Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 13.12.2022 (Christmas Special)
Share:

By Village Missionary Movement

Tuesday, 13-Dec-2022

ಧೈನಂದಿನ ಧ್ಯಾನ(Kannada) – 13.12.2022 (Christmas Special)

 

ದಿನ, ದಿನ ...

 

“...ಯಾವನಾದರೂ ಕ್ರಿಸ್ತನಲ್ಲಿದ್ದರೆ ಅವನು ನೂತನಸೃಷ್ಟಿಯಾದನು. ಇಗೋ, ಪೂರ್ವಸ್ಥಿತಿ ಹೋಗಿ ಎಲ್ಲಾ ನೂತನವಾಯಿತು" - 2 ಕೊರಿಂಥ.5.17

 

ಲಂಡನ್ ನಗರದ ಸಮೀಪವಿರುವ ಒಂದು ಸಣ್ಣ ಹಳ್ಳಿಯಲ್ಲಿ, ಪ್ರತಿ ವರ್ಷ ಕ್ರಿಸ್‌ಮಸ್ ಹಿಂದಿನ ರಾತ್ರಿ, ಕ್ರಿಸ್ತನ ಜನನದ ಬಗ್ಗೆ ನಾಟಕ ಪ್ರದರ್ಶಿಸುವುದು ಒಂದು ಅಭ್ಯಾಸವಾಗಿತ್ತು. ಗ್ರಾಮಸ್ಥರೇ ಇದರಲ್ಲಿ ನಟರಾಗಿ ನಟಿಸುತ್ತಿದ್ದರು. ಆ ವರ್ಷ, ವಾಲೇಸ್ ಎಂಬ ಯುವಕ ಹೊಸದಾಗಿ ನಾಟಕದಲ್ಲಿ ನಟಿಸಲು ಬಯಸಿದನು ಮತ್ತು ನಾಟಕ ನಿರ್ದೇಶಕರ ಬಳಿ ನಟಿಸಲು ಅನುಮತಿ ಕೇಳಿದನು ಮತ್ತು ಕುರುಬನ ಪಾತ್ರವನ್ನು ಮಾಡುವ ಬಯಕೆಯನ್ನು ವ್ಯಕ್ತಪಡಿಸಿದನು. ಆದರೆ ನಾಟಕದ ನಿರ್ದೇಶಕರು "ನೀನು ಸಾಕಷ್ಟು ಎತ್ತರ ಇದ್ದೀಯ, ಕುರುಬರ ಪಾತ್ರವನ್ನು ಏಕೆ ಮಾಡಬೇಕೆಂದು ಬಯಸುತ್ತಿದ್ದೀಯ?" ಎಂದು ಕೇಳಿದರು. ವಾಲೇಸ್ “ಅಯ್ಯಾ, ಕುರುಬರಿಗೆ ಮೊಟ್ಟ ಮೊದಲು ಯೇಸುವನ್ನು ನೋಡುವ ಭಾಗ್ಯ ದೊರೆಯಿತು. ಅದಕ್ಕೇ" ಎಂದು ಹೇಳಿದನು. "ನೀನು ಛತ್ರದವರ ಪಾತ್ರದಲ್ಲಿ ನಟಿಸು" ಎಂದು ನಿರ್ದೇಶಕರು ಹೇಳಿದರು. ವಾಲೇಸ್ ತಲೆ ಅಲ್ಲಾಡಿಸಿದ. ಅಭ್ಯಾಸ ಮುಗಿದು ನಾಟಕದ ದಿನ ಬಂತು.

 

ಸ್ಥಳೀಯ ಚರ್ಚ್‌ನಲ್ಲಿ ಬೋಧಕರು ಪ್ರಾರ್ಥಿಸುವ ಮೂಲಕ ನಾಟಕಕ್ಕೆ ತೆರೆ ಎಳೆದರು. ವಾಲೇಸ್ ಛತ್ರದವರಂತೆ ನಟಿಸುತ್ತಾ, ಸ್ವಾಗತ ಕೊಠಡಿಯಲ್ಲಿ ಕೆಲಸಗಾರರನ್ನು ನೇಮಿಸಿಕೊಳ್ಳುತ್ತಿದ್ದನು. ಆ ಸಮಯದಲ್ಲಿ ಮರಿಯಳು ಮತ್ತು ಯೋಸೆಫನು ದೀರ್ಘ ಪ್ರಯಾಣದ ನಂತರ ವಿಶ್ರಾಂತಿಗೆ ಸ್ಥಳ ದೊರೆಯುತ್ತದಾ ಎಂಬ ಹಂಬಲದಿಂದ ಛತ್ರದ ಬಳಿ ಬಂದರು. ಛತ್ರದವನಾದ ವಾಲೇಸ್ ಬಳಿ, ನನ್ನ ಹೆಂಡತಿ ತುಂಬುಗರ್ಭಿಣಿ. ಇರಲು ಜಾಗ ಸಿಗುತ್ತದೆಯೇ?'' ಎಂದು ಕೇಳಿದರು. ಅದಕ್ಕೆ ಛತ್ರದವನು “ಇಲ್ಲಿ ಜಾಗವಿಲ್ಲ. "ನೀವು ಹೋಗಬಹುದು" ಎಂದು ಕಠೋರವಾಗಿ ಹೇಳಿದರು. ಯೋಸೆಫನು ಮತ್ತು ಮರಿಯಳು ದುಃಖಿಸುತ್ತಿದ್ದಂತೆ ವಾಲೇಸ್‌ನ ಹೃದಯ ಕರಗಿತು. ಅಯ್ಯೋ ಈ ರೀತಿ ಮಾತನಾಡಿಬಿಟ್ಟೆನೆ ಎಂದು ವಿಷಾದ ವ್ಯಕ್ತಪಡಿಸಿದರು. ತಕ್ಷಣವೇ ವಾಲೇಸ್, “ಯೋಸೆಫ್ ನೀವು ಹೋಗಬೇಡಿ. ನನ್ನ ಕೋಣೆಯಲ್ಲಿ ಇದ್ದುಕೊಳ್ಳಿರಿ. ಯೇಸು ಇಂದು ನನ್ನ ಮನೆಯಲ್ಲಿ ಹುಟ್ಟಲಿ" ಎಂದು ಹೇಳಿದನು. ಇದನ್ನು ನೋಡಿದ ನಾಟಕದ ನಿರ್ದೇಶಕರು "ವಾಲೇಸ್ ನೀನು, ನಾಟಕವನ್ನು ಹಾಳು ಮಾಡಿಬಿಟ್ಟೇ" ಎಂದು ಕೂಗಿದರು. ಅವರು ಹೇಗೋ ನಿಭಾಯಿಸಿ ಮುಂದಿನ ದೃಶ್ಯಕ್ಕೆ ತೆರಳಿದರು. ನಾಟಕ ಮುಗಿಯಿತು.

 

ಕೊನೆಯಲ್ಲಿ ಆ ಹಳ್ಳಿಯ ನಾಯಕರು ಹೇಳಿದರು, “ವರ್ಷಾವರ್ಷ ನಾವು ಈ ನಾಟಕವನ್ನು ನೋಡುತ್ತಿದ್ದೇವೆ. ಆದರೆ ಇಂದು ಸಹೋದರ ವಾಲೇಸ್ ಹೇಳಿದ ಮಾತುಗಳು ನಮ್ಮೆಲ್ಲರನ್ನು ಯೋಚಿಸುವಂತೆ ಮಾಡಿತು. ಹೌದು, ಯೇಸು ನನ್ನ ಮನೆಯಲ್ಲಿ ಹುಟ್ಟಲಿ ಎಂದು ಅವರು ಹೇಳಿದ್ದು ಎಷ್ಟು ಅದ್ಭುತವಾಗಿದೆ. ಇಂದು ನಮ್ಮ ಹೃದಯದಲ್ಲಿ ಯೇಸು ಜನಿಸಲು ನಮ್ಮನ್ನು ಅರ್ಪಿಸಿಕೊಳ್ಳೋಣ ” ಹೌದು, ಪ್ರಿಯರೇ! ಕ್ರಿಸ್‌ಮಸ್ ಹಬ್ಬವನ್ನು ವರ್ಷಕ್ಕೊಮ್ಮೆ ಆಚರಿಸುವುದು ಮಾತ್ರವಲ್ಲ, ಯೇಸು ನಮ್ಮಲ್ಲಿ ಜನಿಸಿದನು ಮತ್ತು ಕ್ರಿಸ್ತನು ನಮ್ಮ ಜೀವನದಲ್ಲಿ ಜನಿಸಿದನು ಎಂಬ ಅಪಾರ ಸಂತೋಷವನ್ನು ನಾವು ತುಂಬಿಕೊಳ್ಳೋಣ. ಅದೇ ಅರ್ಥಪೂರ್ಣವಾದ ಕ್ರಿಸ್ಮಸ್.

- D. ಆಲ್ವಿನ್ ಜಾಕೋಬ್

 

ಪ್ರಾರ್ಥನಾ ಅಂಶ:

ಉಜ್ಜೀವನ ಯೌವನಸ್ಥರ ಯುವ ಸಂಜೆಯಲ್ಲಿ ಭಾಗವಹಿಸಿದ ಯುವಕರು ಅಂತ್ಯಕಾಲದ ಉಜ್ಜೀವನದ ಅಸ್ತ್ರಗಳಾಗಿ ದೇವರ ಹಸ್ತದಲ್ಲಿ ಉಪಯೋಗವಾಗುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al