By Village Missionary Movement
Thursday, 22-Dec-2022ಧೈನಂದಿನ ಧ್ಯಾನ(Kannada) – 23.12.2022 (Christmas Special)
ಅರ್ಥವಿಲ್ಲದ ಕ್ರಿಸ್ಮಸ್
"...ಅನ್ಯಜನರ ನಿಂದೆಗೆ ಗುರಿಯಾಗದಂತೆ ದೇವರಲ್ಲಿ ಭಯಭಕ್ತಿಯುಳ್ಳವರಾಗಿ ನಡೆದುಕೊಳ್ಳಬೇಕಲ್ಲವೇ?" - ನೆಹೆಮಿಯ 5:9
ಪ್ರಿಯರೇ! ಪ್ರತಿ ದಿನ ನಾವು ಅರ್ಥಪೂರ್ಣವಾದ ಕ್ರಿಸ್ಮಸ್ ಎಂಬ ವಿಷಯದ ಬಗ್ಗೆ ಧ್ಯಾನಿಸುತ್ತಿದ್ದೇವೆ. ಈ ದಿನ, "ಅರ್ಥವಿಲ್ಲದ ಕ್ರಿಸ್ಮಸ್ ಎಂದರೇನು?" ಎಂದು ಯೋಚಿಸುವುದು ಒಳ್ಳೆಯದು.
ನಮ್ಮ ನೆರೆಹೊರೆಯವರ ನೀರು ಮತ್ತು ಕಸ ನಮ್ಮ ಹೊಲಕ್ಕೆ ಬಂದಾಗ ಅಥವಾ ಅವರು ನಮ್ಮ ಮನೆಯ ಮುಂದೆ ತಮ್ಮ ವಾಹನವನ್ನು ನಿಲ್ಲಿಸಿದಾಗ ನಾವು ಕಿರಿಕಿರಿ ಮತ್ತು ಕೋಪಗೊಳ್ಳುತ್ತೇವೆ. ಅಂತಹ ಸಣ್ಣ ವಿಷಯಗಳ ಮೇಲೆ ದ್ವೇಷವುಂಟಾದಾಗ, ಕ್ರಿಸ್ಮಸ್ ಸಮಯದಲ್ಲಿ ಮಾತ್ರ ಬಾಗಿಲಿನ ಮೇಲೆ ನೇತಾಡುವ ನಕ್ಷತ್ರವು ಕ್ರಿಸ್ತನನ್ನು ಮಹಿಮೆಪಡಿಸಿದಂತಾಗುತ್ತದಾ ಅಥವಾ ಇತರರಿಗೆ ಸಂತೋಷವನ್ನು ತರುತ್ತದಾ?
ನಾವು ನಮ್ಮ ಕೆಲಸದ ಸ್ಥಳಗಳಲ್ಲಿ ವರ್ಷಪೂರ್ತಿ ಮುಖ ಸಿಡುಕಿಸುತ್ತಾ, ಕ್ರೈಸ್ತರಲ್ಲದ ಸ್ನೇಹಿತರೊಂದಿಗೆ ಯಾವಾಗಲೂ ಉರಿಗೊಳ್ಳುತ್ತಾ ಇದ್ದು ಕ್ರಿಸ್ಮಸ್ ಸಮಯದಲ್ಲಿ ಮಾತ್ರ ನಗು ಮುಖದೊಂದಿಗೆ ಕೇಕ್ ಅನ್ನು ನೀಡುವುದು ನಿಜವಾಗಿಯೂ Happy Christmas ಆಗಿರುತ್ತದಾ?
ಸರ್ಕಾರಿ ಕಛೇರಿಗಳಲ್ಲಿ ಕೆಲಸ ಮಾಡುವ ಕ್ರೈಸ್ತರು ಲಂಚ ಪಡೆದು ತಮ್ಮ ಕೆಲಸಗಳಲ್ಲಿ ಸತ್ಯವನ್ನು ತಿರುಚಿ ಕ್ರಿಸ್‌ಮಸ್ ಸಮಯದಲ್ಲಿ ಮಾತ್ರ ಬಡ ಕಾರ್ಮಿಕರಿಗೆ ಬಟ್ಟೆ ಮತ್ತು ಕೇಕ್ ನೀಡಿದರೆ ಅದು ಕ್ರಿಸ್ತನನ್ನು ಮಹಿಮೆಪಡಿಸಿದಂತಾಗುತ್ತದಾ? ಅಥವಾ ಇದು ಕ್ರಿಸ್ತನ ಮುಖಕ್ಕೆ ಅವಮಾನವಾಗಿರುತ್ತದಾ?
ಕಾಲೇಜಿನಲ್ಲಿ ಓದುವಾಗ, ಕ್ರಿಸ್ತನ ಮಕ್ಕಳಾಗಿದ್ದರೂ ಅನ್ಯರಂತೆ ಇತರರನ್ನು ಅಪಹಾಸ್ಯ ಮಾಡುವುದು, ಕೊಳಕು ಮಾತುಗಳನ್ನಾಡಿ ಸಂತೋಷಿಸುವುದು, ತಪ್ಪು ವೆಬ್‌ಸೈಟ್‌ಗಳನ್ನು ಹಂಚಿಕೊಳ್ಳುವುದು, ಗರ್ಲ್ ಫ್ರೆಂಡ್, ಬಾಯ್ ಫ್ರೆಂಡ್‌ನಂತೆ ತಿರುಗಾಡುವುದು ಹೀಗೆಲ್ಲಾ ಇದ್ದು ಬಿಟ್ಟು ಕ್ರಿಸ್‌ಮಸ್ ದಿನದಂದು ಮಾತ್ರ ನಿಜವಾದ ಕ್ರೈಸ್ತರಂತೆ ಶುಭಾಶಯಗಳನ್ನು ಹಂಚಿಕೊಳ್ಳುವಾಗ ಯೇಸು ನಿಮ್ಮ ಸ್ನೇಹಿತರ ಮುಂದೆ ಮಹಿಮೆಹೊಂದುತ್ತಾರಾ?
ಪ್ರಿಯರೇ! ಮೇಲಿನ ಪ್ರತಿಯೊಂದು ಉಲ್ಲೇಖಗಳಲ್ಲಿ ನಾವು ಅರ್ಥಹೀನ ಕ್ರಿಸ್ಮಸ್ ಅನ್ನು ನೋಡುತ್ತೇವೆ. ಹೌದು, ನಾವು ನಿಷ್ಠಾವಂತ ಕ್ರೈಸ್ತರಾಗಿರುವಾಗ ಮಾತ್ರ ನಾವು ಅರ್ಥಪೂರ್ಣವಾದ ಕ್ರಿಸ್ಮಸ್ ಅನ್ನು ಆಚರಿಸಲು ಸಾಧ್ಯ. ಇಲ್ಲದಿದ್ದರೆ ನಮ್ಮ ಕ್ರಿಸ್ಮಸ್ ಆಚರಣೆಯಲ್ಲಿ ಆಡಂಬರ ಮತ್ತು ಆರ್ಭಟವಿರುತ್ತದೆಯೇ ಹೊರತು ಯಾವ ಅರ್ಥವೂ ಇರುವುದಿಲ್ಲ. ಕ್ರಿಸ್‌ಮಸ್‌ನಲ್ಲಿ ಮಾತ್ರವಲ್ಲದೆ ಪ್ರತಿದಿನ ಕ್ರಿಸ್ತನನ್ನು ಪ್ರತಿಬಿಂಬಿಸುವ ಕ್ರೈಸ್ತರಾಗಿ ನಾವು ಬದುಕಿದರೆ ನಮ್ಮ ಕ್ರಿಸ್ಮಸ್ ಉಡುಗೊರೆಗಳು ಮತ್ತು ಶುಭಾಶಯಗಳು ಅರ್ಥಪೂರ್ಣವಾಗಿರುತ್ತವೆ. ಇದು ನಮಗೆ ಮಾತ್ರವಲ್ಲದೆ ನಮ್ಮ ಸುತ್ತಮುತ್ತಲಿನವರಿಗೂ ಸಂತೋಷವನ್ನು ತರುತ್ತದೆ.
- Mr. ಬೆಂಜಮಿನ್
ಪ್ರಾರ್ಥನಾ ಅಂಶ:
ಗೆತ್ಸೆಮನೆ ಆವರಣದ ಸುತ್ತಮುತ್ತಲಿರುವ ಹಳ್ಳಿಗಳಲ್ಲಿನ ಜನರನ್ನು ಒಟ್ಟುಗೂಡಿಸಿ ಕ್ರಿಸ್ತನ ಜನನದ ಸುವಾರ್ತೆಯನ್ನು ಪ್ರಕಟಿಸಲು ಮಾಡುತ್ತಿರುವ ಎಲ್ಲಾ ಪ್ರಯತ್ನಗಳಲ್ಲಿ ದೇವರ ಹಸ್ತವು ಜೊತೆಯಿರುವಂತೆ,ಅಗತ್ಯಗಳು ಪೂರೈಸಲ್ಪಡುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482