Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 03.12.2022 (Christmas Special)
Share:

By Village Missionary Movement

Saturday, 03-Dec-2022

ಧೈನಂದಿನ ಧ್ಯಾನ(Kannada) – 03.12.2022 (Christmas Special)

 

ಸ್ನೇಹಿತರ ನಡುವೆ ಅರ್ಥಪೂರ್ಣವಾದ ಕ್ರಿಸ್ಮಸ್

 

"ಮರಿಯಳನ್ನೂ ಯೋಸೇಫನನ್ನೂ ಗೋದಲಿಯಲ್ಲಿ ಮಲಗಿರುವ ಆ ಕೂಸನ್ನೂ ಕಂಡುಕೊಂಡರು." - ಲೂಕ 2:16

 

ದೇವಕುಮಾರನು ಮನುಷ್ಯನಾಗಿ ಜನಿಸಿದ ಶುಭಸಂದೇಶವನ್ನು ಮೊಟ್ಟ ಮೊದಲು ಸ್ನೇಹಿತರಿಗೇ ತಿಳಿಸಲಾಯಿತು. ಹೌದು, ಒಂದೇ ಸ್ಥಳದಲ್ಲಿ ಕುರಿಗಳನ್ನು ಮೇಯಿಸಿ, ಅಡುಗೆ ಮಾಡಿ ಒಂದೇ ಕಡೆ ಮಲಗುತ್ತಿದ್ದ ಗೆಳೆಯರ ಬಳಗ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಸ್ನೇಹಿತರು ತಮ್ಮೊಳಗೆ ತೆಗೆದುಕೊಳ್ಳುವ ನಿರ್ಧಾರವನ್ನು ಮುಂದೂಡುವುದಿಲ್ಲ ಮತ್ತು ಅದನ್ನು ಶ್ರದ್ಧೆಯಿಂದ ಮಾಡಿ ಮುಗಿಸುತ್ತಾರೆ. ಇದನ್ನು ಏನು ಮಾಡಬೇಕು ಯಾರಿಗೆ ಕೊಡಬೇಕು ಎಂದೆಲ್ಲಾ ಹೆಚ್ಚು ಯೋಚಿಸುವುದಿಲ್ಲ. ಕುರುಬರೂ ಹಾಗೆಯೇ! ದೇವದೂತನು ಹೀಗೆ ಹೇಳಿ ಹೊರಟುಹೋದನೇ! ಹಿಂಡಿನ ಜವಾಬ್ದಾರಿಯನ್ನು ಯಾರಿಗೆ ಒಪ್ಪಿಸೋದು, ಅವುಗಳಿಗೆ ಯಾರು ನೀರು ಕುಡಿಸಲು ಕರೆದೊಯ್ಯುತ್ತಾರೆ ಎಂದೆಲ್ಲಾ ತಡಮಾಡದೆ ತೀವ್ರವಾಗಿ ಕಾರ್ಯ ಮಾಡಿದರು. ಅದೇ ರೀತಿ, ನಮಗೆ ತಿಳಿದಿರುವ ಯೇಸುವಿನ ಜನನದ ಸುದ್ದಿಯು ಒಳ್ಳೆಯ ಸುದ್ದಿಯಾಗಿರುವುದರಿಂದ, ನಾವು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು ಮತ್ತು ಯೇಸುವನ್ನು ತಿಳಿದಿಲ್ಲದ ನಮ್ಮ ಸ್ನೇಹಿತರು ಯೇಸುಕ್ರಿಸ್ತನನ್ನು ಕಾಣುವಂತೆ ಮುನ್ನಡೆಸಬೇಕು. ಅವನು ಏನಂದುಕೊಳ್ಳುತ್ತಾನೋ ಅಥವಾ ಪ್ರೀತಿಯು ಹಾಳಾಗುತ್ತದೋ ಎಂಬ ನೆಪಗಳನ್ನೆಲ್ಲಾ ದೂರ ತಳ್ಳಿ ತೀವ್ರವಾಗಿ ಕಾರ್ಯ ಮಾಡಿರಿ. ಕ್ರಿಸ್‌ಮಸ್ ದಿನದಂದು ಅವರನ್ನು ನಿಮ್ಮ ಮನೆಗೆ ಆಹ್ವಾನಿಸಿ, ಯೇಸು ಕ್ರಿಸ್ತನು ನಿಮ್ಮ ಹೃದಯದಲ್ಲಿ ಬಂದ ಸಾಕ್ಷಿಯನ್ನು ಹಂಚಿಕೊಂಡು, ಅದರಿಂದಾಗಿ ನಿಮ್ಮ ಜೀವನದಲ್ಲಿ ಹೊಂದಿಕೊಂಡ ಆಶೀರ್ವಾದಗಳನ್ನೂ ಹೇಳಿ ನೀವು ಸಹ ಬಂದು ನೋಡಿರಿ ಎಂದು ತಲೆಮೇಲೆ ಹೊಡೆದ ಹಾಗೆ ನೇರವಾಗಿ ಹೇಳಿಬಿಡಿ. ಇದೇರೀತಿ ಇನ್ನೊಂದು ಅವಕಾಶ ಸಿಗುತ್ತದೆ ಎಂಬುದಕ್ಕೆ ನಿಶ್ಚಯ ಏನು? ನಂತರ ಕುರುಬರು ಮಗುವಿನ ಕುರಿತು ಹೇಳಲ್ಪಟ್ಟ ಸಂದೇಶವನ್ನು ಪ್ರಸಿದ್ಧಿ ಪಡಿಸಿದರು. ಹೌದು, ನಾವೂ ಇದರಂತೆಯೇ ಮಾಡಬೇಕು. ನಿಮ್ಮ ಕ್ರೈಸ್ತ ಸ್ನೇಹಿತರನ್ನು ತಿಂಗಳಿಗೊಮ್ಮೆ ಒಟ್ಟುಗೂಡಿಸಿ ಮತ್ತು ಅವರನ್ನು ಸೇವೆಗಾಗಿ ಹತ್ತಿರದ ಹಳ್ಳಿಗಳಿಗೆ ಕರೆದೊಯ್ಯಿರಿ. ಮೊದಲು ಮಕ್ಕಳ ಸೇವೆಯೊಂದಿಗೆ ಆರಂಭಿಸಿ, ಕರಪತ್ರಗಳನ್ನು ಕೊಡಲು ಪ್ರಾರಂಭಿಸಿ. ನಂತರ ಎಷ್ಟು ದೊಡ್ಡ ಉಜ್ಜೀವನ ಉಂಟಾಗುತ್ತದೆ ಎಂಬುದನ್ನು ಕಾಣುವಿರಿ. ನೀವು ಮುನ್ನಡೆಸುವ ಮಕ್ಕಳು ಬೋಧಕರು ಮತ್ತು ಮಿಷಿನರಿಗಳಾಗಿ ರೂಪುಗೊಳ್ಳುತ್ತಾರೆ.

 

ಮೂರನೆಯದಾಗಿ, ಕುರುಬರು ದೇವರನ್ನು ಮಹಿಮೆಪಡಿಸಿದರು. ಹೌದು, ನಾವು ಸ್ನೇಹಿತರಾಗಿ ಒಟ್ಟಾಗಿ ಪ್ರಾರ್ಥಿಸಬಹುದು. ಇದನ್ನು ಸಾಮಾನ್ಯವಾಗಿ ಪ್ರಾರಂಭಿಸಬಹುದು. ಆದರೆ ಇಬ್ಬರು ಅಥವಾ ಮೂರು ಜನರು ಒಟ್ಟಿಗೆ ಸೇರಿ ಪ್ರಾರ್ಥಿಸಿದಾಗ ಅದು ಅದ್ಭುತವಾಗಿರುತ್ತದೆ. ಈ ರೀತಿ ಕೆಲಸದ ಸ್ಥಳಗಳಲ್ಲಿ ಮತ್ತು ಅಂಗಡಿಗಳಲ್ಲಿ ಸ್ನೇಹಿತರೊಂದಿಗೆ ಒಟ್ಟಾಗಿ ಸೇರಿ ದೇವರಿಗಾಗಿ ಕೆಲಸ ಮಾಡೋಣ. ಅರ್ಥಪೂರ್ಣವಾದ ಕ್ರಿಸ್ಮಸ್ ಆಚರಿಸೋಣ.

- Mrs. ಅನ್ಬು ಜ್ಯೋತಿ ಸ್ಟಾಲಿನ್

 

ಪ್ರಾರ್ಥನಾ ಅಂಶ:

ಈ ತಿಂಗಳು ನಮ್ಮ ಸೇವಾ ಕ್ಷೇತ್ರಗಳಲ್ಲಿ ನಡೆಯುವಂತಹ ಕ್ರಿಸ್ಮಸ್ ಆಚರಣೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ವ್ಯಕ್ತಿಗಳು ರಕ್ಷಣೆ ಹೊಂದುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al