Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 08.12.2022 (Christmas Special)
Share:

By Village Missionary Movement

Wednesday, 07-Dec-2022

ಧೈನಂದಿನ ಧ್ಯಾನ(Kannada) – 08.12.2022 (Christmas Special)

 

ಕಲಿಸಿಕೊಡುವುದರಲ್ಲಿ ಅರ್ಥವುಳ್ಳ ಕ್ರಿಸ್ಮಸ್

 

"ನೀವು ಹೋಗಿ - ನನಗೆ ಯಜ್ಞವು ಬೇಡ, ಕರುಣೆಯೇಬೇಕು ಎಂಬ ಮಾತಿನ ಅರ್ಥವನ್ನು ಕಲಿತುಕೊಳ್ಳಿರಿ..." - ಮತ್ತಾಯ 9:13

 

ಎರಡನೇ ಮಹಾಯುದ್ಧದ ಉತ್ತುಂಗವನ್ನು ತಡೆದಿದ್ದ ಸಮಯ! ಯೆಹೂದ್ಯರು ಮತ್ತು ಯೆಹೂದಿ ರಬಿಗಳು ದೇವಾಲಯದಲ್ಲಿ ಪ್ರಾರ್ಥನೆ ಮಾಡುತ್ತಿದ್ದರು. ಆಗ ಒಬ್ಬ ಹೊಸ ವ್ಯಕ್ತಿ ಹರಿದ ಬಟ್ಟೆಗಳು ಮತ್ತು ದೇಹದ ಮೇಲೆ ರಕ್ತಸಿಕ್ತ ಗಾಯಗಳೊಂದಿಗೆ ದೇವಾಲಯದೊಳಗೆ ಓಡಿ ಬಂದನು. ಅಲ್ಲಿ ಪ್ರಾರ್ಥನೆ ಮಾಡುತ್ತಿದ್ದವರನ್ನು ನೋಡಿ, ನಾವು ನಿಮಗಾಗಿ ಅಲ್ಲಿ ಹೋರಾಡುತ್ತಿದ್ದೇವೆ, ನೀವೂ ಬನ್ನಿ ಎಂದು ಕರೆ ನೀಡಿದನು. ಸಾಮಾನ್ಯವಾಗಿ ನಾವು ಇದು ಪ್ರಾರ್ಥನೆ ಮಾಡುವ ಸಮಯ ಎಂದು ಅಲ್ಲಿನ ಜನರು ಹೇಳಿದರು. ಆಗ ಎಲ್ಲಿಂದಲೋ ಒಂದು ಧ್ವನಿ ಕೇಳಿಸಿತು, "ಹೋಗಿ ಅವರ ಜೊತೆ ಹೋರಾಡಿರಿ" ಎಂದು.

 

ಅದು ಹಬ್ಬದ ತಿಂಗಳು! ಒಂದೆಡೆ ಕ್ರಿಸ್‌ಮಸ್‌ಗೆ ತಯಾರಿ ನಡೆಸುತ್ತಿರುವ ಕ್ರೈಸ್ತರ ದಂಡು, ಇನ್ನೊಂದೆಡೆ ಹೊಸ ವರ್ಷಾಚರಣೆಗೆ ಕಾತುರರಾಗಿರುವ ಜನರ ದಂಡು! ಈ ಸಮಯದಲ್ಲಿ ನಾವು ನಮ್ಮ ಭವಿಷ್ಯದ ಪೀಳಿಗೆಗೆ ಏನು ಕಲಿಸಲಿದ್ದೇವೆ. ಸಾಂಪ್ರದಾಯಿಕ ಆಚರಣೆಗಳನ್ನಾ, ಅಥವಾ ಬದಲಿಗೆ ಅಗತ್ಯವಿರುವ ಜನರ ಅಗತ್ಯಗಳನ್ನು ಪರಿಹರಿಸಬೇಕೆಂದಾ? ಮಾರ್ಕನು 3: 1-6 ರಲ್ಲಿ ಕೈ ಬತ್ತಿಹೋದವನೊಬ್ಬನು ಇರುವುದನ್ನು ಯೇಸು ಕಂಡು ಅವನನ್ನು ಸ್ವಸ್ಥಮಾಡಿದರು. ಫರಿಸಾಯರಿಗೆ ಅವನು ಸ್ವಸ್ಥ ಹೊಂದಿದ್ದು ಸಂತೋಷವನ್ನುಂಟು ಮಾಡಲಿಲ್ಲ. ಬದಲಾಗಿ ಸಬ್ಬತ್ ದಿನದಲ್ಲಿ ಸ್ವಸ್ಥಮಾಡಿದ್ದರಿಂದ ತಪ್ಪುಹೊರಿಸಲೆಂದೇ ಸಮಯ ಹುಡುಕುತ್ತಿದ್ದರು. ಯೇಸು ಅವರನ್ನು ಖಂಡಿಸಿದರು.

 

ಹೌದು, ನನ್ನ ಪ್ರಿಯರೇ! ಈ ಹಬ್ಬದ ದಿನಗಳಲ್ಲಿ ನಾವು ಯಾವುದಕ್ಕೆ ಮುಖ್ಯತ್ವ ನೀಡುತ್ತಿದ್ದೇವೆ? ನಾವು ನಮ್ಮ ಸಂತತಿಗೆ ಏನು ಕಲಿಸುತ್ತಿದ್ದೇವೆ? ಆಟ, ಕುಣಿತ, ಸಂಭ್ರಮ ಎಂದು ಹಬ್ಬದಲ್ಲಿ ನಾವು ಹೇಗೆ ಸಂತೋಷವಾಗಿರುವುದು ಎಂದಾ? ಅಥವಾ ಅಗತ್ಯವಿರುವ ಜನರಿಗೆ ಸಹಾಯ ಮಾಡಲು ಹೋಗಿ ಎಂದಾ? ಸಾಂಪ್ರದಾಯಿಕವಾಗಿ ಅಲ್ಲ! ಪಾರಂಪರ್ಯ, ಸಂಪ್ರದಾಯಗಳನ್ನು ಪಾಲಿಸುವುದು ಮತ್ತು ಅಗತ್ಯವನ್ನು ಬಿಟ್ಟುಬಿಡುವುದು ಫರಿಸಾಯರನ್ನು ಕರ್ತನು ಖಂಡಿಸಿದಂತೆಯೇ, ನಮ್ಮ ಪೀಳಿಗೆಗೆ ಅಗತ್ಯವಾದದ್ದು ಏನೋ ಅದನ್ನು ಅನುಸರಿಸಲು ಕಲಿಸೋಣ. ನಮ್ಮ ದೇವರ ಮಾರ್ಗದಲ್ಲಿ ಆತನ ವಾಕ್ಯದ ಪ್ರಕಾರ ನಡೆಯಲು ನಾವು ಜಾಗರೂಕರಾಗಿರೋಣ, ನಿನ್ನನ್ನು ಉಪದೇಶಿಸಿ ನಡೆಯಬೇಕಾದ ಮಾರ್ಗವನ್ನು ತಿಳಿಸುವೆನು ಎಂಬ ನಮ್ಮ ದೇವರ ಮಾರ್ಗದಲ್ಲಿ, ಅವರ ಮಾತಿನಂತೆ ಮಾಡಲು ಜಾಗರೂಕರಾಗಿರೋಣ. ಸತ್ಯವೇದಕ್ಕನುಸಾರವಾಗಿ ನಡೆಯುವ ಸದ್ಭಕ್ತರಾಗಿ ಬಾಳೋಣ! ದೇವರಿಗಾಗಿ ಬೆಳಗೋಣ. ನಮ್ಮ ಜೀವನದ ಪ್ರತಿ ದಿನವೂ ಒಳ್ಳೆಯ ಕ್ರೈಸ್ತರಾಗಿ ಜೀವಿಸುವ ಮೂಲಕ ನಾವು ಅರ್ಥಪೂರ್ಣವಾದ ಕ್ರಿಸ್ಮಸ್ ಅನ್ನು ಆಚರಿಸೋಣ.

- Mrs. ಮಂಜುಳಾ

 

ಪ್ರಾರ್ಥನಾ ಅಂಶ:

ಹಸಿದವರಿಗೆ ಆಹಾರ ನೀಡುವ ಕಾರ್ಯಕ್ರಮದಿಂದ ಪ್ರತಿದಿನ ಪ್ರಯೋಜನ ಪಡೆಯುವ ಜನರು ದೇವರ ಪ್ರೀತಿಯನ್ನು ತಿಳಿದುಕೊಳ್ಳಬೇಕೆಂದು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al