By Village Missionary Movement
Thursday, 08-Dec-2022ಧೈನಂದಿನ ಧ್ಯಾನ(Kannada) – 09.12.2022 (Christmas Special)
ಸ್ವಂತ ಸಹೋದರರ ನಡುವೆ ಅರ್ಥಪೂರ್ಣವಾದ ಕ್ರಿಸ್ಮಸ್
"...ತಾನು ಕಂಡಿರುವ ತನ್ನ ಸಹೋದರನನ್ನು ಪ್ರೀತಿಸದವನು ತಾನು ಕಾಣದಿರುವ ದೇವರನ್ನು ಪ್ರೀತಿಸಲಾರನು” - 1 ಯೋಹಾನ.4.20
ಇಂದು ನಾವು ಆದಿಕಾಂಡದಲ್ಲಿರುವ ಇಬ್ಬರು ವಿಭಿನ್ನ ಸಹೋದರರ ಬಗ್ಗೆ ನೋಡೋಣ. ಒಂದು ಏಸಾವ-ಯಾಕೋಬ! ಏಸಾವನು ತನ್ನನ್ನು ವಂಚಿಸಿದ ಮತ್ತು ಅವನ ಎಲ್ಲಾ ಆಶೀರ್ವಾದಗಳನ್ನು ಕಸಿದುಕೊಂಡ ಯಾಕೋಬನನ್ನು ಸ್ವಾಗತಿಸಲು ಬರುತ್ತಾರೆ. ತನ್ನ ಸಹೋದರನ ಬಗ್ಗೆ ಯಾಕೋಬನ ಹೃದಯದಲ್ಲಿದ್ದ ಭಯದ ಕಾರಣದಿಂದಾಗಿ, ಅವನು ಮುಂದೆ ಕಾಣಿಕೆಗಳನ್ನು ಕಳುಹಿಸುತ್ತಾನೆ (ಆದಿ. 31) ಆದರೆ ಏಸಾವನು ಎಲ್ಲಾ ಹಳೆಯ ವಂಚನೆಗಳನ್ನು ಕ್ಷಮಿಸಿದ್ದರಿಂದ, ಅವನ ಕುತ್ತಿಗೆಯನ್ನು ಹಿಡಿದು ತಬ್ಬಿಕೊಂಡು ಅಳುತ್ತಾನೆ. ಯಾಕೋಬನು ಕಾಣಿಕೆಗಳನ್ನು ಪಡೆಯಬೇಕೆಂದು ಒತ್ತಾಯಿಸಿದಾಗ ಏಸಾವನು, "ನನ್ನ ಸಹೋದರನೇ, ನನಗೆ ಬೇಕಾದಷ್ಟು ಇದೆ" ಎಂದು ಹೇಳುತ್ತಾರೆ. ಹೌದು, ನಾವು ನಮ್ಮ ಸಹೋದರ ಸಹೋದರಿಯರನ್ನು ಕ್ಷಮಿಸಿ ಮತ್ತು ಸ್ವೀಕರಿಸಿದಾಗ, ದೇವರು ನಮ್ಮ ಕೊರತೆಗಳನ್ನು ಕ್ಷಮಿಸಿ ಸ್ವೀಕರಿಸುತ್ತಾರೆ ಮತ್ತು ನಮ್ಮನ್ನು ಆಶೀರ್ವದಿಸುತ್ತಾರೆ. ಎರಡನೆಯದಾಗಿ, ಕಾಯಿನನು-ಹೇಬೆಲನು. ದೇವರು ಹೇಬೆಲನ ಕಾಣಿಕೆಯನ್ನು ಸ್ವೀಕರಿಸಿದ ಕಾರಣ, ಕಾಯಿನನು ಅಸೂಯೆ ಮತ್ತು ಕೋಪಗೊಂಡನು. ಅವನ ಆಶೀರ್ವಾದವನ್ನು ಸ್ವೀಕರಿಸಲು ಸಾಧ್ಯವಾಗದ ಕಾರಣ ಅವನು ಹೇಬೆಲನನ್ನು ಕೊಂದನು. ಇದಲ್ಲದೆ, ಅವನು ದೇವರಿಂದ ಶಾಪವನ್ನು ಪಡೆದನು. ನೋಡಿರಿ! ಒಂದುಕಡೆ ಮೋಸ ಮಾಡಿದ ಯಾಕೋಬನನ್ನು ಕ್ಷಮಿಸಿ ಸ್ವೀಕರಿಸಿದ ಸಹೋದರ. ಮತ್ತೊಂದೆಡೆ ಏನೂ ಅರಿಯದ ಸಹೋದರನನ್ನು ಕೊಲ್ಲಲು ಧೈರ್ಯಮಾಡಿದ ಕಾಯಿನನು.
ಈ ಲೋಕವನ್ನು ನೋಡುವುದಾದರೆ ಸಹೋದರರಲ್ಲಿ ಕೋಪ, ಅಸೂಯೆ, ಮೋಸ, ದ್ವೇಷ, ಸಿಡುಕು, ಮತ್ಸರಗಳು ಹೆಚ್ಚಾಗುತ್ತಿರುವುದನ್ನು ನಡೆಯುತ್ತಿರುವ ಘಟನೆಗಳಿಂದ ತಿಳಿಯುತ್ತಿದೆ. ನಾಶವಾಗುವ ಮತ್ತು ಸ್ಥಿರವಲ್ಲದ ವಿಷಯಗಳಿಗೆ ನ್ಯಾಯಾಲಯದ ಮೊರೆ ಹೋಗುತ್ತಾರೆ. ಒಬ್ಬರ ತಪ್ಪನ್ನು ಇನ್ನೊಬ್ಬರು ಕ್ಷಮಿಸಲಾರದ ಸ್ಥಿತಿಯಲ್ಲಿ ನಾವಿದ್ದೇವೆ. ಆ ದಿನ ಕಾಯಿನನು ಹೇಬೆಲನನ್ನು ಕಲ್ಲಿನಿಂದ ಕೊಂದನು. ಇಂದು ನಾವು ಅದನ್ನು ಒಂದೇ ಪದದಲ್ಲಿ ಮಾಡುತ್ತೇವೆ. ನಾವು ಸಮಾಧಾನವಿಲ್ಲದೆ ಸಹೋದರರ ನಡುವೆ ಜಗಳವಾಡಿದರೆ ಅವರು ನಮ್ಮ ಕಾಣಿಕೆಯನ್ನು ಸಹ ಗುರುತಿಸುವುದಿಲ್ಲ. ಮೊದಲು ಹೋಗಿ ನಿನ್ನ ಸಹೋದರನೊಂದಿಗೆ ಸಮಾಧಾನವಾಗು, ನಂತರ ಬಂದು ನಿನ್ನ ಕಾಣಿಕೆಯನ್ನು ಕೊಡು ಎಂದು ಹೇಳುತ್ತಾರೆ. ಹಾಗಾಗಿ ನಾವು ಕೇಳಬಹುದು, “ನನ್ನ ಕಡೆ ಯಾವ ತಪ್ಪೂ ಇಲ್ಲ, ಅವನು ಅನ್ಯಾಯವಾಗಿ ಮಾತನಾಡಿದನು. ಅವನೇ ಬಂದು ಕ್ಷಮೆ ಕೇಳಲಿ, ನಾನು ಕ್ಷಮಿಸುತ್ತೇನೆ" ಅಂಥಾ! ಹೀಗೆ "ಯಾರು ಮೊದಲು" ಎಂಬ ಪ್ರಶ್ನೆ ಬಂದಾಗ ನೆನಪಿಡುವ ಒಂದು ವಿಷಯವಿದೆ. ಇವರಿಬ್ಬರಲ್ಲಿ ಯಾರು ಹೆಚ್ಚು ಆಧ್ಯಾತ್ಮಿಕವಾಗಿದ್ದಾರೋ ಅವರು ಮೊದಲು ಸಮಾಧಾನಕ್ಕಾಗಿ ಪ್ರಯತ್ನಗಳನ್ನು ಮಾಡಬೇಕು.
ಹೌದು, ಈ ಕ್ರಿಸ್ಮಸ್ ಸಂದರ್ಭದಲ್ಲಿ ನಮ್ಮನ್ನು ಸಮಾಧಾನದ ಹೊಸ್ತಿಲಿಗೆ ತಂದು ನಿಲ್ಲಿಸುವ ಕಾಲ. ಆದುದರಿಂದ ದೇವರಿಂದ ಇದಕ್ಕೆ ಬೇಕಾದ ಕೃಪೆಯನ್ನು ಪಡೆದು ತಡಮಾಡದೆ ಕಾರ್ಯಪ್ರವೃತ್ತರಾಗೋಣ. ಸಾಲದ್ದಕ್ಕೆ ಫಾರ್ವರ್ಡ್ ಮಾಡಿದ Message ಅನ್ನು ಕಲಳುಹಿಸುವ ಬದಲು ಖುದ್ದಾಗಿ ಹೋಗಿ ಪ್ರೀತಿ ಹಂಚೋಣ. ಈ ಕ್ರಿಸ್ಮಸ್ ಕಾಲವು ನಮ್ಮ ಕುಟುಂಬಗಳಲ್ಲಿ ಅರ್ಥಪೂರ್ಣವಾದ ಕ್ರೈಸ್ತರಾಗಿ ಬದುಕಲು ನಮಗೆ ಸಹಾಯ ಮಾಡಲಿ.
- Mrs.ಐಡಾ ಕಿಂಗ್ ಡೇವಿಡ್
ಪ್ರಾರ್ಥನಾ ಅಂಶ:
ಮನೆ ಪ್ರಾರ್ಥನಾ ಗುಂಪುಗಳನ್ನು ನಡೆಸಲು ತಮ್ಮ ಮನೆಗಳನ್ನು ತೆರೆದುಕೊಡುತ್ತಿರುವ ಕುಟುಂಬಗಳ ಆಶೀರ್ವಾದಕ್ಕಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482