Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 30.11.2022
Share:

By Village Missionary Movement

Wednesday, 30-Nov-2022

ಧೈನಂದಿನ ಧ್ಯಾನ(Kannada) – 30.11.2022

 

ಗುಡಿಸಲಲ್ಲಿ ಬೆಂಕಿ

 

"...ಇವುಗಳೆಲ್ಲಾ ನನಗೆ ವಿರೋಧವಾಗಿವೆ..." - ಆದಿಕಾಂಡ 42:36

 

ಸಮುದ್ರದ ಮಧ್ಯದಲ್ಲಿ, ಹಡಗೊಂದು ಭೀಕರ ಚಂಡಮಾರುತಕ್ಕೆ ಸಿಲುಕಿ ಬಂಡೆಯ ಮೇಲೆ ಅಪ್ಪಳಿಸಿತು. ಒಬ್ಬ ವ್ಯಕ್ತಿ ಕೇವಲ ಮರದ ದಿಮ್ಮಿಯನ್ನು ಹಿಡಿದುಕೊಂಡು ಮೂರು ದಿನಗಳ ಕಾಲ ಸಮುದ್ರದಲ್ಲಿ ತೇಲುತ್ತಾ ಜನವಸತಿಯಿಲ್ಲದ ದ್ವೀಪವನ್ನು ತಲುಪಿದನು. ಅಲ್ಲಿ ಗುಡಿಸಲು ಕಟ್ಟಿಕೊಂಡು ಪ್ರಾಣಿಗಳನ್ನು ಬೇಟೆಯಾಡಿ ತಿಂದು ಬದುಕುತ್ತಿದ್ದ. ಹಗಲಿನಲ್ಲಿ ಮರವನ್ನು ಹತ್ತಿ ಯಾವುದಾದರೂ ಹಡಗು ಬರುತ್ತಿದೆಯೇ? ಎಂದು ನೋಡುತ್ತಿದ್ದರು. ನನ್ನನ್ನು ತಾಯ್ನಾಡಿಗೆ ಕರೆದುಕೊಂಡು ಹೋಗಿ ಸೇರಿಸುವಂತೆ ಹಡಗನ್ನು ಕಳುಹಿಸಿ ಯೇಸಪ್ಪ ಎಂದು ಆಗಾಗ್ಗೆ ಪ್ರಾರ್ಥಿಸುತ್ತಿದ್ದರು. ಒಂದು ದಿನ ಅವರು ಬೇಟೆಯಾಡಿ ಹಿಂದಿರುಗಿದಾಗ ಗುಡಿಸಲಿಗೆ ಬೆಂಕಿ ಬಿದ್ದಿತ್ತು. ಅದನ್ನು ನೋಡಿ ಅತ್ತು ಗೋಳಾಡಿದರು. ಸ್ವಲ್ಪ ಸಮಯದ ನಂತರ ಅವರು ಲೈಫ್ ಬೋಟ್ ಬರುವುದನ್ನು ನೋಡಿದರು. ಬಂದ ನಾವಿಕನು “ನೀನು ಇಷ್ಟು ದೊಡ್ಡ ಬೆಂಕಿಯನ್ನು ಹೊತ್ತಿಸಿದ್ದರಿಂದಲೇ ಮನುಷ್ಯರು ಯಾರಾದರೂ ಇಲ್ಲಿ ಇರಬಹುದೆಂದು ಭಾವಿಸಿ ಬಂದೆವು” ಎಂದು ಹೇಳಿ ಅವರನ್ನು ಕರೆದುಕೊಂಡು ಹೋದರು. ನ್ಯಾಯಸ್ಥಾಪಕರು 6 ನೇ ಅಧ್ಯಾಯದಲ್ಲಿ, ಗಿದ್ಯೋನನು ತನಗೆ ಕಾಣಿಸಿಕೊಂಡ ದೇವದೂತನ ಬಳಿ, ಸ್ವಾಮೀ, ಯೆಹೋವನು ನಮ್ಮ ಸಂಗಡ ಇದ್ದರೆ ನಮಗೆ ಇದೆಲ್ಲಾ ಯಾಕೆ ಸಂಭವಿಸಿತು ಎಂದನು. ಆದರೆ ಈ ಸನ್ನಿವೇಶದ ಮೂಲಕ ಕರ್ತನು ಗಿದ್ಯೋನನನ್ನು ಒಬ್ಬ ರಕ್ಷಕನನ್ನಾಗಿ ರೂಪಿಸಿದರು. ಅವನನ್ನು ಒಂದು ಪರಾಕ್ರಮಶಾಲಿಯಾಗಿ ಕಂಡರು.

