Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 17.12.2022 (Christmas Special)
Share:

By Village Missionary Movement

Saturday, 17-Dec-2022

ಧೈನಂದಿನ ಧ್ಯಾನ(Kannada) – 17.12.2022 (Christmas Special)

 

ಸಭೆಗಳಲ್ಲಿ ಅರ್ಥಪೂರ್ಣವಾದ ಕ್ರಿಸ್ಮಸ್

 

“ನಂಬಿಕೆಯಲ್ಲಿ ದೃಢವಿಲ್ಲದವರನ್ನೂ ಸೇರಿಸಿಕೊಳ್ಳಿರಿ. ಆದರೆ ಸಂದೇಹಾಸ್ಪದವಾದ ಕಾರ್ಯಗಳನ್ನು ಅವರ ಮುಂದೆ ಚರ್ಚಿಸಬೇಡಿರಿ" - ರೋಮಾ 14.1

 

ಒಂದು ಕಾಲೇಜು ಆವರಣದಲ್ಲಿ ಸೇವಕರಿಗಾಗಿ ಒಂದು ಸಭೆ ಏರ್ಪಡಿಸಲಾಗಿತ್ತು. ಆ ಕಾಲೇಜಿನಲ್ಲಿ ಓದುತ್ತಿದ್ದ ಕ್ಯಾಥೋಲಿಕ್ ವಿದ್ಯಾರ್ಥಿಗಳು ಆ ಸಭೆಯಲ್ಲಿ ಭಾಗವಹಿಸಬೇಕೆಂಬ ಹಂಬಲದಿಂದ ಭಾಗವಹಿಸಿದರು. ಅಲ್ಲಿ ಬೋಧಿಸಿದ ಸೇವಕರು, ಕ್ಯಾಥೋಲಿಕರು ಮತ್ತು ಅವರ ಸಂಪ್ರದಾಯಗಳು ತಪ್ಪಾದದ್ದು ಎಂದು ಹೇಳಿದ ಮಾತುಗಳು ಅಲ್ಲಿ ಹಾಜರಿದ್ದ ಅನೇಕ ವಿದ್ಯಾರ್ಥಿಗಳನ್ನು ದುಃಖಿತರನ್ನಾಗಿ ಮಾಡಿತು. ಏಕೆಂದರೆ ತಮ್ಮ ಮನೋಭಾರವಾದ ಬದುಕಿನಲ್ಲಿ ಒಂದು ಹೊಸ ಉತ್ತೇಜನ ಉಂಟಾಗಬಹುದೆಂಬ ನಿರೀಕ್ಷೆಯೊಂದಿಗೆ ಸಂತೋಷವಾಗಿ ಕುಳಿತಿದ್ದ ಅವರಿಗೆ ಬಹಳ ಬೇಸರವಾಯಿತು. ನಂತರ ಆಧ್ಯಾತ್ಮಿಕ ವಿಷಯಗಳ ಬಗ್ಗೆ ಮತ್ತು ಪವಿತ್ರಾತ್ಮದ ಬಗ್ಗೆ ಬೋಧಿಸಿದರೂ, ಅವರು ಅದನ್ನು ಸ್ವೀಕರಿಸಲು ಇಷ್ಟವಿರಲಿಲ್ಲ. ವಿಗ್ರಹಾರಾಧನೆಯು ಸತ್ಯವೇದಕ್ಕೆ ವಿರುದ್ದವಾಗಿದ್ದರೂ, ಅದರ ಬಗ್ಗೆ ಹೇಳಿದ ವಿಧಾನದಲ್ಲಿ ಕ್ರಿಸ್ತನ ಯೋಚನೆ ಅವರಿಗೆ ಇಲ್ಲದೆ ಹೋದದ್ದೇ ಇದಕ್ಕೆ ಕಾರಣ.

 

ಸತ್ಯವೇದದಲ್ಲಿ ಪೇತ್ರನು, ಕೊರ್ನೇಲ್ಯನನ್ನು ಭೇಟಿಯಾಗುವ ಮೊದಲು ಅವರಲ್ಲಿದ್ದ ಶಾರೀರಿಕ ಚಿಂತನೆ ಏನೆಂದರೆ, ಒಬ್ಬ ಯೆಹೂದ್ಯನು ಅನ್ಯಜನರೊಂದಿಗೆ ಬೆರೆಯುವುದನ್ನು ಮತ್ತು ಅವನಲ್ಲಿ ಸಂಚಾರ ಮಾಡುವುದನ್ನು ನಿಷೇಧಿಸಲಾಗಿದೆ ಎಂಬುದು. ಆದರೆ ದೇವರು ಶುಚಿಗೊಳಿಸಿದ್ದು ಅಶುದ್ಧವಲ್ಲ ಎಂದು ದರ್ಶನದಿಂದ ವಿವರಣೆಯನ್ನು ಪಡೆದ ನಂತರ ಅವರು ತನ್ನ ಮನಸ್ಸನ್ನು ಬದಲಾಯಿಸಿಕೊಂಡರು. ನಂತರ ಅನ್ಯಜನಾಂಗದವನಾದ ಕೊರ್ನೇಲ್ಯನ ಮನೆಗೆ ಹೋಗಿ ದೇವರ ಸನ್ನಿಧಾನದಲ್ಲಿ ಒಟ್ಟುಗೂಡಿದ್ದ ಎಲ್ಲರಿಗೂ ಸುವಾರ್ತೆಯನ್ನು ಬೋಧಿಸಿದರು.

 

ಕೊರ್ನೇಲ್ಯನು ಎಲ್ಲಾ ಯೆಹೂದಿ ಜನರಿಂದ ಒಳ್ಳೆಯ ಸಾಕ್ಷಿ ಹೊಂದಿದವರೇ, ಅನೇಕರಿಗೆ ಸಹಾಯಮಾಡಿದವರೇ ಮತ್ತು ಯೆಹೂದ್ಯರಿಗೆ ಪರಿಚಯಸ್ಥನೇ ಆಗಿದ್ದರು. ಪೇತ್ರನ ಬಗ್ಗೆ ನೋಡುವಾಗ, ಅವರು ಕ್ರಿಸ್ತನನ್ನು ಬಹಿರಂಗವಾಗಿ ಬೋಧಿಸಿದವರು. ಆದರೆ ಪೇತ್ರನು ಯೆಹೂದಿ ಸಿದ್ಧಾಂತದ ಪ್ರಕಾರ ಅನ್ಯಜನರನ್ನು ಅವರ ಮನೆಗೆ ಬರಮಾಡಿಕೊಳ್ಳದವರೂ ಆಗಿದ್ದರು.

 

ಪ್ರಿಯರೇ! ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸು ಎಂಬ ಆಜ್ಞೆಯನ್ನು ಪಡೆದಿರುವ ನಾವು ಸಭೆಗಳೊಳಗೆ ಎಷ್ಟು ವಿಭಾಗಗಳಾಗಿ ಬೇರ್ಪಟ್ಟಿದ್ದೇವೆ. ನಮ್ಮಂತೆ ಮತ್ತೊಬ್ಬರನ್ನು ಪ್ರೀತಿಸಲು ಮನಸ್ಸಿದೆಯೇ? ಮತ್ತೊಬ್ಬರು ಯಾವುದೇ ರೀತಿಯ ವೇದನೆಗೊಳಗಾಗದಂತೆ ಮಾತನಾಡಲು ಪ್ರಯತ್ನಿಸುತ್ತಿದ್ದೇವೆಯೇ? ಒಬ್ಬರಿಗೊಬ್ಬರು ಮಧ್ಯಸ್ಥಿಕೆ ವಹಿಸುವ ಹೃದಯ ನಮಗಿದೆಯೇ? ದೇವರ ಬಗ್ಗೆ ಗೊತ್ತಿಲ್ಲದ ಜನರು ಸಭೆಗಳಿಗೆ ಬಂದರೆ, ಅವರನ್ನು ನಿಮ್ಮ ಗುಂಪಿನಲ್ಲಿ ಸೇರಿಸಿಕೊಳ್ಳುವ ಮನೋಬಯಕೆ ಇದೆಯೇ? ಹೀಗೆ ನಮ್ಮನ್ನು ನಾವೇ ಅನೇಕ ಪ್ರಶ್ನೆಗಳನ್ನು ಕೇಳಿಕೊಂಡು ವಾಕ್ಯದ ಪ್ರಕಾರ ಅದನ್ನು ಹೇಗೆ ಸರಿಪಡಿಸಬಹುದು ಎಂದು ಯೋಚಿಸಿ ಕಾರ್ಯಪ್ರವೃತ್ತರಾಗಲು ಕರೆಯಲ್ಪಟ್ಟಿದ್ದೇವೆ. ಈ ಕ್ರಿಸ್ಮಸ್ ಕ್ಯಾಥೋಲಿಕ್ ವಿದ್ಯಾರ್ಥಿಗಳು ಕ್ರಿಸ್ತನನ್ನು ತಿಳಿದುಕೊಳ್ಳುವ ವಿಷಯದಲ್ಲಿ ಅಡ್ಡಿಯಾದ ರೀತಿಯಲ್ಲಿ ಅಲ್ಲದೇ, ಪೇತ್ರನು ಮತ್ತು ಕೊರ್ನೇಲ್ಯನ ಹಾಗೆ ಅನ್ಯಜನರನ್ನು ಪ್ರೀತಿಸಿ ಆದರಿಸುವಂಥದ್ದಾಗಿರಲಿ. ಆಮೆನ್.

- Mrs. ಏಂಜಲೀನ್

 

ಪ್ರಾರ್ಥನಾ ಅಂಶ:

You Tube-ನಲ್ಲಿ ಹೊರಬರುವ ಬೆಳಗಿನ ಆರಾಧನೆ ಮತ್ತು ಗುಣಪಡಿಸುವ ಪ್ರಾರ್ಥನೆಯ ಮೂಲಕ ಅನೇಕರು ದೇವರ ಪ್ರೀತಿಯನ್ನು ಸವಿಯಲಿ ಎಂದು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al