Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 24.12.2022 (Christmas Special)
Share:

By Village Missionary Movement

Friday, 23-Dec-2022

ಧೈನಂದಿನ ಧ್ಯಾನ(Kannada) – 24.12.2022 (Christmas Special)

 

ಸರಳತೆಯಲ್ಲಿ ಅರ್ಥಪೂರ್ಣವಾದ ಕ್ರಿಸ್ಮಸ್

 

"ಆತ್ಮದಲ್ಲಿ ಬಡವರಾಗಿರುವವರು ಧನ್ಯರು..." - ಮತ್ತಾಯ 5:3

 

ಈ ನಾಗರೀಕತೆ ತುಂಬಿರುವ ಜಗತ್ತಿನಲ್ಲಿ "ಸರಳತೆ" ಎಂಬ ಪದವು ಎಷ್ಟರಮಟ್ಟಿಗೆ ಮರೆತುಹೋಗಿದೆ ಎಂದರೆ, ಜನರು ತಮ್ಮ ಮನಸ್ಸಿನಲ್ಲಿ, ಅವರು ಬಳಸುವ ವಸ್ತುಗಳಲ್ಲಿ ಮತ್ತು ಅವರು ಮಾತನಾಡುವ ಮಾತಿನಲ್ಲೂ ಸಹ ಐಷಾರಾಮದ ಪ್ರಭಾವವೇ ಇದೆ. ಕ್ರೈಸ್ತರು ಕೂಡ ಇದಕ್ಕೆ ಹೊರತಾಗಿಲ್ಲ. ಹಬ್ಬ ಹರಿದಿನಗಳಲ್ಲಿ ಇದು ಹೆಚ್ಚು ಸಾಮಾನ್ಯ. ಆದರೆ ನಮ್ಮ ರಕ್ಷಕನಾದ ಯೇಸು ಕ್ರಿಸ್ತನು ಹುಟ್ಟಿನಿಂದ ಸಾಯುವವರೆಗೆ ಸರಳ ಜೀವನವನ್ನು ನಡೆಸಿ ನಮಗೆ ಮಾದರಿಯಾಗಿದ್ದಾರೆ.

 

ಆಕಾಶ ಭೂಮಿಗೂ ಉನ್ನತವಾದ ದೇವರು ತನ್ನ ಮಗನು ಹುಟ್ಟಲು ಉತ್ತಮವಾದ ನಗರವನ್ನು ಆರಿಸಲಿಲ್ಲ, ಆದರೆ ಬೇತ್ಲೆಹೇಮ್ ಎಂಬ ಸಾಮಾನ್ಯ ಹಳ್ಳಿಯನ್ನು ಆರಿಸಿಕೊಂಡರು. ಮೇಲಾಗಿ, ಅರಮನೆಯಾಗಲಿ, ಭವನವಾಗಲಿ ಅಲ್ಲ, ದನದ ಕೊಟ್ಟಿಗೆಯನ್ನೇ ಆರಿಸಿಕೊಂಡರು. ಅವರಿಗೆ ತಾಯಿಯಾಗಲಿರುವ ಮರಿಯಳೆಂಬ ಸ್ತ್ರೀ, ಆ ದೇಶದ ರಾಣಿಯೋ, ರಾಜಕುಮಾರಿಯೋ ಅಥವಾ ಸುಂದರಿಯೋ ಅಲ್ಲ, ಆದರೆ ಸಾಮಾನ್ಯ ಬಡ ಕನ್ಯೆ. ರಕ್ಷಕನು ಈ ಭೂಮಿಯಲ್ಲಿ ಜನಿಸಿದನೆಂದು ದೇವದೂತರು ಆ ದೇಶದ ಶ್ರೀಮಂತರಿಗೋ, ರಾಜನಿಗೋ ಹೇಳಲಿಲ್ಲ; ಬದಲಾಗಿ, ಸಮಾಜದಲ್ಲಿ ಅಲೆಮಾರಿಗಳೆಂದು ಪರಿಗಣಿಸಲ್ಪಟ್ಟ ಕುರುಬರನ್ನು ಭೇಟಿಮಾಡಿ ಅವರಿಗೆ ಹೇಳಿದರು. ಅವರು ಭೂಮಿಯಲ್ಲಿದ್ದು ಸೇವೆ ಮಾಡುತ್ತಿದ್ದ ದಿನಗಳಲ್ಲಿ ತಲೆ ಒರಗಿಸಲು ಸಹ ಸ್ಥಳವಿರಲಿಲ್ಲ ಮತ್ತು ಅವರು ಸತ್ತಾಗಲೂ ಅವರಿಗೆ ತನ್ನದೇ ಆದ ಸಮಾಧಿ ಇರಲಿಲ್ಲ. ಇದರರ್ಥ ಅವರು ಬಡವರಿಗೆ ಮಾತ್ರ ದೇವರು ಎಂದರ್ಥವಲ್ಲ, ಅವರು ರಾಜಾಧಿ ರಾಜ! ಈ ಭೂಮಿಯ ಮೇಲಿನ ಎಲ್ಲಾ ಸಂಪತ್ತು, ಚಿನ್ನ, ಬೆಳ್ಳಿ, ಅಧಿಕಾರಗಳು ಮತ್ತು ರಾಜ್ಯಗಳು ಅವರಿಂದ ರಚಿಸಲ್ಪಟ್ಟವು. ಇಷ್ಟು ದೊಡ್ಡವನಾದರೂ ಹುಟ್ಟಿನಿಂದ ಸಾಯುವವರೆಗೆ ಸರಳವಾಗಿ ಬದುಕುವ ಮೂಲಕ ಆತನನ್ನು ಅನುಸರಿಸುವ ನಮಗೆ ಇಹಲೋಕದ ಬದುಕು ಶಾಶ್ವತವಲ್ಲ ಎಂಬುದಕ್ಕೆ ಮಾದರಿಯಾಗಿದ್ದಾರೆ.

