Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 19.02.2021
Share:

By Village Missionary Movement

Friday, 19-Feb-2021

ಧೈನಂದಿನ ಧ್ಯಾನ(Kannada) – 19.02.2021

ಯಾಕೆ ಹಿಂಸಿಸುತ್ತಿದ್ದೀಯ?

"ಸೌಲನೇ, ಸೌಲನೇ, ನನ್ನನ್ನು ಯಾಕೆ ಹಿಂಸೆ ಪಡಿಸುತ್ತೀ." - ಅಪೊಸ್ತಲ 9:4

ಒಂದು ಗ್ರಾಮದಲ್ಲಿ, ದೇವರೇ ಇಲ್ಲ ಎಂದು ಹೇಳುತ್ತಿದ್ದ ನಾಸ್ತಿಕರೊಬ್ಬರು ಇದ್ದರು. ಅವರು ಕ್ರೈಸ್ತರನ್ನು ತಪ್ಪಾಗಿಯೂ, ಅವರ ಚಟುವಟಿಕೆಗಳನ್ನು ಕೇವಲವಾಗಿಯು ಮಾತನಾಡುತ್ತಿದ್ದರು. ಈ ಪರಿಸ್ಥಿತಿಯಲ್ಲಿ ಅವರು ದಿಢೀರೆಂದು ಒಂದು ದಿನ ಪಾರ್ಶ್ವವಾಯುವಿನಿಂದ ಬಾಧಿಸಲ್ಪಟ್ಟು ಕೈ, ಕಾಲು ಕೆಲಸ ಮಾಡಲಾಗದೆ ಹೋದವು. ತನ್ನ ಸ್ಥಿತಿಯನ್ನು ಗ್ರಹಿಸಿ ವೇದನೆ ಪಟ್ಟರು. ತಾನು ಮುಂಚಿನಂತೆ ಎದ್ದು ಕೆಲಸ ಮಾಡಲಾಗದೆ ಹೋಯಿತೇ ಎಂದು ಬಹಳ ದುಃಖಿಸಿದರು. ಚಿಕಿತ್ಸೆಗಾಗಿ ಹಣವೆಲ್ಲಾ ಖರ್ಚಾಯಿತೆ ಹೊರತು ಸ್ವಸ್ಥವಾಗಲಿಲ್ಲ. ಇನ್ನು ನಿಮ್ಮ ಪ್ರಯತ್ನವೇ ಬೇಕು ಎಂದು ವೈದ್ಯರು ಹೇಳಿ ಕಳುಹಿಸಿ ಬಿಟ್ಟರು. ಆಗ ಒಬ್ಬ ದೇವ ಸೇವಕರು ಅವರ ಬಳಿಗೆ ಹೋಗಿ ಕ್ರಿಸ್ತನ ಪ್ರೀತಿಯನ್ನು ಹೇಳಿ ಪ್ರಾರ್ಥಿಸಿ ಬಂದರು. ಆತನು ತನ್ನ ಪರಿಸ್ಥಿತಿಯ ನಿಮಿತ್ತವಾಗಿ ಅದನ್ನು ನಿರಾಕರಿಸದೆ ಅಂಗೀಕರಿಸಿದರು, ದೇವರನ್ನು ನಂಬಿದರು. ಕ್ರೈಸ್ತರಿಗೆ ವಿರೋಧವಾಗಿ ಮಾಡಿದ ಕಾರ್ಯಗಳೆಲ್ಲ ಕ್ರಿಸ್ತನಿಗೆ ವಿರೋಧವಾಗಿ ಮಾಡಿದ ಕಾರ್ಯಗಳೆಂದು ಗ್ರಹಿಸಿ ಮನನೊಂದು ದೇವರ ಪ್ರೀತಿಗೆ ತನ್ನನ್ನು ಸಮರ್ಪಿಸಿಕೊಂಡರು. ಅವರ ಬಲಹೀನತೆಗಳು ಹಂತಹಂತವಾಗಿ ಬದಲಾಯಿತು. ಸಂಪೂರ್ಣವಾದ ಸ್ವಸ್ಥತೆಯನ್ನು ಹೊಂದಿದ ಕೂಡಲೇ ಅನೇಕರಿಗೆ ಈ ಸಾಕ್ಷಿಯನ್ನು ಹೇಳಿ ದೇವರನ್ನು ಮಹಿಮೆ ಪಡಿಸಿದರು.

