By Village Missionary Movement
Thursday, 15-Dec-2022ಧೈನಂದಿನ ಧ್ಯಾನ(Kannada) – 16.12.2022 (Christmas Special)
ಕರೆಯುವಿಕೆಯ ಬಗ್ಗೆ ಆತಂಕವಿದೆಯೇ?
"...ತಮ್ಮ ಗಂಟುಗಳನ್ನು ಬಿಚ್ಚಿ ಅದಕ್ಕೆ ಚಿನ್ನ ಧೂಪ ರಕ್ತಬೋಳಗಳನ್ನು ಕಾಣಿಕೆಯಾಗಿ ಕೊಟ್ಟರು." - ಮತ್ತಾಯ 2:11
ಯೋಸೇಫ, ಮರಿಯ ದಂಪತಿಗಳಿಗೆ ಒಂದು ಸೇವೆಯ ಕರೆಯುವಿಕೆಯನ್ನು ನೀಡಲಾಯಿತು! ಈ ಜಗತ್ತಿನಲ್ಲಿ ಮೆಸ್ಸೀಯನನ್ನು ಬೆಳೆಸಬಲ್ಲ ಒಂದು ಉತ್ತಮವಾದ ಸೇವೆ! ದಂಪತಿಗಳು ಬಡ ಹಿನ್ನೆಲೆಯಿಂದ ಬಂದವರು. ಈ ಪರಿಸ್ಥಿತಿಯಲ್ಲಿ ಒಂದು ಕಡೆ ಇದ್ದು ವ್ಯಾಪಾರ ಮಾಡುತ್ತಾ ಕುಟುಂಬ ಕಾಪಾಡುವುದೇ ಬಹಳ ಕಷ್ಟವಾಗಿತ್ತು. ಆದರೆ ಯೋಸೇಫನು ತನ್ನ ಮರಗೆಲಸವನ್ನು ಒಂದು ಸ್ಥಳದಲ್ಲಿ ಮಾಡಲು ಸಾಧ್ಯವಾಗದ ಕಾರಣ ಸರ್ಕಾರದ ಜನಗಣತಿಗಾಗಿ ಬೇತ್ಲೆಹೇವಿುಗೆ ಹೋಗಬೇಕಿತ್ತು. ಹೆರೋದನ ಕಣ್ಣು ತಪ್ಪಿಸಿ ಐಗುಪ್ತಕ್ಕೆ ಹೋಗಬೇಕಾದ ಪರಿಸ್ಥಿತಿ, ಮತ್ತೆ ಇಸ್ರಾಯೇಲ್ ದೇಶಕ್ಕೆ ಬಂದು ನಜರೇತಿನಲ್ಲಿ ನೆಲೆಸುವ ಪರಿಸ್ಥಿತಿ ಉಂಟಾಗಲಿದೆ. ಹೀಗೆಲ್ಲಾ ಸಂಭವಿಸಲಿದೆ ಎಂದೆಲ್ಲಾ ಅವರಿಗೆ ತಿಳಿಯದಿದ್ದರೂ ಒಂದು ಜವಾಬ್ದಾರಿಯುತ ಗಂಡನಾಗಿ ಯೋಸೇಫನು ಮುಂದೆ ಏನು ಮಾಡಲಿದ್ದೇವೆ ಎಂದು ಬಹುಶಃ ಚಿಂತೆ ಮಾಡಿರಬಹುದು. ಮರಿಯಳು ಸಹ ಅಗತ್ಯಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಯೋಚಿಸಿರಬಹುದು.
ಇಂದಿಗೂ ಸೇವೆಯ ಕರೆಯುವಿಕೆಯನ್ನು ಸ್ವೀಕರಿಸಿದ ಅನೇಕರು, ಸೇವೆ ಮಾಡಿದರೆ ನನ್ನ ಅಗತ್ಯಗಳೆಲ್ಲಾ ಪೂರೈಸಲ್ಪಡುತ್ತದೆಯೇ? ಎಂದು ಅವರು ಹಣದ ಬಗ್ಗೆ ಚಿಂತಿಸುತ್ತಾರೆ ಮತ್ತು ಸೇವೆಗೆ ಬರಲು ವಿಳಂಬ ಮಾಡುತ್ತಾರೆ. ಅನೇಕರಿಗೆ ಸೇವೆ ಮಾಡುವ ಬಯಕೆಯಿದೆ ಮತ್ತು ಆತ್ಮಗಳ ಭಾರವಿದೆ. ಆದರೆ ಪೂರ್ಣ ಸಮಯದ ಸೇವೆಗೆ ಬರದಂತೆ ತಡೆಯಾಗಿರುವುದು ಭವಿಷ್ಯದಲ್ಲಿ ನನ್ನ ಅಗತ್ಯಗಳು ಪೂರೈಸಲ್ಪಡುತ್ತದೆಯೇ? ಎಂಬ ಪ್ರಶ್ನೆಯೇ!
