By Village Missionary Movement
Monday, 26-Dec-2022ಧೈನಂದಿನ ಧ್ಯಾನ(Kannada) – 26.12.2022 (Christmas Special)
ಯೋಬನು
“...ಯೋಬನಲ್ಲಿದ್ದ ತಾಳ್ಮೆಯ ವಿಷಯವಾಗಿ ಕೇಳಿ ಕರ್ತನು ಅವನಿಗೆ ಅಂತ್ಯದಲ್ಲಿ ಮಾಡಿದ್ದನ್ನು ನೋಡಿ..." - ಯಾಕೋಬ 5:11
"ದೇವರಲ್ಲಿ ಭಯಭಕ್ತಿಯುಳ್ಳವನಾಗಿ ಕೆಟ್ಟದ್ದನ್ನು ನಿರಾಕರಿಸುತ್ತಾ ನಿರ್ದೋಷಿಯೂ ಯಥಾರ್ಥಚಿತ್ತನೂ ಆಗಿದ್ದಾನೆ. ಅವನಿಗೆ ಸಮಾನನು ಭೂಲೋಕದಲ್ಲಿ ಎಲ್ಲಿಯೂ ಸಿಕ್ಕುವದಿಲ್ಲ" ಎಂದು ದೇವರಿಂದ ಪ್ರಶಂಸಿಸಲ್ಪಟ್ಟ ಏಕೈಕ ವ್ಯಕ್ತಿ ಯೋಬನು. ಇವರು ಪರಿಶುದ್ಧವಾದ ಜೀವನವನ್ನು ಜೀವಿಸಿ ನೀತಿವಂತನಾಗಿ ಎಣಿಸಲ್ಪಟ್ಟರು. ನೀತಿವಂತನು ಎಂದರೆ ದೇವರ ಮುಂದೆ ಸರಿಯಾಗಿ ಜೀವಿಸುವವನು ಅಲ್ವಾ! ತನ್ನ ಕುಟುಂಬಸ್ಥರ ಬಳಿ
ಸಣ್ಣಪುಟ್ಟ ತಪ್ಪುಗಳು ಕಂಡರೆ ತಕ್ಷಣ ದೇವರೊಂದಿಗೆ ಒಂದಾಗುವಂತಹ ಮನೋಭಾವ ಅವರದು. ದೇವರನ್ನು ಪ್ರಾರ್ಥಿಸುವುದರಲ್ಲಿ ಮತ್ತು ಕ್ಷಮೆಯನ್ನು ಕೇಳುವುದರಲ್ಲಿ ತಪ್ಪದವರು. ಈ ಪರಿಸ್ಥಿತಿಯಲ್ಲಿ, ದೇವರಿಗೂ ಮತ್ತು ಸೈತಾನನಿಗೂ ನಡುವಿನ ಸಂಭಾಷಣೆಯನ್ನು ಮತ್ತು ಅದರಿಂದ ಏರ್ಪಟ್ಟ ಪರಿಣಾಮಗಳೊಳಗೆ ತಾನಿರುವುದೂ ಯೋಬನಿಗೆ ತಿಳಿಯಲಿಲ್ಲ. ಒಂದೇ ದಿನದಲ್ಲಿ ತನ್ನ 10 ಮಂದಿ ಸುಂದರ ಮಕ್ಕಳನ್ನು ಮತ್ತು ಅಪಾರ ಸಂಪತ್ತನ್ನು ಕಳೆದುಕೊಂಡರೂ ತನ್ನ ದೇವರನ್ನು ಕಳೆದುಕೊಳ್ಳಲು ಬಯಸಲಿಲ್ಲ. ಅವನು ನನ್ನನ್ನು ಕೊಂದರೂ ನಾನು ಅವರನ್ನು ನಂಬುತ್ತೇನೆ ಎಂದು ದೃಢವಾಗಿ ಭರವಸೆ ಕೊಟ್ಟರು. ತನಗೆ ಸಂಭವಿಸಿದ ಕಷ್ಟಗಳನ್ನು ತಾಳ್ಮೆಯಿಂದ ಸಹಿಸಿಕೊಂಡರು. “ಎಷ್ಟೇ ತೊಂದರೆ ಬಂದರೂ ತನ್ನನ್ನು ಪ್ರೀತಿಸುವ ನೀತಿವಂತರು ಇದ್ದಾರೆ” ಎಂಬ ಸತ್ಯವನ್ನು ಸ್ಥಾಪಿಸಲು ದೇವರು ಯೋಬನನ್ನು ಆರಿಸಿಕೊಂಡರು.
