Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 26.11.2022
Share:

By Village Missionary Movement

Friday, 25-Nov-2022

ಧೈನಂದಿನ ಧ್ಯಾನ(Kannada) – 26.11.2022

 

ನೆಪಗಳು 

 

"ಆದರೆ ಅವರೆಲ್ಲರೂ ಕ್ಷವಿುಸಬೇಕೆಂದು ಒಂದೇ ಮನಸ್ಸಿನಿಂದ ಹೇಳುವದಕ್ಕೆ ತೊಡಗಿದರು. ಮೊದಲನೆಯವನು ಆ ಆಳನ್ನು ನೋಡಿ - ಹೊಲವನ್ನು ಕ್ರಯಕ್ಕೆ ತಕ್ಕೊಂಡಿದ್ದೇನೆ, ಅದನ್ನು ಹೋಗಿ ನೋಡುವದಕ್ಕೆ ನನಗೆ ಅಗತ್ಯವಿದೆ, ನನ್ನನ್ನು ಕ್ಷವಿುಸಬೇಕೆಂದು ಕೇಳಿಕೊಂಡೆನೆಂಬದಾಗಿ ಹೇಳು ಅಂದನು” - ಲೂಕ 14:18

 

ಇಂಗ್ಲೆಂಡಿನ ಪ್ರಧಾನ ಮಂತ್ರಿ ವಿನ್‌ಸ್ಟನ್ ಚರ್ಚಿಲ್ ಅವರ ಕಛೇರಿಯಲ್ಲಿ ಅವರಿಗೆ ಸಹಾಯಕನಾಗಿ ಕೆಲಸಮಾಡುತ್ತಿದ್ದ ಒಬ್ಬ ವ್ಯಕ್ತಿ ನೆಪಗಳನ್ನು ಹೇಳುವುದರಲ್ಲಿ ಬಹಳ ಉತ್ತಮನಾಗಿದ್ದನು. ಪ್ರಧಾನಿಯವರ ಕಚೇರಿಯಲ್ಲಿ ಚರ್ಚಿಲ್ ರವರು ಸಮಯಕ್ಕೆ ಸರಿಯಾಗಿ ಹಾಜರಾಗುತ್ತಿದ್ದರು, ಅವರ ಸಹಾಯಕರು ಆಗಾಗ ತಡವಾಗಿ ಬರುತ್ತಿದ್ದರು ಮತ್ತು ತಡವಾಗಿ ಬರುವುದಕ್ಕೆ ಸರಿಯಾದ ಕಾರಣವನ್ನು ಸಹ ಹೇಳುತ್ತಿದ್ದರು. ಒಮ್ಮೆ ವಿನ್ಸ್ಟನ್ ಚರ್ಚಿಲ್ ತನ್ನ ಸಹಾಯಕನನ್ನು ಕರೆದರು. ಆದರೆ ಅವರು ಅಲ್ಲಿ ಇರಲಿಲ್ಲ. ಅವರು ಎಂದಿನಂತೆ ತಡವಾಗಿ ಬಂದರು. ಏಕೆ ವಿಳಂಬ ಎಂದು ಪ್ರಶ್ನಿಸಿದರು. “ಅಯ್ಯಾ, ದಯವಿಟ್ಟು ನನ್ನನ್ನು ಕ್ಷಮಿಸಬೇಕು. "ನನ್ನ ಕೈ ಗಡಿಯಾರ ಸ್ವಲ್ಪ ತಡವಾಗಿ ಓಡುತ್ತಿದೆ ಎಂಬುದನ್ನು ನಾನು ಈಗಲೇ ಗಮನಿಸಿದೆ" ಎಂದು ಹೇಳಿದರಂತೆ. ಚರ್ಚಿಲ್ ತಕ್ಷಣ, “ಒಂದು ನೀವು ನಿಮ್ಮ ಕೈ ಗಡಿಯಾರವನ್ನು ಬದಲಾಯಿಸಿರಿ ಇಲ್ಲವಾದರೆ ನಾನು ನಿಮ್ಮನ್ನು ಬದಲಾಯಿಸಬೇಕಾಗುತ್ತದೆ ಎಂದರು. ಅದರ ನಂತರ ಆ ಸಹಾಯಕನು ನೆಪಗಳನ್ನು ಹೇಳುವುದನ್ನೇ ನಿಲ್ಲಿಸಿ ಬಿಟ್ಟು, ಸರಿಯಾದ ಸಮಯಕ್ಕೆ ಬರಲು ಪ್ರಾರಂಭಿಸಿದರು.

 

ಪರಿಶುದ್ಧ ಗ್ರಂಥದಲ್ಲಿಯೂ ಕೂಡ ಅನೇಕ ಸ್ಥಳಗಳಲ್ಲಿ ಹಲವು ವ್ಯಕ್ತಿಗಳು ನೆಪಗಳನ್ನು ಹೇಳುವುದನ್ನು ನಾವು ಕಾಣುತ್ತೇವೆ. ಆದಾಮನು, ಹವ್ವಳು, ಸೌಲನು ಮತ್ತು ಎಫ್ರಾಯಿಮ್ ಗೋತ್ರದವರು ಹೀಗೆ ಒಂದು ದೊಡ್ಡ ಪಟ್ಟಿಯಲ್ಲಿ ಸತ್ಯವೇದವು ಕಂಡುಬರುತ್ತಿದೆ. ಇಂತಹ ನೆಪ ಹೇಳುವವರು ಸುಳ್ಳು ಹೇಳಲು ಹಿಂಜರಿಯುವುದಿಲ್ಲ. ಏಕೆಂದರೆ ಅವರು ಸುಳ್ಳು ಹೇಳುವುದರಿಂದಲೇ ಧಾರಾಳವಾಗಿ ನೆಪಗಳನ್ನು ಹೇಳಲು ಸಾಧ್ಯವಾಗುತ್ತಿದೆ. ಎಲ್ಲೆಲ್ಲಿ ಸುಳ್ಳು ಮತ್ತು ನೆಪಗಳು ಕಂಡುಬರುತ್ತಿದೆಯೋ ಅಲ್ಲೆಲ್ಲಾ ಸೈತಾನನ ಕ್ರಿಯೆಯೂ ಜೊತೆಯಲ್ಲೇ ಇರುತ್ತದೆ.

 

ನೆಪಗಳನ್ನು ಹೇಳುವ ಸ್ವಭಾವದ ಇನ್ನೊಂದು ಮುಖವೆಂದರೆ ಸೋಮಾರಿತನ. ಸೋಮಾರಿಗಳೇ ಎಲ್ಲದಕ್ಕೂ ನೆಪಗಳನ್ನು ಹೇಳುವುದು. ಒಂದು ಕೆಲಸ ಮಾಡಲು ವಿಳಂಬ ಮಾಡುವುದು ಅಥವಾ ನಿರಾಕರಿಸುವುದು, ಇವೆರಡೂ ಸೋಮಾರಿತನವೇ. ನೆಪಗಳನ್ನು ಹೇಳುವುದನ್ನು ಅಷ್ಟು ಲಘುವಾಗಿ ತೆಗೆದುಕೊಳ್ಳಬಾರದು. ಇದು ಕೂಡ ಒಂದು ಪಾಪದ ಕ್ರಿಯೆಯಾಗಿದೆ. ಇಂದಿನ ಸತ್ಯವೇದ ಭಾಗದಲ್ಲಿ ನೆಪಗಳನ್ನು ಹೇಳಿದ ಮೂರು ರೀತಿಯ ಜನರ ಬಗ್ಗೆ ಓದುತ್ತೇವೆ. ನೀವೇ ಈ ಕೆಲಸವನ್ನು ಮಾಡಬೇಕು ಎಂದು ದೇವರು ಅವರಿಗೆ ಒತ್ತಾಯಿಸಲಿಲ್ಲ. ಬದಲಾಗಿ ಅವರನ್ನು ಬಿಟ್ಟುಬಿಟ್ಟು, ತನ್ನ ಕೆಲಸವನ್ನು ಮತ್ತೊಬ್ಬರಿಗೆ ಒಪ್ಪಿಸುತ್ತಾರೆ. ನಾನು ದೇವರ ಸೇವೆಯನ್ನು ನಿರಾಕರಿಸಿದರೆ, ಆ ಸ್ಥಳದಲ್ಲಿ ಸಂಬಂಧವೇ ಇಲ್ಲದ ಇನ್ನೊಬ್ಬ ವ್ಯಕ್ತಿಯನ್ನು ಕರೆತಂದು, ಕರ್ತನು ಅವರನ್ನು ಉಪಯೋಗಿಸುತ್ತಾರೆ. ಮೋಶೆ ಮತ್ತು ಯೆರೆಮಿಯನಂತಹ ಒಂದೆರಡು ಜನರನ್ನು ಹೊರತುಪಡಿಸಿ ಬೇರೆ ಯಾರ ಬಳಿಯೂ ನೀನೇ ಈ ಕೆಲಸವನ್ನು ಮಾಡಬೇಕೆಂದು ಒತ್ತಾಯಿಸಿದ್ದನ್ನು ನಾವು ಎಲ್ಲಿಯೂ ನೋಡಲಾಗುವುದಿಲ್ಲ. ಈ ಸಂದೇಶದ ಮಧ್ಯೆ ನೀವು ಏನನ್ನಾದರೂ ಮಾಡಬೇಕೆಂದು ಕರ್ತನು ನಿರೀಕ್ಷಿಸಿದರೆ, ತಕ್ಷಣವೇ ವಿಧೇಯರಾಗಿ ಅದನ್ನು ಮಾಡುವುದೇ ನಿಮಗೆ ಆಶೀರ್ವಾದಕರವಾಗಿರುತ್ತದೆ. ದೇವರು ನಿಮ್ಮನ್ನು ಮುನ್ನಡೆಸಲಿ.

- P. ಜೇಕಬ್ ಶಂಕರ್

 

ಪ್ರಾರ್ಥನಾ ಅಂಶ:

ಇಂದು ಬೆಂಗಳೂರು, ವಿಳುಪುರಂ ಮತ್ತು ಉಸಿಲಂಪಟ್ಟಿ ಈ ಕಾರ್ಯಕ್ಷೇತ್ರಗಳಲ್ಲಿ ನಡೆಯಲಿರುವ ಯೌವನಸ್ಥರ ಉಜ್ಜೀವನ ಕೂಟದಲ್ಲಿ ಭಾಗವಹಿಸುವ ಯೌವನಸ್ಥರನ್ನು ದೇವರು ತನ್ನ ಬಲದಿಂದಲೂ ವರಗಳಿಂದಲೂ ತುಂಬಿಸಿ ಅಭಿಷೇಕಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet jojobet jojobet jojobet jojobet holiganbet palacebet holiganbet romabet teosbet betgit cratosroyalbet cratosroyalbet gameofbet