Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 11.12.2022 (Kids Special)
Share:

By Village Missionary Movement

Saturday, 10-Dec-2022

ಧೈನಂದಿನ ಧ್ಯಾನ(Kannada) – 11.12.2022 (Kids Special)

 

ಪ್ರೀತಿಯಲ್ಲಿ ಅರ್ಥಪೂರ್ಣವಾದ ಕ್ರಿಸ್ಮಸ್

 

"ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು” - ಯೋಹಾನ 3.16

 

ಹಲೋ ಪುಟಾಣಿಗಳೇ! ಕ್ರಿಸ್ಮಸ್ ಕಾರ್ಯಕ್ರಮ ಹೇಗೆ ನಡೆಯುತ್ತಿದೆ? ನೀವು ಜಾಲಿಯಾಗಿದ್ದೀರಾ Ok ... ಅರ್ಥಪೂರ್ಣವಾದ ಕ್ರಿಸ್ಮಸ್ ಆಚರಿಸಲು ಪಕ್ಷಿಗಳು ಮತ್ತು ಪ್ರಾಣಿಗಳು ಇಂದು ನಮಗೆ ಹೇಳಿಕೊಡಲಿರುವ ಕಥೆಯನ್ನು ಕೇಳೋಣವಾ?

 

ಕಾಡಿನ ರಾಜ ಇದ್ದಕ್ಕಿದ್ದಂತೆ ಒಂದು ಸಭೆ ಸೇರಿಸಿತು. ಒಳ್ಳೆಯವನೂ ಪ್ರೀತಿಯುಳ್ಳವನೂ ಆಗಿರುವ ದೇವಭಯವುಳ್ಳ ರಾಜನು ಹೇಳಿದಾಗ ಎಲ್ಲಾ ಪ್ರಾಣಿಗಳು ಒಂದೆಡೆಗೆ ಬಂದು ಸೇರಿದವು. ಇದ್ದಕ್ಕಿದ್ದಂತೆ ಆನೆ ಈ ಸಭೆ ಏಕೆ ಎಂದು ಕೇಳಿತು. ಎರಡು ವರ್ಷಗಳಿಂದ ನಮ್ಮ-ಪಕ್ಷಿಗಳ ಕಾಳಗದಿಂದ ಕ್ರಿಸ್ ಮಸ್ ಆಚರಣೆಯೇ ಇರಲಿಲ್ಲ. ಈ ವರ್ಷ ಎಲ್ಲರೂ ಒಟ್ಟಾಗಿ ಕ್ರಿಸ್‌ಮಸ್ ಆಚರಿಸಬೇಕೆಂದು ರಾಜ ಬಯಸುತ್ತಿದ್ದಾರೆ ಎಂದು ಹೇಳಿತು ಜಿಂಕೆ. ತಕ್ಷಣ ಮಂಗ, ಜಿಂಕೆ, ಮೊಲ ಮುಂತಾದ ಪ್ರಾಣಿಗಳೆಲ್ಲವೂ ಹೌದು...ಹೌದು... ಎಂದವು. ಸಿಂಹವು ಬಂದಾಗ, ಆರಂಭಿಕ ಪ್ರಾರ್ಥನೆ ಮತ್ತು ಸ್ವಾಗತದ ನಂತರ, ರಾಜನು ಮಾತನಾಡಲು ಪ್ರಾರಂಭಿಸಿದನು. ಇಂದಿನಿಂದ ಕಾಡಿನಲ್ಲಿ ಜಗಳ, ದ್ವೇಷ ಎಲ್ಲಾ ಇರಬಾರದು. ಪ್ರತಿಯೊಬ್ಬರೂ ಪರಸ್ಪರ ಸಹಾಯ ಮಾಡಬೇಕು ಮತ್ತು ದಯೆ ತೋರಬೇಕು ಎಂದಿತು. ಎಲ್ಲಾ ಪ್ರಾಣಿಗಳು ಹೌದು ಎಂದು ಕೋರಸ್ ಹಾಡಿದವು.

 

ಅಷ್ಟರಲ್ಲಿ ಕಾಗೆ ಹಾರಿಹೋಯಿತು, “ಸಭೆ ನಡೆಯುತ್ತಿದೆ. ಅವರು ನಮ್ಮನ್ನು ಆಹ್ವಾನಿಸಲಿಲ್ಲವಲ್ಲಾ" ಎಂದು ಪಾರಿವಾಳಕ್ಕೆ ಹೇಳಿತು. ಸರಿ ನಾವು ಎಲ್ಲಾ ಪಕ್ಷಿಗಳನ್ನು ಕರೆದುಕೊಂಡು ಹೋಗೋಣ ಎಂದು ಕರೆ ನೀಡಿತು. ನಾಯಕರೇ ನಮಗೆ ಸಭೆ ಎಂದು ಹೇಳೇ ಇಲ್ಲ ಎಂದು ಕಾಗೆ ಹೇಳಿತು. ನೀವು ಬಂದರೇನೆ ಗೊಂದಲ ಎಂದು ಕರಡಿ ಹೇಳಿತು. ನಾವು ಏನು ಮಾಡಿದೋ ಎಂದು ಪಕ್ಷಿಗಳೆಲ್ಲಾ ಕಿರುಚಾಡುತ್ತಿವೆ. ಸಿಂಹ ಘರ್ಜಿಸಿದಾಗ ಎಲ್ಲವೂ ಸ್ತಬ್ಧವಾಯಿತು. ತಂದೆಯು ನಮ್ಮನ್ನು ಪ್ರೀತಿಸಿ ತನ್ನ ಮಗನನ್ನು ಈ ಭೂಮಿಗೆ ಕಳುಹಿಸಿದ ದಿನ ಕ್ರಿಸ್ಮಸ್. ನಾವು ಕೋಪ ಮತ್ತು ದ್ವೇಷದಿಂದ ಕ್ರಿಸ್‌ಮಸ್ ಅನ್ನು ಆಚರಿಸಬಹುದಾ?

 

ನಾವೆಲ್ಲರೂ ನಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಅರ್ಥಪೂರ್ಣವಾದ ಕ್ರಿಸ್‌ಮಸ್ ಅನ್ನು ಪ್ರೀತಿ ಮತ್ತು ಏಕತೆಯಿಂದ ಆಚರಿಸಲಿದ್ದೇವೆ ಎಂಬ ರಾಜನ ಘರ್ಜನೆಯನ್ನು ಕೇಳಿದ ಕೂಡಲೇ... ಪ್ರಾಣಿಗಳು ಮತ್ತು ಪಕ್ಷಿಗಳು ನಾವೂ ಸಹ ಹಾಗೇ ಮಾಡುತ್ತೇವೆ ಎಂದಿತು.

 

ಪುಟ್ಟ ತಮ್ಮ-ತಂಗಿ, ನೀವು ಕ್ರಿಸ್ಮಸ್ ಅನ್ನು ಹೇಗೆ ಆಚರಿಸಲಿದ್ದೀರಿ? ಜಗಳವಾಡಿದ ನಂತರ ಮತ್ತೆ ಅವರನ್ನ ಕ್ಷಮಿಸಲು ಸಾಧ್ಯವಾಗುತ್ತಿಲ್ಲವೇ? ತಕ್ಷಣವೇ ಕ್ಷಮಿಸಿರಿ ಮತ್ತು ಪ್ರೀತಿಯಿಂದ ಅರ್ಥಪೂರ್ಣವಾದ ಕ್ರಿಸ್ಮಸ್ ಅನ್ನು ಆಚರಿಸಿರಿ. ಪ್ರೀತಿಯ ದೇವರು ನಿಮ್ಮ ಆಚರಣೆಯಲ್ಲಿ ಸಂತೋಷಪಡುತ್ತಾರೆ. Ok ಪುಟಾಣಿಗಳೇ. Advance Happy Christmas.

- Mrs. ಅನ್ಬುಜ್ಯೋತಿ ಸ್ಟಾಲಿನ್

 

"ಅದು ಅನ್ಯಜನರನ್ನು ಬೆಳಗಿಸುವ ಬೆಳಕೂ ನಿನ್ನ ಪ್ರಜೆಯಾದ ಇಸ್ರಾಯೇಲ್ಯರ ಮಹಿ ಮೆಯೂ..."

- ಲೂಕ 2:32

 

ಯೇಸುಕ್ರಿಸ್ತನ ಜನನವನ್ನು ನೆನಪಿಸಿಕೊಳ್ಳುವುದಕ್ಕಾಗಿ ಈ ತಿಂಗಳು ಕ್ರಿಸ್ಮಸ್ ಆಚರಿಸಲಿದ್ದೇವೆ. ನಾವು ಅದನ್ನು ಹೇಗೆ ನೆನಪಿಸಿಕೊಳ್ಳುತ್ತೇವೆ ಎಂದು ಯೋಚಿಸೋಣವಾ. ಕ್ರಿಸ್‌ಮಸ್ ಎಂದರೆ ಹೊಸ ಬಟ್ಟೆ ಧರಿಸಿ, ಬಗೆಬಗೆಯ ಕೇಕ್, ಸಿಹಿ ತಿಂಡಿ ತಿಂದು, ಬಗೆಬಗೆಯ ಬಿರಿಯಾನಿ ತಿಂದು, ಮದ್ಯಪಾನ ಮಾಡಿ ನಮ್ಮ ಸಂತೋಷವನ್ನು ಸ್ನೇಹಿತರೊಂದಿಗೆ ಆಚರಿಸುವುದೆಲ್ಲಾ ಕ್ರಿಸ್ಮಸ್ ಆಗಿಬಿಡೋದಿಲ್ಲಾ. ಇದೇನಾ ಕ್ರಿಸ್ಮಸ್ ಆಚರಣೆ? ಕ್ರಿಸ್ತನ ಜನನದ ಸುವಾರ್ತೆಯನ್ನು ಅನ್ಯಜನರಿಗೆ ಪ್ರಕಟಿಸುವುದು ಹೀಗೇನಾ! ದೇವರು ಬಯಸುವುದು ಇದೇನಾ?

ಅನ್ಯಜನರೂ ಸಹ ಹೊಸ ಬಟ್ಟೆ ಧರಿಸಿ, ಔತಣ, ಆಹಾರ ಸೇವಿಸಿ, ವಿವಿಧ ರೀತಿಯ ಮೋಜು, ಮಸ್ತಿ, ಮದ್ಯಪಾನ, ಮೋಜು ಮಸ್ತಿಯಲ್ಲಿ ದಿನ ಕಳೆಯುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ. ಕ್ರಿಸ್ತ ಜನ್ಮದ ಹಬ್ಬವನ್ನೂ ಹೀಗೆಯೇ ಆಚರಿಸುತ್ತೇವೆ. ಅವರಿಗೂ ನಮಗೂ ಯಾವ ವ್ಯತ್ಯಾಸವನ್ನು ತೋರಿಸುತ್ತಿದ್ದೇವೆ?

ದೇವರ ರಾಜ್ಯವು ತಿನ್ನುವುದು ಮತ್ತು ಕುಡಿಯುವುದು ಅಲ್ಲ, ಅದು ನೀತಿಯೂ, ಸಮಾಧಾನವೂ, ಪವಿತ್ರಾತ್ಮದಿಂದುಟಾಗುವ ಸಂತೋಷವಾಗಿದೆ ಎಂದು ಸತ್ಯವೇದವು ಹೇಳುತ್ತಿದೆ. ನಾವು ಆತನ ನೀತಿಯನ್ನು ಮತ್ತು ಸಮಾಧಾನವನ್ನು ತಿಳಿಯದ ಜನರಿಗೆ ಒತ್ತಿ ಹೇಳುತ್ತಿದ್ದೇವೆಯೇ? ಅವರು ಲೋಕಕ್ಕೆ ಬೆಳಕಾಗಿದ್ದಾರಲ್ಲಾ, ಆ ನಿಜವಾದ ಬೆಳಕನ್ನು ತಿಳಿಯದ ಜನರಿಗೆ ಪರಿಚಯಿಸುತ್ತಿದ್ದೇವೆಯೇ? ನಾವು, ಇತರರಂತೆ, ಕೇವಲ ಆಚರಣೆಯಲ್ಲಿ ಪಾಲ್ಗೊಳ್ಳದೆ, ಇತರರಿಗೆ ಕ್ರಿಸ್ತನನ್ನು ಉಡುಗೊರೆಯಾಗಿ ನೀಡೋಣ. ಇದು ಅರ್ಥಪೂರ್ಣ ಕ್ರಿಸ್ಮಸ್ ಆಗಿರುತ್ತದೆ.

ಕ್ರಿಸ್‌ಮಸ್‌ಗೆ ಯಾವ ಸೀರೆ, ಬಟ್ಟೆ, ಆಭರಣಗಳನ್ನು ಖರೀದಿಸಬೇಕು ಎಂದು ಯೋಚಿಸುವ ಬದಲು ಕ್ರಿಸ್ತನನ್ನು ಯಾರು ಯಾರಿಗೆ ಪರಿಚಯಿಸಬಹುದು ಎಂದು ಯೋಚಿಸೋಣ. ಕಣ್ಣಿಗೆ ಬೀಳುವ ಬಡ ಮಕ್ಕಳಿಗೆ ಉತ್ತಮ ಆಹಾರ ಮತ್ತು ಉತ್ತಮ ಬಟ್ಟೆಗಳನ್ನು ನೀಡೋಣ. ಹೀಗೆ ಮಾಡುವ ಮೂಲಕ ನಾವು ಅವರಿಗೆ ಕ್ರಿಸ್ತನ ನಿಸ್ವಾರ್ಥ ಪ್ರೀತಿಯನ್ನು ಬಹಿರಂಗಪಡಿಸಬಹುದು. ಇದು ಯೇಸು ಕ್ರಿಸ್ತನು ಬಯಸುತ್ತಿರುವ ಕ್ರಿಸ್ಮಸ್. ಹೀಗೆ ಮಾಡಲು ನಮ್ಮನ್ನು ಸಮರ್ಪಿಸೋಣವಾ?

 -Mrs. ಭುವನಾ ಧನಪಾಲನ್

 

ಪ್ರಾರ್ಥನಾ ಅಂಶ:

ಒಂದು ಗ್ರಾಮದಲ್ಲಿ ವಿಶೇಷ ಕ್ರಿಸ್ಮಸ್ ಕಾರ್ಯಕ್ರಮಗಳನ್ನು ನಡೆಸಲು ರೂ.5000/- ಅಗತ್ಯವಿದೆ. 3000 ಗ್ರಾಮಗಳಲ್ಲಿ ನಡೆಸಲು ಯೋಜನೆಹಾಕಿದ್ದೇವೆ. ದೇವರು ಜವಾಬ್ದಾರಿ ತೆಗೆದುಕೊಳ್ಳುವಂತೆ ಪ್ರಾರ್ಥಿಸಿರಿ.

ಹೌದು, ಈ ಕ್ರಿಸ್ಮಸ್ ಸಂದರ್ಭದಲ್ಲಿ ನಮ್ಮನ್ನು ಸಮಾಧಾನದ ಹೊಸ್ತಿಲಿಗೆ ತಂದು ನಿಲ್ಲಿಸುವ ಕಾಲ. ಆದುದರಿಂದ ದೇವರಿಂದ ಇದಕ್ಕೆ ಬೇಕಾದ ಕೃಪೆಯನ್ನು ಪಡೆದು ತಡಮಾಡದೆ ಕಾರ್ಯಪ್ರವೃತ್ತರಾಗೋಣ. ಸಾಲದ್ದಕ್ಕೆ ಫಾರ್ವರ್ಡ್ ಮಾಡಿದ Message ಅನ್ನು ಕಲಳುಹಿಸುವ ಬದಲು ಖುದ್ದಾಗಿ ಹೋಗಿ ಪ್ರೀತಿ ಹಂಚೋಣ. ಈ ಕ್ರಿಸ್ಮಸ್ ಕಾಲವು ನಮ್ಮ ಕುಟುಂಬಗಳಲ್ಲಿ ಅರ್ಥಪೂರ್ಣವಾದ ಕ್ರೈಸ್ತರಾಗಿ ಬದುಕಲು ನಮಗೆ ಸಹಾಯ ಮಾಡಲಿ.

- Mrs.ಐಡಾ ಕಿಂಗ್ ಡೇವಿಡ್ 

 

ಪ್ರಾರ್ಥನಾ ಅಂಶ:

ಮನೆ ಪ್ರಾರ್ಥನಾ ಗುಂಪುಗಳನ್ನು ನಡೆಸಲು ತಮ್ಮ ಮನೆಗಳನ್ನು ತೆರೆದುಕೊಡುತ್ತಿರುವ ಕುಟುಂಬಗಳ ಆಶೀರ್ವಾದಕ್ಕಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin