By Village Missionary Movement
Thursday, 15-Dec-2022ಧೈನಂದಿನ ಧ್ಯಾನ(Kannada) – 15.12.2022 (Christmas Special)
ಸ್ಟಾರ್ ನ್ಯೂಸ್
"...ಅನೇಕರನ್ನು ನೀತಿಯ ಕಡೆಗೆ ತಿರುಗಿಸಿದ ವರು ನಕ್ಷತ್ರಗಳ ಹಾಗೆಯೂ ಎಂದೆಂದಿಗೂ ಪ್ರಕಾಶಿಸು ವರು" - ದಾನಿಯೇಲ 12:3
ಕ್ರಿಸ್ಮಸ್ ಸಮಯದಲ್ಲಿ, ನಾವು ಮನೆಯನ್ನು ಸ್ವಚ್ಛಗೊಳಿಸಲು, ಬಣ್ಣ ಬಳಿಯಲು, ಗೊಂಬೆ ಮನೆ ಮಾಡಲು, ಮನೆಯಲ್ಲಿ ಸ್ಟಾರ್ ಗಳನ್ನು ನೇತುಹಾಕಲು ಮತ್ತು ಹೊಸ ಬಟ್ಟೆಗಳನ್ನು ಖರೀದಿಸಲು ತುಂಬಾ ಉತ್ಸುಕರಾಗಿದ್ದೇವೆ. ಈ ದಿನಗಳಲ್ಲಿ ಕ್ರೈಸ್ತರು ಮಾತ್ರವಲ್ಲದೆ ಅನ್ಯಮತದ ಸ್ನೇಹಿತರು ಕೂಡ ತಮ್ಮ ಮನೆಗಳಲ್ಲಿ ಸ್ಟಾರ್ ನೇತಾಕುವುದನ್ನು ನೋಡುವಾಗ ಸಂತೋಷವಾಗುತ್ತಿದೆ. ನಾವು ನಮ್ಮ ಮನೆಗಳಲ್ಲಿ ಸ್ಟಾರ್ ಅನ್ನು ನೇತುಹಾಕುವುದು ಮಾತ್ರವಲ್ಲದೇ, "ನಕ್ಷತ್ರದ ಕೆಲಸವನ್ನು" ಮಾಡುವ ಹೆಚ್ಚುವರಿ ಜವಾಬ್ದಾರಿಯನ್ನು ಸಹ ಹೊಂದಿದ್ದೇವೆ.
ಕ್ರಿಸ್ತನ ಜನನದ ಸಮಯದಲ್ಲಿ ನಕ್ಷತ್ರವು ದೇವರು ತನಗೆ ಆಜ್ಞಾಪಿಸಿದ ಕೆಲಸವನ್ನು ಸರಿಯಾಗಿ ಪ್ರಾರಂಭಿಸಿ, ಮಗು ಇರುವ ಸ್ಥಳದ ಮೇಲೆ ಬಂದು ನಿಲ್ಲುವವರೆಗೆ ಅವರಿಗಿಂತ ಮುಂದೆ ಹೋಗಿ ಕೆಲಸವನ್ನು ಪರಿಪೂರ್ಣವಾಗಿ ಮುಗಿಸಿತು. ಆ ನಕ್ಷತ್ರವು ಶಾಸ್ತ್ರಿಗಳನ್ನು ಬಾಲಕನಾದ ಯೇಸು ಜನಿಸಿದ ಮನೆಗೆ ಹೇಗೆ ಮುನ್ನಡೆಸಿ, ದಾರಿತೋರುತ್ತಾ ಬಂತೋ, ಅದೇ ರೀತಿ ನಮ್ಮ ದೈನಂದಿನ ಜೀವನದಲ್ಲಿ, ನಮ್ಮ ಮಾತು ಮತ್ತು ಕಾರ್ಯಗಳಲ್ಲಿ ಇತರರನ್ನು ಯೇಸುವಿನ ಕಡೆಗೆ ಕರೆದೊಯ್ಯುವ ನಕ್ಷತ್ರವಾಗಿ ಬದುಕಲು ನಮಗೆ ಕ್ರೈಸ್ತ ಜೀವನವನ್ನು ನೀಡಲಾಗಿದೆ.
ಆ ನಕ್ಷತ್ರವನ್ನು ಕಂಡಾಗ ಅವರೆಲ್ಲರ ಆನಂದಕ್ಕೆ ಪಾರವೇ ಇರಲಿಲ್ಲ ಎಂದು ಓದುತ್ತೇವೆ. ಇಂದು ನಮ್ಮ ಜೀವನವನ್ನು ನೋಡಿದಾಗ ನಮ್ಮ ಸುತ್ತಲಿರುವವರು, ನಮ್ಮ ಸಂಬಂಧಿಕರು ಮತ್ತು ತಂದೆ-ತಾಯಿಗಳು ಸಂತೋಷಪಡುತ್ತಿದ್ದಾರ ಅಥವಾ ದುಃಖಪಡುತ್ತಿದ್ದಾರ? ನಾವು ಮಾರ್ಗದರ್ಶಕರಾಗಿ ಮಾತ್ರವಲ್ಲದೆ ಬದುಕಿ ತೋರಿಸುವವರಾಗಿಯೂ ಇರುವುದಾದರೆ, ಇತರರು ಸಂತೋಷದಿಂದ ನಮ್ಮನ್ನು ಸಂಪರ್ಕಿಸಲು ಸಾಧ್ಯವಾಗುತ್ತದೆ, ಇಲ್ಲವಾದರೆ ನಮ್ಮ ಗುಣಗಳಿಂದ ದೂರ ಸರಿಯುತ್ತಾರೆ.
ದೇವರು ಪ್ರತಿ ನಕ್ಷತ್ರಕ್ಕೆ ಒಂದೊಂದು ಮಾರ್ಗವನ್ನು ನಿಗದಿಪಡಿಸಿದ್ದಾರೆ. ಕೆಲವು ನಕ್ಷತ್ರಗಳು ತಮ್ಮ ಮಾರ್ಗವನ್ನು ಬಿಟ್ಟು ದೂರ ಹೋಗುವಾಗ ಸುಟ್ಟು ಕೆಳಗೆ ಬೀಳುವುದನ್ನು ನಮ್ಮ ಕಣ್ಣುಗಳಿಂದ ನೋಡಬಹುದು. ನಾವು ಸಹ ದೇವರು ನಮಗೆ ಗೊತ್ತುಪಡಿಸಿದ ಮಾರ್ಗವನ್ನು ಬಿಟ್ಟು ದೂರ ಹೋಗದಂತೆ ದೇವರ ಚಿತ್ತವನ್ನು ಪೂರೈಸಲು ನಮ್ಮನ್ನು ತೊಡಗಿಸಿಕೊಂಡರೆ, ನಾವು ಜಗತ್ತಿಗೆ ಹೊಳೆಯುವ ನಕ್ಷತ್ರಗಳಂತೆ ಬೆಳಕಾಗಿರಬಹುದು.
ಸ್ಟ್ರಾಂಗ್ ಆಗಿ ಮನಸ್ಸಿನಲ್ಲಿ ಮುದ್ರಿಸಿದ "ಸ್ಟಾರ್ ನ್ಯೂಸ್" ಎಂದೆಂದೂ ನಮ್ಮ ಜ್ಞಾಪಕದಲ್ಲಿದ್ದು ನಮ್ಮನ್ನು ದೇವರ ಚಿತ್ತಕ್ಕೆ ನೇರವಾಗಿ ಮುನ್ನಡೆಸಲಿ.
- Mrs. ಪುಷ್ಪಾ ಸೈಮನ್
ಪ್ರಾರ್ಥನಾ ಅಂಶ:
ಆಸ್ಪತ್ರೆ ಸೇವೆಗಳ ಮೂಲಕ ಭೇಟಿಯಾಗುತ್ತಿರುವ ವ್ಯಕ್ತಿಗಳ ಸ್ವಸ್ಥತೆ ಮತ್ತು ರಕ್ಷಣೆಗಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482