Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 28.11.2022 (Youth Special)
Share:

By Village Missionary Movement

Sunday, 27-Nov-2022

ಧೈನಂದಿನ ಧ್ಯಾನ(Kannada) – 28.11.2022 (Youth Special)

 

ಬೆಲೆಕಟ್ಟಲಾಗದ ನಿಧಿ

 

"ನಿಮ್ಮ ಗಂಟು ಇದ್ದಲ್ಲಿಯೇ ನಿಮ್ಮ ಮನಸ್ಸೂ ಇರುವದಷ್ಟೆ" - ಲೂಕ.12:34

 

ಯುದ್ಧಕ್ಕೆ ಹೊರಡುತ್ತಿದ್ದ ಅಲೆಕ್ಸಾಂಡರ್ ತನ್ನ ಸೈನಿಕರು ಮತ್ತು ಆತ್ಮೀಯ ಸ್ನೇಹಿತರನ್ನು ಕರೆದು ತನ್ನ ಆಸ್ತಿ, ಸ್ವತ್ತು ಮತ್ತು ತನಗೆ ಸೇರಿದ ಎಲ್ಲವನ್ನೂ ವಿಂಗಡಿಸಿ ಬರೆದಿದ್ದ ಶಾಸನವನ್ನು ಹಸ್ತಾಂತರಿಸಿದರು. ತನಗಾಗಿ ಅವರು ಏನನ್ನೂ ಇಟ್ಟುಕೊಳ್ಳಲಿಲ್ಲ. ತನ್ನ ಸ್ನೇಹಿತನಾದ ಪೆರ್ಫಿಕಾಸ್ ನಿನಗೆಂದು ಏನೂ ಇಲ್ಲವೇ ಎಂದು ಕೇಳಿದ್ದಕ್ಕೆ ನನ್ನ ಬಳಿ "ನಂಬಿಕೆ" ಎಂಬ ದೊಡ್ಡ ನಿಧಿ ಇದೆ ಎಂದನು.

 

“ಒಂದು ಕಾಲ ಉಂಟು, ನಿನ್ನ ನಿರೀಕ್ಷೆಯು ನಿರರ್ಥಕವಾಗದು" (ಜ್ಞಾನೋಕ್ತಿ. 23.18). ಏನನ್ನು ಕಳೆದುಕೊಂಡರೂ ದೇವರ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳಬೇಡಿರಿ. ನಂಬಲು ಸಾಧ್ಯವೇ ಇಲ್ಲದಿದ್ದಾಗ ಅಬ್ರಹಾಂ-ಸಾರ ದಂಪತಿಗಳಿಗೆ ಅವರ ನಂಬಿಕೆಯಿಂದಾಗಿ ಇಸಾಕನನ್ನು ಕೊಟ್ಟು ಆಕಾಶ ನಕ್ಷತ್ರಗಳಂತೆ ಸಂತತಿಯನ್ನು ಹೆಚ್ಚಿಸಿದರು. ತನ್ನ ಜೀವನದಲ್ಲಿ ಇಕ್ಕಟ್ಟುಗಳು ಮತ್ತು ನಂಬಿಕೆ ದ್ರೋಹದಂತಹ ಅನೇಕ ಅಪಾಯಗಳನ್ನು ಎದುರಿಸಿದ ಕೀರ್ತನೆಗಾರನಾದ ದಾವೀದನು, ಕೀರ್ತನೆ 39:7 ರಲ್ಲಿ "ಹೀಗಿರಲಾಗಿ ಕರ್ತನೇ, ಇನ್ನು ಯಾವದಕ್ಕೆ ಕಾದುಕೊಳ್ಳಲಿ? ನೀನೇ ನನ್ನ ನಿರೀಕ್ಷೆ" ಎಂದು ಹೇಳುತ್ತಾರೆ. ಯೋಬನ ಜೀವನದಲ್ಲೂ ಅನೇಕ ಹೋರಾಟಗಳು, ಶೋಧನೆಗಳು ನಷ್ಟಗಳು ಇದ್ದರೂ, ಅವರು ದೇವರ ಮೇಲಿಟ್ಟಿದ್ದ ನಂಬಿಕೆಯ ನಿಮಿತ್ತವಾಗಿ ಕಳೆದುಕೊಂಡ ಎಲ್ಲವನ್ನೂ ಎರಡರಷ್ಟು ಪಡೆದುಕೊಂಡರು. ಯೋಬನಂತೆ, ನಾವು ಕೂಡ ಕರ್ತನಲ್ಲಿ ಪೂರ್ಣ ನಂಬಿಕೆಯನ್ನು ಇಟ್ಟಿದ್ದೇವೆಯೇ?

 

ನನ್ನ ಪ್ರಿಯರೇ! ನಾವೆಲ್ಲರೂ ಯೋಚಿಸಬಹುದು. ನನ್ನ ಕಷ್ಟಗಳು, ಜೀವನದ ಗೊಂದಲಗಳು, ಅನೇಕ ನಷ್ಟಗಳು, ಸಾಲದ ತೊಂದರೆಗಳು, ಭಯಾನಕ ರೋಗಗಳು, ಮದುವೆಯ ಅಡೆತಡೆಗಳು, ಮಕ್ಕಳಿಲ್ಲದಿರುವುದು, ವೃತ್ತಿ ನಷ್ಟಗಳು, ಕುಟುಂಬದ ಅಗಲಿಕೆಗಳು ಯಾರಿಗೆ ಗೊತ್ತು? ನಾನು ನಂಬಿಕೆಯಲ್ಲಿ ಉಳಿಯುವುದು ಹೇಗೆ? ನಮ್ಮ ಮನಸ್ಸಿನಲ್ಲಿ ಹಲವು ಪ್ರಶ್ನೆಗಳಿರಬಹುದು. ಆದರೆ ಭಕ್ತನು ಹಾಡಿದಂತೆ, "ನಾನು ನಂಬುವುದಕ್ಕೆ ಆಸ್ಪದವೇ ಇಲ್ಲದಿದ್ದರೂ, ನಾನು ನಂಬುವೆ ಯೇಸು ಒಬ್ಬರನ್ನೇ " ಎಂದು ಹಾಡಿರಿ. ಯೆರೆಮಿಯ 29:11 ರಲ್ಲಿ ಹೇಳಿರುವಂತೆ ಇವರಿಗೆ ಗತಿಯಾಗಲಿ, ನಿರೀಕ್ಷೆಯಿರಲಿ ಎಂದು ನಾನು ನಿಮ್ಮ ವಿಷಯದಲ್ಲಿ ಮಾಡಿಕೊಳ್ಳುತ್ತಿರುವ ಆಲೋಚನೆಗಳನ್ನು ನಾನೇ ಬಲ್ಲೆನು; ಅವು ಅಹಿತದ ಯೋಚನೆಗಳಲ್ಲ, ಹಿತದ ಯೋಚನೆಗಳೇ. ನಮ್ಮನ್ನು ಸಂಪೂರ್ಣವಾಗಿ ಕರ್ತನ ಪಾದದಲ್ಲಿ ಒಪ್ಪಿಸಿಕೊಟ್ಟು ಯೆಶಾಯ 40:31 ರಲ್ಲಿ ಹೇಳಿರುವ ಪ್ರಕಾರ, ರೆಕ್ಕೆಗಳನ್ನು ಚಾಚಿಕೊಂಡು ಎದ್ದೇಳೋಣ! ಹಲ್ಲೇಲೂಯ!

- Mrs. ಜಾಸ್ಮಿನ್ ಪಾಲ್

 

ಪ್ರಾರ್ಥನಾ ಅಂಶ:

ಗ್ರಾಮೀಣ ಸಮಯ ಮತ್ತು ಯೌವನಸ್ಥರ ವಿಶೇಷ ಕಾರ್ಯಕ್ರಮಗಳ ಮೂಲಕ ಅನೇಕರು ಪ್ರಯೋಜನ ಪಡೆಯುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş