By Village Missionary Movement
Wednesday, 21-Dec-2022ಧೈನಂದಿನ ಧ್ಯಾನ(Kannada) – 21.12.2022 (Christmas Special)
ಇತರರನ್ನು ನೋಡುವ ಅರ್ಥಪೂರ್ಣವಾದ ಕ್ರಿಸ್ಮಸ್
"ನಿಮ್ಮಲ್ಲಿ ಪ್ರತಿಯೊಬ್ಬನು ಸ್ವಹಿತವನ್ನು ಮಾತ್ರ ನೋಡದೆ ಪರಹಿತವನ್ನು ಸಹ ನೋಡಲಿ" - ಫಿಲಿಪ್ಪಿ 2:4
ಒಬ್ಬ ಬಡ ಮಹಿಳೆ ಶ್ರೀಮಂತ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು. ಮನೆಯ ಯಜಮಾನನು ಆಕೆಯ ಮಗನಿಗೆ ಸುಂದರವಾದ ಉಡುಪನ್ನು ಮತ್ತು ಕೈಯಲ್ಲಿ ಸ್ವಲ್ಪ ಹಣವನ್ನು ಕ್ರಿಸ್ಮಸ್ ಉಡುಗೊರೆಯಾಗಿ ಕೊಟ್ಟರು. ಆಕೆಯು ಸಂತೋಷದಿಂದ ಮನೆಗೆ ಹೋಗುವಾಗ, ತನ್ನ ಮಗನ ಅದೇ ವಯಸ್ಸಿನ ಬಡ ಹುಡುಗನೊಬ್ಬನನ್ನು ನೋಡಿದಳು, ಅವನು ಸರಿಯಾಗಿ ಬಟ್ಟೆ ಧರಿಸದೆ ಬಡತನದಿಂದ ಬಳಲುತ್ತಿದ್ದನು. ಮನದಾಳದಲ್ಲಿ ಅವಳಿಗೆ ಪ್ರೇರೇಪಣೆ ಯಾಗಿ, ಮಗನಿಗೆ ಕೊಟ್ಟಿದ್ದ ಬಟ್ಟೆಯನ್ನು ಪುಟ್ಟ ಹುಡುಗನಿಗೆ ಕೊಟ್ಟು ಬಿಟ್ಟಳು. ನಂತರ, ದಾರಿಯಲ್ಲಿ ಹೋಗುವಾಗ, ಅವಳು ತನ್ನ ಮಗನಿಗೆ ಅಂಗಡಿಯಲ್ಲಿ ಡ್ರೆಸ್ ಖರೀದಿಸಲು ನಿರ್ಧರಿಸಿದಳು. ಯಜಮಾನನು ಕೊಟ್ಟ ಹಣವೂ ಸಹ ಕೈಯಲ್ಲಿತ್ತು. ಅದೇ ತರಹದ ಡ್ರೆಸ್ ತೆಗೆದುಕೊಂಡು ತನ್ನ ಕೈಯಲ್ಲಿದ್ದ ಹಣವನ್ನು ಅಂಗಡಿಯವನಿಗೆ ಕೊಟ್ಟು ಉಳಿದ ಹಣವನ್ನು ಮುಂದಿನ ತಿಂಗಳೊಳಗೆ ಹೇಗಾದರೂ ಕೊಡುತ್ತೇನೆ ಎಂದು ಹೇಳಿದಳು. ಅವನು ನಿನ್ನನ್ನು ಹೇಗೆ ನಂಬುವುದು ಮತ್ತು ಎಷ್ಟು ಜನ ಈ ರೀತಿಯಾಗಿ ಹೊರಟಿದ್ದೀರ? ಎಂದು ಜೋರಾಗಿ ಮಾತಾಡಿದನು. ಇದನ್ನು ಗಮನಿಸಿದ ಒಬ್ಬ ಹುಡುಗ ತನ್ನ ತಾಯಿಯ ಬಳಿ, ಅಮ್ಮ ನನಗಾಗಿ ತೆಗೆದುಕೊಂಡ ಡ್ರೆಸ್ ಅನ್ನು ಈ ಆಂಟಿಗೆ ಕೊಟ್ಟು ಬಿಡೋಣವಾ? ಸಂಡೇ ಸ್ಕೂಲ್ ನಲ್ಲಿ ಕೊಡುವುದೇ ಕ್ರಿಸ್ ಮಸ್ ಎಂದು ಹೇಳಿಕೊಟ್ಟರು ಎಂದನು. ತಾಯಿ ನಗುಮುಖದಿಂದ ಅವನನ್ನು ನೋಡಿ ಬಟ್ಟೆ ಬ್ಯಾಗ್ ಅನ್ನು ಆ ಮಹಿಳೆಗೆ ಕೊಟ್ಟರು. ಅದನ್ನು ತೆರೆದು ನೋಡಿದರೆ ಅದು ಅತ್ಯಂತ ದುಬಾರಿ ಉಡುಗೆ! ಆಕೆ ಸಂತೋಷದಿಂದ ದೇವರಿಗೆ ಕೃತಜ್ಞತೆ ಸಲ್ಲಿಸಿದರು. ಹೌದು, ಪರರಿಗೆ ಸಹಾಯ ಮಾಡಿದ ಆ ಬಡ ತಾಯಿಯನ್ನು ಮತ್ತು ಆ ಪುಟ್ಟ ಬಾಲಕನನ್ನು ಕಂಡು ಪರಲೋಕವು ಸಂತೋಷಿಸಿರುತ್ತದಲ್ಲವೇ!
ಇಂದಿನ ಸತ್ಯವೇದ ಭಾಗದಲ್ಲಿ ಗರ್ಭಿಣಿಯಾಗಿದ್ದ ಮರಿಯಳು ತನ್ನ ವೃದ್ಧಾಪ್ಯದಲ್ಲಿ ಗರ್ಭಿಣಿಯಾಗಿದ್ದ ಎಲಿಜಬೆತ್‌ಳನ್ನು ಭೇಟಿಯಾಗಿ ಅವಳನ್ನು ವಂದಿಸಿ, ಮೂರು ತಿಂಗಳ ಕಾಲ ಅವರೊಂದಿಗೆ ಇದ್ದುದನ್ನು ನಾವು ಓದುತ್ತೇವೆ. ಅದು ವಯಸ್ಸಾದ ಎಲಿಜಬೆತ್‌ಗೆ ಬಹಳ ಕಷ್ಟವಾಗಿರಬಹುದು. ಯೋಚಿಸಿ ನೋಡಿ, ಮರಿಯಳಿಗೆ ಗರ್ಭಧಾರಣೆಯ ಭಯ ಖಂಡಿತವಾಗಿ ಇದ್ದಿರಬಹುದು. ಬಹುಶಃ ವೈದ್ಯರ ಬಳಿಗೆ ಹೋಗಿದ್ದರೆ ಮೊದಲ ಮೂರು ತಿಂಗಳುಗಳು ಬಹಳ ಮುಖ್ಯ. ಯಾವುದೇ ಭಾರವಾದ ಕೆಲಸವನ್ನು ಮಾಡಬಾರದು. ವಾಂತಿ, ತಲೆತಿರುಗುವಿಕೆ ಮತ್ತು ವಾಕರಿಕೆ ಖಂಡಿತವಾಗಿ ಇರುತ್ತದೆ. ಆದರೂ ಏನಾದರೂ ತಿನ್ನುತ್ತಲೇ ಇರಬೇಕು. ಹಾಗಾಗಿ ಒಟ್ಟಾರೆ ಬೆಡ್ ರೆಸ್ಟ್ ತೆಗೆದುಕೊಂಡರೆ ಉತ್ತಮ ಎಂದು ಹೇಳುತ್ತಿದ್ದರು. ಒಂದು ವೇಳೆ ಮರಿಯಳು ತನ್ನ ಬಗ್ಗೆ ಮಾತ್ರ ಯೋಚಿಸಿದ್ದರೆ, ಅವಳು ಎಲಿಜಬೆತ್ ಅನ್ನು ವಂದಿಸಿ ಬಂದುಬಿಡುತ್ತಿದ್ದಳು. ಮೂರು ತಿಂಗಳವರೆಗೆ ಎಲಿಜಬೆತ್‌ಗೆ ಸಹಾಯವಾಗಿ ಇರುತ್ತಿರಲಿಲ್ಲ.
ಹೌದು, ಪ್ರಿಯರೇ! ಕ್ರಿಸ್ತನು ಒಬ್ಬನಲ್ಲಿ ರೂಪುಗೊಂಡರೆ, ಅಂದರೆ ಜನಿಸಿದರೆ, ನಾವು ಮುಂದೆ ಹೋಗಿ ಇತರರಿಗೆ ಆಶೀರ್ವಾದವಾಗುತ್ತೇವೆ. ನಾವು ನಮಗಾಗಿ ಮಾತ್ರ ಯೋಚಿಸದೆ ಇತರರಿಗಾಗಿಯೂ ಯೋಚಿಸಿ ಕಾರ್ಯನಿರ್ವಹಿಸೋಣ. ನಮಗೆ ಕಷ್ಟಗಳಿರಬಹುದು. ಆದರೆ ನಮಗಿಂತ ಹೆಚ್ಚು ಬಳಲುತ್ತಿರುವವರು ಅನೇಕರಿದ್ದಾರೆ. ಈ ಕ್ರಿಸ್‌ಮಸ್ ದಿನಗಳಲ್ಲಿ ಅವರನ್ನು ಹುಡುಕೋಣ. ನಮ್ಮ ಶ್ರಮ, ಸಹಾಯ ಮತ್ತು ವಸ್ತುಗಳಿಂದ ಅವರನ್ನು ಬೆಂಬಲಿಸೋಣ. ಈ ಕ್ರಿಸ್ಮಸ್ ಅರ್ಥಪೂರ್ಣವಾದ ಕ್ರಿಸ್ಮಸ್ ಆಗಿರಲಿ.
- Mrs. ಉಮಾ ವಿಲಿಯಮ್ಸ್
ಪ್ರಾರ್ಥನಾ ಅಂಶ:
ಸೇವಕರಿಗಾಗಿ ಹೊರ ಬಿಡುವ ಕತ್ತೆಗಳ ಕೈಪಿಡಿ ಮೂಲಕ ಸೇವಕರು ಹೊಸ ಶಕ್ತಿಯನ್ನು ಪಡೆದು ಸತತವಾಗಿ ಓಡುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482