 

ಪ್ರಿಯರೇ! ನಮ್ಮ ಜೀವನದಲ್ಲಿ ಸಂಪತ್ತು, ಐಶ್ವರ್ಯ ಮತ್ತು ಹಣ ಇರುವುದು ತಪ್ಪು ಎಂದು ಶಾಸ್ತ್ರಗಳು ಕಲಿಸುವುದಿಲ್ಲ. ಆದರೆ ಇವು ಮಾತ್ರ ಮುಖ್ಯ ಎಂದು ಭಾವಿಸುವುದು ತಪ್ಪು. ಸರಳತೆ ಎಂದರೆ ಜಗತ್ತಿನ ಸಂಪನ್ಮೂಲಗಳಿಗೆ ಆದ್ಯತೆ ನೀಡದೆ ಉನ್ನತ ಲೋಕದ ಆಶೀರ್ವಾದಗಳ ಕಡೆಗೆ ಪ್ರಯಾಣಿಸುವುದೇ. ಈ ರೀತಿಯ ಆಲೋಚನೆ ಇದ್ದರೆ ನಮ್ಮ ಜೀವನದಲ್ಲಿ ವ್ಯರ್ಥವಾದ ಐಷಾರಾಮಿ ಕಣ್ಮರೆಯಾಗುತ್ತದೆ. ಈ ಹಬ್ಬದ ದಿನಗಳಲ್ಲಿ ನಾವು ಅನಗತ್ಯ ಅತಿರಂಜಿತ ಚಟುವಟಿಕೆಗಳು ಮತ್ತು ಖರ್ಚುಗಳನ್ನು ತಪ್ಪಿಸುತ್ತೇವೆ. ಸರಳ ಜನರು ನಮ್ಮೊಂದಿಗೆ ಸುಲಭವಾಗಿ ಸಂಬಂಧ ಹೊಂದಲು ನಮ್ಮ ಜೀವನ ಸರಳವಾಗಿರಲಿ. ಆಮೆನ್.

- S.ಮನೋಜಕುಮಾರ್

 

ಪ್ರಾರ್ಥನಾ ಅಂಶ:

ನಾಳೆ ಕ್ರಿಸ್ಮಸ್ ಆಚರಣೆಯಲ್ಲಿ ಹಲವರು ಭಾಗವಹಿಸಲಿದ್ದಾರೆ. ಅವರ ಹೆಸರುಗಳು ಜೀವಪುಸ್ತಕದಲ್ಲಿ ಬರೆಯಲ್ಪಡಬೇಕೆಂದು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş casibom casibom giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş holiganbet Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet jojobet jojobet jojobet jojobet holiganbet palacebet holiganbet romabet teosbet betgit cratosroyalbet cratosroyalbet gameofbet