Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 20.12.2022 (Christmas Special)
Share:

By Village Missionary Movement

Monday, 19-Dec-2022

ಧೈನಂದಿನ ಧ್ಯಾನ(Kannada) – 20.12.2022 (Christmas Special)

 

ಮರೆಯುವಲ್ಲಿ ಅರ್ಥಪೂರ್ಣವಾದ ಕ್ರಿಸ್ಮಸ್

 

"...ದೇವರು ಮನುಷ್ಯರ ಅಪರಾಧಗಳನ್ನು ಅವರ ಲೆಕ್ಕಕ್ಕೆ ಹಾಕದೆ..." - 2 ಕೊರಿಂ. 5:19

 

ರಷ್ಯಾದಲ್ಲಿ ಕಮ್ಯುನಿಸ್ಟರು ಕ್ರೈಸ್ತರಿಗೆ ಕಿರುಕುಳ ಕೊಡುತ್ತಿದ್ದ ಸಮಯದಲ್ಲಿ, ಹ್ಯಾರಿಡೆನ್ಬೂಮ್ ಎಂಬ ಮಹಿಳೆಯನ್ನು ಸಹ ಜೈಲಿನಲ್ಲಿರಿಸಿ ಚಿತ್ರಹಿಂಸೆ ನೀಡಲಾಯಿತು. ಅನೇಕ ವರ್ಷಗಳ ನಂತರ ಅವರು ಬಿಡುಗಡೆಯಾದರು ಮತ್ತು ಕ್ರಿಸ್ತನನ್ನು ಬೋಧಿಸುತ್ತಿದ್ದರು. ಹೀಗಿರುವಾಗ ಒಂದು ದಿನ ಸಭಾಂಗಣದಲ್ಲಿ ಉಪದೇಶ ಮಾಡುತ್ತಿದ್ದಾಗ ಮುಂದಿನ ಸಾಲಿನಲ್ಲಿ ಕುಳಿತಿದ್ದ ವ್ಯಕ್ತಿಯನ್ನು ಕಂಡು ಬೆಚ್ಚಿಬಿದ್ದರು. ಯಾಕೆಂದರೆ ಆತ ಜೈಲಿನಲ್ಲಿ ಅವರಿಗೆ ಚಿತ್ರಹಿಂಸೆ ನೀಡಿ ಸ್ವಂತ ತಂಗಿಯನ್ನೇ ಕೊಂದ ಜೈಲು ಅಧಿಕಾರಿ! ಅಂದು ಸಭೆ ಮುಗಿದು ಎಲ್ಲರಿಗೂ ಕೈಕೊಟ್ಟು ವಂದಿಸುವಾಗ ಅವರೂ ಬಂದು ಹಸ್ತಲಾಘವ ಮಾಡಲು ಕೈ ಚಾಚಿದರು. ಆತನಿಗೆ ಹ್ಯಾರಿಯೆಂದು ತಿಳಿಯದಿದ್ದರೂ ಹ್ಯಾರಿಡೆನ್‌ಬೂ ತನ್ನ ಕೈಯನ್ನು ಚಾಚಲು ಸಾಧ್ಯವಾಗಲಿಲ್ಲ. ದುಃಖ ಉಸಿರುಗಟ್ಟಿಸಿತು. "ಯೇಸಪ್ಪಾ, ನಿಮ್ಮ ಪ್ರೀತಿಯ ಆತ್ಮವನ್ನು ನನ್ನ ಹೃದಯದಲ್ಲಿ ಸುರಿಯಿರಿ" ಎಂದು ಅವರು ಪ್ರಾರ್ಥಿಸಿದರು ಮತ್ತು ಮುಗುಳ್ನಗೆಯೊಂದಿಗೆ ಅವರ ಕೈಕುಲುಕಿದರು.

 

ಸತ್ಯವೇದದಲ್ಲಿ, ತನ್ನ ಸಹೋದರರ ವಿಶ್ವಾಸಘಾತುಕತನವನ್ನು ದಯೆಯಿಂದ ಕ್ಷಮಿಸಿ ಮರೆತುಹೋದ ಯೋಸೇಫನ ಬಗ್ಗೆ ನಾವು ಓದುತ್ತೇವೆ. ದೇವರು ಅವನಿಗೆ ಕೊಟ್ಟ ಮೊದಲ ಮಗನಿಗೆ ದೇವರು ನನ್ನ ಎಲ್ಲಾ ದುಃಖಗಳನ್ನು ಮರೆಯುವಂತೆ ಮಾಡಿದರು. (ಆದಿಕಾಂಡ 41:51). ಎಂದು ಹೇಳಿ ಮನಸ್ಸೆ ಎಂದು ಹೆಸರಿಟ್ಟರು. ಹೌದು, ನಾವು ಕ್ಷಮಿಸಿ ಮರೆತು ಹೋದಾಗ ಮಾತ್ರವೇ ನಿಜವಾದ ಸಂತೋಷ ಮತ್ತು ಆಶೀರ್ವಾದ ಉಂಟು. ಯೇಸು ಕ್ರಿಸ್ತನು ಹೇಳಿದ ಸಾಮ್ಯದಲ್ಲಿ, ತಂದೆಯನ್ನು ಬಿಟ್ಟು ಬೇರ್ಪಟ್ಟು ಹೋದ ಚಿಕ್ಕ ಮಗನನ್ನು ತಂದೆ ಪುನಃ ಅಂಗೀಕರಿಸುವುದನ್ನು ನೋಡುತ್ತೇವೆ. ಅವನ ಕಠಿಣ ಮಾತುಗಳನ್ನು ಮತ್ತು ಅವಿಧೇಯತೆಯನ್ನು ಹೀಗೆ ಎಲ್ಲವನ್ನು ಕ್ಷಮಿಸಿ, ಮರೆತು ಮತ್ತೆ ಪ್ರೀತಿಸಿದರು.

 

ಪ್ರೀತಿಯ ದೇವರ ಮಕ್ಕಳೇ! ಈ ಕ್ರಿಸ್ಮಸ್ ಋತುವಿನಲ್ಲಿ ನಮ್ಮ ಪರಲೋಕದ ತಂದೆಯಂತಹ ಹೃದಯ ನಮಗಿದೆಯಾ? ನಮ್ಮ ಜೀವನದಲ್ಲಿ ಸಂಭವಿಸಿದ ಸಂಗತಿಗಳು ನಮಗೆ ನೋವುಂಟುಮಾಡಿದರೂ ಮತ್ತು ಅನ್ಯಾಯವಾಗಿದ್ದರೂ ಸಹ, ಮಾರ್ಕನು 11:25 ರಲ್ಲಿ ಪರಲೋಕದ ತಂದೆ ಹೇಳಿದಂತೆ ಇತರರ ತಪ್ಪುಗಳನ್ನು ಕ್ಷಮಿಸಿ, ತಂದೆಯೊಂದಿಗೆ ಐಕ್ಯವಾಗಿ ನಮ್ಮ ಜೀವನವನ್ನು ಸಿಹಿಯಾಗಿ ಮಾಡಿಕೊಳ್ಳೋಣ? ನಮ್ಮನ್ನು ಹಿಂಸಿಸುವವರಿಗಾಗಿ ನಾವು ಪ್ರಾರ್ಥಿಸುತ್ತಿದ್ದೇವಾ? ಆಗ ಯೇಸುಕ್ರಿಸ್ತನ ಪ್ರೀತಿಯು ನಮ್ಮ ಹೃದಯದಲ್ಲಿ ಸುರಿಸಲ್ಪಟ್ಟು ಎಲ್ಲಾ ಕಹಿಗಳನ್ನು ಮರೆತು ಒಂದೊಂದು ದಿನವನ್ನೂ ಹಬ್ಬದ ಸಂತೋಷದೊಂದಿಗೆ ಆಚರಿಸಲು ಸಾಧ್ಯ.

- A. ಬ್ಯೂಲ

 

ಪ್ರಾರ್ಥನಾ ಅಂಶ:

ಮೋಕ್ಷ ಪ್ರಯಾಣ ಎಂಬ ದೈನಂದಿನ ಧ್ಯಾನ ಪತ್ರಿಕೆ ಅನೇಕರ ಆಧ್ಯಾತ್ಮಿಕ ಗುಣಮಟ್ಟವನ್ನು ಹೆಚ್ಚಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet grandpashabet jojobet casinoroyal jojobet holiganbet ibizabet holiganbet amkbet sonbahis betgit cratosroyalbet cratosroyalbet tlcasino