Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 06.12.2022 (Christmas Special)
Share:

By Village Missionary Movement

Monday, 05-Dec-2022

ಧೈನಂದಿನ ಧ್ಯಾನ(Kannada) – 06.12.2022 (Christmas Special)

 

ಅತಿಥಿ ಸತ್ಕಾರ

 

"ಅತಿಥಿಸತ್ಕಾರಮಾಡುವದನ್ನು ಮರೆಯಬೇಡಿರಿ; ಅದನ್ನು ಮಾಡುವಲ್ಲಿ ಕೆಲವರು ತಿಳಿಯದೆ ದೇವದೂತರನ್ನೂ ಸತ್ಕರಿಸಿದ್ದಾರೆ" - ಇಬ್ರಿಯ 13:2

 

ಪ್ರಾಚೀನ ಕಾಲದಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳನ್ನು ದಿಣ್ಣೆಯ ಕಲ್ಲುಗಳೊಂದಿಗೆ ನಿರ್ಮಿಸುತ್ತಿದ್ದರು. ಏಕೆಂದರೆ ದಾರಿಹೋಕರು ದಣಿವಾದಾಗ ಈ ದಿಣ್ಣೆಯ ಮೇಲೆ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ಹೋಗಲಿ ಎಂಬುದೇ ಇದರ ಉದ್ದೇಶವಾಗಿತ್ತು. ನಮ್ಮ ಪೂರ್ವಜರು ಹಳೆಯ ಒಡಂಬಡಿಕೆಯಲ್ಲಿ ಒಂದು ಅಭ್ಯಾಸವನ್ನು ಹೊಂದಿದ್ದರು. ಈ ಅಭ್ಯಾಸವನ್ನು ಅತಿಥಿ ಸತ್ಕಾರ ಎಂದು ಕರೆಯಲಾಗುತ್ತದೆ. ಅತಿಥಿ ಸತ್ಕಾರ ಎಂದರೆ ಮನೆಗೆ ಬಂದವರನ್ನು ಉಪಚರಿಸುವುದು! ಆದರೆ ಇತ್ತೀಚೆಗೆ ಅತಿಥಿ ಸತ್ಕಾರವನ್ನು ನಮ್ಮ ಸಂಬಂಧಿಕರು ಮತ್ತು ಆಪ್ತ ಸ್ನೇಹಿತರ ಕಿರಿದಾದ ವಲಯದಲ್ಲಿ ಮಾತ್ರ ಅಭ್ಯಾಸ ಮಾಡಲಾಗುತ್ತಿದೆ.

 

ಇಂದಿನ ಸತ್ಯವೇದ ಭಾಗದಲ್ಲಿ ನಾವು ಅಬ್ರಹಾಮನ ಬಗ್ಗೆ ಓದುತ್ತೇವೆ. ಬಿಸಿಲ ಬೇಗೆಯಲ್ಲಿ ಡೇರೆಯ ಬಾಗಿಲಲ್ಲಿ ಕುಳಿತಿದ್ದರು ಆಗ 3 ಜನರನ್ನು ನೋಡುತ್ತಾರೆ. ಅವರನ್ನು ನೋಡಿದ ಕೂಡಲೇ ಅವರೆಡೆಗೆ ಓಡಿ ಬಂದು ನೆಲದ ಮಟ್ಟಿಗೆ ಬೊಗ್ಗಿ ನಮಸ್ಕರಿಸಿ ಅವರನ್ನು ಬರಮಾಡಿಕೊಂಡು ಅವರ ಹಸಿವು ನೀಗಿಸಲು ಅಡುಗೆ ಮಾಡಿಕೊಂಡು ಬಂದು ಅವರೆದುರು ಇಟ್ಟು ಅವರು ತಿಂದು ಮುಗಿಸುವವರೆಗೂ ಅವರ ಬಳಿ ನಿಂತಿದ್ದನ್ನು ನೋಡುತ್ತೇವೆ. ಅವರು ದೇವದೂತರೆಂಬ ವಿಷಯ ತಿಳಿಯದಿದ್ದರೂ ಅವರನ್ನು ಸತ್ಕರಿಸಿದರು. ಅವರ ಮೂಲಕ ಕರ್ತನು ಅಬ್ರಹಾಮನೊಂದಿಗೆ ಸಂಭವಿಸಲಿರುವ ವಿಷಯಗಳ ಬಗ್ಗೆ ಮಧ್ಯಸ್ಥಿಕೆ ವಹಿಸುತ್ತಾರೆ.

 

ಲೂಕ 16:19-31 ರಲ್ಲಿ ನಾವು ಇನ್ನೊಂದು ಘಟನೆಯ ಬಗ್ಗೆ ಓದುತ್ತೇವೆ. ತನ್ನ ಮನೆ ಬಾಗಿಲಲ್ಲಿ ಬಿದ್ದುಕೊಂಡಿದ್ದ ಲಾಜರನನ್ನು ವಿಚಾರಿಸದೆ, ಅವನಿಗೆ ಒಂದು ಹೊತ್ತಿನ ಆಹಾರವನ್ನೂ ನೀಡದ ಶ್ರೀಮಂತನ ಆತ್ಮವು ಪಾತಾಳದಲ್ಲಿ ವೇದನೆ ಪಡುವುದನ್ನು ನಾವು ನೋಡುತ್ತೇವೆ. ಹೌದು, ವಿಧವೆಯರು ಮತ್ತು ಅನಾಥರನ್ನು ವಿಚಾರಿಸಬೇಕು. ಸಹಾಯಕ್ಕಾಗಿ ನಿಮ್ಮ ಬಳಿಗೆ ಬರುವ ಜನರನ್ನು ಮತ್ತು ಅಗತ್ಯಗಳೊಂದಿಗಿರುವ ಜನರನ್ನು ನೋಡಿ ನೋಡದಂತೆ ಇರಬೇಡಿರಿ. ಅವರನ್ನು ನಿರ್ಲಕ್ಷಿಸಬೇಡಿರಿ. ಕ್ರಿಸ್ತನ ಹೃದಯವನ್ನು ಹೊಂದಿರುವವರು ಆತನ ಹೆಸರಿನಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡುತ್ತಾರೆ. ಬಡವರಿಗೆ ಸಹಾಯ ಮಾಡುವುದು ಮತ್ತು ಪ್ರೋತ್ಸಾಹಿಸುವುದು ಮನುಷ್ಯನನ್ನು ಎಂದಿಗೂ ಕೀಳಾಗಿಸುವುದಿಲ್ಲ. ಏರುತ್ತಾ ಏರುತ್ತಾ ಎತ್ತರಕ್ಕೆ ಸಾಗುವ ಮೆಟ್ಟಿಲುಗಳಾಗಿ ಮಾರ್ಪಡುತ್ತದೆ.

 

ಕ್ರಿಸ್ತನಲ್ಲಿ ಪ್ರಿಯರೇ! ಈ ಕ್ರಿಸ್‌ಮಸ್‌ನ ದಿನಗಳಲ್ಲಾದರೂ, ನಮಗೆ ಪರಿಚಯವಿಲ್ಲದ ವ್ಯಕ್ತಿಗಳೇ ಆಗಿದ್ದರೂ ಅವರು ಹಸಿದಿದ್ದಾರೆಂದು ನಮಗೆ ಗೊತ್ತಾದರೆ ನಮ್ಮಲ್ಲಿರುವದನ್ನು ಹಂಚಿಕೊಳ್ಳೋಣ. ಕ್ರಿಸ್ತನನ್ನು ತಿಳಿಯದ ನಿಮ್ಮ ನೆರೆಹೊರೆಯವರು, ಬೀದಿಯಲ್ಲಿರುವ ಜನರು ಮತ್ತು ಒಂದು ಹೊತ್ತಿನ ಆಹಾರಕ್ಕಾಗಿ ಹೆಣಗಾಡುತ್ತಿರುವ ಜನರನ್ನು ನಿಮ್ಮ ಮನೆಗೆ ಆಹ್ವಾನಿಸಿ, ಅವರನ್ನು ದಯೆಯಿಂದ ಉಪಚರಿಸಿ, ಕ್ರಿಸ್ತನ ಪ್ರೀತಿಯನ್ನು ಹೇಳಿ ಅವರನ್ನು ಕ್ರಿಸ್ತನ ಕಡೆಗೆ ನಡೆಸೋಣ.

- Mrs. ಜೆಬಕಣಿ ಶೇಖರ್

 

ಪ್ರಾರ್ಥನಾ ಅಂಶ:

ಮಿಷನರಿ ಮನೆ ಕಟ್ಟಿಕೊಡುವ ಶೂನೇಮಿಯ ಸ್ತ್ರೀಯರು ಎದ್ದು ಬರುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin