Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 05.12.2022 (Christmas Special)
Share:

By Village Missionary Movement

Monday, 05-Dec-2022

ಧೈನಂದಿನ ಧ್ಯಾನ(Kannada) – 05.12.2022 (Christmas Special)

 

ಸೇವೆಯಲ್ಲಿ ಅರ್ಥಪೂರ್ಣವಾದ ಕ್ರಿಸ್ಮಸ್

 

"ಯಾವನಾದರೂ ನನ್ನ ಸೇವೆಯನ್ನು ಮಾಡುವವನಾದರೆ ನನ್ನ ಹಿಂದೆ ಬರಲಿ..." - ಯೋಹಾನ 12:26

 

ಒಂದು "ವಯಸ್ಸಾದ ಯುವಕ" ಅವರು. ವಯಸ್ಸು 65 ಆಗಿರುತ್ತದೆ. ನಡಿಗೆಯಲ್ಲಿ ಗಾಂಭೀರ್ಯ, ಕಾಲಿಗೆ ಚಪ್ಪಲಿ ಇಲ್ಲ. ಅವರು ಯಾವಾಗಲೂ ಕವಚದ ಜಿಪ್ಪಾವನ್ನು ಧರಿಸುತ್ತಾರೆ. ಒಂದು ಭುಜದ ಮೇಲೆ ಜೋಲ್ನಾ ಬ್ಯಾಗ್‌ ಅದರೊಳಗೆ ಒಂದು ಬೈಬಲ್, ಒಂದು ತಂಬೂರಿ, ಇನ್ನೊಂದು ಭುಜದಲ್ಲಿ ಹಾರ್ಮೋನಿಯಂ ಪೆಟ್ಟಿ, ಹಿಂಭಾಗದಲ್ಲಿ ಗೋಣಿಚೀಲ ಮತ್ತು ಬದಲಾಯಿಸಲು ಒಂದು ಸೆಟ್ ಬಟ್ಟೆ. ಅವರು ಎಲ್ಲಾ ಕಡೆಗೂ ನಡೆದುಕೊಂಡೇ ಹೋಗುತ್ತಾರೆ. ಸಿಕ್ಕರೆ ಎತ್ತಿನ ಗಾಡಿಗಳನ್ನು ಏರುತ್ತಾರೆ. ಎಲ್ಲಿಗಾದರೂ ಹೋಗುತ್ತಾರೆ? ಹಳ್ಳಿಯಿಂದ ಹಳ್ಳಿಗೆ ಹೋಗಿ ಯೇಸುಕ್ರಿಸ್ತನ ಸುವಾರ್ತೆಯನ್ನು ಹೇಳುತ್ತಾರೆ! ಅವರು ಒಂದು ಹಳ್ಳಿಯನ್ನು ಪ್ರವೇಶಿಸಿದ ತಕ್ಷಣ, ಚಿಕ್ಕ ಮಕ್ಕಳು ಸಂತೋಷದಿಂದ "ಅಯ್ ತಾತ ಬಂದುಬಿಟ್ರು" ಎಂದು ಓಡಿ ಬರುತ್ತಿದ್ದರು.

 

ಸಾಯಂಕಾಲ ಅಜ್ಜ ತನ್ನ ಸಾಮಾನುಗಳನ್ನು ನಡುಬೀದಿಯ ದೀಪದ ಕೆಳಗೆ ಇಟ್ಟು ಗೋಣಿಚೀಲವನ್ನು ಹರಡುತ್ತಿದ್ದರು. ಅವರು ಬೈಬಲ್, ಆರ್ಮೋನಿಯಂ ಬಾಕ್ಸ್ ತೆಗೆದುಕೊಂಡು ಹೊರಗೆ ಹಾಕುತ್ತಾರೆ. ಅವರು ದೇವರನ್ನು ಗಟ್ಟಿಯಾಗಿ ಸ್ತುತಿಸುವರು. ಸಣ್ಣ ಮಕ್ಕಳು ಗುಂಪಿನಲ್ಲಿ ಕುಳಿತುಕೊಳ್ಳುತ್ತಾರೆ. ಗ್ರಾಮಸ್ಥರೂ ಬಂದು ನಿಲ್ಲುತ್ತಾರೆ. ತಾತನ ಭಜನೆ ಪ್ರವಚನ ಆರಂಭವಾಗುತ್ತದೆ. ದೆವ್ವಗಳು ಓಡಿಹೋಗುತ್ತವೆ ಮತ್ತು ಉಪದೇಶ ಮಾಡುವಾಗ ರೋಗಗಳು ವಾಸಿಯಾಗುತ್ತವೆ. ಮೀಟಿಂಗ್ ಮುಗಿದ ಮೇಲೆ "ಅಯ್ಯಾ ನಮ್ಮ ಮನೆಗೆ ಬನ್ನಿ ಊಟ ಮಾಡಿ" ಎಂದು ಯಾರಾದರೂ ಕರೆದರೆ ಮುಜುಗರವಿಲ್ಲದೆ ಹೋಗಿ ಊಟ ಮಾಡುತ್ತಿದ್ದರು. ಮನೆಗೆ ಆಶೀರ್ವಾದ ಮಾಡಿಬಿಟ್ಟು ನಂತರ, ಆ ಬೀದಿಯಲ್ಲಿರುವ ದಿಣ್ಣೆಯ ಮೇಲೆ ಗೋಣಿಚೀಲವನ್ನು ಹರಡಿಕೊಂಡು ಬೆಟ್ ಶೀಟ್ ಹೊದ್ದುಕೊಂಡು ಮಲಗುತ್ತಾರೆ. ಮುಂಜಾನೆ ನಾಲ್ಕು ಗಂಟೆಗೆ ಏಳುತ್ತಾರೆ. ಜೋರಾಗಿ ಪ್ರಾರ್ಥಿಸುತ್ತಾರೆ. ನಂತರ ಹೋಗಿ ಹತ್ತಿರದ ನದಿ ಅಥವಾ ಕೊಳದಲ್ಲಿ ಸ್ನಾನ ಮಾಡುತ್ತಾರೆ. ಅವರು ಮತ್ತೆ ತನ್ನ ಪ್ರಯಾಣವನ್ನು ಮುಂದುವರಿಸುತ್ತಾರೆ. ಇವರು ಮಹಾನ್ ಬೋಧಕರು.

 

ಮರುದಿನ ಮುಂದಿನ ಹಳ್ಳಿಯಲ್ಲಿ ಉಪದೇಶ ಆರಂಭವಾಗುತ್ತದೆ. ಅದ್ಭುತಗಳು ನಡೆದರೂ, ಕೊಚ್ಚಿಕೊಳ್ಳುತ್ತಿರಲಿಲ್ಲ. "ತಂದೆಗೆ ಮಹಿಮೆ" ಎಂಬ ಮಾತುಗಳೇ ಅವರ ಬಾಯಲ್ಲಿ ಹೊರಬರುತ್ತಿತ್ತು. ಜನರು ಪ್ರೀತಿಯಿಂದ ಅಕ್ಕಿ, ಬೇಳೆ, ಸಂಡಿಗೆ ಇತ್ಯಾದಿಗಳನ್ನು ಕಾಣಿಕೆಯಾಗಿ ಕೊಡುತ್ತಾರೆ. ಅದನ್ನು ತೆಗೆದುಕೊಂಡು ಪಕ್ಕದ ಹಳ್ಳಿಯಲ್ಲಿ ತುಂಬಾ ಕಷ್ಟದಲ್ಲಿರುವವರಿಗೆ ಕೊಟ್ಟುಬಿಡುತ್ತಾರೆ. ನಾನು ಸಹ ಅವರನ್ನು ನೇರವಾಗಿ ನೋಡಿಲ್ಲ. ಇದು ನನ್ನ ಅಜ್ಜ ಹೇಳಿದ ಕಥೆ. ಬರೀ ಕಥೆಯಲ್ಲ ನಿಜ. ಅವರ ಕಾಲದಲ್ಲಿ ಹಳ್ಳಿಗಳಲ್ಲಿ ಪ್ರತಿದಿನ ಕ್ರಿಸ್‌ಮಸ್‌. ಕ್ರಿಸ್‌ಮಸ್ ಅವರು ಕೆಲವು ಬಡವರ ಮನೆಯಲ್ಲಿ ಕೊಡುವ ವಸ್ತುಗಳೊಂದಿಗೆ ಪ್ರಾರಂಭವಾಗುತ್ತಿತ್ತು.

ಇದನ್ನು ಓದುತ್ತಿರುವ ಪ್ರೀತಿಯ ಸ್ನೇಹಿತರೇ! ದೇವರ ಸೇವೆ ಎಂಬುದು ಬದುಕಲ್ಲ, ಅದು ದೇವರ ಕರೆಯುವಿಕೆ. ಯೇಸು ಕ್ರಿಸ್ತನು ನಮ್ಮನ್ನು ನಂಬಿಗಸ್ತರೆಂದು ಎಣಿಸಿ ಈ ಘನವಾದ ಸೇವೆಯಲ್ಲಿ ನಮ್ಮನ್ನು ನಿಲ್ಲಿಸಿದ್ದಾರೆ. ನಾವು ಆತ್ಮ ಆದಾಯ ಮಾಡುವ ಪ್ರತಿ ದಿನವೂ ನಮಗೆ ಕ್ರಿಸ್ಮಸ್ ಆಗಿದೆ. ಹೌದು, ನಮ್ಮ ಸೇವೆಯು ಅರ್ಥಪೂರ್ಣವಾಗಿದ್ದರೆ, ನಾವು ಭೇಟಿಯಾಗುವ ಜನರ ಹೃದಯದಲ್ಲಿ ಯೇಸು ಕ್ರಿಸ್ತನು ಪ್ರತಿದಿನ ಜನಿಸುತ್ತಾರೆ. ಹಲ್ಲೇಲೂಯಾ!

- Bro. ಅನೀಸ್ ರಾಜ

 

ಪ್ರಾರ್ಥನಾ ಅಂಶ:

ನಮ್ಮ ಪಾಲುದಾರರು ಮತ್ತು ನಾವು ಮುನ್ನಡೆಸುವ ಯುವಕರು ಮತ್ತು ಮಕ್ಕಳು ಈ ಕ್ರಿಸ್‌ಮಸ್‌ನಲ್ಲಿ ಅರ್ಥಪೂರ್ಣವಾದ ಕ್ರಿಸ್‌ಮಸ್ ಅನ್ನು ಆಚರಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al