By Village Missionary Movement
Wednesday, 07-Dec-2022ಧೈನಂದಿನ ಧ್ಯಾನ(Kannada) – 07.12.2022 (Christmas Special)
ಸೇವಾ ಕ್ಷೇತ್ರದಲ್ಲಿ ಕ್ರಿಸ್ಮಸ್
"...ಕೇಳಿರಿ; ಜನರಿಗೆಲ್ಲಾ ಮಹಾ ಸಂತೋಷವನ್ನುಂಟುಮಾಡುವ ಶುಭಸಮಾಚಾರವನ್ನು ನಿಮಗೆ ತಿಳಿಸುತ್ತೇನೆ" - ಲೂಕ 2:10
ಒಂದು ಕೆಲಸದ ಸ್ಥಳ ಎಂಬುದು ಎಲ್ಲಾ ವಿಧವಾದ ಸೇವಕರುಗಳನ್ನು ಒಳಗೊಂಡಿರುತ್ತದೆ. ಮತ್ತು ಒಬ್ಬ ಕ್ರೈಸ್ತ ಕೆಲಸಗಾರನು ತನ್ನ ಎಲ್ಲಾ ಸಹ ಕೆಲಸಗಾರರಿಗೆ ಕ್ರಿಸ್ತನಲ್ಲಿ ಮಾರ್ಗದರ್ಶನ ನೀಡುವ ಕರ್ತವ್ಯವನ್ನು ಹೊಂದಿದ್ದಾನೆ, ಅವನು ಯಾವ ಸ್ಥಾನದಲ್ಲಿ ಸೇವೆ ಸಲ್ಲಿಸಿದರೂ ಪರವಾಗಿಲ್ಲ. ಕ್ರಿಸ್ತನನ್ನು ನಮ್ಮ ಮಾತುಗಳಿಂದ ಮಾತ್ರವಲ್ಲ, ನಮ್ಮ ಕ್ರಿಸ್ತನಂತಹ ಜೀವನ ಪದ್ಧತಿಗಳಿಂದಲೂ ಪರಿಚಯಿಸುವುದು ಅವಶ್ಯ. ನಮ್ಮ ಜೀವನವೇ ನಮ್ಮ ಸುತ್ತಮುತ್ತಲಲ್ಲಿರುವವರಿಗೆ ಸಂತೋಷವನ್ನು ಉಂಟುಮಾಡುವ ಶುಭವಾರ್ತೆಯಾಗಿ ಮಾರ್ಪಡಬೇಕು. ವಿಶೇಷವಾಗಿ ಕ್ರಿಸ್‌ಮಸ್ ಸಮಯದಲ್ಲಿ ನಾವು ನಮ್ಮ ಕ್ರಿಸ್ತನ ಪ್ರೀತಿಯನ್ನು ವ್ಯಕ್ತಪಡಿಸಲು ಉಡುಗೊರೆಗಳು, ಬೈಬಲ್ ಗಳು ಮತ್ತು ಸತ್ಯವೇದ ವಾಕ್ಯಗಳನ್ನು ಉಡುಗೊರೆಯಾಗಿ ನೀಡಬಹುದು. ಹೊಸ ವರ್ಷದ ತಯಾರಿಗಾಗಿ ನೀವು ಹೊಸ ವರ್ಷದ ನಿಮಿತ್ತವಾಗಿ ಹೊಸವರ್ಷದ ವಾಗ್ದಾನವನ್ನು ಒಳಗೊಂಡ ಕ್ಯಾಲೆಂಡರ್‌ಗಳು ಅಥವಾ ವಾಗ್ದಾನದ ಕಾರ್ಡ್, ಅಥವಾ ದೈನಂದಿನ ವಾಕ್ಯಗಳನ್ನೊಳಗೊಂಡ ಕ್ಯಾಲೆಂಡರ್‌ಗಳನ್ನು ನೀಡಬಹುದು.
ಅನ್ಯಜನರ ಸಂಸ್ಥೆಗಳಲ್ಲಿ ಕೆಲಸ ಮಾಡುವವರು ಕ್ರಿಸ್‌ಮಸ್‌ನ ಸುವಾರ್ತೆಯನ್ನು ಅಷ್ಟು ಸಾಮಾನ್ಯವಾಗಿ ಬಹಿರಂಗವಾಗಿ ಹಂಚಿಕೊಳ್ಳರಯಲು ಸಾಧ್ಯವಿಲ್ಲ. ಆದ್ದರಿಂದ ಕ್ರಿಸ್ಮಸ್ ದಿನದಂದು ನಮ್ಮ ಶುಭಾಶಯಗಳನ್ನು ಹಂಚಿಕೊಳ್ಳುವವರಿಗೆ ಕ್ರಿಸ್ತನ ಜನನದ ಉದ್ದೇಶದ ಬಗ್ಗೆ ಚಿಕ್ಕದಾಗಿ ಸಂದೇಶಗಳನ್ನು ಹಂಚಿಕೊಳ್ಳಬಹುದು. ಮತ್ತು ಅವರು ತಮ್ಮ ಸಂಸ್ಥೆಗಳಿಗೆ ಕ್ರಿಸ್‌ಮಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿಸಿದಾಗ, ಕ್ರೈಸ್ತ ಸಹೋದ್ಯೋಗಿಗಳೊಂದಿಗೆ ಸೇರಿ ಉಪವಾಸ ಮಾಡಿ ಆತ್ಮಭಾರದೊಂದಿಗೆ ಪ್ರಾರ್ಥಿಸಿ ಬಂದ ನಂತರ ಆ ಶುಭ ಸಂದೇಶವನ್ನು ಹಂಚಿಕೊಳ್ಳುವಾಗ ಅಲ್ಲಿ ಕ್ರಿಸ್ತನನ್ನು ನೆಡಲಾಗುತ್ತದೆ. ಮತ್ತು ಕ್ರಿಸ್ತನ ಜನನದ ಉದ್ದೇಶವು ಪ್ರತಿದಿನವೂ ಸಹ ಕೆಲಸಗಾರರನ್ನು ಗಾಯಕಟ್ಟುವುದರಲ್ಲಿ, ಮುರಿದ ಹೃದಯವನ್ನು ಮುಕ್ತಗೊಳಿಸುವುದರಲ್ಲಿ ಮತ್ತು ದೇವರ ಅನುಗ್ರಹ ವರ್ಷವನ್ನು ಪ್ರಸಿದ್ಧ ಪಡಿಸುವುದರಲ್ಲಿಯೂ (ಲೂಕ 4:18, 19) ಈಡೇರಬೇಕು.
ಹೌದು, ಸಮರ್ಪಣೆ ಮತ್ತು ಸಾಕ್ಷಿ ತುಂಬಿದ ದೈನಂದಿನ ಜೀವನವು ಕೆಲಸದ ಸ್ಥಳಗಳಲ್ಲಿ ನಿಜವಾದ ಕ್ರಿಸ್ಮಸ್ ಶುಭ ಸಂದೇಶವಾಗಿದೆ. ಆಮೆನ್.
ರಕ್ಷಿಸಲ್ಪಟ್ಟವರಿಗೂ,
ಕೆಟ್ಟುಹೋಗುವವರಿಗೂ ನಾವು
ದೇವರಿಗೆ ಕ್ರಿಸ್ತನಲ್ಲಿ ಸುವಾಸನೆಯಾಗಿದ್ದೇವೆ.
- Mrs. ಮೆರ್ಸಿ ಅಲೆಕ್ಸಾಂಡರ್
ಪ್ರಾರ್ಥನಾ ಅಂಶ:
"ಮಧ್ಯಸ್ಥಿಕೆ ವಹಿಸಿ ಮಾತಾಡುವ ಎಸ್ತರ್ ಮಿಷನರಿ" ಪ್ರಾರ್ಥನಾ ಗುಂಪಿನ ಯೋಜನೆಗಾಗಿ ಹೆಚ್ಚು ಮಧ್ಯಸ್ಥಿಕೆಯ ವಹಿಸಿ ಮಾತಾಡುವ ಎಸ್ತೆರ್ ಗಳು ಸಿಗುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482