Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 19.12.2022 (Christmas Special)
Share:

By Village Missionary Movement

Monday, 19-Dec-2022

ಧೈನಂದಿನ ಧ್ಯಾನ(Kannada) – 19.12.2022 (Christmas Special)

 

ಉದ್ಯೋಗ ತಾಣಗಳಲ್ಲಿ ಶುಭಸಂದೇಶ

 

"ರಕ್ಷಣಾಮಾರ್ಗದಲ್ಲಿರುವವರಲ್ಲಿಯೂ ನಾಶನಮಾರ್ಗದಲ್ಲಿರುವವರಲ್ಲಿಯೂ ನಾವು ದೇವರ ಮುಂದೆ ಕ್ರಿಸ್ತನ ಪರಿಮಳವಾಗಿದ್ದೇವೆ" – 2 ಕೊರಿಂಥ 2:15

 

ಒಂದು ದೊಡ್ಡ ಶ್ರೀಮಂತ ಕುಟುಂಬದಲ್ಲಿ, ಬಡತನದ ನಿಮಿತ್ತವಾಗಿ ಕೆಲಸ ಮಾಡುತ್ತಿದ್ದಳು ಸೆಲ್ವಿ. ಓದನ್ನು ಅರ್ಧಕ್ಕೆ ನಿಲ್ಲಿಸಿ ಕೆಲಸಕ್ಕೆ ಹೋಗಬೇಕಾದ ಪರಿಸ್ಥಿತಿ. ಅವಳು ಯೇಸುವನ್ನು ತುಂಬಾ ಪ್ರೀತಿಸುತ್ತಿದ್ದಳು. ಅವಳು ಪ್ರಾರ್ಥನೆ ಮಾಡದೆ ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ. ಅವಳು ಕೆಲಸ ಮಾಡುತ್ತಿದ್ದ ಮನೆಯಲ್ಲಿ ಒಬ್ಬಳೇ ಮಗಳಾಗಿ ರೀನಾ ಎಂಬ ಹದಿಹರೆಯದ ಹುಡುಗಿ ಇದ್ದಳು. ರೀನಾ ತನ್ನ ಹೆತ್ತವರನ್ನು ಗೌರವಿಸುತ್ತಿರಲಿಲ್ಲ ಮತ್ತು ಅವಳ ಹೃದಯಕ್ಕೆ ಅನುಗುಣವಾಗಿ ಜೀವಿಸುತ್ತಿದ್ದಳು. ಅವಳ ತಾಯಿ ತನ್ನ ಮಗಳ ಮೇಲಿನ ಕೋಪವನ್ನೆಲ್ಲಾ ಸೆಲ್ವಿಯ ಮೇಲೆ ತೋರಿಸುತ್ತಿದ್ದಳು. ಅವಳು ಅವಳನ್ನು ನಿರ್ದಯವಾಗಿ ನಡೆಸಿಕೊಳ್ಳುತ್ತಿದ್ದಳು. ಒಂದು ದಿನ ಕಾಲೇಜಿಗೆ ಹೋಗಿ ಬಂದಿದ್ದ ರೀನಾ ಮಾನಸಿಕ ಒತ್ತಡದಿಂದ ಕಾಣಲ್ಪಟ್ಟು ತನ್ನ ಕೈಗೆ ಸಿಕ್ಕಿದ ವಸ್ತುಗಳಿಂದ ತನ್ನನ್ನು ತಾನೇ ನೋಯಿಸಿಕೊಳ್ಳುತ್ತಿದ್ದಳು. ಪೋಷಕರು ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ತುಂಬಾ ಮನೋವೇದನೆ! ಇದನ್ನು ಕಂಡ ಸೆಲ್ವಿ ಮನದಲ್ಲಿ ಪ್ರಾರ್ಥಿಸಿಕೊಂಡೇ ರೀನಾಳ ಬಳಿಗೆ ಹೋಗಿ ಪ್ರೀತಿಯಿಂದ ಮಾತಾಡಿದಳು. ಮೊದಲ ದಿನ ಸೆಲ್ವಿ ಮಾತಿಗೆ ಕಿವಿಗೊಡಲು ನಿರಾಕರಿಸಿದ ರೀನಾ ಒಂದೆರಡು ದಿನದಲ್ಲಿ ಅವಳ ಮಾತನ್ನು ಕೇಳತೊಡಗಿದಳು. ಯೇಸುವಿನ ಪ್ರೀತಿಯನ್ನು ಕೇಳುತ್ತಾ ಕೇಳುತ್ತಾ ರೀನಾಳ ಹೃದಯದಲ್ಲಿ ಒಂದು ದೊಡ್ಡ ಬದಲಾವಣೆ ಉಂಟಾಯಿತು. ಸೆಲ್ವಿಯ ಕ್ರಿಯೆ ಮತ್ತು ಸಾಕ್ಷಿಯ ಜೀವನವು ರೀನಾಳ ಕುಟುಂಬದಲ್ಲಿ ದೊಡ್ಡ ಬದಲಾವಣೆಯನ್ನು ತಂದಿತು.

 

ಹಾಗೆಯೇ ಸತ್ಯವೇದದಲ್ಲಿಯೂ 2 ಅರಸುಗಳು 5 ನೆಯ ಅಧ್ಯಾಯದಲ್ಲಿ ಸೇನಾಧಿಪತಿಯಾಗಿದ್ದ ನಾಮಾನನ ಮನೆಯಲ್ಲಿದ್ದ ಆ ಚಿಕ್ಕ ಹುಡುಗಿ ಗುಲಾಮಳಾಗಿದ್ದರೂ, ತನಗೆ ಕೊಟ್ಟ ಕೆಲಸದಲ್ಲಿ ಮಾತ್ರವೇ ಗಮನಹರಿಸದೇ ಅಕ್ಕಪಕ್ಕದ ಎಲ್ಲರ ಮೇಲೂ ಕಾಳಜಿಯುಳ್ಳವಳಾಗಿದ್ದಳು. ಸಾಮಾನ್ಯವಾಗಿ ಗುಲಾಮಳ ಮಾತಿಗೆ ಯಾರೂ ಮಹತ್ವ ಕೊಡುವುದಿಲ್ಲ. ಆದರೆ ನಾಮಾನನು ಒಂದು ಸೈನ್ಯದ ಮುಖ್ಯಸ್ಥನಾಗಿದ್ದರೂ, ಅವನ ಮನೆಯಲ್ಲಿದ್ದ ಆ ಗುಲಾಮ ಹುಡುಗಿ, ಅದೂ ಕೂಡ ಒಂದು ಚಿಕ್ಕ ಹುಡುಗಿ, ಅವಳ ಮಾತನ್ನೇ ಕೇಳುತ್ತಾರೆಂದರೆ, ಆ ಹುಡುಗಿ ಕರ್ತನೊಂದಿಗೆ ಎಷ್ಟು ಉತ್ತಮವಾದ ಐಕ್ಯತೆ ಹೊಂದಿರಬಹುದು ಮತ್ತು ಅವಳ ಸಾಕ್ಷಿ ಜೀವನ ಹೇಗಿದ್ದಿರಬಹುದು ಎಂದು ನೋಡಿ. ಆ ಮನೆಯಲ್ಲಿ ಎಷ್ಟು ಚೆನ್ನಾಗಿ ನಡೆದುಕೊಂಡಿರಬಹುದು. ಅವಳ ಆ ಮಾತುಗಳು ಸಿರಿಯಾ ದೇಶಕ್ಕೆ ರಕ್ಷಣೆಯನ್ನು ತಂದು ಬಿಟ್ಟಿತೇ.

 

ಪ್ರೀತಿಯ ಕ್ರೈಸ್ತರೇ! ನೀವು ಯಾವ ಸ್ಥಳದಲ್ಲಿ ಕೆಲಸ ಮಾಡುತ್ತೀರೋ ಅದೇ ನಿಮಗೆ ಕಾರ್ಯಸ್ಥಳ. ನೀವು ಎಂತಹಾ ಕೆಲಸವನ್ನು ಮಾಡುತ್ತಿದ್ದರೂ, ಆ ಸ್ಥಳದಲ್ಲಿ ಯೇಸುವಿನ ಬಗ್ಗೆ ಹೇಳಲು ಮರೆಯಬೇಡಿರಿ. ಮಾತನಾಡುವ ಮುನ್ನ ದೇವ ಸನ್ನಿಧಾನದಲ್ಲಿ ಬಹಳ ಹೊತ್ತು ಕಾದಿರಬೇಕು. ಆಗ ಮಾತ್ರವೇ ನಾವು ಮಾತನಾಡುವ ಮಾತುಗಳು ಅವರ ಹೃದಯದಲ್ಲಿ ಕ್ರಿಯೆ ಮಾಡುತ್ತದೆ. ಆದ್ದರಿಂದ ದೇವರೊಂದಿಗಿನ ನಮ್ಮ ಸಂಬಂಧದಲ್ಲಿ ಹೆಚ್ಚು ಸಮಯವನ್ನು ಕಳೆಯೋಣ. ಯೇಸುವಿನ ಪ್ರೀತಿಯನ್ನು ಇತರರೊಂದಿಗೆ ಹಂಚಿಕೊಳ್ಳುವ ಮೂಲಕ ಈ ವರ್ಷದ ಕ್ರಿಸ್ಮಸ್ ಅನ್ನು ಅರ್ಥಪೂರ್ಣವಾದ ಕ್ರಿಸ್‌ಮಸ್ ಆಗಿ ಆಚರಿಸೋಣ.

- Mrs. ಸಾರಾ ಸುಭಾಷ್

 

ಪ್ರಾರ್ಥನಾ ಅಂಶ:

ಮಾಧ್ಯಮ ಸೇವೆಗಳಿಗೆ ಸಮರ್ಪಣೆಯುಳ್ಳ ಉತ್ತಮವಾಗಿ ಕೆಲಸ ತಿಳಿದಿರುವ ವ್ಯಕ್ತಿಗಳು ಸೇವೆಯಲ್ಲಿ ಜೊತೆಗೂಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al