ಹೆಂಡತಿಯ ತೆಗಳಿಕೆ, ಸ್ನೇಹಿತರ ಆರೋಪಗಳನ್ನು ಸಹಿಸಿಕೊಂಡು ಏನೇ ಆದರೂ ದೇವರನ್ನು ಹಿಂಬಾಲಿಸಲು ನಿರ್ಧರಿಸಿದ್ದರು. ಆ ಮಿತ್ರರಿಗಾಗಿಯೂ ಪ್ರಾರ್ಥಿಸಿ ಕರ್ತನ ಕೃಪೆಗೆ ಪಾತ್ರರಾದರು. ಅವರು ಸಾವಿರಾರು ವರ್ಷಗಳ ಹಿಂದೆ ಎರಡನೇ ಬರುವಿಕೆ ಮತ್ತು ಪುನರುತ್ಥಾನದ ಬಗ್ಗೆ ಪ್ರಕಟಣೆಯನ್ನು ಪಡೆದರು. ಕೊನೆಯಲ್ಲಿ ಅವರು ಸೈತಾನನ ಯೋಚನೆಯನ್ನು ಸುಳ್ಳುಮಾಡಿದರು. ಸೈತಾನನು ಸೋತು ಹೋದನು.
ನನ್ನ ಪ್ರಿಯರೇ! ನಮ್ಮ ದುಃಖ ಮತ್ತು ಸಂಕಟಗಳ ಮೂಲಕ ದೇವರು ನಮಗೆ ಅನೇಕ ಪಾಠಗಳನ್ನು ಕಲಿಸುತ್ತಾರೆ ಎಂಬುದು ನಿಜ. ಆದರೆ ಅವರು ಪಾಠಗಳನ್ನು ಕಲಿಯಲು ಮಾತ್ರ ದುಃಖವನ್ನು ಕಳುಹಿಸುತ್ತಾರೆ ಎಂದು ಹೇಳಲಾಗುವುದಿಲ್ಲ. ಯೋಬನ ಜೀವನದಿಂದ ನಾವು ಇದನ್ನು ಕಲಿಯುತ್ತೇವೆ. ಆದ್ದರಿಂದ ನಾವು ತಾಳ್ಮೆಯಿಂದಿರೋಣ ಮತ್ತು ನಮ್ಮ ಎಲ್ಲಾ ಕಾಯಿಲೆಗಳು, ಸಂಕಟಗಳು, ದುಃಖಗಳು ಮತ್ತು ಉಪದ್ರವಗಳಿಗೆ "ಕಾರಣ" ವನ್ನು ತಿಳಿಯಲು ಪ್ರಯತ್ನಿಸಬೇಡಿರಿ. ಗುಪ್ತ ವಸ್ತುಗಳು ದೇವರಿಗೆ ಸೇರಿದ್ದು! ಅಂತಹ ಪರಿಸ್ಥಿತಿಯಲ್ಲಿ ನಡೆಯುವಾಗ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಿದ ಸಂಬಂಧಿಕರು ಮತ್ತು ಸ್ನೇಹಿತರನ್ನು ಕ್ಷಮಿಸಿ ಪ್ರಾರ್ಥಿಸಲು ಪ್ರಯತ್ನಿಸಿರಿ. ಮುಂಬರುವ ಹೊಸ ವರ್ಷದಲ್ಲಿ ನೀವು ಕಳೆದುಕೊಂಡಿರುವ ನೆಮ್ಮದಿ, ಶಾಂತಿ ಮತ್ತು ಸಂತೋಷವನ್ನು ದೇವರು ನಿಮಗೆ ಎರಡರಷ್ಟು ಕೊಟ್ಟು ಆಶೀರ್ವದಿಸಲಿ.
- Mrs. ಸರೋಜಾ ಮೋಹನದಾಸ್
ಪ್ರಾರ್ಥನಾ ಅಂಶ:
ಅರ್ಥಪೂರ್ಣವಾದ ಕ್ರಿಸ್ಮಸ್ ಅನ್ನು ಆಚರಿಸಲು ನಮಗೆ ಸಹಾಯ ಮಾಡಿದ್ದಕ್ಕಾಗಿ ದೇವರನ್ನು ಸ್ತುತಿಸೋಣ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482