆ ಬಡಿಯುತ್ತಾ ನಂತರ ನಿಲ್ಲುತ್ತದೆ. ಮಗುವಿನ ದೇಹದಲ್ಲಿ 300 ಮತ್ತು ವಯಸ್ಕರ ದೇಹದಲ್ಲಿ 206 ಮೂಳೆಗಳಿವೆ. ನಮ್ಮ ಬೆರಳುಗಳು 13 ನ್ಯಾನೊಮೀಟರ್‌ಗಳಷ್ಟು ಚಿಕ್ಕದಾದ ವಸ್ತುಗಳನ್ನು ಗ್ರಹಿಸಬಲ್ಲವು.

 

ದೇವರಿಂದ ಸೃಷ್ಟಿಸಲ್ಪಟ್ಟ ಮಾನವ ದೇಹ ಮತ್ತು ದೇಹದ ಅಂಗಗಳ ಕಾರ್ಯನಿರ್ವಹಣೆಯನ್ನು ಪರಿಗಣಿಸಿ, ಅದು ಎಷ್ಟು ಅದ್ಭುತವಾಗಿದೆ! ಆತನ ಚಿತ್ತವಿಲ್ಲದೆ ಒಂದು ಕೂದಲು ಕೂಡ ಉದುರುವುದಿಲ್ಲ. ಎಂತಹ ದೊಡ್ಡ ಪ್ರೀತಿ! ನಾನು ನಿನ್ನನ್ನು ಎಂದಿಗೂ ಕೈ ಬಿಡುವುದಿಲ್ಲ, ತೊರೆಯುವುದಿಲ್ಲ ಎಂದು ಹೇಳಿದವರು ಕತ್ತಲೆಯ ಸಮಯದಲ್ಲಿ, ಕಣ್ಣೀರಿನ ಕಣಿವೆಯಲ್ಲಿ ಮತ್ತು ಆಶೀರ್ವಾದದ ಸಮಯದಲ್ಲಿ ನಿಮ್ಮೊಂದಿಗೆ ಇದ್ದು ನಡೆಸುತ್ತಿದ್ದಾರೆ.

 

ನಾವು ಈ ವರ್ಷವನ್ನು ಹಿಂತಿರುಗಿ ನೋಡಿದರೆ ನಮ್ಮ ಪ್ರತಿಯೊಂದು ಸಂಚಲನದಲ್ಲೂ ಅವರೇ ಜೊತೆ ಇದ್ದು ನಡೆಸಿದರು ಎಂದು ಗ್ರಹಿಸಲು ಸಾಧ್ಯವಾ? ಅಥವಾ ಸಣ್ಣ ಸಮಸ್ಯೆಗೂ ನಾನೇಕೆ ಹೀಗೆ, ನಾನೊಬ್ಬನೇ ಯಾಕೆ ಹೀಗೆ? ನಾನು ಖಾಲಿಯಾಗಿದ್ದೇನೆ ಎಂದು ಕೊರಗುತ್ತಿದ್ದೀರಾ? ಸ್ವಲ್ಪ ಯೋಚಿಸಿ. ನಮ್ಮ ದೇಹದ ಎಲ್ಲಾ ಅಂಗಾಂಗಗಳು ಸರಿಯಾಗಿ ಕೆಲಸ ಮಾಡಿದರೇನೆ ನಾವು ಕೋಟ್ಯಾಧಿಪತಿಗಳು! ಹೌದು, ವೈದ್ಯರಿಗೆ ಲಕ್ಷ ಕೊಡಬೇಕಿಲ್ಲ! ಆತನು ತನ್ನ ಕೈಗಳಿಂದ ತನ್ನ ರೂಪದಲ್ಲಿ ನಮ್ಮನ್ನು ಸೃಷ್ಟಿಸಿದನಲ್ಲದೆ, ನಮ್ಮ ದೇಹದಲ್ಲಿ ಅನೇಕ ಅದ್ಭುತಗಳನ್ನು ಮಾಡಿದ್ದಾರೆ ಎಂದು ನಾವು ಭಾವಿಸಿದರೆ, ನಾವು ಪ್ರಶಂಸಿಸದೆ ಇರಲು ಸಾಧ್ಯವೇ ಇಲ್ಲ. ನಮ್ಮ ದೇಹವು ಎಷ್ಟು ವಿಸ್ಮಯದಿಂದ ಕೂಡಿದೆ ಎಂದು ಅರಿತುಕೊಳ್ಳೋಣ, ನಮ್ಮ ಜೀವನವು ದೇವರು ನಮಗೆ ನೀಡಿದ ಕೊಡುಗೆಯಾಗಿದೆ! ಕಾಯಿಲೆಗಳು, ಸಮಸ್ಯೆಗಳು ಮತ್ತು ಹೋರಾಟಗಳು ಬಂದರೂ, ಅವರು ಈ ಕ್ಷಣದವರೆಗೂ ಜೀವಂತವಾಗಿರಿಸಿದ್ದಾರೆ! ಹೌದು, ಇದೆಲ್ಲದರ ಆಲೋಚನೆಯಲ್ಲಿ ನಿಮ್ಮ ಹೃದಯವು ಕೃತಜ್ಞತೆಯಿಂದ ತುಂಬಿರಲಿ. ಹೊಸ ವರ್ಷವನ್ನು ಕೃತಜ್ಞತೆಯಿಂದ ಸ್ವಾಗತಿಸೋಣ.

- Mrs. ಅನ್ಬುಜ್ಯೋತಿ ಸ್ಟಾಲಿನ್

 

ಪ್ರಾರ್ಥನಾ ಅಂಶ:

ಆಂಧ್ರಪ್ರದೇಶ, ಒಡಿಶಾ ಮತ್ತು ಛತ್ತೀಸ್‌ಗಢ ರಾಜ್ಯಗಳಲ್ಲಿ ನಡೆಯುವ ಸೇವೆಗಳಿಗಾಗಿ ಪ್ರಾರ್ಥಿಸೋಣ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş casibom casibom giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş holiganbet Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet jojobet jojobet jojobet jojobet holiganbet palacebet holiganbet romabet teosbet betgit cratosroyalbet cratosroyalbet gameofbet