ಸತ್ಯವೇದದಲ್ಲಿ ಸೌಲನೆಂಬ ಯೌವನಸ್ಥನು ಮನೆ ಮನೆಗಳಿಗೆ ನುಗ್ಗುತ್ತಾ ಕ್ರೈಸ್ತರನ್ನು ಎಳೆದುಕೊಂಡು ಹೋಗಿ ಸೆರೆಮನೆಯಲ್ಲಿ ಹಾಕಿಸಿದನು. ಎಳೆದುಕೊಂಡು ಹೋಗಿ ಎಂದು ಹೇಳುವಾಗ ಅವರನ್ನು ಬಲವಂತ ಮಾಡಿ, ಹಿಂಸಿಸಿದನು. ಇದು ಒಂದು ಪ್ರಾಂತದಲ್ಲಿ ಮಾತ್ರವಲ್ಲದೆ, ತನ್ನ ದೇಶದಲ್ಲೆಲ್ಲಾ ಹೀಗೆಯೇ ಕ್ರೈಸ್ತರನ್ನು ಸೆರೆಯೊಳಗೆ ಹಾಕಲು ಅಧಿಕಾರಿಗಳ ಬಳಿ ಅನುಮತಿಯನ್ನು ಪಡೆದುಕೊಂಡು ದಮಸ್ಕು ಗೆ ಹೋಗುವಾಗ ದೇವರು ಸೌಲನನ್ನು ಭೇಟಿ ಮಾಡಿ "ಸೌಲನೇ, ಸೌಲನೇ, ನನ್ನನ್ನು ಯಾಕೆ ಹಿಂಸೆ ಪಡಿಸುತ್ತೀ ಎಂದರು." ಸೌಲನು ದೇವರೇ ನೀವು ಯಾರು ಎಂದು ಕೇಳಿದನು. ಅದಕ್ಕೆ ದೇವರು ನೀನು ಹಿಂಸಿಸುತ್ತಿರುವ ಯೇಸು ನಾನೇ ಎಂದರು. ಕೂಡಲೇ ಅವನು ನೆಲದ ಮೇಲೆ ಬಿದ್ದು ನಡುಗುತ್ತಾ ತನ್ನನ್ನು ಸಮರ್ಪಿಸಿಕೊಂಡನು. ಅನನೀಯ ನ ಮೂಲಕ ತಾನು ಮಾಡಬೇಕಾದ ಕಾರ್ಯಗಳನ್ನು ತಿಳಿದುಕೊಂಡು ಕೂಡಲೇ ಸಭೆಗಳಿಗೆ ಹೋಗಿ ಕ್ರಿಸ್ತನ ಪ್ರೀತಿಯನ್ನು, ತನ್ನನ್ನು ಕ್ರಿಸ್ತನು ಭೇಟಿಮಾಡಿದ ಸಾಕ್ಷಿಯನ್ನು ತಿಳಿಸಿದನು.

ಹೌದು, ಪ್ರಿಯರೇ! ದೇವರಿಂದ ಸೃಷ್ಟಿಸಲ್ಪಟ್ಟ ಯಾರಿಗಾದರೂ  ನಾವು ಕಷ್ಟ ಕೊಡುವುದಾದರೆ ಅದು ದೇವರನ್ನು ಹಿಂಸಿಸುವುದಕ್ಕೆ ಸಮಾನ. ಆದ್ದರಿಂದ ಯಾರನ್ನೂ ಕೇವಲವಾಗಿ ನೆನೆಸಿ, ಯಾರನ್ನು ಮಾತುಗಳಿಂದ ಕ್ರಿಯೆಗಳಿಂದ ಗಾಯ ಪಡಿಸಬೇಡಿರಿ. ನಿಮ್ಮ ಕುಟುಂಬದಲ್ಲಿ ಇರುವವರನ್ನು, ನಿಮ್ಮ ಕೆಳಗೆ ಕೆಲಸ ಮಾಡುವ ವ್ಯಕ್ತಿಗಳನ್ನು, ನಿಮ್ಮ ಬಂಧುಗಳನ್ನು ಯಾವುದೋ ಒಂದು ರೀತಿಯಲ್ಲಿ ಹಿಂಸಿಸುತ್ತಿದ್ದೀರಾ? ನೀವು ಅವರನ್ನಲ್ಲ ಅವರನ್ನು ಸೃಷ್ಟಿಸಿದ ದೇವರನ್ನೇ ಹಿಂಸಿಸುತ್ತಿದ್ದೀರ ಎಂಬುದನ್ನು ಮರೆಯಬೇಡಿರಿ. ಆದರೂ ಪ್ರೀತಿಯುಳ್ಳ ದೇವರು ತನ್ನನ್ನು ಹಿಂಸೆ ಮಾಡಿದ ಸೌಲನನ್ನು, ನಾಸ್ತಿಕನನ್ನು ಪ್ರೀತಿಸಿ ಅವರನ್ನು ಹುಡುಕಿ ಬಂದ ಹಾಗೆಯೇ ನಿಮ್ಮ ಬಳಿಯಲ್ಲಿಯೂ ನಿಂತಿದ್ದಾರೆ. ನಿಮ್ಮ ತಪ್ಪುಗಳನ್ನು ಅವರ ಬಳಿ ಹರಕೆ ಮಾಡಿ, ದೇವರೊಂದಿಗೆ ಐಕ್ಯವಾಗಿ ದೇವರ ಬಲದೊಂದಿಗೆ ಅವರನ್ನು ಪ್ರೀತಿಸುತ್ತಾ ಜೀವಿಸಿರಿ.
-    C. ಪಾಲ್ ಜೆಬಸ್ಟಿನ್ ರಾಜ್

ಪ್ರಾರ್ಥನಾ ಅಂಶ:-
ಮೋಕ್ಷ ಪ್ರಯಾಣ ಎಂಬ ದೈನಂದಿನ ಧ್ಯಾನವನ್ನು ಸಿದ್ದ ಮಾಡುವ ಕೆಲಸದಲ್ಲಿ ಭಾಗವಹಿಸುವ ಸೇವಕರುಗಳನ್ನು ದೇವರು ತನ್ನ ಜ್ಞಾನದಿಂದ ತುಂಬಿಸುವಂತೆ ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Androidapp: https://play.google.com/store/apps/details?id=com.vmmorg.template.msmapp&showAllReviews=true
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş