By Village Missionary Movement
Wednesday, 23-Nov-2022ಧೈನಂದಿನ ಧ್ಯಾನ(Kannada) – 23.11.2022
ಸತ್ಯವೇದವೇ ಬೆಳಕು
"ನಿನ್ನ ವಾಕ್ಯವು ನನ್ನ ಕಾಲಿಗೆ ದೀಪವೂ ನನ್ನ ದಾರಿಗೆ ಬೆಳಕೂ ಆಗಿದೆ" - ಕೀರ್ತನೆ 119:105
ಬಾಬು ಎಂಬ ಬಾಲಕ ಹಠಾತ್ ಅಪಘಾತದಲ್ಲಿ ದೃಷ್ಟಿ ಕಳೆದುಕೊಂಡನು. ಸುತ್ತಲೂ ಕತ್ತಲು ಕವಿದಿದ್ದರಿಂದ ಕೈಗೆ ಸಿಕ್ಕಿದ್ದನ್ನೆಲ್ಲ ಎಸೆದು ಸದಾ ಕಿರುಚುತ್ತಿದ್ದನು. ಒಂದು ದಿನ ಅಲ್ಲಿಗೆ ಸುವಾರ್ತೆ ಸಾರಲು ಬಂದ ಬೋಧಕರು ಅವನ ಬಳಿ ತುಂಬಾ ಪ್ರೀತಿಯಿಂದ ದಯೆಯಿಂದ ನಡೆದುಕೊಂಡರು. ಬಾಬು ಅವರ ಬಳಿ ಶಾಂತವಾಗಿರುವುದನ್ನು ನೋಡಿದ ಬಾಬು ಪೋಷಕರು ಪ್ರತಿದಿನವೂ ಅವರನ್ನು ಬರುವಂತೆ ಕೇಳಿಕೊಂಡರು. ಬಾಬು ಒಂದು ವಾರದಲ್ಲಿ ತನ್ನ ಸ್ಥಿತಿಯನ್ನು ಒಪ್ಪಿಕೊಳ್ಳಲು ಪ್ರಾರಂಭಿಸಿದನು. ಅವರ ಬಳಿ ಬಾಬುವಿನ ಪೋಷಕರು "ಒಂದೇ ವಾರದಲ್ಲಿ ಬಾಬುವನ್ನು ಹೇಗೆ ಬದಲಾಯಿಸಲು ಸಾಧ್ಯವಾಯಿತು?" ಎಂದು ಕೇಳಿದರು. ಆಗ ಅವರು, ‘‘ನನಗೂ ದೃಷ್ಟಿದೋಷವಿದೆ. ಯೇಸುವಿನ ಮಾತುಗಳು ನನಗೆ ಬೆಳಕು ಮತ್ತು ಮಾರ್ಗದರ್ಶನವನ್ನು ನೀಡಿತು, ನನ್ನ ಗಾಯಗಳನ್ನು ವಾಸಿಮಾಡಿತು. ಬಾಬು ಸಹ ಈಗ ಆ ಮಾತುಗಳ ಬೆಳಕನ್ನು ಕಂಡುಕೊಂಡನು. ಆದ್ದರಿಂದಲೇ ಅವನು ಸಂತೋಷವಾಗಿದ್ದಾನೆ" ಎಂದರು.
ಇಂದಿನ ಬಿಡುವಿಲ್ಲದ ಜೀವನದಲ್ಲಿ, ನಾವು ನಮ್ಮ ಕಬೋರ್ಡ್ ಗಳಲ್ಲಿ ಮತ್ತು ಸೆಲ್ ಫೋನ್‌ಗಳಲ್ಲಿ ಸತ್ಯವೇದವನ್ನು ಇಟ್ಟುಕೊಂಡು ಅದನ್ನು ಓದಲು ಸಮಯವಿಲ್ಲ ಎಂದು ಅಲೆಯುತ್ತಿದ್ದೇವೆ. ಆದ್ದರಿಂದ, ಒಂದು ಸಣ್ಣ ಇಕ್ಕಟ್ಟಾದ, ಕಷ್ಟಕರ ಪರಿಸ್ಥಿತಿ ಎದುರಾದಾಗ ಕಣ್ಣು ಕಟ್ಟಿ ಕಾಡಿನಲ್ಲಿ ಬಿಟ್ಟವರಂತೆ ದುಃಖಿಸುತ್ತೇವೆ. "ಆಕಾಶವೂ ಭೂವಿುಯೂ ಅಳಿದು ಹೋಗುತ್ತದೆ, ನನ್ನ ಮಾತುಗಳು ಎಂದಿಗೂ ಅಳಿದುಹೋಗುವುದಿಲ್ಲ" ಎಂದೂ, ಅದು ನೆರವೇರಿದ ಹೊರತು ಅದರೊಳಗಿಂದ ಒಂದು ಸೊನ್ನೆಯಾದರೂ ಒಂದು ಗುಡುಸಾದರೂ ಅಳಿದುಹೋಗಲಾರದು ಎಂದು ಸತ್ಯವಾಗಿ ನಿಮಗೆ ಹೇಳುತ್ತೇನೆ (ಮತ್ತಾಯ 5:18) ಎಂದು ಯೇಸುಕ್ರಿಸ್ತನು ಹೇಳಿದ ಮಾತುಗಳು ನಮಗೆ ಗೊತ್ತಿದ್ದೂ ನಾವು ಅದನ್ನು ಓದುವುದಿಲ್ಲ, ಓದಿದರೂ ಧ್ಯಾನಿಸುವುದಿಲ್ಲ. ಯಾವನು ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದ ಪಡುವವನಾಗಿ ಅದನ್ನೇ ಹಗಲಿರುಳು ಧ್ಯಾನಿಸುತ್ತಿರುವನೋ ಅವನು ಎಷ್ಟೋ ಧನ್ಯನು. ಏಕೆಂದರೆ ನಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ, ಮುನ್ನಡೆಯುವ ಮಾರ್ಗಕ್ಕೆ ಬೇಕಾದ ಬೆಳಕು ಸತ್ಯವೇದದಿಂದ ದೊರೆಯುತ್ತದೆ. ಆದುದರಿಂದ ಧರ್ಮಶಾಸ್ತ್ರದಲ್ಲಿ ಆನಂದಪಡುವವರ ಜೀವನದಲ್ಲಿ ಎಡರು ತೊಡರುಗಳಿದ್ದರೂ ರಕ್ಷಣೆಯನ್ನು ಕಾಪಾಡಿಕೊಳ್ಳುವವರಾಗಿ ಮುನ್ನಡೆಯುತ್ತಾರೆ.
ಇದನ್ನು ಓದುತ್ತಿರುವ ಪ್ರಿಯರೇ, ನಮಗೆ ಮಾರ್ಗದರ್ಶನ ನೀಡಲು Google map ಮತ್ತು ಅನೇಕ ಮಾರ್ಗದರ್ಶಿಗಳು ಇದ್ದರೂ, ಜೀವನದಲ್ಲಿ ಕ್ರಿಸ್ತನನ್ನು ನೋಡಿದ ಓಟದಲ್ಲಿ ಸರಿಯಾದ ಮಾರ್ಗದರ್ಶಿ ಸತ್ಯವೇದ ವಚನಗಳೇ. ವಾಕ್ಯಗಳು ಏನು ಮಾಡಬೇಕೆಂದು ನಮಗೆ ತೋಚದಿರುವ ಪರಿಸ್ಥಿತಿಯಲ್ಲೂ ನಮಗೆ ಬೆಳಕಾಗಿದ್ದು ದಾರಿ ತೋರಿಸಿ, ಬದುಕಲು ಭರವಸೆಯನ್ನೂ, ಸಂತೋಷವನ್ನೂ ನೀಡುತ್ತದೆ. ದೇವರ ವಾಕ್ಯಗಳು ನಮ್ಮ ಕೈಗಳಲಲ್ಲ ನಮ್ಮ ಹೃದಯದಲ್ಲಿರಲಿ. ನಮ್ಮ ಬಾಳು ಬೆಳಗಲಿ.
- Mrs. ಅನ್ಬುಜ್ಯೋತಿ ಸ್ಟಾಲಿನ್
ಪ್ರಾರ್ಥನಾ ಅಂಶ:
ಉಜ್ಜೀವನವನ್ನು ಬಯಸುವವರ ಶಿಬಿರದಲ್ಲಿ ಭಾಗವಹಿಸಿದವರು ಕರ್ತನಿಗಾಗಿ ಏನಾದರೂ ಮಾಡುವವರಾಗಿ ಮಾರ್ಪಡುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482