Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 14.12.2022 (Christmas Special)
Share:

By Village Missionary Movement

Tuesday, 13-Dec-2022

ಧೈನಂದಿನ ಧ್ಯಾನ(Kannada) – 14.12.2022 (Christmas Special)

 

ದಂಪತಿಗಳಲ್ಲಿ ಅರ್ಥಪೂರ್ಣವಾದ ಕ್ರಿಸ್ಮಸ್

 

"...ಎಲೈ ಯೋಸೇಫನೇ, ದಾವೀದನ ವಂಶದವನೇ, ನಿನ್ನ ಹೆಂಡತಿಯಾದ ಮರಿಯಳನ್ನು ಸೇರಿಸಿಕೊಳ್ಳುವದಕ್ಕೆ ಅಂಜಬೇಡ..." - ಮತ್ತಾಯ 1:20

 

ಇದು ಜಗತ್ತು ಕಂಡ ಮೊಟ್ಟ ಮೊದಲ ಕ್ರಿಸ್ಮಸ್ ಆಗಿತ್ತು. ದನದ ಕೊಟ್ಟಿಗೆಯೊಳಗೆ, ಮರಿಯ ಮತ್ತು ಯೋಸೆಫ ದಂಪತಿಗಳು, ಬಾಲಕನಾದ ಯೇಸುವನ್ನು ತಮ್ಮ ತೋಳುಗಳಲ್ಲಿ ಒರಗಿಸಿಕೊಂಡು ಆನಂದ ಭಾಗ್ಯವನ್ನು ಪಡೆದವರಾಗಿ ಸಂತೋಷಿದರು. ಯೋಸೆಫನು ಅಷ್ಟೊಂದು ಕೊರತೆಗಳ ಮಧ್ಯದಲ್ಲೂ ಮರಿಯಳನ್ನು ಕೋಮಲವಾಗಿ ನೋಡಿಕೊಳ್ಳಲು ಮತ್ತು ಪರಿಪೂರ್ಣ ಸಂತೋಷವಾಗಿಟ್ಟುಕೊಳ್ಳಲು ಹೇಗೆ ಸಾಧ್ಯವಾಯಿತು ಎಂಬುದನ್ನು ಸ್ವಲ್ಪ Rewind ಮಾಡಿ ನೋಡೋಣ್ವಾ? ಹೊಸ ಒಡಂಬಡಿಕೆಯಲ್ಲಿ ಮೊಟ್ಟ ಮೊದಲು ನೀತಿವಂತನೆಂದು ಪರಿಚಯಿಸಲಾದ ವ್ಯಕ್ತಿ ಯೋಸೆಫನೇ! ಇಷ್ಟು ದೊಡ್ಡ ಅರ್ಹತೆಯನ್ನು ಪಡೆಯಲು ಕಾರಣವೇನು? ಯೋಸೆಫನು ಮರಿಯಳನ್ನು ಅವಮಾನಿಸಲು ಬಯಸಲಿಲ್ಲ. Wow ಎಂಥಾ ದೊಡ್ಡ ಸದ್ಗುಣ! ಎಷ್ಟು ಸಂಸಾರಗಳಲ್ಲಿ ಬಾಳ ಸಂಗಾತಿಯ ಬಳಿ ಕಾಣಲ್ಪಡುವ ಕೊರತೆಗಳನ್ನು ತವರು ಮನೆ, ಗಂಡನ ಮನೆ, ಗೆಳೆಯರ ಬಳಗ ಹೀಗೆ ಎಲ್ಲರ ನಡುವೆ ಒತ್ತಿ ತೋರಿಸಿ ನಿಂದಿಸಿ ಅವಮಾನಿಸುತ್ತಿದ್ದಾರೆ. ಆದರೆ ಯೋಸೆಫನು ಕನಸಿನಲ್ಲಿ ದೊರೆತ ದೇವದೂತನ ಸಲಹೆಯನ್ನು ಅನುಸರಿಸಿ, ಮರಿಯಳನ್ನು ತಳ್ಳಿಬಿಡುವ ಆಲೋಚನೆಯನ್ನು ಬದಿಗಿಟ್ಟು ಅವಳನ್ನು ಸೇರಿಸಿಕೊಳ್ಳುತ್ತಾರೆ. ನಿಸ್ವಾರ್ಥ ಚಿಂತನೆ!

 

ಮರಿಯಳು ಕೂಡ ಅಂತಹ ದೊಡ್ಡ ಅವಮಾನವನ್ನು ಸಹಿಸಿಕೊಳ್ಳಲು ತನ್ನನ್ನು ಒಪ್ಪಿಸಿಕೊಂಡಳು. ಅವಿವಾಹಿತ ಮಹಿಳೆ ಗರ್ಭಿಣಿಯಾಗುವುದು ಯೆಹೂದ್ಯರ ಕಾನೂನಿನಡಿಯಲ್ಲಿ ಪ್ರಾಣಕ್ಕೆ ಬೆಂಕಿ ಹೊತ್ತಿಸಿಕೊಳ್ಳುವುದಕ್ಕೆ ಸಮಾನ. ಕಲ್ಲೆಸೆದು ಸಾಯಿಸಬೇಕಿತ್ತು. ಮರಿಯಳು ತನ್ನ ವೈವಾಹಿಕ ಜೀವನವನ್ನೋ ಅಥವಾ ತನ್ನ ಜೀವವನ್ನೋ ದೊಡ್ಡದಾಗಿ ಪರಿಗಣಿಸದೆ ದೇವರ ಚಿತ್ತವನ್ನು ಮಾಡಲು ನಿಸ್ವಾರ್ಥವಾಗಿ ವರ್ತಿಸಿದಳು. ಹೌದು, ಒಬ್ಬ ವ್ಯಕ್ತಿಯಲ್ಲಿ ಕ್ರಿಸ್ತನು ರೂಪುಗೊಂಡರೆ, ಅವರು ತಮ್ಮ ಅವಮಾನ ಮತ್ತು ನಿಂದೆ ಎಲ್ಲವನ್ನು ದಾಟಿ ಇತರರಿಗೆ ಆಶೀರ್ವಾದವಾಗಿರುತ್ತಾರೆ.

 

ಪ್ರಿಯರೇ! ಯಾರೆಲ್ಲಾ ತಮ್ಮ ಇಚ್ಛೆಯನ್ನು ತ್ಯಜಿಸಿ, ಸ್ವಾರ್ಥಕ್ಕೆ ಸತ್ತು, ದೇವರ ಚಿತ್ತವನ್ನು ಮಾಡುತ್ತಾರೋ ಅವರ ಜೀವನದಲ್ಲಿ ಪ್ರತಿದಿನವೂ ಕ್ರಿಸ್ಮಸ್ ಆಗಿರುತ್ತದೆ. ಕ್ರಿಸ್ತನ ಸ್ವಾರೂಪ್ಯವನ್ನು ಪ್ರತಿಬಿಂಬಿಸುವ ಯಾವುದೇ ಕುಟುಂಬದಲ್ಲಿನ ದಂಪತಿಗಳು ಪ್ರತಿ ದಿನವೂ ತಮ್ಮ ಮನೆಗಳಲ್ಲಿ ಕ್ರಿಸ್ಮಸ್ ನ ಸಂತೋಷವನ್ನು ಹೊಂದಿರುತ್ತಾರೆ. ತಮ್ಮ ಸಂಗಾತಿಗಳ ಸಣ್ಣ ತಪ್ಪುಗಳನ್ನು ಒಪ್ಪಿಕೊಳ್ಳದ ಮತ್ತು ನಾನು ಸರಿ ಎಂದು ಹೇಳುವ ಕಾರಣ ಜಗಳವಾಡುವ, ವಾದಿಸುವ ಮತ್ತು ಕಟುವಾಗಿ ಬದುಕುವ ಕುಟುಂಬಗಳಲ್ಲಿ ಕ್ರಿಸ್ತನು ಇನ್ನೂ ರೂಪುಗೊಂಡಿಲ್ಲ ಎಂದರ್ಥ. ಅಂದರೆ ಅವರ ಸ್ವಾರ್ಥ ಇನ್ನೂ ಸತ್ತಿಲ್ಲ ಎಂದರ್ಥ. ಯೋಸೆಫನು ಮತ್ತು ಮರಿಯಳು ತಮ್ಮ ಇಚ್ಛೆಯನ್ನು ತೊರೆದು, ದೇವರ ಚಿತ್ತವನ್ನು ಮಾಡಲು ಸಮರ್ಪಿಸಿಕೊಂಡಾಗ, ಅವರ ಜೀವನವು ಅರ್ಥಪೂರ್ಣವಾಯಿತು, ಆದರೆ ಅವರು ಇಡೀ ಜಗತ್ತಿಗೆ ಆಶೀರ್ವಾದಕರವಾಗಿ ಮಾರ್ಪಟ್ಟರು. ನಮ್ಮ ಕುಟುಂಬದಲ್ಲಿ ದೇವರ ಚಿತ್ತವನ್ನು ಪೂರೈಸಲು ನಾವು ನಮ್ಮನ್ನು ಸಮರ್ಪಿಸಿಕೊಳ್ಳೋಣವಾ. ನಾವು ಕ್ರಿಸ್ತನಸ್ವಾರೂಪ್ಯವನ್ನು ಬಹಿರಂಗಪಡಿಸುವವರಾಗಿ ಅರ್ಥಪೂರ್ಣವಾದ ಕ್ರಿಸ್ಮಸ್ ಅನ್ನು ಆಚರಿಸೋಣ.

- Mrs. ಎಬನ್ ಸಂತೋಷ್

 

ಪ್ರಾರ್ಥನಾ ಅಂಶ:

ಟ್ಯೂಷನ್ ಸೆಂಟರ್ ಮೂಲಕ ಭೇಟಿಯಾಗುವ ಚಿಕ್ಕಮಕ್ಕಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş holiganbet casibom bets10 extrabet royalbet süperbetin casibom giriş betcio royalbet betpas giriş milanobet bahiscasino betpas bahiscasino atlasbet romabet giriş holiganbet giriş bahiscasino ngsbahis betplay holiganbet jojobet casibom romabet betpas