ಆದರೆ ಈ ದಂಪತಿಗಳು ಈ ಪ್ರಶ್ನೆಯನ್ನು ಕೇಳಿ, ಮನಸ್ಸಿನಲ್ಲಿ ಕಾಲ್ಪನಿಕ ಭವಿಷ್ಯದ ಭಯವನ್ನು ಬೆಳೆಯಲು ಅವಕಾಶ ಮಾಡಿಕೊಟ್ಟು ಈ ಸೇವೆಯ ಕರೆಯುವಿಕೆಯನ್ನು ಸ್ವೀಕರಿಸಲು ನಿರಾಕರಿಸಲಿಲ್ಲ, ನಿಮ್ಮ ಚಿತ್ತದಂತೆ ಆಗಲಿ ಎಂದು ತಮ್ಮನ್ನು ಸೇವೆಗೆ ಅರ್ಪಿಸಿಕೊಂಡರು. ನಡೆದಿದ್ದೇನು? ಮಗು ಹುಟ್ಟಿದ ಕೆಲವು ವಾರಗಳ ನಂತರ ಎಲ್ಲಿಂದಲೋ ಒಂದು ಶಾಸ್ತ್ರಿಗಳ ಗುಂಪು ಬಂತು. ಇವರ್ಯಾರು ಎಂದು ಆಶ್ಚರ್ಯಪಡಲು, ಅವರು ಬಂದು ಮಗುವಿಗೆ ಸಾಷ್ಟಾಂಗನಮಸ್ಕಾರ ಮಾಡಿದರು ಮತ್ತು ಅಲ್ಲಿ ಸ್ವಲ್ಪ ನಿರೀಕ್ಷಿಸಿದ ಕಾರ್ಯವು ಸಂಭವಿಸುತ್ತದೆ. ತಮ್ಮ ಗಂಟುಗಳನ್ನು ಬಿಚ್ಚಿ ಚಿನ್ನ ಧೂಪ ರಕ್ತಬೋಳಗಳನ್ನು ಕಾಣಿಕೆಯಾಗಿ ಕೊಟ್ಟರು ಎಂಬುದನ್ನು ನೋಡುತ್ತೇವೆ.
ಗಂಟು ಎಂದು ಹೇಳುವಾಗ ಚಿನ್ನವಷ್ಟೇ ಅಲ್ಲ, ಉಳಿದ ಎರಡೂ ವಸ್ತುಗಳೂ ಸಹ ದುಬಾರಿ ಎಂದು ತಿಳಿಯಬಹುದು. ಹಲ್ಲೇಲೂಯಾ! ಹುಟ್ಟಿರುವ ಯೇಸು ಕ್ರಿಸ್ತನನ್ನು ಸಾಕಲು, ಐಗುಪ್ತಕ್ಕೆ ಹೋಗಲು ಪ್ರಯಾಣದ ವೆಚ್ಚ, ಐಗುಪ್ತದಲ್ಲಿ ಬಾಡಿಗೆ ಮನೆಗೆ ಅಡ್ವಾನ್ಸ್ ಮತ್ತು ಅಲ್ಲಿ ಮರಗೆಲಸ ಉದ್ಯಮವನ್ನು ಪ್ರಾರಂಭಿಸಲು ಹೂಡಿಕೆ ಹಣವನ್ನು ನೀಡಲು ಹೀಗೆ ಎಲ್ಲಾ ಅಗತ್ಯಗಳನ್ನು ಪೂರೈಸಲು ದೇವರು ಈ ಕುಟುಂಬಕ್ಕೆ ಉಡುಗೊರೆಗಳನ್ನು ನೀಡಿದರು.
ಸೇವೆಯ ಕರೆಯುವಿಕೆಯನ್ನು ಸ್ವೀಕರಿಸಿದ ಪ್ರಿಯರೇ! ನನ್ನ ಅಗತ್ಯವು ಪೂರೈಸಲ್ಪಡುತ್ತದೆಯೇ ಎಂದು ಯೋಚಿಸುತ್ತಾ ಸೇವೆಗೆ ಬರಲು ಹಿಂಜರಿಯುತ್ತಿದ್ದೀರ? ನಂಬಿಕೆಯಿಂದ ಮೊದಲ ಹೆಜ್ಜೆ ಇಡಿ. ನಿಮ್ಮ ಜೀವನದ ಅಗತ್ಯಗಳನ್ನೆಲ್ಲಾ ಪೂರೈಸಲು ದೇವರು ತನ್ನ ನಿಧಿಯನ್ನು ಕೊಟ್ಟು, ಒಂದು ಕೊರತೆಯೂ ಇಲ್ಲದಂತೆ ನಿಮ್ಮನ್ನು ಮುನ್ನಡೆಸುತ್ತಾರೆ.
- J. ಸಂತೋಷ್
ಪ್ರಾರ್ಥನಾ ಅಂಶ:
ಆಮೆನ್ ಗ್ರಾಮೀಣ ಟಿವಿಯ ಮೂಲಕ ಹಳ್ಳಿಗಳಲ್ಲಿರುವ ಪ್ರತಿಯೊಬ್ಬರಿಗೂ ಸುವಾರ್ತೆ ತಲುಪುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482