 

ಸತ್ಯವೇದದಲ್ಲಿ, ಯಾಕೋಬ ಎಂಬ ಭಕ್ತನು ಪ್ರಾರ್ಥನೆಯಲ್ಲಿ ದೇವರೊಂದಿಗೆ ಹೋರಾಡಿ ಗೆದ್ದನು. ಆದರೆ ತಾನು ತುಂಬಾ ಪ್ರೀತಿಸುತ್ತಿದ್ದ ಮಗ ಯೋಸೇಫನನ್ನು ಕಳೆದುಕೊಂಡಿದ್ದು, ಅವರಿಗೆ ಸಹಿಸಲಾಗದಷ್ಟು ದುಃಖವನ್ನು ನೀಡಿತು. ಆದರೆ ಅದು ಮುಂದೆ ಬರಲಿರುವ ಬರಗಾಲದಲ್ಲಿ ತನ್ನನ್ನೂ ತನ್ನ ಸಂಸಾರವನ್ನೂ ಕಾಪಾಡಲು ದೇವರು ಮಾಡಿದ ಪ್ರೀತಿಯ ಕಾರ್ಯವೆಂದು ತಿಳಿಯದೆ, ಎಲ್ಲವೂ ಅವರಿಗೆ ವಿರುದ್ಧವಾಗಿ ನಡೆದಂತೆ ಕಾಣಿಸಿತು.

 

ಪ್ರೀತಿಯ ಸಹೋದರ ಸಹೋದರಿಯರೇ! ಈ ರೀತಿಯ ಸಂಗತಿಗಳು ನಮ್ಮ ಜೀವನದಲ್ಲೂ ವಿರುದ್ಧವಾಗಿ ಕಂಡುಬಂದರೆ, ನಾವು ಮಾಡಬೇಕಾಗಿರುವುದು ದೇವರ ಬಳಿ ನಂಬಿಕೆಯಿಂದ ಎಲ್ಲವನ್ನೂ ನೀವು ಒಳ್ಳೆಯದಕ್ಕಾಗಿಯೇ ಮಾಡುತ್ತೀರ ಎಂದು ಹೇಳಿ ಪ್ರಾರ್ಥಿಸಿ ದೇವರ ಕೈಯಲ್ಲಿ ನಮ್ಮ ಜೀವನವನ್ನು ಒಪ್ಪಿಸಿಬಿಡಬೇಕು. ನಡೆಯುವುದೆಲ್ಲವೂ ನಮ್ಮ ಅಲ್ಪ ಬುದ್ಧಿವಂತಿಕೆಗೆ ವಿರುದ್ಧವಾಗಿ ಕಂಡರೂ ಭಯಪಡಬೇಡಿರಿ. ತಾಳ್ಮೆಯಿಂದ ಕಾಯೋಣ ಮತ್ತು ನಮ್ಮ ಪರಮ ತಂದೆಯ ಕೈಯಲ್ಲಿರುವ ಆಶೀರ್ವಾದವನ್ನು ಪಡೆದುಕೊಳ್ಳೋಣ! ಆಮೆನ್!

- A. ಬ್ಯೂಲ

 

ಪ್ರಾರ್ಥನಾ ಅಂಶ:

ನಮ್ಮ ಸೇವೆಯನ್ನು ಪ್ರಾರ್ಥನೆಯಿಂದಲೂ ಮತ್ತು ಕಾಣಿಕೆಗಳಿಂದಲೂ ಬೆಂಬಲಿಸುತ್ತಿರುವ ಪಾಲುದಾರರ ಕುಟುಂಬಗಳನ್ನು ದೇವರು ಆಶೀರ್ವದಿಸುವಂತೆ ಪ್ರಾರ್ಥಿಸಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al