Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 18.12.2022 (Christmas Special)
Share:

By Village Missionary Movement

Saturday, 17-Dec-2022

ಧೈನಂದಿನ ಧ್ಯಾನ(Kannada) – 18.12.2022 (Christmas Special)

 

ಮಾನಸಾಂತರ ಹೊಂದುವಲ್ಲಿ ಅರ್ಥಪೂರ್ಣವಾದ ಕ್ರಿಸ್ಮಸ್

 

"...ಮಾನಸಾಂತರಪಡುವ ಒಬ್ಬಪಾಪಿಯ ವಿಷಯವಾಗಿ ಪರಲೋಕದಲ್ಲಿ ಸಂತೋಷವಾಗುವದೆಂದು ನಾನು ನಿಮಗೆ ಹೇಳುತ್ತೇನೆ ಅಂದನು” - ಲೂಕ 15:7

 

ಪ್ರೀತಿಯ ಮುದ್ದು ಪುಟಾಣಿಗಳೇ! ನೀವು ಹೇಗಿದ್ದೀರ. ನೀವೆಲ್ಲರೂ ಚೆನ್ನಾಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಈ ವರ್ಷ ಈಗಷ್ಟೇ ಶುರುವಾದಂತೆ ಇತ್ತು. ಗಡ...ಗಡ... ಅಂತ ಓಡಿ ಕೊನೆಯ ತಿಂಗಳಿಗೆ ಬಂದುಬಿಟ್ಟೊ ನೋಡುದ್ರಾ? ಈ ತಿಂಗಳು ಪೂರ್ತಿಯಾಗಿ ನಾವು ಯೇಸಪ್ಪನಿಗೆ ಕೃತಜ್ಞತೆ ಸಲ್ಲಿಸುತ್ತಲೇ ಇರಬೇಕು.

 

ಕ್ರಿಸ್ ಮಸ್ ಹಬ್ಬ ಎಂದರೆ ಕೇಕ್, ಬಿರಿಯಾನಿ, ಎಕ್ಸ್ ಮಾಸ್ ಟ್ರೀ, ಎಕ್ಸ್ ಮಾಸ್ ಅಜ್ಜ ಬಗೆಬಗೆಯ ಅಲಂಕಾರ, ಹೀಗೆ ಬ್ಯುಸಿಯಾಗಿದ್ದರೂ ಹೊಸ ಡ್ರೆಸ್ ಖರೀದಿಸಲು ಯಾರೂ ಮರೆಯುವುದಿಲ್ಲ ಹೌದಲ್ವಾ. ನಿಮಗೆಲ್ಲ ಡ್ರೆಸ್ ತಗೊಂಡಾಯ್ತಾ... ಹುಮ್... ಸೂಪರ್. ಕೇನಾ ಎಂಬ ಪುಟ್ಟ ಹುಡುಗಿ ಮನೆಯಲ್ಲಿ ಹೊಸ ಡ್ರೆಸ್ ತೆಗೆದುಕೊಳ್ಳಲು ಹಣವಿಲ್ಲ. ಒಂದು ವಾರ ಸಿಗುವ ಕೆಲಸವನ್ನೆಲ್ಲ ಅಪ್ಪ ಮಾಡಿದರು. ಅದರಿಂದ ಬಂದ ಹಣದಲ್ಲಿ ಕಡಿಮೆ ಬೆಲೆಗೆ ಬಟ್ಟೆ ಖರೀದಿಸಿ ಹೊಲಿಯಲು ಕೊಟ್ಟರು. ಕೇನಾಗೆ ತುಂಬಾ ಸಂತೋಷ. ಟೈಲರ್ ಸರಿಯಾದ ಅಳತೆಯನ್ನು ತೆಗೆದುಕೊಂಡು ಬಟ್ಟೆಯನ್ನು ಕತ್ತರಿಸಿದರು. ಬೇಡದ ಬಟ್ಟೆಗಳನ್ನು ತೆಗೆದು ಸುಂದರವಾಗಿ ಹೊಲಿಯತೊಡಗಿದರು. ಈಗ ಧರಿಸಬಹುದಾದ ಸೂಪರ್ ಡ್ರೆಸ್ ರೆಡಿಯಾಯಿತು. ಟೈಲರ್‌ಗೆ ಶುಲ್ಕವನ್ನು ಕೊಡಬೇಕಲ್ವಾ? ಅಪ್ಪ ಹಣ ಕೊಟ್ಟು ಡ್ರೆಸ್ ತೆಗೆದುಕೊಂಡು ಕೇನಾಗೆ ಕೊಟ್ಟಾಗ ಅವಳಿಗೆ ಎಲ್ಲಿಲ್ಲದ ಖುಷಿ.

 

ಬಟ್ಟೆಯನ್ನು ತೆಗೆದುಕೊಂಡು ಅದನ್ನು ಟೈಲರ್ ಕೈಗೆ ಕೊಟ್ಟಂತೆ, ನಾವು ಸಹ ನಮ್ಮ ಜೀವನವನ್ನು ದೇವರ ಕೈಗಳಲ್ಲಿ ಅರ್ಪಿಸಬೇಕು. ಬೇಡದ ಬಟ್ಟೆಯನ್ನು ಟೈಲರ್ ಕತ್ತರಿಸಿ ಬಿಸಾಡಿದಂತೆ ನಮ್ಮಲ್ಲಿ ಕಂಡುಬರುವ ಕೋಪ, ಜಗಳ, ಅಸೂಯೆ, ಸುಳ್ಳು ಮತ್ತು ಕಳ್ಳತನದ ಪಾಪಗಳನ್ನು ನೀಗಿಸಿ ಯೇಸುವಿನ ಹಾಗೆ ಆತನ ಮಗುವಿನಂತೆ ನಮ್ಮನ್ನು ಸರಿಪಡಿಸುತ್ತಾರೆ. ಹೊಲಿಗೆಗೆ ಟೈಲರ್ ಶುಲ್ಕ ತೆಗೆದುಕೊಂಡಂತೆ ಅವರು ನಮ್ಮಿಂದ ಯಾವುದೇ ಶುಲ್ಕವನ್ನು ವಸೂಲಿ ಮಾಡುವುದಿಲ್ಲ. ಬದಲಾಗಿ ತನ್ನ ಪ್ರಾಣವನ್ನು ನಮಗಾಗಿ ಶುಲ್ಕವಾಗಿ ಕೊಡಲೆಂದೇ ಈ ಭೂಮಿಗೆ ಬಂದರು.

 

ಏನು ಪುಟಾಣಿಗಳೇ! ಯೇಸು ನಿಮ್ಮ ಬಳಿ ಕೇಳುವುದೆಲ್ಲಾ ಪಾಪದಿಂದ ತುಂಬಿರುವ ನಿಮ್ಮ ಹೃದಯವನ್ನು ಮಾತ್ರವೇ. ಪಾಪದ ಅಂಧಕಾರವನ್ನು ಹೋಗಲಾಡಿಸಲು ಮತ್ತು ಪರಿಶುದ್ಧನು ವಾಸಿಸುವ ಸ್ಥಳವಾಗಿ ನಿನ್ನ ಹೃದಯವನ್ನು ನೀಡಲು ನೀನು ರೆಡೀನಾ? ಶುದ್ಧವಾದ ಹೃದಯದೊಂದಿಗೆ ಅರ್ಥಪೂರ್ಣವಾದ ಕ್ರಿಸ್ಮಸ್ ಅನ್ನು ಆಚರಿಸಲು ನನ್ನ ಶುಭಾಶಯಗಳು.

- Sis. ದೆಬೋರಾಳ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al